ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018: ಎಫ್‌ಸಿ ಪುಣೆ ಸಿಟಿ ವಿರುದ್ಧ ಗೋಲ್ಮಳೆಯಲ್ಲಿ ಗೆದ್ದ ಗೋವಾ

By Isl Media
ISL 2018: FCG vs FCPC: Entertaining Goa see off FC Pune City

ಗೋವಾ, ಅಕ್ಟೋಬರ್ 29: ಫೆರಾನ್ ಕೊರೊಮಿನಾಸ್ (5 ಮತ್ತು 35ನೇ ನಿಮಿಷ), ಹ್ಯೂಗೋ ಬೌಮೌಸ್ (12ನೇ ನಿಮಿಷ), ಮತ್ತು ಜಾಕಿಚಾಂದ್ ಸಿಂಗ್ (20ನೇ ನಿಮಿಷ) ಅವರ ಗೋಲಿನ ಮಳೆಯಿಂದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ರೋಚಕ ಪಂದ್ಯದಲ್ಲಿ ಎಫ್ ಸಿ ಪುಣೆ ಸಿಟಿ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಮಣಿಸಿ ಜಯದ ಓಟವನ್ನು ಮುಂದುವರಿಸಿದೆ.

ಜಂಟಿಯಾಗಿ 3ನೇ 'ಏಷ್ಯನ್ ಚಾಂಪಿಯನ್ಸ್ ಟ್ರೋಫಿ'ಗೆ ಮುತ್ತಿಕ್ಕಿದ ಭಾರತ-ಪಾಕ್ಜಂಟಿಯಾಗಿ 3ನೇ 'ಏಷ್ಯನ್ ಚಾಂಪಿಯನ್ಸ್ ಟ್ರೋಫಿ'ಗೆ ಮುತ್ತಿಕ್ಕಿದ ಭಾರತ-ಪಾಕ್

ಪುಣೆ ಪರ ಮರ್ಸಿಲೋ ಪೆರೇರಾ (8ನೇ ನಿಮಿಷ) ಹಾಗೂ ಎಮಿಲಿಯಾನೊ ಅಲ್ಫಾರೋ (23 ನೇ ನಿಮಿಷ) ಎರಡು ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ಪ್ರಥಮಾರ್ಧದಲ್ಲಿ ಗೋಲಿನ ಮಳೆಯಾದರೂ ದ್ವಿತೀಯಾರ್ಧ ಗೋಲು ದಾಖಲಾಗಲೇ ಇಲ್ಲ.

ಏಷ್ಯಾದಲ್ಲಿ ತ್ವರಿತಗತಿಯಲ್ಲಿ 6 ಸಾವಿರ ರನ್, ಸಚಿನ್ ದಾಖಲೆ ಮುರಿದ ಕೊಹ್ಲಿಏಷ್ಯಾದಲ್ಲಿ ತ್ವರಿತಗತಿಯಲ್ಲಿ 6 ಸಾವಿರ ರನ್, ಸಚಿನ್ ದಾಖಲೆ ಮುರಿದ ಕೊಹ್ಲಿ

ಪ್ರಥಮಾರ್ಧದಲ್ಲಿ ಗೋವಾ ಗೋಲಿನ ಮಳೆಗರೆಯಿತು. 20ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್ ಗಳಿಸಿದ ಗೋಲಿನಿಂದ ಗೋವಾ 3-1ರ ಮುನ್ನಡೆ ಕಂಡಿತು. ನಂತರ 23ನೇ ನಿಮಿಷದಲ್ಲಿ ಪುಣೆ ಪರ ಎಮಿಲಿನಯಾನೋ ಅಲ್ಫಾರೋ ಗಳಿಸಿದ ಗೋಲಿನಿಂದ ಪಂದ್ಯ 3-2ರಲ್ಲಿ ಸಾಗಿತು. ಕೊರೊಮಿನಾಸ್ ಅವರನ್ನು ತಡೆಯುವವರೇ ಕಾಣುತ್ತಿಲ್ಲ 35ನೇ ನಿಮಿಷದಲ್ಲಿ ಕೊರೊಮಿನಾಸ್ ಗಳಿಸಿದ ಗೋಲು ಗೋವಾ ತಂಡವನ್ನು ಬೃಹತ್ ಮುನ್ನಡೆಯತ್ತ ಕೊಂಡೊಯ್ದಿತು.

ಗೋವಾಕ್ಕೆ ಮುನ್ನಡೆ

ಗೋವಾಕ್ಕೆ ಮುನ್ನಡೆ

12 ನಿಮಿಷಗಳ ಆಟದಲ್ಲಿ ಇತ್ತಂಡಗಳು ಎರಡು ಗೋಲು ಗಳಿಸಿದವು, ಅದ್ಭುತ ಹೋರಾಟ. ಹ್ಯುಗೋ ಬೌಮೌಸ್ ಚೆಂಡನ್ನು ಕೊರೊಮಿನಾಸ್‌ಗೆ ನೀಡಿದರು. ಮತ್ತೆ ಚೆಂಡು ಬೌಮೌಸ್ ನಿಯಂತ್ರಣಕ್ಕೆ. ಅದ್ಭುತ ಹೆಡರ್ ಮೂಲಕ ಬೌಮೌಸ್ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಳ್ಳಿದರು. ವಿಶಾಲ್ ಕೈತ್ ಅವರ ಪ್ರಯತ್ನ ಯಾವುದೇ ಲ ನೀಡಲಿಲ್ಲ. ಗೋವಾಕ್ಕೆ 2-1ರ ಮುನ್ನಡೆ.

