ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಕೊಚ್ಚಿಯಲ್ಲಿ ಕೇರಳ-ಜೆಮ್ಷೆಡ್ಪುರ ಸಮಬಲದ ಹೋರಾಟ

By Isl Media
ISL 2018: Profligate Blasters fall short again

ಕೊಚ್ಚಿ, ಡಿಸೆಂಬರ್ 4: ಜೆಮ್ಷೆಡ್ಪುರ ತಂಡದ ಪರ ಕಾರ್ಲೋಸ್ ಕಾಲ್ವೋ (66ನೇ ನಿಮಿಷ ) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಸೈಮಿನ್ಲೆನ್ ಡೊಂಗಲ್ (77ನೇ ನಿಮಿಷ ) ಗಳಿಸಿದ ಗೋಲಿನಿಂದ ಇಂಡಿಯನ್ ಸೂಪರ್ ಲೀಗ್ ನ 48ನೇ ಪಂದ್ಯ 1-1 ಗೋಲಿನಿಂದ ಡ್ರಾ ಗೊಂಡಿತು. ಈ ಫಲಿತಾಂಶದೊಂದಿಗೆ ಜೆಮ್ಷೆಡ್ಪುರ ಐದನೇ ಸ್ಥಾನದಲ್ಲೇ ಉಳಿಯಿತು. ಕೇರಳ ಕೂಡ ಏಳನೇ ಸ್ಥಾನವನ್ನು ಕಾಯ್ದುಕೊಂಡಿತು.

ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ವಿಶ್ವಕಪ್ ಹೀರೋ ಗೌತಮ್ ಗಂಭೀರ್ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ವಿಶ್ವಕಪ್ ಹೀರೋ ಗೌತಮ್ ಗಂಭೀರ್

ಕೇರಳ ಬ್ಲಾಸ್ಟರ್ಸ್ ಅತ್ಯಂತ ಉತ್ತಮ ರೀತಿಯಲ್ಲಿ ಹೋರಾಟ ನೀಡಿದ ಪರಿಣಾಮ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಸೈಮಿನ್ಲೆನ್ ಡೊಂಗಲ್ ಗಳಿಸಿದ ಗೋಲು ತಂಡ ನಿಟ್ಟುಸಿರು ಬಿಡುವಂತೆ ಮಾಡಿತು. 77ನೇ ನಿಮಿಷದಲ್ಲಿ ಸ್ಲಾವಿಸಾ ಸ್ಟೊಜಾನೊವಿಕ್ ಅವರ ಹೆಡರ್ ಮೂಲಕ ಬಂದ ಪಾಸನ್ನು ಜೆಮ್ಷೆಡ್ಪುರ ಆಟಗಾರರಿಗೆ ತಡೆಯುವ ಅವಕಾಶವಿದ್ದಿತ್ತು. ಗೋಲ್ ಬಾಕ್ಸ್‌ನ ಸಮ್ಮುಖದಲ್ಲಿ ಸಾಕಷ್ಟು ನಾಟಕೀಯ ದೃಶ್ಯ ಕಂಡು ಬಂತು. ಅಂತಿಮವಾಗಿ ಡೊಂಗಲ್ ಎಡಗಾಲಿನಿಂದ ತುಳಿದ ಚೆಂಡು ನೆಟ್‌ಗೆ ಸೇರಿತ್ತು.

ಕುಲದೀಪ್ ಎಸೆತಕ್ಕೆ ಬ್ಯಾಟ್ ಬೀಸಿದ ಕೊಹ್ಲಿ ಆಸೀಸ್‌ಗೆ ಸಂದೇಶ ರವಾನಿಸಿದರೆ?!ಕುಲದೀಪ್ ಎಸೆತಕ್ಕೆ ಬ್ಯಾಟ್ ಬೀಸಿದ ಕೊಹ್ಲಿ ಆಸೀಸ್‌ಗೆ ಸಂದೇಶ ರವಾನಿಸಿದರೆ?!

