ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018: ಗೋಲಿಲ್ಲದೆ ಅಂಕ ಹಂಚಿಕೊಂಡ ಚೆನ್ನೈ-ಕೇರಳ

By Isl Media
ISL 2018: Chennaiyin & Kerala cancel each other out

ಚೆನ್ನೈ, ನವೆಂಬರ್ 29: ಗೆಲ್ಲುವ ಹಂಬಲ, ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಆಶಯ ಉತ್ಕಟವಾಗಿದ್ದಲ್ಲಿ ಮಾತ್ರ ಪಂದ್ಯದಲ್ಲಿ ಫಲಿತಾಂಶ ಕಾಣಲು ಸಾಧ್ಯ. ಆದರೆ ಕೇರಳ ಹಾಗೂ ಚೆನ್ನೈಯಿನ್ ತಂಡದಲ್ಲಿ ಅದು ಕಂಡು ಬರಲಿಲ್ಲ. ಪರಿಣಾಮ ಇಂಡಿಯನ್ ಸೂಪರ್ ಲೀಗ್ ನ 43ನೇ ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತು.

ಪಂದ್ಯದ ಸ್ಕೋರ್ ಕಾರ್ಡ್

ಪರಿಣಾಮ ಇತ್ತಂಡಗಳು ಅಂಕ ಪಟ್ಟಿಯಲ್ಲಿ ತಾವಿದ್ದ ಸ್ಥಾನವನ್ನೇ ಕಾಯ್ದುಕೊಂಡವು. ಇದರೊಂದಿಗೆ ಕೇರಳ ಹಾಗೂ ಚೆನ್ನೈ ತಂಡದ ಪ್ಲೇ ಆಫ್ ತಲಪುವ ಹಂತ ಮತ್ತಷ್ಟು ದೂರವಾಯಿತು. ಪಂದ್ಯ 0-0 ಗೋಲಿನಿಂದ ಕೊನೆಗೊಂಡಿತು.

ಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿಟೆಸ್ಟ್ ಸರಣಿ : ಗವಾಸ್ಕರ್, ಸಚಿನ್ ದಾಖಲೆ ಮುರಿಯಲು ಸಜ್ಜಾದ ಕೊಹ್ಲಿ

ಮೊದಲ ಹಂತದಲ್ಲಿ ಕೇರಳ ಹಾಗೂ ಚೆನ್ನೈ ತಂಡಗಳು ಗೋಲು ಗಳಿಸುವ ಅವಕಾಶದಿಂದ ವಂಚಿತವಾದವು. ಪಂದ್ಯದ ಮೇಲೆ ಲಯ ಕಂಡುಕೊಳ್ಳುವಲ್ಲಿ ಇತ್ತಂಡಗಳು ವಿಲವಾದವು. ಕೇರಳ ತಂಡ ಆರಂಭದಲ್ಲಿ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು.

ಚೆನ್ನೈ ತಂಡ ಕೇರಳದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾದರೂ ಗೋಲು ಗಳಿಸುವಲ್ಲಿ ಯಶ ಕಾಣಲಿಲ್ಲ. ಕೇರಳದ ಡಿಫೆನ್ಸ್ ವಿಭಾಗ ಅಷ್ಟು ಸಶಕ್ತ ವಾಗಿಲ್ಲದಿದ್ದರೂ ಚೆನ್ನೈ ಅದರ ಮೇಲೆ ಪ್ರಭುತ್ವ ಸಾಧಿಸುವಲ್ಲಿ ವಿಫಲವಾಯಿತು.

ಮನೆಯಂಗಳದಲ್ಲಿ ಚೆನ್ನೈ ಮಿಂಚು

ಮನೆಯಂಗಳದಲ್ಲಿ ಚೆನ್ನೈ ಮಿಂಚು

ಸಾಮಾನ್ಯವಾಗಿ ಚೆನ್ನೈ ತಂಡ ಮನೆಯಂಗಣದಲ್ಲಿ ಮಿಂಚುವುದೇ ಹೆಚ್ಚು. ಆದರೆ ಈ ಬಾರಿ ಅದು ತನ್ನ ನೈಜ ಆಟವನ್ನು ತೋರಿಸುವಲ್ಲಿ ವಿಫಲವಾಯಿತು. ಇಸಾಕ್ ವನ್‌ಮಾಲ್‌ಸ್ವಾಮಾ ಹಾಗೂ ತೋಯಿ ಸಿಂಗ್ ಅವರ ಬಗ್ಗೆ ಹೆಚ್ಚು ನಿರೀಕ್ಷೆ ಇದ್ದಿತ್ತು. ಅವರಿಗೆ ಗೋಲು ಗಳಿಸುವ ಅವಕಾಶವೂ ಕೂಡಿ ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಈ ಇಬ್ಬರೂ ಆಟಗಾರರು ತಮ್ಮ ಅವಕಾಶವನ್ನು ಸದುಪಯೋಗಡಿಸಿಕೊಂಡಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಚೆನ್ನೈ ಇದಕ್ಕೆ ಸಾಕ್ಷಿಯಾಯಿತು. ಪೊಪ್ಲಾಟ್ನಿಕ್ ಅವರು ತಮ್ಮ ನೈಜ ಆಟವನ್ನು ತೋರಿಸುವಲ್ಲಿ ವಿಲರಾದರು. ಎರಡೂ ತಂಡಗಳು ಮೊದಲ 45 ನಿಮಿಷದಲ್ಲಿ ಮಿಂಚಲು ವಿಲವಾದವು.

