ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಛೆಟ್ರಿ-ಮಿಕು ಜೊತೆಯಾಟವೇ ಬೆಂಗಳೂರು ಎಫ್‌ಸಿಯ ನೂರಾನೆ ಬಲದ ಗುಟ್ಟು!

ISL 2018: BFC thriving on Sunil-Miku camaraderie

ಬೆಂಗಳೂರು ನವೆಂಬರ್ 16: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹೊಂದಾಣಿಕೆಯ ಆಟವೆಂದರೆ ಅದು ಬೆಂಗಳೂರು ಎಫ್ಸಿ ತಂಡದ ಮಿಕು ಹಾಗೂ ಸುನಿಲ್ ಛೆಟ್ರಿ ಅವರದ್ದು. ಈ ಬಾರಿಯ ಐಎಸ್‌ಎಲ್‌ನಲ್ಲಿ ಅವರಿಬ್ಬರಂತೆ ಹೊಂದಾಣಿಕೆಯ ಸ್ಟ್ರೈಕರ್‌ಗಳು ಕಾಣಸಿಗುವುದು ಅಪರೂಪ.

ಐಪಿಎಲ್ 2019: ತಂಡಕ್ಕೆ ಯಾರು ಇನ್? ಯಾರು ಔಟ್? ಯಾರು ಉಳಿದ್ರು?ಐಪಿಎಲ್ 2019: ತಂಡಕ್ಕೆ ಯಾರು ಇನ್? ಯಾರು ಔಟ್? ಯಾರು ಉಳಿದ್ರು?

ಬೆಂಗಳೂರು ಎಫ್ಸಿ ತಂಡದ ಈ ಜೋಡಿ ಕಳೆದ ಋತುವಿನಲ್ಲಿ ಒಟ್ಟು ಗಳಿಸಿದ್ದು 24 ಗೋಲುಗಳು. ಅವುಗಳಲ್ಲಿ ವೆನಿಸ್ಜುವೆಲಾದ ಹಿಟ್‌ಮ್ಯಾನ್ ಮಿಕು 14 ಗೋಲುಗಳನ್ನು ಗಳಿಸಿದರೆ ಛೆಟ್ರಿ 10 ಗೋಲುಗಳನ್ನು ದಾಖಲಿಸಿದ್ದಾರೆ. ಹಿಂದಿನ ಹಾದಿಯನ್ನೇ ಅನುಸರಿಸಿದ ಇಬ್ಬರು ಆಟಗಾರರು ಅದೇ ಲಯದಲ್ಲಿ ಆಟ ಮುಂದುವರಿಸಿದ್ದಾರೆ. ಬೆಂಗಳೂರು ತಂಡ ಇದುವರೆಗೂ ಗಳಿಸಿರುವ 10 ಗೋಲುಗಳಲ್ಲಿ ಏಳು ಗೋಲುಗಳನ್ನು ಇಬ್ಬರು ಹಂಚಿಕೊಂಡಿದ್ದಾರೆ. ಇದರೊಂದಿಗೆ ಕಾರ್ಲ್ಸ್ ಕ್ವಾಡ್ರಾಟ್ ತಂಡ ಬಲಿಷ್ಠ ತಂಡವಾಗಿ ಕಂಗೊಳಿಸುತ್ತಿದೆ.

ಕೋಲ್ಕತ್ತಾ ಶತಕಕ್ಕಿಂತ ಸಿಡ್ನಿಯ ಶತಕ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್: ಲಕ್ಷ್ಮಣ್ಕೋಲ್ಕತ್ತಾ ಶತಕಕ್ಕಿಂತ ಸಿಡ್ನಿಯ ಶತಕ ನನ್ನ ಪಾಲಿಗೆ ವೆರಿ ವೆರಿ ಸ್ಪೆಷಲ್: ಲಕ್ಷ್ಮಣ್