66ನೇ ನಿಮಿಷದಲ್ಲಿ ಜೆಮ್ಷೆಡ್ಪುರ ತಂಡ ಪೆನಾಲ್ಟಿಯಿಂದ ಮುನ್ನಡೆ ಕಂಡಿತು. ಕಾರ್ಲೋಸ್ ಕಾಲ್ವೋ ಅತ್ಯಂತ ನಿಖರವಾಗಿ ತುಳಿದು ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಕೇರಳ ತಂಡ ಒಂದು ಸಂಘಟಿತ ರೂಪದಲ್ಲಿ ಇರಲಿಲ್ಲ. ಚದುರಿದಾಗ ಚೆಂಡು ಟಿಮ್ ಕಾಹಿಲ್ ಅವರ ನಿಯಂತ್ರಣಕ್ಕೆ ಸಿಕ್ಕಿತ್ತು. ಮುನ್ನುಗ್ಗಿ ಬಂದ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಧೀರಜ್ ಸಿಂಗ್ ಚೆಂಡನ್ನು ತಡೆಯುವ ಆತುರದಲ್ಲಿ ಫೌಲ್ ಆಗಿದ್ದರು. ರೆರಿ ಕ್ಷಣಮಾತ್ರದಲ್ಲಿ ಪೆನಾಲ್ಟಿ ಶೂಟ್‌ಗೆ ಅವಕಾಶ ಕಲ್ಪಿಸಿದರು. ಕೇರಳ ಕೀಪರ್ ಅತ್ಯಂತ ಆತುರದಲ್ಲಿ ಕೈಗೊಂಡ ತೀರ್ಮಾನ ಇದಾಗಿತ್ತು. ಅಗತ್ಯ ಇದ್ದಿರಲಿಲ್ಲ. ಸ್ವಲ್ಪಮಟ್ಟಿಗೆ ಔಟ್‌ಸೈಡ್ ಕಂಡು ಬಂದರೂ ರೆರಿಯ ತೀರ್ಮಾನವನ್ನು ಅಲ್ಲಗಳೆಯುವಂತಿಲ್ಲ.

ಗೋಲಿಲ್ಲದ ಪ್ರಥಮಾರ್ಧ
ಪ್ರೇಕ್ಷಕರಿಗೆ ಕುತೂಹಲದ ಕ್ಷಣಗಳನ್ನು ನಿರ್ಮಿಸಿದರೂ ಇತ್ತಂಡಗಳು ಮೊದಲ 45 ನಿಮಿಷಗಳಲ್ಲಿ ಗೋಲು ಗಳಿಸುವಲ್ಲಿ ವಿಲವಾದವು. ಆರಂಭದಲ್ಲೇ ಜೆಮ್ಷೆಡ್ಪುರ ತಂಡಕ್ಕೆ ಎರಡು ಉತ್ತಮ ಅವಕಾಶಗಳು ಸಿಕ್ಕವು. ಆದರೆ ಕೇರಳ ಗೋಲ್‌ಕೀಪರ್ ಉತ್ತಮ ರೀತಿಯಲ್ಲಿ ತಡೆದರು. ಆ ನಂತರ ಕೇರಳ ಕೂಡ ಗೋಲು ಗಳಿಸುವ ಅವಕಾಶವನ್ನು ಗಳಿಸಿತ್ತು. ಸುಬ್ರತಾ ಪೌಲ್ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ. ಸೈಮಿನ್ಲೆನ್ ಡೌಂಗಲ್ ಅವರು ನೇರವಾಗಿ ಗೋಲು ಗಳಿಸಲು ಅವಕಾಶದಿಂದ ವಂಚಿತರಾದರು. ಸಹಾಲ್ ಅಬ್ದುಲ್ ಸಮದ್ ಕೂಡ ತುಳಿದು ಚೆಂಡು ಗೋಲ್ ಬಾಕ್ಸ್‌ನ ಅಂಚಿಗೆ ತಗುಲಿದಾಗಲೂ ಕೇರಳ ಗೋಲಿನ ಅವಕಾಶದಿಂದ ವಂಚಿತವಾಯಿತು.

Story first published: Tuesday, December 4, 2018, 22:45 [IST]
Other articles published on Dec 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X