ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2018: ಎಫ್‌ಸಿ ಪುಣೆಗೆ ಸೋಲುಣಿಸಿದ ಬೆಂಗಳೂರು ಎಫ್‌ಸಿ

By Isl Media
ISL 2018: Villain-turned-hero Bheke hands Bengaluru sixth-straight win

ಬೆಂಗಳೂರು, ಡಿಸೆಂಬರ್ 1: 15ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಉಡುಗೊರೆಯ ಗೋಲು ನೀಡಿದರೂ 88ನೇ ನಿಮಿಷದಲ್ಲಿ ಅಮೂಲ್ಯ ಗೋಲು ಗಳಿಸಿದ ರಾಹುಲ್ ಭಿಕೆ ಬೆಂಗಳೂರು ಎಫ್‌ಸಿ ತಂಡಕ್ಕೆ ಜಯ ತಂದುಕೊಟ್ಟರು. ಈ ಗೋಲಿನ ಮೂಲಕ ಬೆಂಗಳೂರು ಎಫ್‌ಸಿ 2-1 ಗೋಲುಗಳ ಅಂತರದಲ್ಲಿ ಶುಕ್ರವಾರ (ನವೆಂಬರ್ 30) ನಡೆದ ಪುಣೆ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಆಗ್ರ ಸ್ಥಾನ ಕಾಯ್ದುಕೊಂಡಿತು.

ಆಸೀಸ್ ಎದುರು ಭಾರತ ಈ ಬಾರಿ ಗೆಲ್ಲದಿದ್ದರೆ ಇನ್ಯಾವತ್ತೂ ಗೆಲ್ಲೋಲ್ಲ: ಜೋನ್ಸ್ಆಸೀಸ್ ಎದುರು ಭಾರತ ಈ ಬಾರಿ ಗೆಲ್ಲದಿದ್ದರೆ ಇನ್ಯಾವತ್ತೂ ಗೆಲ್ಲೋಲ್ಲ: ಜೋನ್ಸ್

11ನೇ ನಿಮಿಷದಲ್ಲಿ ಉದಾಂತ್ ಸಿಂಗ್ ಗಳಿಸಿದ ಗೋಲಿನಿಂದ ಬೆಂಗಳೂರು ಮುನ್ನಡೆ ಕಂಡಿತ್ತು. ಆದರೆ 15ನೇ ನಿಮಿಷದಲ್ಲಿ ರಾಹುಲ್ ಭಿಕೆ ನೀಡಿದ ಉಡುಗೊರೆ ಗೋಲಿನಿಂದ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಈ ನಡುವೆ ಬೆಂಗಳೂರು ತಂಡ ಹಲವು ಬಾರಿ ಗೋಲ್ ಗಳಿಸುವ ಅವಕಾಶ ಗಳಿಸಿತ್ತು. ಆದರೆ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಲವಾಗಿತ್ತು.

ಕೋಚ್ ರಮೇಶ್ ತಲೆದಂಡ ಖಚಿತ, ಹೊಸ ಕೋಚ್ ಗಾಗಿ ಅರ್ಜಿ ಆಹ್ವಾನಿಸಿದ ಬಿಸಿಸಿಐಕೋಚ್ ರಮೇಶ್ ತಲೆದಂಡ ಖಚಿತ, ಹೊಸ ಕೋಚ್ ಗಾಗಿ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಅಂತಿಮ ಕ್ಷಣದಲ್ಲಿ ಪಾರ್ತಲು ತುಳಿದ ಚೆಂಡು ಪುಣೆಯ ಗೋಲ್‌ಕೀಪರ್‌ನನ್ನು ವಂಚಿಸಿದರೂ ಗೋಲ್ ಬಾಕ್ಸ್‌ನ ಮೇಲ್ಭಾಗದ ಅಂಚಿಗೆ ತಗಲಿ ಹಿಂದಕ್ಕೆ ಚಿಮ್ಮಿತು. ಪುಣೆ ತಂಡ ನಿರೀಕ್ಷೆಗಿಂತ ಉತ್ತಮವಾಗಿ ಆಡಿರುವುದು ಇಲ್ಲಿ ಸ್ಪಷ್ಟವಾಗಿತ್ತು.

ಭಿಕೆ ದುರುಂತ ನಾಯಕ

ಭಿಕೆ ದುರುಂತ ನಾಯಕ

15ನೇ ನಿಮಿಷದಲ್ಲಿ ಬೆಂಗಳೂರು ಪಾಲಿಗೆ ರಾಹುಲ್ ಭಿಕೆ ದುರುಂತ ನಾಯಕರೆನಿಸಿದರು. ಮಾರ್ಸೆಲೋ ನೀಡಿದ ಪಾಸ್ ಅನ್ನು ಮಿಂಚಿನ ವೇಗದಲ್ಲಿ ಕೊಂಡೊಯ್ದ ಸ್ಟಾನ್ಕೋವಿಕ್ ರಾಬಿನ್ ಸಿಂಗ್ ಅವರಿಗೆ ನೀಡುವ ತವಕದಲ್ಲಿದ್ದರು. ಅದೇ ರೀತಿ ಅವರು ತುಳಿದ ಚೆಂಡು ಗೋಲ್‌ಬಾಕ್ಸ್‌ಗೆ ಹೋಗುತ್ತದೆ ಎಂದು ಭಿಕೆ ಅಚಾನಕ್ ಆಗಿ ಕಾಲು ಅಡ್ಡ ನೀಡಿದರು. ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಚೆಂಡನ್ನು ತಡೆಯಲು ಸಜ್ಜಾಗಿದ್ದರೂ ಅವರ ನಿರೀಕ್ಷೆಗಿಂತ ಮೊದಲೇ ಚೆಂಡು ಗೋಲ್‌ಬಾಕ್ಸ್ ಸೇರಿತ್ತು. ರಾಹುಲ್ ಭಿಕೆ ಹತಾಶೆಯಿಂದ ಆಕಾಶ ನೋಡಿದರು. ಪುಣೆಗೆ ಸಮಬಲದ ಸಂಭ್ರಮ.

