ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಡೆಲ್ಲಿಗೆ ಸೋಲುಣಿಸಿದ ಮುಂಬೈ ನಾಲ್ಕನೇ ಸ್ಥಾನಕ್ಕೆ

By Isl Media
ISL 2018: Mumbai floor Delhi with second-half blitz

ಹೊಸದಿಲ್ಲಿ, ಡಿಸೆಂಬರ್ 3: ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡರೂ ದ್ವಿತೀಯಾರ್ಧದಲ್ಲಿ ರಫೆಲ್ ಬಸ್ಟೋಸ್ (49ನೇ ನಿಮಿಷ ), ಮಾರ್ಟಿ ಕ್ರೆಸ್ಪಿ (ಉಡುಗೊರೆ ಗೋಲು 61ನೇ ನಿಮಿಷ ), ರೇನಿಯರ್ ಫೆರ್ನಾಂಡಿಸ್ (69ನೇ ನಿಮಿಷ), ಪೌಲೊ ಮಚಾಡೋ (80ನೇ ನಿಮಿಷ) ಗಳಿಸಿದ ಗೋಲಿನಿಂದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.

ಪಂದ್ಯದ ಸ್ಕೋರ್ ಕಾರ್ಡ್

1
1022346

ಟಿ10 ಲೀಗ್: ರೋಮನ್ ಅರ್ಧ ಶತಕ, ನಾರ್ತರ್ನ್‌ ವಾರಿಯರ್ಸ್ ಚಾಂಪಿಯನ್ಟಿ10 ಲೀಗ್: ರೋಮನ್ ಅರ್ಧ ಶತಕ, ನಾರ್ತರ್ನ್‌ ವಾರಿಯರ್ಸ್ ಚಾಂಪಿಯನ್

ಡೆಲ್ಲಿ ಪರ ಲಾಲಿಯಾನ್ಜುವಾಲ ಚಾಂಗ್ಟೆ (3ನೇ ನಿಮಿಷ ), ಗಿಯನ್ನಿ ಜೆವೆರ್ಲೂನ್ (64ನೇ ನಿಮಿಷ) ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಸೋಲಿನೊಂದಿಗೆ ಡೆಲ್ಲಿಯ ಪ್ಲೇ ಆಫ್ ತಲಪುವ ಗುರಿ ಮತ್ತಷ್ಟು ದೂರವಾಯಿತು. ಈ ಜಯದೊಂದಿಗೆ ಮುಂಬೈ ತಂಡ 17 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ತಲುಪಿತು.

ಆಸೀಸ್ ಟೆಸ್ಟ್: ಕೊಹ್ಲಿ ಬಳಗಕ್ಕೆ 'ಚೆಂಡಿನ ಒರಟುತನದ ಗುಟ್ಟು' ಬಿಚ್ಚಿಟ್ಟ ಸಚಿನ್!ಆಸೀಸ್ ಟೆಸ್ಟ್: ಕೊಹ್ಲಿ ಬಳಗಕ್ಕೆ 'ಚೆಂಡಿನ ಒರಟುತನದ ಗುಟ್ಟು' ಬಿಚ್ಚಿಟ್ಟ ಸಚಿನ್!

ಲಾಲಿಯಾನ್ಜುವಾಲ ಚಾಂಗ್ಟೆ 3ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಡೆಲ್ಲಿ ಆರಂಭಿಕ ಮೇಲುಗೈ ಸಾಧಿಸಿತು. ಸ್ವಲ್ಪ ಹೊತ್ತಿಲ್ಲನೇ ಡೆಲ್ಲಿಗೆ ಮತ್ತೊಂದು ಗೋಲು ಗಳಿಸುವ ಅವಕಾಶ ಇದ್ದಿತ್ತು. ಆದರೆ ಮುಂಬೈ ಕೀಪರ್ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. 36ನೇ ನಿಮಿಷದಲ್ಲಿ ಮುಂಬೈಗೆ ಸಮಬಲ ಸಾಧಿಸುವ ಅವಕಾಶವಿದ್ದಿತ್ತು. ಮುಂಬೈ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ತನ್ನ ನೈಜ ಆಟ ಪ್ರದರ್ಶಿಸುವಲ್ಲಿ ವಿಲವಾಯಿತು. ಆರಂಭಿಕ ಹಂತದಲ್ಲೇ ಗೋಲು ಗಳಿಸಿದ ಡೆಲ್ಲಿ ಅತ್ಯಂತ ಆತ್ಮವಿಶ್ವಾಸದಲ್ಲಿ ಪ್ರಥಮಾರ್ಧವನ್ನು ಪೂರೈಸಿತು.

