ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಡೆಲ್ಲಿ ವಿರುದ್ಧ ಬೆಂಗಳೂರಿಗೆ ಜಯ, ಛೆಟ್ರಿಗೆ ಗೆಲುವಿನುಡುಗೊರೆ!

By Isl Media
ISL 2018 report: Udanta wins it for idol and captain Chhetri

ಬೆಂಗಳೂರು ನವೆಂಬರ್ 27: ಉದಾಂತ್ ಸಿಂಗ್ (87ನೇ ನಿಮಿಷ) ಗಳಿಸಿದ ಗೋಲಿನಿಂದ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ 1-0 ಗೋಲಿನಿಂದ ಜಯಗಳಿಸಿ ನಾಯಕ ಸುನಿಲ್ ಛೆಟ್ರಿ ಗೆ ಜಯದ ಉಡುಗೊರೆ ನೀಡಿತು. ಈ ಜಯದೊಂದಿಗೆ ಬೆಂಗಳೂರು ಎಫ್ ಸಿ ಇಂಡಿಯನ್ ಸೂಪರ್ ಲೀಗ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.

ಟಿ20ಐ ಶ್ರೇಯಾಂಕದಲ್ಲಿ ಕುಲದೀಪ್, ರಶೀದ್ ರಿಂದ 'ದೊಡ್ಡ ನೆಗೆತ'ಟಿ20ಐ ಶ್ರೇಯಾಂಕದಲ್ಲಿ ಕುಲದೀಪ್, ರಶೀದ್ ರಿಂದ 'ದೊಡ್ಡ ನೆಗೆತ'

ಕಂಠೀರವ ಕ್ರೀಡಾಂಗಣ ಭಾನುವಾರ (ನವೆಂಬರ್ 25) ದಿನ ನೋವಿನ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಆದರೆ ಸೋಮವಾರ (ನವೆಂಬರ್ 26) ಅಲ್ಲಿಯ ದೃಶ್ಯವೇ ಬೇರೆಯಾಗಿತ್ತು, ಅಲ್ಲಿ ುಟ್ಬಾಲ್ ಸಂಭ್ರಮ ಮನೆ ಮಾಡಿತ್ತು. ಡೆಲ್ಲಿ ಡೈನಮೋಸ್ ಹಾಗೂ ಬೆಂಗಳೂರು ತಂಡಗಳ ನಡುವಿನ ಇಂಡಿಯನ್ ಸೂಪರ್ ಲೀಗ್‌ನ 40ನೇ ಪಂದ್ಯ.

ತಂಡದಿಂದ ಮಿಥಾಲಿ ಹೊರಗಿಟ್ಟಿದ್ದನ್ನು ಪ್ರಶ್ನಿಸುವಂತಿಲ್ಲ ಎಂದ ಡಯಾನಾ!ತಂಡದಿಂದ ಮಿಥಾಲಿ ಹೊರಗಿಟ್ಟಿದ್ದನ್ನು ಪ್ರಶ್ನಿಸುವಂತಿಲ್ಲ ಎಂದ ಡಯಾನಾ!

ಇತ್ತಂಡಗಳಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತಾದರೂ ಡೆಲ್ಲಿ ಗೋಲು ದಾಖಲಾಗಲಿಲ್ಲ. ಹಾಗೆ ನೋಡಿದರೆ ಬೆಂಗಳೂರು ಪ್ರಭುತ್ವ ಸಾಧಿಸಬೇಕಾಗಿತ್ತು. ಆದರೆ ಡೆಲ್ಲಿ ಅದಕ್ಕೆ ಅವಕಾಶ ನೀಡಲಿಲ್ಲ. ಸುನಿಲ್ ಛೆಟ್ರಿ ಹಾಗೂ ಚೆಂಚೊ ಜಿಲ್‌ಸ್ತೇನ್ ಇಬ್ಬರಿಗೂ ಅವಕಾಶವಿದ್ದಿತ್ತು. ಆದರೆ ಇಬ್ಬರೂ ಅವಕಾಶವನ್ನು ಕೈಚೆಲ್ಲಿದ್ದರು.

ಡೆಲ್ಲಿಯಿಂದ ಪ್ರಬಲ ಪೈಪೋಟಿ

ಡೆಲ್ಲಿಯಿಂದ ಪ್ರಬಲ ಪೈಪೋಟಿ

ಡೆಲ್ಲಿ ಡೈನಮೋಸ್ ಕೂಡ ಉತ್ತಮ ಫುಟ್ಬಾಲ್ ಆಟಕ್ಕೆ ಸಾಕ್ಷಿಯಾಯಿತು. 31ನೇ ನಿಮಿಷದಲ್ಲಿ ಲಾಲಿಯಾನ್ಜುವಾಲಾ ಚಾಂಗ್ಟೆ ಅವರು ಉತ್ತಮ ಅವಕಾಶವನ್ನು ಗಳಿಸಿದ್ದರು, ಆದರೆ ಅವಕಾಶ ಗೋಲಾಗಿ ರೂಪುಗೊಂಡಿಲ್ಲ. ಬೆಂಗಳೂರು ಪರ ಗುರ್‌ಪ್ರೀತ್ ಸಿಂಗ್ ಅವರು ಗೋಲ್‌ಕೀಪಿಂಗ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ ಡೆಲ್ಲಿ ತಂಡದ ಮುನ್ನಡೆಗೆ ತಡೆಯಾಯಿತು.

