ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಜಯದ ನಿರೀಕ್ಷೆಯಲ್ಲಿ ಒಡಿಶಾ, ಹೈದರಾಬಾದ್

By Isl Media
ISL 2019: All or nothing for Odisha, Hyderabad

ಪುಣೆ, ಡಿಸೆಂಬರ್ 11: ಇಂಡಿಯನ್ ಸೂಪರ್ ಲೀಗ್ ನಲ್ಲಿ ಸಂಕಷ್ಟದ ಹೆಜ್ಜೆಗಳನ್ನು ಇಡುತ್ತೀರುವ ಒಡಿಶಾ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಬುಧವಾರ ಇಲ್ಲಿನ ಛತ್ರಪತಿ ಶಿವಾಜಿ ಅಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಚೇತರಿಸಿಕೊಳ್ಳುವ ಗುರಿ ಹೊಂದಿವೆ.

ಆನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶಆನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ ಜೋಡಿ; ವಿಶೇಷ ಸಂದರ್ಭಕ್ಕೆ ಕೊಹ್ಲಿ ಭಾವುಕ ಸಂದೇಶ

ಎರಡೂ ತಂಡಗಳು ಇದುವರೆಗೂ ಉತ್ತಮ ರೀತಿಯ ಆರಂಭ ಕಂಡಿಲ್ಲ, ಇದರಿಂದಾಗಿ ಅಂಕಪಟ್ಟಿಯ ವಿರುದ್ಧ ದಿಕ್ಕಿನಲ್ಲಿ ಸ್ಥಾನ ಪಡೆದಿವೆ. ಏಳು ಪಂದ್ಯಗಳನ್ನು ಆಡಿರುವ ಒಡಿಶಾ ಆರು ಅಂಕಗಳನ್ನು ಗಳಿಸಿ ಏಳನೇ ಸ್ಥಾನದಲ್ಲಿದೆ, ಹೈದರಾಬಾದ್ ಕೇವಲ ನಾಲ್ಕು ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿ ಸಿಲುಕಿಕೊಂಡಿದೆ. ಇತ್ತಂಡಗಳು ಗೋಲು ಗಳಿಸಲು ಪರದಾಡುತ್ತಿದ್ದು, ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ ಎರಡು ಗೋಲು ಗಳಿಸಿವೆ.

1
2026460

ಕಳೆದ ನಾಲ್ಕು ಪಂದ್ಯಗಳಲ್ಲಿ ಒಡಿಶಾ ಎಫ್ ಸಿ ಗಳಿಸಿರುವುದು ಕೇವಲ ಒಂದು ಅಂಕ, ಅದು ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಸಿಕ್ಕಿತ್ತು. ಅನುಭವಿ ಕೋಚ್ ಜೋಸೆಫ್ ಗೊಂಬಾವ್ ತಮ್ಮಲ್ಲಿರುವ ಎಲ್ಲ ರಣತಂತ್ರಗಳನ್ನು ಕಾರ್ಯರೂಪಕ್ಕೆ ತರುತಿದ್ದರೂ ತಂಡ ಮಾತ್ರ ಗೋಲು ಗಳಿಸುವಲ್ಲಿ ವಿಫಲವಾಗುತ್ತಿದೆ.

ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್ಆಟದ ಮಧ್ಯೆ ಮಗುವಿಗೆ ಹಾಲುಣಿಸಿದ ಆಟಗಾರ್ತಿ; ಹೃದಯಗೆದ್ದ ಫೋಟೋ ವೈರಲ್

''ನಾಳೆ ನಮಗೆ ಅತ್ಯಂತ ಪ್ರಮುಖವಾದ ಪಂದ್ಯ. ಅಲ್ಲಿ ಜಯ ಗಳಿಸಿದರೆ ಮಾತ್ರ ಮುಂದಿನ ಹೆಜ್ಜೆ ಇಡಲು ಸಾಧ್ಯ. ನಮಗೆ ಒಂಬತ್ತು ಅಂಕ ಗಳಿಸುವ ಅವಕಾಶ ಇದೆ. ಅದೇ ರೀತಿ ನಾವು ಪ್ಲೇ ಆಫ್ ಹಂತವನ್ನು ತಲುಪಲು ಉತ್ತಮರೀತಿಯ ಹೋರಾಟ ನೀಡುತ್ತಿದ್ದೇವೆ. ಅವರದ್ದು ಕೂಡ ಇದೇ ಕತೆ, ಒತ್ತಡಕ್ಕೆ ಸಿಲುಕದೆ ಪಂದ್ಯ ಗೆಲ್ಲಬೇಕಿದೆ,'' ಎಂದು ಗೊಂಬಾವ್ ಹೇಳಿದ್ದಾರೆ.

