ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಅಗ್ರ ಸ್ಥಾನಕ್ಕಾಗಿ ಗೋವಾ, ಬೆಂಗಳೂರು ನಡುವೆ ಫೈಟ್!

indian super league 2018 ; ಐಎಸ್‌ಎಲ್‌ 2018: ಅಗ್ರ ಸ್ಥಾನಕ್ಕಾಗಿ ಗೋವಾ, ಬೆಂಗಳೂರು ನಡುವೆ ಫೈಟ್!
ISL 2018: Goa, Bengaluru tussle for top spot

ಗೋವಾ ನವೆಂಬರ್ 21: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬಲಿಷ್ಠ ತಂಡಗಳೆನಿಸಿರುವ ಬೆಂಗಳೂರು ಎಫ್ಸಿ ಹಾಗೂ ಗೋವಾ ತಂಡಗಳು ಅಗ್ರ ಸ್ಥಾನಕ್ಕಾಗಿ ಹೋರಾಟ ನಡೆಸಲಿವೆ. ಆಡಿರುವ ಏಳು ಪಂದ್ಯಗಳಲ್ಲಿ 16 ಅಂಕ ಗಳಿಸಿರುವ ಗೋವಾ ತಂಡ ಅಗ್ರ ಸ್ಥಾನದಲ್ಲಿದೆ. ಬೆಂಗಳೂರು ತಂಡದ ವಿರುದ್ಧ ಸೋಲನುಭವಿಸಿದರೆ ಗೋವಾ ತಂಡ ಎರಡನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ. ಅದೇ ರೀತಿ ಕಳೆದ ಬಾರಿಯ ರನ್ನರ್ ಅಪ್ ಬೆಂಗಳೂರು ಅಗ್ರ ಸ್ಥಾನ ತಲಪುತ್ತದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022335

'ಸ್ಪೈಡರ್‌ಕ್ಯಾಮ್‌'ಗೆ ಚೆಂಡು ತಾಗಿಸಿದ ಮ್ಯಾಕ್ಸ್‌ವೆಲ್: ವಿಡಿಯೋ ವೈರಲ್!'ಸ್ಪೈಡರ್‌ಕ್ಯಾಮ್‌'ಗೆ ಚೆಂಡು ತಾಗಿಸಿದ ಮ್ಯಾಕ್ಸ್‌ವೆಲ್: ವಿಡಿಯೋ ವೈರಲ್!

ಗುರುವಾರ (ನವೆಂಬರ್ 22) ನಡೆಯಲಿರುವ ಪಂದ್ಯ ಅಟ್ಯಾಕ್ ವಿಭಾಗದಲ್ಲಿ ಬಲಿಷ್ಠವಾಗಿರುವ ಎರಡು ತಂಡಗಳ ಹೋರಾಟವಾಗಿರುತ್ತದೆ. ಫೆರಾನ್ ಕೊರೊಮಿನಾಸ್ ಹಾಗೂ ಎಡು ಬೇಡಿಯಾ ಗೋವಾ ಪರ ಹಾಗೂ ಸುನಿಲ್ ಛೆಟ್ರಿ ಮತ್ತು ಮಿಕು ಬೆಂಗಳೂರು ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬಲಿಷ್ಠ ಆಟಗಾರರು ಮುಖಾಮುಖಿಯಾಗಲಿದ್ದಾರೆ.

ಟಿ10: ಶಹಝಾದ್ ಅಬ್ಬರ, ನಾಲ್ಕೇ ಓವರ್‌ನಲ್ಲಿ ಆಟ ಮುಗಿಸಿದ ರಜಪೂತ್ಸ್!ಟಿ10: ಶಹಝಾದ್ ಅಬ್ಬರ, ನಾಲ್ಕೇ ಓವರ್‌ನಲ್ಲಿ ಆಟ ಮುಗಿಸಿದ ರಜಪೂತ್ಸ್!

ಎದುರಾಳಿ ತಂಡದ ಡಿಫೆನ್ಸ್ ವಿಭಾಗದ ಶಕ್ತಿಯನ್ನು ನಿಯಂತ್ರಿಸಬಲ್ಲ ಆಟಗಾರರಾದ ಹ್ಯುಗೊ ಬೌಮೌಸ್ ಹಾಗೂ ಎಡು ಬೇಡಿಯಾ ಗೋವಾ ತಂಡದ ಪ್ರಮುಖ ಅಸ್ತ್ರ. ಇವರ ಶ್ರಮಕ್ಕೆ ಫೈನಲ್ ಟಚ್ ನೀಡುವ ಆಟಗಾರ ಕೊರೊಮಿನಾಸ್. ಈ ಮೂರುವ ಆಟಗಾರರನ್ನು ಮೀರಿಸುವುದು ಬಹಳ ಕಷ್ಟ.

