ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಪುಟಿದೇಳುವ ತವಕದಲ್ಲಿ ಬೆಂಗಳೂರು ಎಫ್‌ಸಿ

By Isl Media
ISL 2019: After setback, Bengaluru keen to make amends

ಬೆಂಗಳೂರು ಜನವರಿ 29: ಮುಂಬೈ ವಿರುದ್ಧದ ಸೋಲಿನಿಂದ ಪಾಠ ಕಲಿತಿರುವ ಬಲಿಷ್ಠ ಬೆಂಗಳೂರು ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮತ್ತೆ ಪುಟಿದೇಳಲು ಇಲ್ಲಿನ ಕಂಂಠೀರವ ಕ್ರೀಡಾಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಬುಧವಾರ ಮತ್ತೊಂದು ಪಂದ್ಯವನ್ನಾಡಲಿದೆ.

ಖಡ್ಕ ಬ್ಯಾಟಿಂಗ್ ಬಲ, ಯುಎಇ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ನೇಪಾಳ!ಖಡ್ಕ ಬ್ಯಾಟಿಂಗ್ ಬಲ, ಯುಎಇ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ನೇಪಾಳ!

ಬೆಂಗಳೂರು ತಂಡ ಲೀಗ್‌ನಲ್ಲಿ ಸೋಲೇ ಕಾಣದ ತಂಡವೆಂದು ಹೆಸರು ಮಾಡಿತ್ತು, ಆದರೆ ಈ ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಏಕೈಕ ಗೋಲಿನಿಂದ ಸೋತು ಆಘಾತ ಅನುಭವಿಸಿತ್ತು. ಆದರೆ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ಮನೆಯಂಗಣದಲ್ಲಿ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸುವ ತವಕದಲ್ಲಿದೆ.

ಪಂದ್ಯದ Live Score/Score Card ಇಲ್ಲಿದೆ

1
1042950

೧೨ ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ ೨೭ ಅಂಕಗಳನ್ನು ಗಳಿಸಿದೆ. ಆದರೆ ಮುಂಬೈ ತಂಡ ಅಷ್ಟೇ ಅಂಕಗಳನ್ನು ಗಳಿಸಿದ್ದರೂ, ಗೋಲುಗಳ ವ್ಯತ್ಯಯದಲ್ಲಿ ಅಗ್ರ ಸ್ಥಾನಕ್ಕೇರಿದೆ. ಅಲ್ಲದೆ ಒಂದು ಪಂದ್ಯ ಹೆಚ್ಚಾಗಿ ಆಡಿದೆ. ಪರ್ವತ ಪ್ರದೇಶದ ತಂಡದ ವಿರುದ್ಧ ಜಯ ಗಳಿಸಿ ಮತ್ತೆ ಅಗ್ರ ಸ್ಥಾನಕ್ಕೇರುವ ತವಕದಲ್ಲಿದೆ.

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!

'ನಾವು ಪ್ರಶಸ್ತಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಕೊನೆಯಲ್ಲಿ ನಮಗೆ ಬೇಕಾಗಿರುವುದು ಪ್ರಶಸ್ತಿ. ಸೋಲಿನಿಂದ ಬೇಸರವಾಗಿದೆ, ಅಜೇಯ ತಂಡವೆಂಬ ಹೆಸರು ಈಗ ಇಲ್ಲ, ಆದರೆ ದಾಖಲೆಗಾಗಿ ನಮಗೆ ಯಾರೂ ಉಡುಗೊರೆಯನ್ನು ನೀಡುಲವುದಿಲ್ಲ. ನಾವು ಸದ್ಯ ಪ್ಲೇ ಆಫ್ ಹಂತ ತಲಪುವ ಗುರಿ ಹೊಂದಿದ್ದೇವೆ, ' ಎಂದು ತಂಡದ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.
13ಪಂದ್ಯಗಳನ್ನಾಡಿರುವ ನಾರ್ತ್ ಈಸ್ಟ್ 23 ಅಂಕಗಳನ್ನು ಗಳಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಲೀಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ತಂಡಕ್ಕಿಂತ ನಾಲ್ಕು ಅಂಕ ಹಿಂದೆ ಬಿದ್ದಿವೆ. ಗೋವಾ ಹಾಗೂ ಜೆಮ್ಷೆಡ್ಪುರ ತಂಡಗಳ ನಡುವೆ ಈಗ ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆದಿದೆ.

'ಐದೇ ನಿಮಿಷ ಟೈಮು ಕೊಡು', ಮದುಮಗಳಲ್ಲಿ ಫುಟ್ಬಾಲಿಗ ವಿನಂತಿ!'ಐದೇ ನಿಮಿಷ ಟೈಮು ಕೊಡು', ಮದುಮಗಳಲ್ಲಿ ಫುಟ್ಬಾಲಿಗ ವಿನಂತಿ!

