ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಬೆಂಗಳೂರನ್ನು ಸೋಲಿನಿಂದ ಪಾರು ಮಾಡಿದ ಛೆಟ್ರಿ, ಉದಾಂತ್

By Isl Media
ISL 2018: Two goals down, Bengaluru fight back to snatch a point

ಬೆಂಗಳೂರು ಫೆಬ್ರವರಿ 7: ದ್ವಿತೀಯಾರ್ಧದಲ್ಲಿ ಬೆಂಗಳೂರು ಬುಲ್ಸ್ ತೋರಿದ ಅದ್ಭುತ ಫುಟ್ಬಾಲ್ ಆಟದ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ಹಾಗೂ ಬೆಂಗಳೂರೂ ಬುಲ್ಸ್ ನಡುವಿನ ಇಂಡಿಯನ್ ಸೂಪರ್ ಲೀಗ್ ಪಂದ್ಯ 2-2 ಗೋಲಿನಿಂದ ಕೊನೆಗೊಂಡಿತು. ಬೆಂಗಳೂರು ಪರ ಉದಾಂತ್ ಸಿಂಗ್ (69ನೇ ನಿಮಿಷ ) ಹಾಗೂ ಸುನಿಲ್ ಛೆಟ್ರಿ (85ನೇ ನಿಮಿಷ ) ಗೋಲು ಗಳಿಸಿ ಪಂದ್ಯ ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಣಜಿ ಟ್ರೋಫಿ: ಸೊನ್ನೆ ಸುತ್ತಿದ ಪೂಜಾರ, ಸೋಲಿನ ಭೀತಿಯಲ್ಲಿ ಸೌರಾಷ್ಟ್ರ!ರಣಜಿ ಟ್ರೋಫಿ: ಸೊನ್ನೆ ಸುತ್ತಿದ ಪೂಜಾರ, ಸೋಲಿನ ಭೀತಿಯಲ್ಲಿ ಸೌರಾಷ್ಟ್ರ!

ಪ್ರಥಮಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ಪರ ಸ್ಲಾವಿಸಾ ಸ್ಟೊಜಾನೊವಿಕ್ (16ನೇ ನಿಮಿಷದಲ್ಲಿ ಪೆನಾಲ್ಟಿ ಮೂಲಕ ) ಹಾಗೂ ಕರೇಜ್ ಪೆಕುಸನ್ (40ನೇ ನಿಮಿಷ ) ಗೋಲು ಗಳಿಸಿ ಮುನ್ನಡೆ ಕಲ್ಪಿಸಿದ್ದರು. ಆದರೆ ದಿತಿಯಾರ್ಧದಲ್ಲಿ ಬೆಂಗಳೂರು ದಿಟ್ಟ ಹೋರಾಟ ನೀಡಿದ ಪರಿಣಾಮ ಪಂದ್ಯ 2-2ರಲ್ಲಿ ಸಮಬಲಗೊಂಡಿತು.

ಅದ್ಭುತ ಕ್ಯಾಚ್‌ನಿಂದ ಡ್ಯಾರಿಲ್ ದಂಗುಬಡಿಸಿದ ದಿನೇಶ್ ಕಾರ್ತಿಕ್: ವಿಡಿಯೋಅದ್ಭುತ ಕ್ಯಾಚ್‌ನಿಂದ ಡ್ಯಾರಿಲ್ ದಂಗುಬಡಿಸಿದ ದಿನೇಶ್ ಕಾರ್ತಿಕ್: ವಿಡಿಯೋ

ಬೆಂಗಳೂರು ವಿರುದ್ಧ ಕೇರಳ ತಂಡ ಪ್ರಥಮಾರ್ಧದಲ್ಲಿ 2-0 ಗೋಲುಗಳ ಅಂತರದಿಂದ ಮೇಲುಗೈ ಸಾಧಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಸ್ಲಾವಿಸಾ ಸ್ಟೊಜಾನೊವಿಕ್ ಹಾಗೂ ಕರೇಜ್ ಪೆಕುಸನ್ ಇದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಪಂದ್ಯ ಆರಂಭಗೊಂಡ 16ನೇ ನಿಮಿಷದಲ್ಲಿ ಚೆಂಡು ಪೆನಾಲ್ಟಿ ವಲಯವನ್ನು ತಲುಪಿತ್ತು.

ಕೇರಳ ಆಕರ್ಷಕ ಗೋಲ್

ಕೇರಳ ಆಕರ್ಷಕ ಗೋಲ್

ಮೊಹಮ್ಮದ್ ರಾಕಿಪ್ ಗೋಲ್ ಬಾಕ್ಸ್ ಬಲ ಅಂಚಿನಿಂದ ಪೆನಾಲ್ಟಿ ವಲಯಕ್ಕೆ ಪಾಸ್ ನೀಡಿದರು. ಆದರೆ ಕೇನ್ ಲೂಯಿಸ್ ಚೆಂಡನ್ನು ನಿಯಂತ್ರಿಸುವಲ್ಲಿ ವಿಲರಾಗಿ ಚೆಂಡು ಕೈಗೆ ತಗಲಿತು. ರೆರಿ ಕ್ಷಣಮಾತ್ರದಲ್ಲೇ ಪೆನಾಲ್ಟಿ ಶೂಟ್‌ಗೆ ಅವಕಾಶ ಕಲ್ಪಿಸಿದರು. ಸ್ಲಾವಿಸಾ ಸ್ಟೊಜಾನೊವಿಕ್ ಯಾವುದೇ ಪ್ರಮಾದ ಮಾಡದೆ ಗುರ್‌ಪ್ರೀತ್ ಸಿಂಗ್ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು.

