ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮೂರು ಗೋಲ್‌ಗಳೊಂದಿಗೆ ಅಗ್ರ ಸ್ಥಾನಕ್ಕೇರಿದ ಬೆಂಗಳೂರು

By Isl Media
ISL 2019: Bengaluru end up on top again

ಬೆಂಗಳೂರು, ಫೆಬ್ರವರಿ 22: ದ್ವಿತೀಯಾರ್ಧದಲ್ಲಿ ಕೇವಲ ಹತ್ತು ಆಟಗಾರರನ್ನು ಹೊಂದಿದ್ದರೂ ಆತ್ಮ ಸ್ಥೈರ್ಯ ಕಳೆದುಕೊಳ್ಳದ ಬೆಂಗಳೂರು ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೋವಾ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು. ಬಿಎಫ್ಸಿ ಪರ ಜುವಾನನ್ (50ನೇ ನಿಮಿಷ), ಉದಾಂತ್ ಸಿಂಗ್ (58ನೇ ನಿಮಿಷ) ಹಾಗೂ ಮಿಕು ( 69 ನೇ ನಿಮಿಷ ) ಗೋಲು ಗಳಿಸಿ ತಂಡ ಮತ್ತೆ ಅಗ್ರ ಸ್ಥಾನ ತಲಪುವಂತೆ ಮಾಡಿದರು.

ಪಾಕ್ ಶೂಟರ್‌ಗಳಿಗೆ ವೀಸಾ ನೀಡದ ಭಾರತದ ವಿರುದ್ಧ ಒಲಿಂಪಿಕ್ ಸಮಿತಿ ಕಿಡಿಪಾಕ್ ಶೂಟರ್‌ಗಳಿಗೆ ವೀಸಾ ನೀಡದ ಭಾರತದ ವಿರುದ್ಧ ಒಲಿಂಪಿಕ್ ಸಮಿತಿ ಕಿಡಿ

ಪ್ರಥಮಾರ್ಧದ ಕೊನೆಯಲ್ಲಿ ಎರಡು ಉತ್ತಮ ಗುಣಮಟ್ಟದ ತಂಡದ ಕಳಪೆ ಆಟಕ್ಕೆ ಮನ ಮಾಡಿತು. ಪರಿಣಾಮ ಬೆಂಗಳೂರು ತಂಡದ ನಿಶು ಕುಮಾರ್ ಎರಡು ಬಾರಿ ಯಲ್ಲೋ ಕಾರ್ಡ್ ಗಳಿಸಿ ಅಂಗಣದಿಂದ ಹೊರ ನಡೆದರು. ರೆಫರಿಯ ತೀರ್ಪಿಗೆ ಆತಿಥೇಯ ತಂಡದ ಆಟಗಾರರು ರೆಫರಿಯನ್ನು ಸುತ್ತುವರಿದರು.

ಮೊದಲ ಟಿ20: ನಬಿ ಆಕರ್ಷಕ ಆಟ, ಐರ್ಲೆಂಡ್ ವಿರುದ್ಧ ಅಫ್ಘಾನ್‌ಗೆ ಜಯಮೊದಲ ಟಿ20: ನಬಿ ಆಕರ್ಷಕ ಆಟ, ಐರ್ಲೆಂಡ್ ವಿರುದ್ಧ ಅಫ್ಘಾನ್‌ಗೆ ಜಯ

ಈ ಘಟನೆಯನ್ನು ಹೊರತುಪಡಿಸಿದರೆ ಇತ್ತಂಡಗಳು ಉತ್ತಮ ಫುಟ್ಬಾಲ್ ಆಟ ಪ್ರದರ್ಶಿಸಿದವು. ಗೋಲು ಗಳಿಸಲು ಕೆಲವು ಅವಕಾಶಗಳು ಉತ್ತಮವಾಗಿದ್ದವು, ಆದರೆ ಅಂತಿಮ ರೂಪು ನೀಡುವಲ್ಲಿ ಇತ್ತಂಡಗಳ ಆಟಗಾರರು ವಿಫಲರಾದರು.

