ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಮತ್ತೆ ಟಾಪ್‌ ನಾಲ್ಕಕ್ಕೆ ಜಿಗಿದ ಜೆಮ್ಷೆಡ್ಪುರ ಎಫ್‌ಸಿ

By Isl Media
ISL 2018: Cahill, Choudhary fire Jamshedpur back into top four

ಜೆಮ್ಷೆಡ್ಪುರ, ಡಿಸೆಂಬರ್ 12: ಟಿಮ್ ಕಹಿಲ್ (29ನೇ ನಿಮಿಷ ) ಹಾಗೂ ಫಾರೂಕ್ ಚೌಧರಿ (61ನೇ ನಿಮಿಷ ) ಗಳಿಸಿದ ಗೋಲಿನಿಂದ ಡೆಲ್ಲಿ ಡೈನಮೋಸ್ ತಂಡವನ್ನು 2-1 ಗೋಲಿನಿಂದ ಮಣಿಸಿದ ಜೆಮ್ಷೆಡ್ಪುರ ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ನಾಲ್ಕರ ಸ್ಥಾನ ತಲುಪಿತು. ಡೆಲ್ಲಿ ಕೊನೆಯ ಸ್ಥಾನವನ್ನೇ ಕಾಯ್ದುಕೊಂಡಿತು. ಡೆಲ್ಲಿ ಪರ 24ನೇ ನಿಮಿಷದಲ್ಲಿ ಲಾಲಿಯಾನ್ಜುವಾಲಾ ಚಾಂಗ್ಟೆ ಗಳಿಸಿದ ಗೋಲಿನಿಂದ ಸೋಲಿನ ಅಂತರ ಕಡಿಮೆಯಾಯಿತು.

'ತಂಡಕ್ಕೆ ಆಯ್ಕೆಯಾಗಬೇಕಾದರೆ ಎಂಎಸ್‌ ಧೋನಿ ದೇಸಿ ಕ್ರಿಕೆಟ್ ಆಡಲೇಬೇಕು!''ತಂಡಕ್ಕೆ ಆಯ್ಕೆಯಾಗಬೇಕಾದರೆ ಎಂಎಸ್‌ ಧೋನಿ ದೇಸಿ ಕ್ರಿಕೆಟ್ ಆಡಲೇಬೇಕು!'

ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಡೆಲ್ಲಿ ತಂಡ ವಿಲವಾಯಿತು. ದ್ವಿತಿಯಾರ್ಧದಲ್ಲಿ ಗೋಲು ನೀಡುವ ತನ್ನ ಕೆಟ್ಟ ಚಾಳಿಯನ್ನು ಡೆಲ್ಲಿ ಮುಂದುವರಿಸಿತು. 61ನೇ ನಿಮಿಷದಲ್ಲಿ ಫಾರುಖ್ ಚೌಧರಿ ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ಪಂದ್ಯದದಲ್ಲಿ ಮೇಲುಗೈ ಸಾಧಿಸಿತು. ಕಾರ್ನರ್ ಹೊಡೆತ ಅಲ್ಲಿಲ್ಲಿ ತಾಗಿ ಫಾರುಕ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಮಾರ್ಕಸ್ ತೆಬರ್ ಚೆಂಡನ್ನು ಬಾಕ್ಸ್ ವಲಯದಿಂದ ದೂರ ಕಳುಹಿಸಲು ಯತ್ನಿಸಿದರು.ಆದರೆ ಚೆಂಡು ಫಾರುಖ್ ಅವರ ಕಾಲಿಗೆ ಸಿಕ್ಕಿತು. ಚೆಂಡನ್ನು ನೇರವಾಗಿ ನೆಟ್‌ಗೆ ತಲುಪಿಸಿದ ಫಾರುಕ್ ತಂಡಕ್ಕೆ 2-1ರ ಮುನ್ನಡೆ ತಂದುಕೊಟ್ಟರು.

ಡೆಲ್ಲಿ ತಂಡದ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ. ಅದು ಬರೇ ಐದು ನಿಮಿಷಕ್ಕೆ ಸೀಮಿತವಾಯಿತು. ಟಿಮ್ ಕಹಿಲ್ 29ನೇ ನಿಮಿಷದಲ್ಲಿ ಅದ್ಭುತ ಹೆಡರ್ ಮೂಲಕ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಕಾರ್ಲೋಸ್ ಕಾಲ್ವೋ ನೀಡಿದ ಕಾರ್ನರ್ ಪಾಸ್‌ಗೆ ಹೆಡರ್ ಮೂಲಕ ಕಹಿಲ್ ಗೋಲು ಗಳಿಸಿದರು, ಇದರೊಂದಿಗೆ ಪ್ರಥಮಾರ್ಧ 1-1 ಗೋಲಿನಿಂದ ಸಮಬಲಗೊಂಡಿತು.

ಹಾಕಿ ವಿಶ್ವಕಪ್: ನೆದರ್‌ಲ್ಯಾಂಡ್‌ ಹತ್ತಿಕ್ಕಿ ಭಾರತ ಇತಿಹಾಸ ಬರೆಯುವುದೆ!?ಹಾಕಿ ವಿಶ್ವಕಪ್: ನೆದರ್‌ಲ್ಯಾಂಡ್‌ ಹತ್ತಿಕ್ಕಿ ಭಾರತ ಇತಿಹಾಸ ಬರೆಯುವುದೆ!?