ಕೇವಲ ಗೋಲು ಗಳಿಸಿರುವುದೇ ಎದುರಾಳಿ ತಂಡದಲ್ಲಿ ಆತಂಕವನ್ನು ಉಂಟು ಮಾಡಿಲ್ಲ. ಈ ತಂಡದ ಆಟಗಾರರ ಹೊಂದಾಣಿಕೆಯೂ ಎದುರಾಳಿ ತಂಡವನ್ನು ತಲ್ಲಣಗೊಳಿಸುತ್ತದೆ. ಮಿಕು ಹಾಗೂ ಛೆಟ್ರಿ ನಡುವಿನ ಹೊಂದಾಣಿಕೆಯ ಆಟ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಮಿಕು ಸೆಂಟರ್ ಫಾರ್ವರ್ಡ್‌ನಲ್ಲಿ ಆಡಿದರೆ ಛೆಟ್ರಿ ಲೆಫ್ಟ್ ವಿಂಗ್‌ನಲ್ಲಿ ಪ್ರಮುಖ ಅಸ್ತ್ರ. ಆದರೆ ಇವರಿಬ್ಬರೂ ಪೆನಾಲ್ಟಿ ವಲಯದಲ್ಲಿ ಆಲ್ರೌಂಡ್ ಆಟ ತೋರಿಸುವುದರಿಂದ ಎದುರಾಳಿಯ ಡಿಫೆನ್ಸ್ ವಿಭಾಗಕ್ಕೆ ಚೆಂಡನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಅದ್ಭುತ ಸಂವಹನ

ಅದ್ಭುತ ಸಂವಹನ

‘ಅಂಗಣದಲ್ಲಿ ನಮ್ಮ ತಂಡದ ಆಟಗಾರರ ಸಂವಹನ ಬಹಳ ಉತ್ತಮವಾಗಿದೆ. ಆಂಗಿಕ ಭಾಷೆ ಉತ್ತಮವಾಗಿದೆ. ಕೇವಲ ನೋಟದಿಂದಲೇ ಇತರರು ಯಾವ ಯೋಚನೆ ಮಾಡುತ್ತಿದ್ದಾರೆ ಎಂಬುದನ್ನು ಊಹಿಸಬಲ್ಲೆವು. ಇದು ನಮ್ಮ ಲಿತಾಂಶಕ್ಕೆ ನೆರವಾಗುತ್ತದೆ. ಕಳೆದ ಬಾರಿ ನಾವು ಕಂಡುಕೊಂಡ ಈ ಯಶಸ್ಸನ್ನು ಈ ಬಾರಿಯೂ ಮುಂದುವಿರಸುತ್ತಿದ್ದೇವೆ,‘ ಎಂದು ಮಿಕು ಹೇಳಿದ್ದಾರೆ.

ಛೆಟ್ರಿ ಎದುರಾಳಿಯ ಡಿಫೆನ್ಸ್ ಮುರಿಯುತ್ತಾರೆ

ಛೆಟ್ರಿ ಎದುರಾಳಿಯ ಡಿಫೆನ್ಸ್ ಮುರಿಯುತ್ತಾರೆ

ಮಿಕು ತಮ್ಮ ಆಟವನ್ನು ಆಡುತ್ತಿದ್ದರೆ, ಛೆಟ್ರಿ ಎದುರಾಳಿ ತಂಡದ ಡಿಫೆನ್ಸ್ ವಿಭಾಗವನ್ನು ಮುರಿಯುವ ಕೆಲಸ ಮಾಡುತ್ತಾರೆ. ಇದು ಬೆಂಗಳೂರು ತಂಡದ ಯಶಸ್ಸಿನ ಮೇಲೆ ಬಹಳ ಉತ್ತಮ ಪರಿಣಾಮ ಬೀರಿದೆ. ಬೆಂಗಳೂರು ತಂಡ ಇಡೀ ಐಎಸ್‌ಎಲ್‌ನಲ್ಲಿ ಒಂದು ಬಾರಿ ಮಾತ್ರ ಗೋಲು ಗಳಿಸುವಲ್ಲಿ ವಿಲವಾಗಿದೆ. (ಕಳೆದ ಋತುವಿನಲ್ಲಿ ಎಫ್ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಗೋಲ ಗಳಿಸುವಲ್ಲಿ ವಿಲವಾಗಿ ಪಂದ್ಯ ಗೋಲಿಲ್ಲದೆ ಡ್ರಾ ಗೊಂಡಿತ್ತು).

