ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಜಿಕೋಗೆ ಸಾಧ್ಯವಾಗದ್ದನ್ನು ಲೊಬೆರಾ ಸಾಧಿಸ್ತಾರಾ?!

ISL 2018: Can Lobera do what Zico couldn’t with FC Goa?

ಮುಂಬೈ, ನವೆಂಬರ್ 20: ಎಫ್ ಸಿ ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಅವರು ಪ್ರಧಾನ ಕೋಚ್ ಹುದ್ದೆಯನ್ನು ಒಂದು ವರ್ಷ ಮುಂದುವರಿಸಲು ಒಪ್ಪಿಕೊಂಡಿದ್ದಾರೆ. ಇದರಿಂದ ಎದುರಾಳಿ ತಂಡಗಳಿಗೆ ಹತಾಶೆ ಆಗದೆ ಇರದು. ಅದೇ ರೀತಿ ಸ್ಥಿರ ನಿಲುವುಳ್ಳ ತಂಡಗಳು ಖುಷಿಯಾಗಿರಬಹುದು.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಗೆ ಭಾರತ ತಂಡ ಪ್ರಕಟಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಗೆ ಭಾರತ ತಂಡ ಪ್ರಕಟ

ಒಂದು ಋತುವನ್ನು ಹೊರತುಪಡಿಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ಫುಟ್ಬಾಲ್ ಆಟದ ಮೂಲಕ ಮನರಂಜನೆ ನೀಡಿದೆ. ಬ್ರೆಜಿಲ್ ಮೂಲದ ಕೋಚ್ ಜಿಕೋ ಅವರು ತರಬೇತಿ ನೀಡುತ್ತಿರುವಾಗಲೂ ಗೋವಾ ತಂಡ ಆಕ್ರಮಣಕಾರಿ ಆಟವಾಡಿ ಪ್ರೇಕ್ಷಕರನ್ನು ರಂಜಿಸಿತ್ತು. ಈಗ ಲೊಬೆರಾ ಅವರಲ್ಲಿ ಪಳಗಿರುವ ತಂಡವನ್ನು ಯಾರಿಂದಲೂ ತಡೆಯಲು ಆಗುತ್ತಿಲ್ಲ.

ಭಾರತ vs ಆಸ್ಟ್ರೇಲಿಯಾ, ಟಿ20 ಸರಣಿ: ಇತ್ತಂಡಗಳ ಪ್ಲಸ್ಸು-ಮೈನಸ್ಸುಗಳು!ಭಾರತ vs ಆಸ್ಟ್ರೇಲಿಯಾ, ಟಿ20 ಸರಣಿ: ಇತ್ತಂಡಗಳ ಪ್ಲಸ್ಸು-ಮೈನಸ್ಸುಗಳು!

'ನನಗೆ ಇದೊಂದು ಅದ್ಭುತ ಅನುಭವ. ವೈಯಕ್ತಿಕ ಹಾಗೂ ವೃತ್ತಿಪರವಾಗಿ ಕ್ಲಬ್ ಅನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ಆಟಗಾರರಿಗೆ ಅನುಕೂಲವಾಗುವಂಥ ವಾತಾವರಣವನ್ನು ನಿರ್ಮಿಸುವಂತಾಗಬೇಕು.ಇನ್ನೂ ತಂಡಕ್ಕಾಗಿ ಅಪಾರ ಕೆಲಸಗಳನ್ನು ಮಾಡಬೇಕಾಗಿದೆ. ಪ್ರತಿದಿನವೂ ಸವಾಲುಗಳನ್ನು ಸ್ವೀಕರಿಸಿ ಕ್ಲಬ್ ನ ಭವಿಷ್ಯಕ್ಕಾಗಿ ಶ್ರಮಿಸುವುದು ನನ್ನ ಮುಂದಿರುವ ಗುರಿ' ಎಂದು ಲೊಬೆರಾ ಹೇಳಿದ್ದಾರೆ.