24ನೇ ನಿಮಿಷದಲ್ಲಿ ಲಾಲಿಯಾನ್ಜುವಾಲಾ ಚಾಂಗ್ಟೆ ಗಳಿಸಿದ ಗೋಲಿನಿಂದ ಡೆಲ್ಲಿ ಡೈನಮೋಸ್ ಮೇಲುಗೈ ಸಾಧಿಸಿತು. ಇದು ಚಾಂಗ್ಟೆ ಅವರು ಈ ಋತುವಿನಲ್ಲಿ ಗಳಿಸಿದ ನಾಲ್ಕನೇ ಗೋಲು ಇದಾಗಿತ್ತು. ನಾರಾಯಣ ದಾಸ್ ಬಲಭಾಗದಿಂದ ಬಂದ ಚೆಂಡನ್ನು ರೆನೆ ಮಿಹೆಲಿಕ್ ಅವರಿಗೆ ನೀಡಿದರು. ಮಿಹೆಲಿಕ್ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟರು. ಆದರೆ ಚೆಂಡು ಕಾಲಿಗೆ ತಗಲಿ ಹಿಂದಕ್ಕೆ ಚಿಮ್ಮಿತು. ಚಾಂಗ್ಟೆ ಎದೆಯ ಮೂಲಕ ಚೆಂಡನ್ನು ನಿಯಂತ್ರಿಸಿ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ತುಳಿದರು. ಚೆಂಡು ಗೋಲ್‌ಬಾಕ್ಸ್‌ಗೆ ಮುತ್ತಿಟ್ಚಿತು.

ಹೀರೋ ಇಂಡಿಯನ್ ಸೂಪರ್ ಲೀಗ್‌ನ 55ನೇ ಪಂದ್ಯದಲ್ಲಿ ಆತಿಥೇಯ ಜೆಮ್ಷುಡ್ಪುರ ತಂಡ ಹಾಗೂ ಪ್ರವಾಸಿ ಡೆಲ್ಲಿ ಡೈನಮೋಸ್ ನಡುವೆ ಪಂದ್ಯ ನಡೆಯಿತು. ಇದಕ್ಕೂ ಮುನ್ನ ಮೂರು ಬಾರಿ ಇತ್ತಂಡಗಳು ಮುಖಾಮುಖಿಯಾಗಿದ್ದವು. ಆದರೆ ಪ್ರವಾಸಿ ಡೆಲ್ಲಿ ತಂಡ ಇದುವರೆಗೂ ಜಯದ ರುಚಿ ಕಂಡಿಲ್ಲ. ಜೆಮ್ಷೆಡ್ಪುರ ಕೂಡ ಗೆಲ್ಲುವ ಹಂತದಲ್ಲಿದ್ದ ಪಂದ್ಯವನ್ನು ಕೈ ಬಿಟ್ಟಿತ್ತು. ಕಳೆದ ಎರಡು ಪಂದ್ಯಗಳಲ್ಲಿ ಕೇವಲ ಡ್ರಾಗೆ ತೃಪ್ತಿಪಡುವ ಮೂಲಕ ನಾಲ್ಕನೇ ಸ್ಥಾನದಿಂದ ಕೆಳಕ್ಕೆ ಕುಸಿಯಿತು. 11 ಪಂದ್ಯಗಳಲ್ಲಿ ಜೆಮ್ಷೆಡ್ಪುರ ತಂಡ ಏಳು ಪಂದ್ಯಗಳಲ್ಲಿ ಅಂಕ ಹಂಚಿಕೊಂಡಿದೆ. ಟಾಪ್ ನಾಲ್ಕರಲ್ಲಿ ಉಳಿಯಬೇಕಾದರೆ ಟಾಟಾ ಪಡೆ ಈ ಪ್ರಮಾದ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು.

ಡೆಲ್ಲಿ ಡೈನಮೋಸ್ ತಂಡ ಇದುವರೆಗೂ ಲೀಗ್‌ನಲ್ಲಿ ಜಯ ಗಳಿಸಿಲ್ಲ. ಅವರ ಡಿಫೆನ್ಸ್ ವಿಭಾಗ ಕೂಡ ಶಕ್ತಿ ಗುಂದಿದೆ. ಸತತ ಮೂರು ಪಂದ್ಯಗಳಲ್ಲಿ ಗೋಲು ಗಳಿಸುವಲ್ಲಿ ವಿಲವಾದ ಡೆಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಮಾತ್ರ ಗೋಲು ಗಳಿಸಿದೆ. ಎದುರಾಳಿ ತಂಡಕ್ಕೆ ನೀಡಿರುವ 18 ಗೋಲುಗಳಲ್ಲಿ ಡೆಲ್ಲಿ ದ್ವಿತಿಯಾ'ರ್ದಲ್ಲೇ 15 ಗೋಲುಗಳನ್ನು ನೀಡಿದೆ.

Story first published: Wednesday, December 12, 2018, 22:06 [IST]
Other articles published on Dec 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X