ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಾರ್ತ್ ಈಸ್ಟ್ ಯುನೈಟೆಡ್ vs ಜೆಮ್ಶೆಡ್ಪುರ್ ಕುತೂಹಲಕಾರಿ ಪಂದ್ಯ ಸಮಬಲ

By Isl Media
ISL 2018: NEUFC move up despite draw in Jamshedpur

ಜೆಮ್ಷೆಡ್ಪುರ, ಡಿಸೆಂಬರ್ 1: ಎರಡು ಬಲಿಷ್ಠ ತಂಡಗಳು ಒಂದೇ ಉದ್ದೇಶ ಇಟ್ಟುಕೊಂಡು ಅಂಗಣಕ್ಕಿಳಿದರೆ ಅಲ್ಲಿ ಸಮಬಲದ ಹೋರಾಟ ಇರುತ್ತದೆ ಎಂಬುದಕ್ಕೆ ಜೆಮ್ಷೆಡ್ಪುರ ಎಫ್ ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ನಡುವಿನ ಪಂದ್ಯ ಸಾಕ್ಷಿಯಾಯಿತು. ಗೋಲು ಗಳಿಸುವ ಅವಕಾಶ ಇದ್ದರೂ ಇತ್ತಂಡಗಳ ಗೋಲ್ ಕೀಪರ್ ಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಪರಿಣಾಮ ಪಂದ್ಯ 0-0 ಅಂತರದಲ್ಲಿ ಅಂತ್ಯಗೊಂಡಿತು.

ಸಾಕಷ್ಟು ಗೋಲು ಮೊದಲ ಹಂತದಲ್ಲಿ ದಾಖಲಾಗಬಹುದು ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಹಾಗಾಗಲಿಲ್ಲ. ಹತಾಷೆ ಎರಡೂ ತಂಡವನ್ನೂ ಕಾಡಿತ್ತು. ಆತಿಥೇಯ ಜೆಮ್ಷೆಡ್ಪುರ ಹೆಚ್ಚಿನ ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು. ಆದರೆ ಉತ್ತಮ ಅವಕಾಶಗಳು ಕಂಡು ಬಂದಿಲ್ಲ. ನಾರ್ತ್ ಈಸ್ಟ್‌ನ ಗೋಲ್‌ಕೀಪರ್ ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆತಿಥೇಯ ನಾರ್ತ್ ಈಸ್ಟ್ ಕೂಡ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿತ್ತು. ಆದರೆ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. ಪಂದ್ಯ ಪೈಪೋಟಿಯಿಂದ ಕೂಡಿತ್ತು.ಕುತೂಹಲವೂ ಮನೆ ಮಾಡಿತ್ತು. ಆದರೆ ಗೋಲು ಕಾಣಲಿಲ್ಲ.

ಇಂಡಿಯನ್ ಸೂಪರ್ ಲೀಗ್‌ನಲ್ಲೇ ಅತ್ಯಂತ ಕುತೂಹಲದ ಪಂದ್ಯ ಎಂದು ಹೇಳಬಹುದಾದ ಹೋರಾಟದಲ್ಲಿ ಜೆಮ್ಷೆಡ್ಪುರ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಈ ತಂಡಗಳು ಅಂತಿಮ ನಾಲ್ಕರ ಹಂತವನ್ನು ಖಚಿತಪಡಿಸುವ ಸಲುವಾಗ ಹೋರಾಟ ನಡೆಯಿತು. ಜೆಮ್ಷೆಡ್ಪುರ ತಂಡಕ್ಕೆ ಮನೆಯಂಗಣದಲ್ಲಿ ಪರ್ವತ ಪ್ರದೇಶದ ತಂಡವನ್ನು ಸೋಲಿಸಲು ಸುಲಭ ಅವಕಾಶ. ಆದರೆ ನಾರ್ತ್ ಈಸ್ಟ್ ಅತ್ಯಂತ ಅದ್ಭುತವಾಗಿ ಆಡಬಲ್ಲ ತಂಡ. ಇಲ್ಲಿ ಜಯಗಳಿಸಿದರೆ ಟಾಟಾ ಪಡೆ ಗೋಲುಗಳ ಅಂತರದಲ್ಲಿ ಮೂರನೇ ಸ್ಥಾನ ತಲುಪಲಿದೆ. ಸರ್ಗಿಯೋ ಸಿಡೊಂಚ ಅವರ ಅನುಪಸ್ಥಿತಿಯಲ್ಲಿ ಜೆಮ್ಷೆಡ್ಪುರ ಅಂಗಣಕ್ಕಿಳಿಯಿತು.

ಕಾರ್ಲೋಸ್ ಕಾಲ್ವೋ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸುವ ಆಟಗಾರ. ಮನೆಯಂಗಣದ ಹೊರಗಡೆ ನಡೆದ ಎಲ್ಲ ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳಲ್ಲಿ ಜೆಮ್ಷೆಡ್ಪುರ ಕೂಡ ಒಂದು. ಆದ್ದರಿಂದ ಟಾಟಾ ಪಡೆ ಈ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮನೆಯಂಗಣದ ಹೊರಗಡೆ ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ನಾರ್ತ್ ಈಸ್ಟ್ ಇಲ್ಲಿ ಐದನೇ ಜಯಕ್ಕಾಗಿ ಕಣ್ಣಿಟ್ಟಿದೆ. ವಿದೇಶಿ ಆಟಗಾರರೇ ಈ ತಂಡದ ಶಕ್ತಿ.

Story first published: Saturday, December 1, 2018, 23:59 [IST]
Other articles published on Dec 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X