ಅದ್ಭುತ ಪ್ರದರ್ಶನ ನೀಡ ಬಲ್ಲದು

ಅದ್ಭುತ ಪ್ರದರ್ಶನ ನೀಡ ಬಲ್ಲದು

2015 ರಲ್ಲಿ ಜಿಕೋ ಅವರ ತರಬೇತಿಯಲ್ಲಿ ತೋರಿದ ಸಾಧನೆಗಿಂತಲೂ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯವನ್ನು ಗೋವಾ ಹೊಂದಿದೆ. ಬ್ರೆಜಿಲ್ ಕೋಚ್ ತಂಡವನ್ನು ಫೈನಲ್ ಗೆ ಕೊಂಡೊಯ್ದು ಅಲ್ಲಿ ತಂಡ ಚೆನ್ನೈಯಿನ್ ತಂಡದ ವಿರುದ್ಧ 2-3. ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು. ಲೊಬೆರಾ ಇದಕ್ಕಿಂತಲೂ ಉತ್ತಮ ಪ್ರದರ್ಶನ ನೀಡುವಲ್ಲಿ ತಂಡವನ್ನು ಮುನ್ನಡೆಸಬಹುದೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಕೊರೊ ಮಿಂಚಿನಾಟ

ಕೊರೊ ಮಿಂಚಿನಾಟ

ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ ಗೋವಾ 21 ಗೋಲುಗಳನ್ನು ಗಳಿಸಿದೆ. ಜೆಮ್ಷೆಡ್ಪುರ ಇದಕ್ಕಿಂತ. 7 ಗೋಲುಗಳಿಂದ ಹಿಂದೆ ಇದ್ದು ಎರಡನೇ ಸ್ಥಾನದಲ್ಲಿದೆ. ಲೊಬೆರಾ ಪಡೆಗೆ ದಾಳಿ ವಿಭಾಗದಲ್ಲಿ ಬಲಿಷ್ಠವಾಗಿರುವದೇ ತಂಡದ ನಿಜವಾದ ಡಿಫೆನ್ಸ್. ಆಡಿರುವ ಏಳು ಪಂದ್ಯಗಳಲ್ಲಿ ಫೆರಾನ್ ಕೊರೊಮಿನಾಸ್ ಎಂಟು ಗೋಲುಗಳನ್ನು ಗಳಿಸಿರುವುದಲ್ಲದೆ ನಾಲ್ಕು ಗೋಲುಗಳಿಗೆ ನೆರವಾಗಿದ್ದಾರೆ. ಕಳೆದ ಋತುವಿನಲ್ಲಿ ತೋರಿದ ಸಾಧನೆಯನ್ನೇ ಅವರು ಮುಂದುವರಿದಿದ್ದಾರೆ. ಮ್ಯಾನ್ವೆಲ್ ಲಾನ್ಜೆರೋಟ್ ಅವರ ಅನುಪಸ್ಥಿಯಲ್ಲೂ ಕೊರೊ ಅದೇ ರೀತಿಯ ಆಟವನ್ನು ಮುಂದುವರೆಸಿದ್ದಾರೆ.

ಪ್ರತಿಯೊಬ್ಬ ಆಟಗಾರರೂ ಪ್ರಮುಖ

ಪ್ರತಿಯೊಬ್ಬ ಆಟಗಾರರೂ ಪ್ರಮುಖ

ಕೇವಲ ಕೊರೊಮಿನಾಸ್ ಯಶಸ್ಸು ಕಂಡವರಿಲ್ಲ. ಪ್ರತಿಯೊಬ್ಬ ಆಟಗಾರರೂ ಗೋವಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರತಿಯೊಬ್ಬ ಆಟಗಾರರೂ ದಾಳಿ ವಿಭಾಗದಲ್ಲಿ ತಂಡಕ್ಕೆ ಆಧಾರ ಎನಿಸಿದ್ದಾರೆ. ಉದಾಹರಣೆಗೆ ಪುಣೆ ಸಿಟಿವಿರುದ್ಧದ ಪಂದ್ಯದಲ್ಲಿ ಹ್ಯುಗೊ ಬೌಮೌಸ್ ಹಾಗೂ ಜಾಕಿಚಾಂದ್ ಸಿಂಗ್ ಸ್ಪೇನ್ ನ ದಾಳಿ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಾಹಿಸಿದ್ದಾರೆ. ಸಿಕ್ಕ ಅವಕಾಶದಲ್ಲಿ ಗೋಲು ಗಳಿಸಿದ್ದಾರೆ. ಇದು ತಂಡದ ಇತರ ಆಟಗಾರರಲ್ಲಿ ಆತ್ವಿಶ್ವಾಸವನ್ನು ನುಡಿಸಿದೆ.

