ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ನಾಲ್ಕನೇ ಸ್ಥಾನ ತಲುಪಲು ಐದು-ಆರರ ಹೋರಾಟ

By Isl Media
ISL 2019: ATK, Jamshedpur battle for play-off spot

ಕೋಲ್ಕತ್ತಾ, ಫೆಬ್ರವರಿ 3: ವಿರಾಮದ ನಂತರ ನಡೆದ ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಮಾಜಿ ಚಾಂಪಿಯನ್ ಎಟಿಕೆ ತಂಡ ಹಾಗೂ ಹೆಚ್ಚಿನ ಪಂದ್ಯಗಳಲ್ಲಿ ಡ್ರಾ ಸಾಧಿಸಿರುವ ಜೆಮ್ಷುಡ್ಪುರ ತಂಡಗಳು ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಭಾನುವಾರ (ಫೆಬ್ರವರಿ 3) ಯುವ ಭಾರತಿ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿವೆ. ಇಲ್ಲಿ ಅನುಭವಿಸುವ ಸೋಲು ತಂಡದ ಮುಂದಿನ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಲಿದೆ.

ಪುರುಷರ ವಿಶ್ವಕಪ್ ಕ್ರಿಕೆಟ್ 2019 ಅಭ್ಯಾಸ ಪಂದ್ಯಗಳ ಪೂರ್ಣ ವೇಳಾಪಟ್ಟಿಪುರುಷರ ವಿಶ್ವಕಪ್ ಕ್ರಿಕೆಟ್ 2019 ಅಭ್ಯಾಸ ಪಂದ್ಯಗಳ ಪೂರ್ಣ ವೇಳಾಪಟ್ಟಿ

ಜೆಮ್ಷೆಡ್ಪರ ತಂಡ ಇದುವರೆಗೂ ಆಡಿರುವ 13 ಪಂದ್ಯಗಳಲ್ಲಿ 4 ಜಯ, 8 ಡ್ರಾ ಹಾಗೂ 1 ಸೋಲನುಭವಿಸಿ, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. 20 ಅಂಕಗಳನ್ನು ಕಲೆಹಾಕಿಲುವ ಟಾಟಾ ಪಡೆ ಭಾನುವಾರ ಜಯ ಗಳಿಸಿದರೆ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಲಿದೆ. ಆರನೇ ಸ್ಥಾನದಲ್ಲಿರುವ ಎಟಿಕೆ ಕೂಡ ಅಂತಿಮ ನಾಲ್ಕರ ಗುರಿಯನ್ನು ಗಮನದಲ್ಲಿರಿಸಿಕೊಂಡು ಅಂಗಣಕ್ಕಿಳಿಯಲಿದೆ. ಈಗಿರುವ ಆರು ತಂಡಗಳಲ್ಲಿ ಅಂತಿಮ ನಾಲ್ಕರ ಸ್ಥಾನ ತೀರ್ಮಾನವಾಗಬೇಕಾಗಿರುವುದರಿಂದ ಎಟಿಕೆ ಕೂಡ ಜಯವಲ್ಲದೆ ಬೇರೇನನ್ನೂ ನಿರೀಕ್ಷಿಸುವಂತಿಲ್ಲ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1042954

ಟಿ20ಐ ಅರ್ಧಶತಕ ಸಿಡಿಸಿದ ವಿಶ್ವದ ಕಿರಿಯ ಆಟಗಾರ ಸಂದೀಪ್ ಜೋರ!ಟಿ20ಐ ಅರ್ಧಶತಕ ಸಿಡಿಸಿದ ವಿಶ್ವದ ಕಿರಿಯ ಆಟಗಾರ ಸಂದೀಪ್ ಜೋರ!

ಇತ್ತಂಡಗಳು ಈ ಹಿಂದೆ ಮೂರು ಬಾರಿ ಮುಖಾಮುಖಿಯಾಗಿದ್ದು, ಎಟಿಕೆ ಸೋಲಿನ ಸವಿ ಕಂಡಿರಲಿಲ್ಲ, ಒಂದು ಪಂದ್ಯದಲ್ಲಿ ಟಾಟ ಪಡೆ ಜಯ ಗಳಿಸಿದರೆ, ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. 13 ಪಂದ್ಯಗಳಿಂದ 17 ಅಂಕಗಳಿಸಿರುವ ಎಟಿಕೆ ತಂಡ ಭಾನುವಾರ ಜಯ ಗಳಿಸಿದ್ದಲ್ಲಿ ನಾರ್ತ್ ಈಸ್ಟ್ ಹಾಗೂ ಸ್ಟೀವ್ ಕೊಪ್ಪೆಲ್ ಪಡೆಯ ನಡುವಿನ ಅಂತರ ಕಡಿಮೆಯಾಗಲಿದೆ. ಆದರೆ ಸೋಲು ಅನುಭವಿಸಿದರೆ ಮುಂದಿನ ಹಾದಿ ಕಠಿಣ.