ಬೆಂಗಳೂರಿಗೆ ಮುನ್ನಡೆ

ಬೆಂಗಳೂರಿಗೆ ಮುನ್ನಡೆ

ಅಂಗಣದಲ್ಲಿ ಮಿಂಚಿನ ವೇಗದಲ್ಲಿ ಚಲಿಸುವ ಉದಾಂತ್ ಸಿಂಗ್ 11ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಆತಿಥೇಯ ಬೆಂಗಳೂರು ಮೇಲುಗೈ ಸಾಧಿಸಿತು. ಹರ್ಮನ್‌ಜಿತ್ ಖಬ್ರಾ ಕಾರ್ನರ್‌ನಿಂದ ನೀಡಿದ ಪಾಸ್. ಅದನ್ನು ಉದಾಂತ್ ಸಿಂಗ್ ಅತ್ಯಂತ ಮಿಂಚಿನ ವೇಗದಲ್ಲಿ ಗೋಲ್‌ಬಾಕ್ಸ್ ಕಡೆಗೆ ಕೊಂಡೊಯ್ದು ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ತುಳಿದರು. ಪುಣೆಯ ಕೀಪರ್‌ಗೆ ತಡೆಯಲು ಯಾವುದೇ ಅವಕಾಶ ಇರಲಿಲ್ಲ. ಇದರೊಂದಿಗೆ ಬೆಂಗಳೂರು 1-0 ಅಂತರದಲ್ಲಿ ಮುನ್ನಡೆ ಕಂಡಿತು.

44ನೇ ಪಂದ್ಯದಲ್ಲಿ ಮುಖಾಮುಖಿ

44ನೇ ಪಂದ್ಯದಲ್ಲಿ ಮುಖಾಮುಖಿ

ಇಂಡಿಯನ್ ಸೂಪರ್ ಲೀಗ್‌ನ 44ನೇ ಪಂದ್ಯವನ್ನಾಡಲು ಬೆಂಗಳೂರು ಎಫ್ ಸಿ ಹಾಗೂ ಪುಣೆ ಸಿಟಿ ತಂಡಗಳು ಮುಖಾಮುಖಿಯಾದವು. ಬೆಂಗಳೂರಿ ಹಾಗೂ ಪುಣೆ ನಡುವಿನ ಸಾಮರ್ಥ್ಯವನ್ನು ಹೋಲಿಸಿದರೆ ಕಪ್ಪು ಬೆಳುಪಿನ ವ್ಯತ್ಯಾಸವಿದೆ. ಬೆಂಗಳೂರು ತಂಡದ ಡಿಫೆನ್ಸ್ ವಿಭಾಗ ಉತ್ತಮವಾಗಿದ್ದು, ಕೇವಲ ಐದು ಗೋಲುಗಳನ್ನು ನೀಡಿದೆ. ಅಲ್ಲದೆ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಬೆಂಗಳೂರು ಅಟ್ಯಾಕ್ ಜತೆಯಲ್ಲಿ ಡಿಫೆನ್ಸ್ ಆಟವನ್ನೂ ಪ್ರರ್ದಶಿಸಿದೆ. ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಬೆಂಗಳೂರಿನ ಇದುವರೆಗಿನ ಜಯ ಹಾಗೂ ಕ್ಲೀನ್ ಶೀಟ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಪುಣೆ ದುರ್ಬಲ

ಪುಣೆ ದುರ್ಬಲ

ಪುಣೆ ಸಿಟಿ ತಂಡದ ಶಕ್ತಿ ಬೆಂಗಳೂರಿಗೆ ಹೋಲಿಸಿದರೆ ಅದು ದುರ್ಬಲವಾಗಿದೆ ಎಂಬುದು ಸ್ಪಷ್ಟ. ಆದರೆ ಪ್ರತಿಯೊಂದು ಪಂದ್ಯವೂ ಆ ದಿನದ ಶಕ್ತಿಯನ್ನು ಆಧರಿಸಿದೆ ಎಂಬುದು ಸ್ಪಷ್ಟ. ಪುಣೆ ತಂಡ ಎದುರಾಳಿ ತಂಡಕ್ಕೆ ಇದುವರೆಗೆ 21 ಗೋಲುಗಳನ್ನು ನೀಡಿದೆ. ಇದು ಆ ತಂಡದ ಡಿಫೆನ್ಸ್ ವಿಭಾಗದ ಸಾಮರ್ಥ್ಯವನ್ನು ಹೇಳುತ್ತದೆ. ಲೀಗ್‌ನಲ್ಲಿ ಕ್ಲೀನ್ ಶೀಟ್ ಸಾ‘ನೆ ಮಾಡದ ತಂಡವೆಂದರೆ ಅದು ಪುಣೆ ಸಿಟಿ. ಪುಣೆ ತಂಡ ಬೆಂಗಳೂರಿನ ಕಠಿಣ ಸವಾಲನ್ನು ಎದುರಿಸಬೇಕಾಗಿರುವುದು ಸ್ಪಷ್ಟ.

Story first published: Saturday, December 1, 2018, 15:18 [IST]
Other articles published on Dec 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X