ಹಿಂದಿನ ಪ್ರದರ್ಶನವಿಲ್ಲ

ಹಿಂದಿನ ಪ್ರದರ್ಶನವಿಲ್ಲ

ಇಂಡಿಯನ್ ಸೂಪರ್ ಲೀಗ್‌ನ 43ನೇ ಪಂದ್ಯ ಸಂಕಷ್ಟದಲ್ಲಿರುವ ಹಾಲಿ ಚಾಂಪಿಯನ್ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳ ನಡುವೆ ನಡೆಯಿತು. ಇತ್ತಂಡಗಳು ಕಳೆದ ಬಾರಿಯ ಪ್ರದರ್ಶನವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ವಿಫಲವಾದವು. ಜೆಜೆ, ಸಲೋಮ್ ಹಾಗೂ ರಫಿ ತಮ್ಮ ನೈಜ ಆಟವನ್ನು ಪ್ರದರ್ಶಿಸಲು ವಿಫಲರಾದ ಕಾರಣ ಚೆನ್ನೈ ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದಿದೆ.

ನಾಲ್ಕರ ಹಂತ ತಲುಪುವಾಸೆ

ನಾಲ್ಕರ ಹಂತ ತಲುಪುವಾಸೆ

ಕಾರ್ಲೊಸ್ ಸಲೋಮ್ ಮಾತ್ರ ಇದುವರೆಗೂ ಒಂದು ಗೋಲು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ ಈ ಮೂವರು ಆಟಗಾರರು ಯಾವುದೇ ಯಶಸ್ಸು ಕಾಣದಿರುವುದು ಚೆನ್ನೈ ತಂಡದ ನಿರೀಕ್ಷೆಗೆ ಅಡ್ಡಗಾಲು ಆಗಿದೆ. ಈಗ ಕೇರಳ ವಿರುದ್ಧದ ಪಂದ್ಯದಲ್ಲಾದರೂ ಗೆದ್ದು ಅಂತಿಮ ನಾಲ್ಕರ ಹಂತ ತಲುಪುವ ಆಸೆಯನ್ನು ಜೀವಂತವಾಗಿರಿಸುವ ಉದ್ದೇಶದಿಂದ ಚೆನೈ ಅಂಗಣಕ್ಕಿಳಿಯಿತು.

ಎದುರಾಳಿಗೆ ಅಂಕ

ಎದುರಾಳಿಗೆ ಅಂಕ

ಕೇರಳ ಬ್ಲಾಸ್ಟರ್ಸ್ ತಂಡ ಕೂಡ ಎದುರಾಳಿಗೆ ಅಂಕ ನೀಡುವುದರಲ್ಲೆ ಇದುವರೆಗೆ ಸಾಗಿ ಬಂದಿದೆ. ಗೆಲ್ಲುವ ಅವಕಾಶ ಇದ್ದರೂ ಕೇರಳ ನಾಲ್ಕು ಅಂಕಗಳನ್ನು ಎದುರಾಳಿ ತಂಡಕ್ಕೆ ನೀಡಿ ಹಿಂದೆ ಬಿದ್ದಿದೆ,. ಅಂತಿಮ ಹಂತದಲ್ಲಿ ಎರಡು ಗೋಲುಗಳನ್ನು ನೀಡಿದ ಕಾರಣ ಗೆಲ್ಲುವ ಪಂದ್ಯದಲ್ಲಿ ಕೇರಳ ಸೋಲಿಗೆ ಶರಣಾಗಿತ್ತು. ಆಡಿರುವ ಎಂಟು ಪಂದ್ಯಗಳಲ್ಲಿ ಏಳು ಅಂಕಗಳನ್ನು ಗಳಿಸಿರುವ ಕೇರಳ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

Story first published: Thursday, November 29, 2018, 22:28 [IST]
Other articles published on Nov 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X