ಅಹಮ್ಮದ್ ಗೆ ಗೋಲ್ ಅವಕಾಶವಿತ್ತು

ಅಹಮ್ಮದ್ ಗೆ ಗೋಲ್ ಅವಕಾಶವಿತ್ತು

4ನೇ ನಿಮಿಷದಲ್ಲಿ ಅಹಮ್ಮದ್ ಜಹೊವ್ ಅವರಿಗೆ ಗೋವಾದ ಪರ ಖಾತೆ ತೆರೆಯುವ ಅವಕಾಶವಿದ್ದಿತ್ತು, ಆದರೆ ಚೆಂಡು ಗೋಲ್ ಬಾಕ್ಸ್‌ನ ಅಂಚಿಗೆ ತಗಲಿದ ಕಾರಣ ಅದೃಷ್ಟ ಬೆಂಗಳೂರಿನ ಪಾಲಾಯಿತು. ಇದರೊಂದಿಗೆ ಪ್ರಥಮಾ‘ರ್ ಗೋಲಿಲ್ಲದೆ ಅಂತ್ಯಗೊಂಡಿತು. ಮುಂದಿನ 45 ನಿಮಿಷಗಳ ಆಟವನ್ನು ಬೆಂಗಳೂರು ತಂಡ ಕೇವಲ 10 ಆಟಗಾರರಲ್ಲೇ ಆಡಬೇಕಾಯಿತು.

ಬಲಿಷ್ಠ ತಂಡಗಳು

ಬಲಿಷ್ಠ ತಂಡಗಳು

ಈ ವರ್ಷದ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬಲಿಷ್ಠ ತಂಡಗಳೆನಿಸಿರುವ ಅದೇ ರೀತಿ ಅಗ್ರ ಎರಡು ಸ್ಥಾನದಲ್ಲಿರುವ ಬೆಂಗಳೂರು ಹಾಗೂ ಗೋವಾ ತಂಡಗಳು ಕಂಠೀರವ ಕ್ರೀಡಾಂಗಣದಲ್ಲಿ ಮತ್ತೆ ಅಗ್ರ ಸ್ಥಾನಕ್ಕಾಗಿ ಹೋರಾಟಕ್ಕೆ ಮುಂದಾದವು. ಇತ್ತಂಡಗಳು ಈಗಾಗಲೇ ಪ್ಲೇ ಆಫ್ ಹಂತವನ್ನು ತಲುಪಿರುವುದರಿಂದ ಒತ್ತಡದಲ್ಲಿ ಆಡಬೇಕಾದ ಅನಿವಾರ್ಯತೆ ಇಲ್ಲ. ಗೋವಾ ತಂಡದ ಸ್ಟ್ರೆ‘ಕರ್‌ಗಳು ಉತ್ತಮ ಪ್ರದರ್ಶನ ತೋರುತ್ತಿರುವುದೇ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ಚಳಿಗಾಲದ ವಿರಾಮದ ನಂತರ ಗೋವಾ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ.

ಹೇಳಿದಷ್ಟು ಸುಲಭವಲ್ಲ

ಹೇಳಿದಷ್ಟು ಸುಲಭವಲ್ಲ

ಸತತ ಐದು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡಿರುವ ಗೋವಾ ತಂಡ ಇನ್ನೊಂದು ಪಂದ್ಯದಲ್ಲಿ ಕ್ಲೀನ್ ಶೀಟ್ ಗುರಿ ತಲುಪಿದರೆ ಈ ಸಾ‘ನೆ ಮಾಡಿದ ಮೊದಲ ತಂಡವೆನಿಸಲಿದೆ. ಆದರೆ ಇದು ಹೇಳಿದಷ್ಟು ಸುಲಭವಲ್ಲ, ಏಕೆಂದರೆ ಎದುರಿಸುತ್ತಿರುವ ತಂಡ ಇತರ ತಂಡಗಳಂತಲ್ಲ ಬೆಂಗಳೂರು ತಂಡ.

ಆತಂಕದ ವಿಷಯ

ಆತಂಕದ ವಿಷಯ

ಆರಂಭದಿಂದಲೂ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತ ಬಂದಿರುವ ತಂಡ ಬೆಂಗಳೂರು. ಯಾವಾಗಲೂ ಪ್ರಥಮ ಅಥವಾ ದ್ವಿತೀಯ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಆದರೆ ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯ ಕಾಣುತ್ತಿರುವುದು ಆತಂಕದ ವಿಷಯ. ಆದರೆ ಆಟದ ಗುಮಮಟ್ಟದಲ್ಲಿ ಬೆಂಗಳೂರು ತಂಡ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಈ ಋತುವಿನ ಆರಂಭದಲ್ಲಿ ಬೆಂಗಳೂರು ತಂಡ 2-1 ಗೋಲುಗಳ ಅಂತರದಲ್ಲಿ ಗೋವಾ ವಿರುದ್ಧ ಜಯ ಗಳಿಸಿತ್ತು.

Story first published: Friday, February 22, 2019, 11:53 [IST]
Other articles published on Feb 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X