ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019ರಲ್ಲಿ ಇತಿಹಾಸ ಬರೆಯಲು ಬೆಂಗಳೂರಿಗೆ ಅವಕಾಶ

By Isl Media

ಬೆಂಗಳೂರು, ಅಕ್ಟೋಬರ್ 20 : ಹೀರೋ ಇಂಡಿಯನ್ ಸೂಪರ್ ಲೀಗ್ ನ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಕಳೆದ ಬಾರಿ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಯಾವ ರೀತಿಯಲ್ಲಿ ಋತುವನ್ನು ಕೊನೆಗಾಣಿಸಿದೆಯೋ ಅದೇ ರೀತಿಯಲ್ಲಿ ಆರಂಭಿಸಲು ಸಜ್ಜಾಗಿದೆ. 2018-19 ರಲ್ಲಿ ಬ್ಲೂ ಪಡೆ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ವಿರುದ್ಧ ಹಿನ್ನಡೆ ಕಂಡಿದ್ದರೂ ನಂತರ ಜಯ ಗಳಿಸಿ ಫೈನಲ್ ತಲುಪಿತ್ತು.

ಕುತೂಹಲಕಾರಿ ಕಾದಾಟಕ್ಕೆ ಸಾಕ್ಷಿಯಾಗಲಿದೆ ಐಎಸ್‌ಎಲ್ ಪಂದ್ಯಗಳು!ಕುತೂಹಲಕಾರಿ ಕಾದಾಟಕ್ಕೆ ಸಾಕ್ಷಿಯಾಗಲಿದೆ ಐಎಸ್‌ಎಲ್ ಪಂದ್ಯಗಳು!

ಅದೇ ತಂಡ ಈಗ 2019-20 ಋತುವಿನ ