ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ನಾರ್ತ್‌ಈಸ್ಟ್‌ಗೆ ಮನೆಯಂಗಣದಲ್ಲಿ ಗೆಲ್ಲೋ ಗುರಿ

ISL 2018: NorthEast keen to break home jinx as Kerala come calling

ಗುವಾಹಟಿ, ನವೆಂಬರ್ 23: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಾರ್ತ್‌ಈಸ್ಟ್ ಯನೈಟೆಡ್ ತಂಡ ಆಡಿರುವ ಆರು ಪಂದ್ಯಗಳಲ್ಲಿ 11 ಅಂಕ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ಅಗ್ರ ನಾಲ್ಕು ಸ್ಥಾನಕ್ಕಿಂತ ಕೆಳಗಿದ್ದರೂ ಉಳಿದಿರುವ ಒಂದು ಪಂದ್ಯದಲ್ಲಿ ಜಯ ಗಳಿಸಿ ಟಾಪ್ ನಾಲ್ಕಕ್ಕೇರುವ ಗುರಿ ಹೊಂದಿದೆ.

1
1022336

ಐಎಸ್‌ಎಲ್‌: ಗೋವಾಕ್ಕೆ ಆಘಾತವಿತ್ತ ಬೆಂಗಳೂರು ಅಗ್ರ ಸ್ಥಾನಕ್ಕೆ ಲಗ್ಗೆ!ಐಎಸ್‌ಎಲ್‌: ಗೋವಾಕ್ಕೆ ಆಘಾತವಿತ್ತ ಬೆಂಗಳೂರು ಅಗ್ರ ಸ್ಥಾನಕ್ಕೆ ಲಗ್ಗೆ!

ಆದರೂ ಮನೆಯಂಗಣದಲ್ಲಿ ಪರ್ವತಪ್ರದೇಶದ ತಂಡಕ್ಕೆ ಯಶಸ್ಸು ಬಹಳ ಕಡಿಮೆ. ಗೆದ್ದಿರುವ ಮೂರು ಪಂದ್ಯಗಳೂ ನಡೆದಿರುವುದು ಮನೆಯಂಗಣದ ಹೊರಗೆ. ಶುಕ್ರವಾರ (ನವೆಂಬರ್ 23) ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಅಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡ ಮನೆಯಂಗಣದಲ್ಲಿ ಯಶಸ್ಸಿನ ಹೆಜ್ಜೆ ಇಡುವ ಗುರಿ ಹೊಂದಿದೆ.

ಟಿ10 ಲೀಗ್: ಜೇಸನ್ ಅರ್ಧ ಶತಕ, ವಾರಿಯರ್ಸ್ ವಿರುದ್ಧ ಟೈಗರ್ಸ್‌ಗೆ ಜಯಟಿ10 ಲೀಗ್: ಜೇಸನ್ ಅರ್ಧ ಶತಕ, ವಾರಿಯರ್ಸ್ ವಿರುದ್ಧ ಟೈಗರ್ಸ್‌ಗೆ ಜಯ

ಈ ಋತುವಿನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ ಗಳಿಸಿರುವ ಒಟ್ಟು ಗೋಲುಗಳಲ್ಲಿ ಅರ್ಧರ್ಕ್ಕಿಂತ ಹೆಚ್ಚು ಗಳಿಸಿರುವುದು ಬಾರ್ತಲೋಮ್ಯೊ ಒಗ್ಬೆಚೆ. ನೈಜೀರಿಯಾದ ಈ ಆಟಾಗಾರ ಗೋಲು ಗಳಿಸಿದಾಗಲೆಲ್ಲ ನಾರ್ತ್ ಈಸ್ಟ್ ತಂಡ ಸೋತಿರಲಿಲ್ಲ. ಮಿಸ್ಲಾವ್ ಕೊಮೊರ್‌ಸ್ಕಿ ಅವರ ಆಗಮನ ಕೋಚ್ ಎಲ್ಕೊ ಷಟೋರಿ ಅವರಲ್ಲಿ ಆತ್ಮವಿಶ್ವಾಸ ತಂದಿದೆ. ಆದರೆ ವಿದೇಶಿ ಆಟಗಾರರೊಬ್ಬರು ಗಾಯಗೊಂಡು ಋತುವಿನಿಂದಲೇ ಹೊರಗುಳಿದಿರುವುದನ್ನು ಎಲ್ಕೊ ಒಪ್ಪಿಕೊಂಡಿದ್ದಾರೆ.

ವಿದೇಶಿ ಆಟಗಾರ ಅಲಭ್ಯ

ವಿದೇಶಿ ಆಟಗಾರ ಅಲಭ್ಯ

'ವಿದೇಶಿ ಆಟಗಾರರೊಬ್ಬರು ಗಾಯಗೊಂಡಿರುವುದು ನಿಜ. ಅವರು ಈ ಋತುವಿನ ಇತರ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆದರೆ ಅವರ ಹೆಸರನ್ನು ನಾನು ಈಗ ಬಹಿರಂಗಪಡಿಸುವುದಿಲ್ಲ, ಏಕೆಂದರೆ ಅದು ಎದುರಾಳಿ ತಂಡಕ್ಕೆ ಲಾಭವಾಗಲಿದೆ. ಬಾರ್ತಲೋಮ್ಯೊ ಅವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅವರು ತಂಡಕ್ಕೆ ಮರಳಿದ್ದಾರೆ. ಭಾರತದ ಕೆಲವು ಆಟಗಾರರೂ ಗಾಯದ ಸಮಸ್ಯೆ ಎದುರಿಸುತ್ತಾರೆ, ಇದು ಆಟದ ಒಂದು ಭಾಗವಾಗಿದೆ' ಎಂದು ಷೆಟೋರಿ ಹೇಳಿದ್ದಾರೆ.

ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ

ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ

ಋತುವಿನ ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ಬ್ಲಾಸ್ಟರ್ಸ್ ತಂಡ ಇದುವರೆಗೂ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಕೋಚ್ ಡೇವಿಡ್ ಜೆಮ್ಸ್ ಅವರ ತಂಡ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುತ್ತಿಲ್ಲ. ಮನೆಯಂಗಣದಲ್ಲಿ ಗೋವಾ ಹಾಗೂ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಕೇರಳ ಸೋಲನುಭವಿಸಿ ಈಗ ಗುವಾಹಟಿಗೆ ಆಗಮಿಸಿದೆ. ಇತರ ಎಲ್ಲ ಋತುಗಳಲ್ಲಿರುವಂತೆ ಈ ಬಾರಿಯೂ ಕೇರಳ ಗೋಲು ಗಳಿಸಲು ಹೆಣಗಾಡುತ್ತಿದೆ. ಅದೇ ರೀತಿ ಗೋಲು ಗಳಿಸುವ ಸಂದ‘ರ್ವನ್ನೂ ತಂಡದ ಆಟಗಾರರು ನಿರ್ಮಿಸಿಲ್ಲ. ಇದರಿಂದಾಗಿ ಜೇಮ್ಸ್ ಅವರು ನಿರಾಸೆಗೊಳಗಾಗಿರುವುದು ಸಹಜ.

ಉತ್ತಮವಾಗಿಯೇ ಆಡಿದೆ

ಉತ್ತಮವಾಗಿಯೇ ಆಡಿದೆ

'ಗೋವಾ ವಿರುದ್ಧದ ಒಂದು ಪಂದ್ಯವನ್ನು ಹೊರತುಪಡಿಸಿದರೆ ನಮ್ಮ ತಂಡದ ಪ್ರದರ್ಶನ ಉತ್ತಮವಾಗಿಯೇ ಇತ್ತು. ಕೆಲವು ಸಂದರ್ಭರ್ಗಳಲ್ಲಿ ನಿಮಗಿಂತ ಇತರ ತಂಡ ಉತ್ತಮ ಎಂಬುದನ್ನು ಒಪ್ಪಿಕೊಳ್ಳಬೇಕು. ಬೆಂಗಳೂರು ವಿರುದ್ಧದ ಪಂದ್ಯವೂ ಸೇರಿದಂತೆ ಇತರ ಆರು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮವಾಗಿಯೇ ಆಡಿದೆ, ನಾವು ಪ್ರತಿಬಾರಿಯೂ ಜಯದ ಗುರಿ ಇಟ್ಟುಕೊಂಡೇ ಆಡುತ್ತೇವೆ, ಫೈನಲ್ ತಲುಪಿ ಐಎಸ್‌ಎಲ್ ಗೆಲ್ಲುವುದು ನಮ್ಮ ಗುರಿಯಾಗಿದೆ, ನಾಳೆಯೂ ಮೂರು ಅಂಕ ಗಳಿಸಲಿದ್ದೇವೆ' ಎಂದು ಜೇಮ್ಸ್ ಹೇಳಿದರು. ಅನಾಸ್ ಎಡಾತೋಡಿಕಾ ಈ ಋತುವಿನಲ್ಲಿ ಕೊಂಡ ಆಟದಲ್ಲಿ ಎಡವಿದ್ದಾರೆ.

ತೃಪ್ತಿದಾಯಕವಾಗಿರಲಿಲ್ಲ

ತೃಪ್ತಿದಾಯಕವಾಗಿರಲಿಲ್ಲ

ಗೋವಾ ವಿರುದ್ಧದ ಪಂದ್ಯದಲ್ಲಿ ಆಡಿದರೂ ಅವರು ಪ್ರದರ್ಶನ ತೃಪ್ತಿದಾಯಕವಾಗಿರಲಿಲ್ಲ. ಒಗ್ಬಚೆ ಹಾಗೂ ಫೆಡರಿಕೊ ಗಲ್ಲೆಗೊ ಅವರ ಮುಂದೆ ಡಿಫೆನ್ಸ್ ವಿಭಾಗದಲ್ಲಿ ಎಲ್ಲ ಭಾರತೀಯ ಆಟಗಾರರನ್ನು ಆಡಿಸುವ ಸಾಧ್ಯತೆಗೆ ಜೇಮ್ಸ್ ಮನಮಾಡಲಿದ್ದಾರೆ. ಸೆಮಿನ್‌ಲೆನ್ ಡೊಂಗಲ್ ಹಾಗೂ ಹಲಿಚರಣ್ ನಾರ್ಜರಿ ಅವರು ಒಂದು ರೀತಿ ಮನೆಯಂಗಣಕ್ಕೆ ಮರಳಿದಂತೆ. ಏಕೆಂದರೆ ಈ ಇಬ್ಬರೂ ಆಟಗಾರರು ಕಳೆದ ಋತುವಿನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಪರ ಆಡಿದ್ದರು.

Story first published: Friday, November 23, 2018, 1:01 [IST]
Other articles published on Nov 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X