ಛೆಟ್ರಿ 150

ಛೆಟ್ರಿ 150

ಇದುವರೆಗೂ ಬೆಂಗಳೂರು ಎಫ್ ಸಿ ಪರ 150 ಪಂದ್ಯಗಳನ್ನಾಡಿರುವ ನಾಯಕ ಸುನಿಲ್ ಛೆಟ್ರಿ ಅವರಿಗೆ 150ನೇ ನಂಬರಿನ ಜೆರ್ಸಿ ನೀಡಿ ಗೌರವಿಸಲಾಯಿತು. 2013ರಲ್ಲಿ ಬೆಂಗಳೂರು ಎಫ್ ಸಿ ಸೇರಿದ ಛೆಟ್ರಿ ಇದುವರೆಗೂ 75 ಗೋಲುಗಳನ್ನು ಗಳಿಸಿದ್ದಾರೆ. ಛೆಟ್ರಿ ನಾಯಕತ್ವದಲ್ಲಿ ಬೆಂಗಳೂರು ತಂಡ ಕಳೆದ ಬಾರಿಯ ಐ ಎಸ್ ಎಲ್ ನಲ್ಲಿ ಫೈನಲ್ ತಲುಪಿತ್ತು.

ಅಗ್ರ ಸ್ಥಾನಕ್ಕೇರೋ ಹಂಬಲ

ಅಗ್ರ ಸ್ಥಾನಕ್ಕೇರೋ ಹಂಬಲ

ಬೆಂಗಳೂರು ಎಫ್ ಸಿ ತಂಡಕ್ಕೆ ಮೂರು ಅಂಕ ಗಳಿಸಿ ಅಗ್ರ ಸ್ಥಾನಕ್ಕೇರುವ ಹಂಬಲ. ಡೆಲ್ಲಿ ಡೈನಮೋಸ್ ತಂಡಕ್ಕೆ ಮೂರು ಅಂಕ ಗಳಿಸಿ ಕೆಳ ಸ್ಥಾನದಿಂದ ಮೇಲಕ್ಕೆರುವ ಗುರಿ. ಇದರೊಂದಿಗೆ ಇಂಡಿಯನ್ ಸೂಪರ್ ಲೀಗ್‌ನ 40ನೇ ಪಂದ್ಯದಲ್ಲಿ ದೇಶದ ರಾಜಧಾನಿ ಹಾಗೂ ರಾಜ್ಯದ ರಾಜಧಾನಿಯ ನಡುವಿನ ಹೋರಾಟಕ್ಕೆ ಶ್ರೀ ಕಂಠೀರವ ಕ್ರೀಡಾಂಗಣ ವೇದಿಕೆಯಾಯಿತು. ಇದು ಬೆಂಗಳೂರ ಎಫ್ ಸಿ ತಂಡದ ನಾಯಕ ಸುನಿಲ್ ಛೆಟ್ರಿ ಅವರಿಗೆ 150ನೇ ಪಂದ್ಯ.

ಬೆಂಗಳೂರು ಸೋಲನ್ನು ಕಂಡಿಲ್ಲ

ಬೆಂಗಳೂರು ಸೋಲನ್ನು ಕಂಡಿಲ್ಲ

ಡೆಲ್ಲಿ ತಂಡ ಬೆಂಗಳೂರಿನ ಮನೆಯಂಗಣದಲ್ಲಿ ಮೂರು ಅಂಕಗಳನ್ನು ಗಳಿಸಿ 8ನೇ ಸ್ಥಾನ ತಲುಪಲಿದೆ. ಹೆಚ್ಚು ಗೋಲುಗಳ ಅಂತರದಲ್ಲಿ ಗೆದ್ದರೆ ಏಳನೇ ಸ್ಥಾನಕ್ಕೇರಲಿದೆ. ಆದರೆ ಬೆಂಗಳೂರು ತಂಡದ ವಿರುದ್ಧ ಇದು ಅಸಾಧ್ಯ ಎಂದೇ ಹೇಳಬಹುದು. ಏಕೆಂದರೆ ಬೆಂಗಳೂರು ತಂಡ ಇದುವರೆಗೂ ಸೋಲನು ಅನುಭವಿಸಿಲ್ಲ. ಲೀಗ್ ಹಂತದಲ್ಲಿ ನಡೆದ 14 ಪಂದ್ಯಗಳಲ್ಲಿ ಬೆಂಗಳೂರು ಸೋಲನ್ನು ಕಂಡಿಲ್ಲ. 14 ಪಂದ್ಯಗಳಲ್ಲಿ ಬೆಂಗಳೂರು 12 ಜಯ ಹಾಗೂ 2 ಡ್ರಾ ಕಂಡಿತ್ತು.

Story first published: Tuesday, November 27, 2018, 2:19 [IST]
Other articles published on Nov 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X