ಆರಂಭದಲ್ಲೇ ಡೆಲ್ಲಿ ಮುನ್ನಡೆ

ಆರಂಭದಲ್ಲೇ ಡೆಲ್ಲಿ ಮುನ್ನಡೆ

ಪಂದ್ಯ ಆರಂಭಗೊಂಡ 3ನೇ ನಿಮಿಷದಲ್ಲಿ ಡೆಲ್ಲಿ ಡೈನಮೋಸ್ ತಂಡ ಗೋಲಿನ ಮೂಲಕ ಮೇಲುಗೈ ಸಾಧಿಸಿತು. ಪ್ರವಾಸಿ ಮುಂಬೈ ತಂಡಕ್ಕೆ ಇದು ನಿಜವಾದ ಅಚ್ಚರಿ. ಸೌವಿಕ್ ಚಕ್ರವರ್ತಯಿಂದ ಜಾರಿದ ಚೆಂಡು ಮಾರ್ಕಸ್ ತೆಬರ್ ಅವರ ನಿಯಂತ್ರಣಕ್ಕೆ ಸಿಲುಕಿತು. ಪೆನಾಲ್ಟಿ ಬಾಕ್ಸ್‌ನ ಸ್ಪಲ್ಪ ಹೊರಗಡೆ ಸಿಕ್ಕ ಚೆಂಡನ್ನು ತೆಬರ್ ತನ್ನ ಎಡಭಾಗದಲ್ಲಿದ್ದ ಲಾಲಿಯಾನ್ಜುವಾಲಾ ಚಾಂಗ್ಟೆ ಅವರಿಗೆ ನೀಡಿದರು. ಚಾಂಗ್ಟೆ ಹೆಚ್ಚು ಸಮಯ ತೆಗೆದುಕೊಳ್ಳಲದೆ ಚೆಂಡನ್ನು ನೇರವಾಗಿ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟರು. ಸೌವಿಕ್ ಅವರಿಗೆ ತಡೆಯುವ ಅವಕಾಶ ಇಲ್ಲದೆ ಚೆಂಡು ಅರ್ಮಿಂದರ್ ಸಿಂಗ್ ಅವರನ್ನು ವಂಚಿಸಿ ನೆಟ್‌ಗೆ ಮುತ್ತಿಟ್ಟಿತು. ಡೆಲ್ಲಿಗೆ 1-0 ಅಂತರದಲ್ಲಿ ಮುನ್ನಡೆ.

ಪ್ರಮುಖ ಪಂದ್ಯವಿದು

ಪ್ರಮುಖ ಪಂದ್ಯವಿದು

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮತ್ತೊಂದು ನಡೆದ ಪ್ರಮುಖ ಪಂದ್ಯವಿದು. 47ನೇ ಪಂದ್ಯಕ್ಕೆ ಡೆಲ್ಲಿ ಡೈನಮೋಸ್ ತಂಡ ಮುಂಬೈ ಸಿಟಿ ತಂಡಕ್ಕೆ ಆತಿಥ್ಯ ನೀಡಿತು. ಮನೆಯಂಗಣದಲ್ಲಿ ಅಂಕವನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಡೆಲ್ಲಿ ಅಂಗಣಕ್ಕಿಳಿಯಿತು. ಇದುವರೆಗೂ ಡೆಲ್ಲಿ ತಂಡ ಜಯದ ರುಚಿ ಕಂಡಿಲ್ಲ. ಮನೆಯಲ್ಲಿ ಗೆಲ್ಲಬೇಕಾದ ಪಂದ್ಯದಲ್ಲಿ 4 ಅಂಕಗಳನ್ನು ಕಳೆದುಕೊಂಡಿತು. ಕಳೆದ ಋತು ಆರಂಭವಾದಾಗಿನಿಂದ ಡೆಲ್ಲಿ ಮನೆಯಂಗಣದಲ್ಲಿ ಗೆದ್ದಿರುವುದು ಕೇವಲ ಮೂರು ಪಂದ್ಯಗಳಲ್ಲಿ.

ಡೆಲ್ಲಿ ಕಠಿಣ ಹೋರಾಟ ನಡೆಸಬೇಕು

ಡೆಲ್ಲಿ ಕಠಿಣ ಹೋರಾಟ ನಡೆಸಬೇಕು

ಈಗ ಬಲಿಷ್ಠ ತಂಡವೆನಿಸಿರುವ ಮುಂಬೈ ವಿರುದ್ಧ ಡೆಲ್ಲಿ ಕಠಿಣ ಹೋರಾಟ ನಡೆಸಬೇಕಾಗಿದೆ. ಮುಂಬೈ ತಂಡ ಆರಂಭದಲ್ಲಿ ಹಿನ್ನಡೆ ಕಂಡಿದ್ದರೂ ನಂತರದ ಪಂದ್ಯಗಳಲ್ಲಿ ಜಯದ ಹಾದಿ ಹಿಡಿದಿತ್ತು. ಮುಂಬೈ ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಸೋತಿರುವುದು ಒಮ್ಮೆ ಮಾತ್ರ.

ಮುಂಬೈಗೆ ಉತ್ತಮ ಸ್ಥಿತಿಯಲ್ಲಿ

ಮುಂಬೈಗೆ ಉತ್ತಮ ಸ್ಥಿತಿಯಲ್ಲಿ

ಈ ಹಿಂದಿನ ಋತುವಿಗಿಂತ ಹೆಚ್ಚು ಅಂಕಗಳನ್ನು ಪಡೆದು ಮುಂಬೈ ತಂಡ ಉತ್ತಮ ಸ್ಥಿತಿಯತ್ತ ತಲಪುತ್ತಿದೆ. ಡೆಲ್ಲಿ ತನ್ನ ಜಯದ ಕಾಲಂ ಪೂರ್ಣಮಾಡಲು ಯತ್ನಿಸಿದರೆ, ಮುಂಬೈ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲಪಲು ಯತ್ನಿಸುತ್ತಿದೆ.

Story first published: Monday, December 3, 2018, 22:21 [IST]
Other articles published on Dec 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X