ಆಕ್ರಮಣಕಾರಿ ಕೋಚಿಂಗ್

ಆಕ್ರಮಣಕಾರಿ ಕೋಚಿಂಗ್

ಮುಂಬೈ ವಿರುದ್ಧದ ಐದು ಗೋಲುಗಳ ಜಯದಲ್ಲಿ ಎಡು ಬೇಡಿಯಾ ಹಾಗೂ ಜಾಕಿಚಾಂದ್ ಅವರ ಸಾಧನೆ ಪ್ರಮುಖವಾಗಿತ್ತು. ಲೊಬೆರಾ ಅವರ ಆಕ್ರಮಣಕಾರಿ ಕೋಚಿಂಗ್, ಫುಟ್ಬಾಲ್ ತಂಡದ ಮೇಲೆ ಅಪಾರ ಪರಿಣಾಮ ಬೀರಿದೆ. ಲೊಬೆರಾ ಅವರ ಬ್ರಾಂಡ್ ನ ಫುಟ್ಬಾಲ್ ಗೋವಾ ತಂಡವನ್ನು ಯಶಸ್ಸಿನ ಹಾದಿಗೆ ಕೊಂಡೊಯ್ದಿರುವುದು ಸ್ಪಷ್ಟ. ಗೋವಾ ತಂಡದ ಮಿಡ್ ಫೀಲ್ಡ್ ವಿಭಾಗದಲ್ಲಿ ಮೈಕ್ರೋಸ್ಕೋಪ್ ಇಟ್ಟು ನೋಡಿದರೆ ಅಚ್ಚರಿಯಾಗುವುದು ಸಹಜ. ಟೂರ್ನಿಯಲ್ಲಿ ಇದುವರೆಗೂ ವಿಭಾಗ ಅದ್ಭುತ ಪ್ರದರ್ಶನ ತೋರಿದೆ. ಎಫ್ ಸಿ ಗೋವಾ ತಂಡದ ಮಿಡ್ ಫೀಲ್ಡರ್ ಗಳಾದ ಅಹಮ್ಮದ್ ಜೊಹುವಾ, ಬೇಡಿಯಾ, ಲೆನ್ನಿ ರೋಡ್ರಿಗಸ್ ಹಾಗೂ ಬೌಮೌಸ್ ಟೂರ್ನಿಯ ಟಾಪ್ 10 ಪಾಸ್ ಗಳು ಇವರ ಹೆಸರಿನಲ್ಲಿದೆ.

ಮೂರನೇ ಸ್ಥಾನದಲ್ಲಿ ಗೋವಾ

ಮೂರನೇ ಸ್ಥಾನದಲ್ಲಿ ಗೋವಾ

ಟೂರ್ನಿಯಲ್ಲಿ ಅತಿಹೆಚ್ಚು ಪಾಸ್ ಮಾಡಿದ ಪಟ್ಟಿಯಲ್ಲಿ ಗೋವಾ ಮೂರನೇ ತಂಡದಲ್ಲಿದೆ. ಇದು ತಂಡದ ಅಟ್ಯಾಕ್ ವಿಭಾಗದ ಶಕ್ತಿಯನ್ನು ಸ್ಪಷ್ಟಪಡಿಸುತ್ತದೆ.
ಜೊಹೊವು ಅವರಂಥ ಆಟಗಾರರು ಮಿಡ್ ಫೀಲ್ಡ್ ವಿಭಾಗದಲ್ಲಿ ಮಿಂಚುತ್ತಿರುವುದು ಗಮನಾರ್ಹ. ಮೊರಾಕ್ಕೋ ಆಟಗಾರ ಗೋವಾದ ಶಕ್ತಿಕೇಂದ್ರ ಕೂಡ ಹೌದು. ಟ್ಯಾಕಲ್ ವಿಭಾಗದಲ್ಲೂ ಲೆನ್ನಿ ಹಾಗೂ ಜೊಹೊವ್ ಪ್ರಮುಖ ಅಸ್ತ್ರ. ಈ ಆಟಗಾರರಿಂದಾಗಿ ಗೋವಾದ ಮಿಡ್ ಫೀಲ್ಡ್ ವಿಭಾಗ ಬಲಿಷ್ಠ ಎನಿಸಿದೆ.

Story first published: Tuesday, November 20, 2018, 18:40 [IST]
Other articles published on Nov 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X