ಬಲಿಷ್ಠ ತಂಡದ ಸವಾಲು

ಬಲಿಷ್ಠ ತಂಡದ ಸವಾಲು

'ಲೀಗ್‌ನಲ್ಲಿ ಉತ್ತಮವಾಗಿರುವ ತಂಡವೊಂದನ್ನು ನಾವು ಎದುರಿಸಲಿದ್ದೇವೆ. ನಾಳೆಯ ಪಂದ್ಯ ನಮ್ಮ ಪಾಲಿಗೆ ದೊಡ್ಡ ಸವಾಲು ಎನಿಸಲಿದೆ. ನಾಳೆಯ ಪಂದ್ಯ ಈ ಲೀಗ್‌ನಲ್ಲಿ ಮುಂದೇನಾಗಲಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಮನೆಯಂಗಣದ ಪ್ರೇಕ್ಷಕರ ಬೆಂಬಲದ ಸದುಪಯೋಗಪಡೆದು ಮೂರು ಅಂಕಗಳನ್ನು ಗಳಿಸಲಿದ್ದೇವೆ' ಎಂದು ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಹೇಳಿದ್ದಾರೆ.

ಸುನಿಲ್ ಛೆಟ್ರಿ ಚೇತರಿಕೆ

ಸುನಿಲ್ ಛೆಟ್ರಿ ಚೇತರಿಕೆ

ಇತ್ತೀಚಿಗೆ ನಡೆದ ಜೊರ್ಡನ್ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ನಾಯಕ ಸುನಿಲ್ ಛೆಟ್ರಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ನಾಳೆಯ ಪಂದ್ಯದಲ್ಲಿ ಆಡಲು ಫಿಟ್ ಆಗಿರುವುದು ಬೆಂಗಳೂರು ಪಾಳಯದಲ್ಲಿ ಸಂಭ್ರಮವನ್ನುಂಟು ಮಾಡಿದೆ. ಛೆಟ್ರಿ ಇದುವರೆಗೂ ನಾಲ್ಕು ಗೋಲುಗಳನ್ನು ಗಲಿಸಿದ್ದು, ಜತೆಯಲ್ಲಿ ಎಲ್ಲರ ಕಣ್ಣು ಮಿಕು ಅವರ ಮೇಲೂ ಬಿದ್ದಿರುವುದು ಸಹಜ. ಜೆಮ್ಷೆಡ್ಪುರ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ ಮಿಕು ಎಲ್ಲ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ.

ಕೊರೊ ಹಾಗೂ ಛೆಟ್ರಿ ಸ್ಪರ್ಧೆ

ಕೊರೊ ಹಾಗೂ ಛೆಟ್ರಿ ಸ್ಪರ್ಧೆ

‘ಸುನಿಲ್ ಛೆಟ್ರಿ ಎರಡು ಬಾರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಪ್ರಕಾರ ಅವರು ಆಡಲು ಫಿಟ್ ಆಗಿದ್ದಾರೆ. ನಾಳೆಯ ಪಂದ್ಯದಲ್ಲಿ ಆಡಲು ಅವರು ಫಿಟ್ ಆಗಿದ್ದಾರೆ,‘ ಎಂದು ಬೆಂಗಳೂರು ತಂಡದ ಕೋಚ್ ಕಾರ್ಲ್ಸ್ ಕ್ವಾಡ್ರಾಟ್ ಹೇಳಿದ್ದಾರೆ. ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಕೊರೊ ಹಾಗೂ ಛೆಟ್ರಿ ಸ್ಪರ್ಧೆಯಲ್ಲಿದ್ದಾರೆ. ಇಯಾನ್ ಹ್ಯೂಮೆ 28 ಗೋಲುಗಳನ್ನು ಗಳಿಸಿ ಮಂಚೂಣಿಯಲ್ಲಿದ್ದರೆ, ಛೆಟ್ರಿ 25 ಹಾಗೂ ಕೊರೊ26 ಗೋಲುಗಳನ್ನು ಗಳಿಸಿರುತ್ತಾರೆ.

ಸಾಕಷ್ಟು ಗೋಲು ಗಳಿಕೆ

ಸಾಕಷ್ಟು ಗೋಲು ಗಳಿಕೆ

'ಗೋವಾ ತಂಡ ಉತ್ತಮ ರೀತಿಯ ಫುಟ್ಬಾಲ್ ಆಟವನ್ನು ಆಡುತ್ತಿದೆ. ಅದೇ ರೀತಿ ಸಾಕಷ್ಟು ಗೋಲುಗಳನ್ನು ತಂಡದ ಆಟಗಾರರು ಗಳಿಸುತ್ತಿದ್ದಾರೆ. ಇದರಿಂದಾಗಿ ನಾಳೆಯ ಪಂದ್ಯ ಸಾಕಷ್ಟು ಕುತೂಹಲಗಳಿಗೆ ಸಾಕ್ಷಿಯಾಗಲಿದೆ. ಅದೇ ರೀತಿ ಸಾಕಷ್ಟು ಗೋಲುಗಳೂ ದಾಖಲಾದರೂ ಅಚ್ಚರಿಪಡಬೇಕಾಗಿಲ್ಲ. ನಾಳೆಯ ಪಂದ್ಯ ಫುಟ್ಬಾಲ್ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಲಿದೆ,' ಎಂದು ಬೆಂಗಳೂರು ಕೋಚ್ ಹೇಳಿದರು.

Story first published: Thursday, November 22, 2018, 19:53 [IST]
Other articles published on Nov 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X