ಕೇವಲ 12 ಗೋಲುಗಳು

ಕೇವಲ 12 ಗೋಲುಗಳು

ಎಟಿಕೆ ತಂಡದ ಡಿಫೆನ್ಸ್ ವಿಭಾಗ ಈ ಬಾರಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ. ಆಡರುವ 13 ಪಂದ್ಯಗಳಲ್ಲಿ ನೀಡಿದ್ದು ಕೇವಲ 12 ಗೋಲುಗಳು. ಬೆಂಗಳೂರು ತಂಡವನ್ನು ಹೊರತುಪಡಿಸಿದರೆ ಎಟಿಕೆ ಡಿಫೆನ್ಸ್ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದೆ. ಜಾನ್ ಜಾನ್ಸನ್ ಹಾಗೂ ಆಂಡ್ರೆ ಬಿಕೆ ಸೆಂಟರ್ ಬ್ಯಾಕ್‌ನಲ್ಲಿ ತಂಡದ ಯಶಸ್ಸಿಗೆ ಶ್ರಮಿಸಿದ್ದಾರೆ. ಸ್ಟ್ರೆಕರ್‌ಗಳು ಯಶಸ್ಸು ಕಾಣದಿರುವುದು ತಂಡದ ಗೋಲು ಗಳಿಕೆಯಲ್ಲಿ ಹಿನ್ನಡೆಗೆ ಕಾರಣವಾಯಿತು.

ಹಿಂದಿನ ಪಂದ್ಯದಲ್ಲೇ ಸ್ಪಷ್ಟವಾಗಿತ್ತು

ಹಿಂದಿನ ಪಂದ್ಯದಲ್ಲೇ ಸ್ಪಷ್ಟವಾಗಿತ್ತು

ಕಲು ಅಚೆ, ಎಡು ಗಾರ್ಸಿಯಾ ತಂಡಕ್ಕೆ ಆಗಮಿಸಿರುವುದು ಎಷ್ಟು ಲಾಭದಾಯಕವಾಗಿದೆ ಎಂಬುದು ಈ ಹಿಂದಿನ ಪಂದ್ಯದಲ್ಲೇ ಸ್ಪಷ್ಟವಾಗಿತ್ತು. ಅಮಾನತುಗೊಂಡಿದ್ದ ಪ್ರಮುಖ ಆಟಗಾರರ ಮ್ಯಾನ್ವೆಲ್ ಲಾನ್ಜೆರೊಟ್ ಕೇರಳ ವಿರುದ್ಧದ ಪಂದ್ಯದಿಂದ ವಂಚಿತರಾಗಿದ್ದರು, ಆದರೆ ಎಟಿಕೆ ವಿರುದ್ಧದ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಲಾನ್ಜೆರೋಟ್ ಹಾಗೂ ಗಾರ್ಸಿಯಾ ಆಡುವ ಹನ್ನೊಂದರಲ್ಲಿ ಅವಕಾಶ ಪಡೆದರೆ ಎಟಿಕೆ ತಂಡವನ್ನು ಸೋಲಿಸುವುದು ಕಷ್ಟ.

ಮೂರು ಅಂಕಗಳ ಅಗತ್ಯ

ಮೂರು ಅಂಕಗಳ ಅಗತ್ಯ

ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಸೆಸಾರ್ ಫೆರಾಂಡೊ ಅವರ ಪಡೆ, ಜೆಮ್ಷೆಡ್ಪುರಕ್ಕೆ ಅಂತಿಮ ನಾಲ್ಕರ ಹಂತ ತಲುಪಲು ಕೇವಲ ಮೂರು ಅಂಕಗಳ ಅಗತ್ಯವಿದೆ. ಭಾನುವಾರ (ಫೆಬ್ರವರಿ 3) ಜಯ ಗಳಿಸಿದರೆ ಟಾಟಾ ಪಡೆ ನಾರ್ತ್ ಈಸ್ಟ್ ಯುನೈಟೆಡ್ ಜತೆ ಸಮಬಲ ಸಾಧಿಸುವುದಲ್ಲದೆ, ಎಟಿಕೆಯಿಂದ ಆರು ಅಂಕಗಳಿಂದ ಮುಂದೆ ಸಾಗಲಿದೆ. ಆದರೆ ಇವೆಲ್ಲ ಲೆಕ್ಕಾಚಾರ ಕಾರ್ಯರೂಪಕ್ಕೆ ಬರಬೇಕಾದರೆ ತಂಡ ಭಾನುವಾರ ಜಯ ಗಳಿಸಲೇಬೇಕು. ಆದರೆ ಹಾದಿ ಅಷ್ಟು ಸುಲಭವಾಗಿಲ್ಲ.

ಸರ್ಗಿಯೊ ಸಿಡೊಂಚಾಗೆ ಗಾಯ

ಸರ್ಗಿಯೊ ಸಿಡೊಂಚಾಗೆ ಗಾಯ

ಪ್ರಮುಖ ಆಟಗಾರರಾದ ಮೈಕಲ್ ಸುಸೈರಾಜ್ ಹಾಗೂ ಸರ್ಗಿಯೊ ಸಿಡೊಂಚಾ ಗಾಯದ ಕಾರಣ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಸೆಂಟರ್ ಬ್ಯಾಕ್ ರಾಜು ಗಾಯಕ್ವಾಡ್ ಕೂಡ ಗಾಯದಿಂದ ಬಳಲುತ್ತಿದ್ದಾರೆ. ಗಾಯಗೊಂಡಿರುವ ಟಿಮ್ ಕಹಿಲ್ ತಂಡವನ್ನು ಯಾವಾಗ ಸೇರುತ್ತಾರೆಂದು ಹೇಳಲಾಗದು, ಅದೇ ರೀತಿ ಮೂರು ತಿಂಗಳು ನಿಷೇಧಕ್ಕೊಳಗಾಗಿರುವ ಕಾರ್ಲೋಸ್ ಕಾಲ್ವೋ ಕೂಡ ಭಾನುವಾರದ ಪಂದ್ಯಕ್ಕೆ ಗೈರು.

Story first published: Sunday, February 3, 2019, 11:33 [IST]
Other articles published on Feb 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X