ಸಮಬಲದ ಸಾಧನೆ

ಸಮಬಲದ ಸಾಧನೆ

ಮುಂಬೈ ರೀತಿಯಲ್ಲಿ ಗೋವಾ ಆಡಲಿಲ್ಲ. ತಕ್ಕ ತಿರುಗೇಟು ನೀಡಿತು. 8ನೇ ನಿಮಿಷದಲ್ಲಿ ಮಾರ್ಸೆಲೋ ಗಳಿಸಿದ ಗೋಲಿನಿಂದ ಪುಣೆ ತಂಡ ಸಮಬಲ ಸಾಧಿಸಿತು. ರಾಬಿನ್ ಸಿಂಗ್ ಹಾಗೂ ಮಾರ್ಕೋ ಸ್ಟಾನ್ಕೋವಿಕ್ ಮೂಲಕ ಸಾಗಿ ಬಂದ ಚೆಂಡು ಬಾಕ್ಸ್‌ನಲ್ಲಿದ್ದ ಮಾರ್ಸೆಲೋ ಅವರಿಗೆ ಸಿಕ್ಕಿತು. ಗೋಲ್‌ಕೀಪರ್ ಡೈವ್ ಮಾಡಿದರೂ ತಪ್ಪಿ ಹೋಗುವ ರೀತಿಯಲ್ಲಿ ಮಾರ್ಸೆಲೋ ತುಳಿದ ಚೆಂಡು ಗೋಲ್‌ಬಾಕ್ಸ್ ಸೇರಿತು. ಪಂದ್ಯ 1-1ರಲ್ಲಿ ಸಮಬಲ.

ಕೊರೊಮಿನಾಸ್ ಮಿಂಚು

ಕೊರೊಮಿನಾಸ್ ಮಿಂಚು

ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಗಳಿಸಿದ ಗೋಲಿನಿಂದ ಆತಿಥೇಯ ಗೋವಾ ತಂಡ ಮೇಲುಗೈ ಸಾಧಿಸಿತು. ಪುಣೆಯ ಬ್ಯಾಕ್‌ಲೈನ್‌ನಿಂದ ಅಹಮ್ಮದ್ ಜಹೌ ಉತ್ತಮ ಪಾಸ್ ನೀಡಿದರು. ಕೊರೊಮಿನಾಸ್ ನಿಯಂತ್ರಣಕ್ಕೆ ಸಿಕ್ಕ ಚೆಂಡುನ್ನು ಪುಣೆಯ ಡಿಫೆನ್ಸ್ ವಿಭಾಗ ನಿಯಂತ್ರಿಸುವಲ್ಲಿ ವಿಲವಾಯಿತು. ವಿಶಾಲ್ ಕೈತ್‌ಗೆ ಯಾವುದೇ ಅವಕಾಶ ನೀಡದೆ ಚೆಂಡನ್ನು ಸುಲಭವಾಗಿ ಗೋಲ್‌ಬಾಕ್ಸ್‌ಗೆ ತಲುಪಿಸಿದರು. ಆರಂಭದಲ್ಲೇ ಗೋವಾ ಪ್ರಭುತ್ವ ಕಂಡಿತು.

ಆತ್ಮವಿಶ್ವಾಸ ಹೆಚ್ಚಿಸಿತ್ತು

ಆತ್ಮವಿಶ್ವಾಸ ಹೆಚ್ಚಿಸಿತ್ತು

ಇಂಡಿಯನ್ ಸೂಪರ್ ಲೀಗ್‌ನ 21ನೇ ಪಂದ್ಯಕ್ಕೆ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಎಫ್ ಸಿ ಪುಣೆ ಸಿಟಿ ಹಾಗೂ ಎಫ್ಸಿ ಗೋವಾ ತಂಡಗಳು ಸಜ್ಜಾದವು. ಗೋವಾ ತಂಡ ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ಗೋಲುಗಳ ಅಂತರದಲ್ಲಿ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪುಣೆ ತಂಡ ಈಗಾಗಲೇ ಆರು ಗೋಲುಗಳನ್ನು ನೀಡಿದೆ, ಅದರಲ್ಲಿ ಮೂರು ಗೋಲುಗಳು ಪೆನಾಲ್ಟಿ ಬಾಕ್ಸ್‌ನೊಳಗಡೆ, ಎರಡು ಬಾಕ್ಸ್‌ನ ಹೊರಗಡೆಯಿಂದ ಹಾಗೂ ಒಂದು ಪೆನಾಲ್ಟಿ ಶೂಟ್‌ನಿಂದ ನೀಡಿದೆ.ಎಟಿಕೆ ತಂಡ ಹೊರತಾಗಿ ಇದುವರೆಗೂ ಕ್ಲೀನ್ ಶೀಟ್ ಸಾಧನೆ ಮಾಡದಿರದ ತಂಡವೆಂದರೆ ಅದು ಪುಣೆ. ಆದರೆ ಹಿಂದಿನ ಲಿತಾಂಶ ಹಾಗೂ ಪ್ರಮಾದಗಳನ್ನು ಲೆಕ್ಕ ಹಾಕುತ್ತಿದ್ದರೆ ಮುಂದಿನ ಪಂದ್ಯಗಳ ಮೇಲೆ ಅದು ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪುಣೆ ತಂಡ ಅತ್ಯಂತ ಆತ್ಮವಿಶ್ವಾಸದೊಂದಿಗೆ ಗೋವಾಕ್ಕೆ ಲಗ್ಗೆ ಇಟ್ಟಿತು.

Story first published: Monday, October 29, 2018, 1:18 [IST]
Other articles published on Oct 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X