ಸಾಕಷ್ಟು ಲಾಭವಾಗಿದೆ

ಸಾಕಷ್ಟು ಲಾಭವಾಗಿದೆ

‘ಮಿಕು ಅವರು ಟಾಪ್ ಕ್ಲಾಸ್ ಆಟಗಾರ. ಅವರು ಉತ್ತಮ ಗುಣಮಟ್ಟದ ಆಟಗಾರ ಎಂಬುದನ್ನು ಪ್ರತಿಯೊಂದು ಪಂದ್ಯದಲ್ಲಿ ಎಲ್ಲರಿಗೂ ಸಾಬೀತಾಗುವಂತೆ ಮಾಡುತ್ತಾರೆ. ಅವರಿಂದ ನಮಗೆ ಸಾಕಷ್ಟು ಲಾಭವಾಗಿದೆ,‘ ಎಂದು ಛೆಟ್ರಿ ಹೇಳಿದ್ದಾರೆ.

ಉತ್ತಮ ಉದಾಹರಣೆ

ಉತ್ತಮ ಉದಾಹರಣೆ

ಇಬ್ಬರೂ ಪರಿಸ್ಥಿತಿಯನ್ನು ಅರಿತು ಆಡುವ ಆಟಗಾರರು, ಅಲ್ಲದೆ ಉತ್ತಮ ಆಟಗಾರರು. ಇವರಿಬ್ಬರೂ ಗಳಿಸಿದ ಹೆಚ್ಚಿನ ಗೋಲುಗಳು ಪಂದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ ಬಂದಿದೆ. ಎಟಿಕೆ ವಿರುದ್ಧ ಬೆಂಗಳೂರು 2-1 ಗೋಲಿನಿಂದ ಗೆದ್ದಿರುವ ಪಂದ್ಯ ಇದಕ್ಕೆ ಉತ್ತಮ ಉದಾಹರಣೆ. ಪ್ರಥಮಾರ್ಧದ ಆರಂಭದಲ್ಲಿ ಎಟಿಕೆ ಮೇಲುಗೈ ಸಾಧಿಸಿತ್ತು, ಮಿಕು ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ಸಮಬಲಗೊಳಿಸಿದರು. ನಂತರ ದ್ವಿತಿಯಾರ್ಧದಲ್ಲಿ ಎರಡನೇ ಗೋಲು ಗಳಿಸಿ ಪಂದ್ಯ ಗೆದ್ದುಕೊಟ್ಟರು.

ವಾರಗಳ ಕಾಲ ವಿಶ್ರಾಂತಿ

ವಾರಗಳ ಕಾಲ ವಿಶ್ರಾಂತಿ

ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿರುವ ಛೆಟ್ರಿ ಎರಡು ವಾರಗಳ ಕಾಲ ವಿಶ್ರಾಂತಿಯಲ್ಲಿರುತ್ತಾರೆ. ಜೋರ್ಡಾನ್ ವಿರುದ್ಧದ ಅಂತಾರಾಷ್ಟ್ರೀಯ ಸೌಹಾ‘ರ್ ಪಂದ್ಯದಿಂದಲೂ ಅವರು ಹೊರಗುಳಿದಿದ್ದಾರೆ. ಮುಂದಿನ ವಾರ ಆರಂಭಗೊಳ್ಳಲಿರುವ ಗೋವಾ ವಿರುದ್ಧದ ಐಎಸ್‌ಎಲ್‌ನ ರೋಚಕ ಪಂದ್ಯದಲ್ಲಿ ಅವರು ಅಂಗಣಕ್ಕಿಳಿಯಲಿದ್ದಾರೆ. ಇಂಥ ಸಂದರ್ಭದಲ್ಲಿ ತಮ್ಮ ಹೊಂದಾಣಿಕೆಯ ಆಟಗಾರ ಛೆಟ್ರಿ ಇಲ್ಲದೆ ಮಿಕು ಹೇಗೆ ಗೋಲು ಗಳಿಸುತ್ತಾರೆ ಎಂಬುದು ಕುತೂಹಲದ ಸಂಗತಿ.

Story first published: Friday, November 16, 2018, 21:35 [IST]
Other articles published on Nov 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X