ಕೇರಳಕ್ಕೆ ಅನಿರೀಕ್ಷಿತ ಮುನ್ನಡೆ

ಕೇರಳಕ್ಕೆ ಅನಿರೀಕ್ಷಿತ ಮುನ್ನಡೆ

ಪ್ರಥಮಾರ್ಧ ಕೊನೆಗೊಳ್ಳಲು ಐದು ನಿಮಿಷ ಬಾಕಿ ಇರುವಂತೆ ಕೇರಳಕ್ಕೆ ಎರಡನೇ ಯಶಸ್ಸು. 40ನೇ ನಿಮಿಷದಲ್ಲಿ ಸಹಾಲ್ ಅಬ್ದುಲ್ ನೀಡಿದ ಪಾಸ್ ಸೈಮಿನ್‌ಲೆನ್ ಡೌಂಗಲ್ ಅವರ ನಿಯಂತ್ರಣದಲ್ಲಿತ್ತು, ಬೆಂಗಳೂರಿನ ಡಿಫೆಂಡರ್‌ಗಳನ್ನು ವಂಚಿಸಿ ಅವರು ಪೆನಾಲ್ಟಿ ವಲಯಕ್ಕೆ ಚೆಂಡನ್ನು ಪಾಸ್ ಮಾಡುವ ತವಕದಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಪುನಃ ಚೆಂಡನ್ನು ಹಿನ್ನಡೆಯಾಗಿ ಕರೇಜ್ ಪೆಕಸನ್ ಕಡೆಗೆ ನೀಡಿದರು. ವೇಗದಲ್ಲಿ ಬಂದ ಪೆಕುಸನ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಕೇರಳಕ್ಕೆ 2-0 ಮುನ್ನಡೆ.

ಸೋಲುಣಿಸಬೇಕೆಂಬ ಕೆಚ್ಚು

ಸೋಲುಣಿಸಬೇಕೆಂಬ ಕೆಚ್ಚು

ಬೆಂಗಳೂರಿಗೆ ಇದು ಪ್ರಮುಖ ಪಂದ್ಯ, ಕೇರಳಕ್ಕೆ ಫಲಿತಾಂಶದಿಂದ ಏನೂ ಪ್ರಯೋಜನ ಆಗಿದ್ದರೂ ಬೆಂಗಳೂರಿಗೆ ಮನೆಯಂಗಣದಲ್ಲಿ ಸೋಲುಣಿಸಬೇಕೆಂಬ ಕೆಚ್ಚು. ಇಂಡಿಯನ್ ಸೂಪರ್ ಲೀಗ್‌ನ 70ನೇ ಪಂದ್ಯ ಸಾಕಷ್ಟು ನಿರೀಕ್ಷೆಯಿಂದ ಕೂಡಿತ್ತು. ಮುಂಬೈ ವಿರುದ್ಧ ಸೋಲನುಭವಿಸಿದ ನಂತರ ಬೆಂಗಳೂರು ತಂಡ ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಕೇರಳಕ್ಕೆ ಇಲ್ಲಿ ಗೆದ್ದರೂ ಯಾವುದೇ ಪ್ರಯೋಜನವಿಲ್ಲ.

ಬೆಂಗಳೂರು ಬ್ಯಾಕ್ ಲೈನ್ ಅದ್ಭುತವಾಗಿದೆ

ಬೆಂಗಳೂರು ಬ್ಯಾಕ್ ಲೈನ್ ಅದ್ಭುತವಾಗಿದೆ

ಆತಿಥೇಯ ಬೆಂಗಳೂರು ತಂಡದ ಬ್ಯಾಕ್ ಲೇನ್ ಅದ್ಭುತವಾಗಿದೆ, ಇದುವರೆಗೂ ತಂಡ ನೀಡಿದ್ದು, ಬರೇ ಹತ್ತು ಗೋಲುಗಳು. ಬೆಂಗಳೂರು ಇಲ್ಲಿ ಗೆದ್ದರೆ ನಾಲ್ಕು ಪಂದ್ಯ ಬಾಕಿ ಇರುವಂತೆಯೇ ಸೆಮಿೈನಲ್ ಪ್ರವೇಶಿಸಲಿದೆ. ಕೇರಳ ತಂಡ ಸತತ ಹದಿಮೂರು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿತ್ತು. ಆದರೆ ಬೆಂಗಳೂರು ವಿರುದ್ಧದ ಪಂದ್ಯ ಎಂದಾಗ ಕೇರಳದ ಆಟದ ರೀತಿಯೇ ಬೇರೆ ಲೀಗ್‌ನಲ್ಲಿ ಹಂತ ಯಾವುದೇ ಇರಲಿ, ಆದರೆ ಬೆಂಗಳೂರು ವಿರುದ್ಧ ಗೆಲ್ಲಬೇಕೆಂಬುದು ಕೇರಳದ ಗುರಿ. ಕೇರಳ ಈಗಾಗಲೇ 23 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.

Story first published: Thursday, February 7, 2019, 11:17 [IST]
Other articles published on Feb 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X