ಕೋಚ್ ಎಲ್ಕೋ ಷಟೋರಿ ಗೋವಾ ಹಾಗೂ ಜೆಮ್ಷೆಡ್ಪುರ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿರುವುದರ ಲಾಭ ಪಡೆಯುವ ತವಕದಲ್ಲಿದ್ದಾರೆ. 'ಬೆಂಗಳೂರಿನ ಮನೆಯಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ನಾವು ಗೆಲ್ಲಬೇಕು. ನಾವು ಅರ್ಹತೆ ಪಡೆಯುವ ಹಂತದಲ್ಲಿ ಇರುವುದರಿಂದ ಬೆಂಗಳೂರು ವಿರುದ್ಧ ಗೆಲ್ಲಬೇಕಾಗಿದೆ. ಮೊದಲ ಸೋಲನ್ನು ಕಂಡಿರುವ ಬೆಂಗಳೂರು ತಂಡಕ್ಕೆ ಇಲ್ಲಿ ಜಯದ ಅಗತ್ಯವಿದೆ. ಅವರಿಗೆ ಆ ಸೋಲಿನ ಬಗ್ಗೆ ಚಿಂತೆಯೂ ಇಲ್ಲ,' ಎಂದು ಷೆಟೋರಿ ಹೇಳಿದ್ದಾರೆ.

ಅೆ ಚೆನ್ನೆ' ವಿರುದ್ಧ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಜಯ ಗಳಿಸಿತ್ತು. ಬಾರ್ಥಲೋಮ್ಯೊ ಒಗ್ಬಚೆ ಗೋಲು ಗಳಿಸಿ ತಂಡಕ್ಕೆ ಜಯ ತಂದಿತ್ತರು. 10 ಗೋಲುಗಳನ್ನು ಗಳಿಸಿರುವ ನೈಜಿರಿಯಾದ ಆಟಗಾರರ ಗೋವಾದ ಫೆರಾನ್ ಕೊರೊಮಿನಾಸ್ ಅವರೊಂದಿಗೆ ಅತಿ ಹೆಚ್ಚು ಗೋಲು ಗಳಿಕೆಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. 'ಒಗ್ಬಚೆ, ಕೊರೊಮಿನಾಸ್, ಮೌಡೌ ಸೌಗೌ ಉತ್ತಮ ಸ್ಟ್ರೆ'ಕರ್‌ಗಳು. ಅವರು ಪ್ರಮುಖ ಆಟಗಾರರು. ಮಿಕು ಇಲ್ಲದೆ ನಾವು ಹಲವು ಪಂದ್ಯಗಳನ್ನು ಆಡಿದ್ದೇವೆ. ನಾವು ಮಿಕು ಇಲ್ಲದೆ ಜಯ ಗಳಿಸಬಲ್ಲವೆ, ಆದ್ದರಿಂದ ಅದೇ ತಂಡದ ಬಗ್ಗೆ ಇರುವ ಖುಷಿಯ ವಿಚಾರ,' ಎಂದು ಕ್ವಾಡ್ರಾಟ್ ಹೇಳಿದ್ದಾರೆ.

ಬೆಂಗಳೂರು ತಂಡ ಸ್ಥಾನ ಪಲ್ಲಟ ಆಟದ ಮೇಲೆ ಹೆಚ್ಚು ನಂಬಿಕೆ ಇಟ್ಟಿದೆ. ಮಿಡ್‌ಫೀಲ್ಡ್ ವಿಭಾಗದಲ್ಲಿ ಕಠಿಣ ಸವಾಲನ್ನು ಎದುರಿಸಬೇಕಾಗುತ್ತದೆ. ನಾರ್ತ್ ಈಸ್ಟ್ ತಂಡ ಅತಿ ಹೆಚ್ಚು ಪಾಸ್‌ಗಳನ್ನು ಮಾಡಿದ ತಂಡವೆನಿಸಿದೆ. ಮುಂಬೈ ಹೊರತುಪಡಿಸಿದರೆ ನಾರ್ತ್ ಈಸ್ಟ್ ಅತಿ ಹೆಚ್ಚು ಕ್ಲೀನ್ ಶೀಟ್ ಹೊಂದಿದ ತಂಡವೆನಿಸಿದೆ. ಅವರು ಸೋಲಿನಿಂದ ಹೊರ ಬರಲು ಎಲ್ಲ ರೀತಿಯ ಹೋರಾಟ ನೀಡಲಿದ್ದಾರೆ ಎಂಬುದು ಗೊತ್ತು. ಆದರೆ ಪ್ರಮುಖ ಸ್ಟ್ರೆ'ಕರ್ ಇಲ್ಲದಿರುವುದು ಬೆಂಗಳೂರಿನ ತಂಡದ ಹಿನ್ನಡೆಯಾಗಲಿದೆ. ಮಿಕು ಆಡುತ್ತಿಲ್ಲ ಎಂಬುದು ನಮಗೆ ಸಂತಸದ ವಿಚಾರ. ನಾಳೆಯ ಪಂದ್ಯದ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಷಟೋರಿ ಹೇಳಿದ್ದಾರೆ.

Story first published: Wednesday, January 30, 2019, 19:27 [IST]
Other articles published on Jan 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X