ISL 2019: All or nothing for Odisha, Hyderabad

ಕಳೆದ ವಾರ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ತೋರಿದ ಪ್ರದರ್ಶನದ ನಿರೀಕ್ಷೆಯಲ್ಲಿ ಸ್ಪೇನ್ ಕೋಚ್ ಇದ್ದಾರೆ. ಸಾಕಷ್ಟು ಅವಕಾಶಗಳನ್ನು ನಿರ್ಮಿಸಿದರೂ ಗೋಲು ಗಳಿಸಲಾಗಲಿಲ್ಲ. ಆದರೆ ಬೆಂಗಳೂರು ಮೂರು ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಕ್ಸಿಸ್ಕೋ ಹೆರ್ನಾಂಡೀಸ್ ಹಾಗೂ ಜೆರ್ರಿ ಉತ್ತಮ ರೀತಿಯಲ್ಲಿ ಗೋಲು ಗಳಿಸುವ ಅವಕಾಶವನ್ನು ನಿರ್ಮಿಸಿದರೂ ತಂಡ ಅಂತಿಮ ಯಶಸ್ಸು ಕಂಡಿರಲಿಲ್ಲ. ಆಟಗಾರರ ನಡುವಿನ ಹೊಂದಾಣಿಕೆ ಕೊರತೆ ಇದ್ದು, ತಂಡ ನೀಡಿರುವ ಒಂಬತ್ತು ಗೋಲುಗಳಲ್ಲಿ ನಾಲ್ಕು ಗೋಲು ಫ್ರೀ ಕಿಕ್ ಹಾಗೂ ಕಾರ್ನರ್ ಕಿಕ್ ನಿಂದ ದಾಖಲಾಗಿದೆ.

ಎಫ್ ಸಿ ಗೋವಾ ವಿರುದ್ಧ 1-0 ಅಂತರದಲ್ಲಿ ಸೋತ ನಂತರ ಫಿಲ್ ಬ್ರೌನ್ ಪಡೆ, ಮತ್ತೆ ಚೇತರಿಸಿಕೊಳ್ಳುವ ಕಡೆಗೆ ಗಮನ ಹರಿಸಿದೆ. ತಂಡದ ಸ್ಟಾರ್ ಸ್ಟ್ರೈಕರ್ ಮಾರ್ಸೆಲಿನೊ ನಾಲ್ಕು ಹಳದಿ ಕಾರ್ಡ್ ಗಳಿಸಿ ಅಮಾನತುಗೊಂಡಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಪಡುವಂತಿಲ್ಲ. ತಂಡದ ವಿರುದ್ಧ ದಾಖಲಾಗಿರುವ 14 ಗೋಲುಗಳಲ್ಲಿ 10 ಗೋಲುಗಳು ಸರಳ ರೀತಿಯಲ್ಲಿ ದಾಖಲಾಗಿತ್ತು. ಆದರೆ ಒದಿಶಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡ ಜಯ ಗಳಿಸಲಿದೆ ಎಂದು ಬ್ರೌನ್ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ, ಇದಕ್ಕೆ ಒಡಿಶಾ ತಂದಲ್ಲಿನ ಇದುವರೆಗಿನ ಪ್ರದರ್ಶನವೇ ಕಾರಣವಾಗಿದೆ.

''ನಾವು ಒಡಿಶಾ ಆಟಗಾರರು ಮತ್ತು ಕೋಚ್ ಅನ್ನು ಗೌರವಿಸುತ್ತೇವೆ, ಆದರೆ ನಮ್ಮ ಗುರಿ ಮಾತ್ರ ಜಯದ ಕಡೆಗೆ ಇರುತ್ತದೆ, ಕೋಚ್ ಆಗಿ ನನಗೆ ನನ್ನ ಆಟಗಾರರನ್ನು ಹತಾಶೆಗೆ ಈಡು ಮಾಡಬಾರದು. ಫಲಿತಾಂಶ ಆಟಗಾರರನ್ನು ಹತಾಶೆಗೆ ಈಡು ಮಾಡಬಾರದು, ಎಂದಿದ್ದಾರೆ.

''ಒಡಿಶಾ ತಂಡ ಉತ್ತಮ ರೀತಿಯಲ್ಲಿ ಚೆಂಡನ್ನು ನಿಯಂತ್ರಿಸುತ್ತದೆ, ಆದರೆ ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸುವುದರಿಂದ ಪಂದ್ಯವನ್ನು ಗೆಲ್ಲಲಾಗದು, ನಾವು ಬುಧವಾರ ರಾತ್ರಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲಿದ್ದೇವೆ,'' ಎಂದು ಬ್ರೌನ್ ಹೇಳಿದರು.

ಸೆಂಟರ್ ಬ್ಯಾಕ್ ಗುರುತೇಜ್ ಹಾಗೂ ಲೆಫ್ಟ್ ಬ್ಯಾಕ್ ಸಾಹಿಲ್ ಪನ್ವಾರ್ ಆಡಲು ಲಭ್ಯರಿದ್ದಾರೆ, ಇದು ಬ್ರೌನ್ ಪಾಲಿಗೆ ಖುಷಿಯ ವಿಚಾರ. ಆದರೆ ಮಾರ್ಕೋ ಸ್ಟ್ಯಾಂಕೋವಿಚ್ ಗಾಯದ ಸಮಸ್ಯೆ ಕಾರಣ ಆಡುತ್ತಿಲ್ಲ.

Story first published: Wednesday, December 11, 2019, 15:05 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X