ಕೊಚ್ಚಿ, ನವೆಂಬರ್ 11: ಕೊಚ್ಚಿಯ ಜವಾಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 11) ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಿಥೇಯ ಕೇರಳ ಬ್ಲಾಸ್ಟರ್ಸ್ ಗೆ ಎಫ್ಸ್ ಗೋವಾ 3-1ರ ಸೋಲುಣುಸಿದೆ. ಕೋರೊ ಸಿಡಿಸಿದ ಎರಡು ಗೋಲ್ಗಳ ನೆರವಿನಿಂದ ಗೋವಾ ಗೆಲುವನ್ನಾಚರಿಸಿದೆ.
ಪಂದ್ಯದ ಪ್ರಥಮಾರ್ಧದ 11ನೇ ನಿಮಿಷದಲ್ಲಿ ಗೋವಾದಿಂದ ಕೋರೊ ಗೋಲ್ ಬಾರಿಸಿ ತಂಡಕ್ಕೆ 1-0 ಮುನ್ನಡೆ ಕೊಟ್ಟಿದ್ದರು. ಅದಾಗಿ ಮತ್ತೆ ದ್ವಿತೀಯಾರ್ಧದ ಆರಂಭದಲ್ಲಿ ಅಂದರೆ 47ನೇ ನಿಮಿಷದಲ್ಲಿ ಕೋರೊ ಅವರಿಂದ ಮತ್ತೊಂದು ಗೋಲ್ ದಾಖಲಾಯಿತು.
.@FCGoaOfficial were Ferr-ocious indeed! 🙌
— Star Sports Football (@StarFootball) November 11, 2018
Picking up yet another comfortable victory, the Gaurs retain their pole position on the Hero Indian Super League table. #FanBannaPadega #KERGOA pic.twitter.com/XKtUcdlm8L
67ನೇ ನಿಮಿಷದಲ್ಲಿ ಎಫ್ಸ್ ಗೋವಾ ಪರ ಮನ್ವೀರ್ ಸಿಂಗ್ ಮೂರನೇ ಗೋಲ್ ದಾಖಲಿಸಿದರು. ಕೇರಳ ಬ್ಲಾಸ್ಟರ್ಸ್ ಗೋಲ್ ಗಾಗಿ ಪರದಾಡಿ ಕೊನೆಗೂ 92ನೇ ನಿಮಿಷದಲ್ಲಿ ನಿಕೋಲಾ ಕ್ರಾಕ್ರೆವಿಕ್ ಗೋಲ್ ಬಾರಿಸಿ ಸೋಲಿನ ಅಂತರವನ್ನು ಕಿರಿದುಗೊಳಿಸಿದರು.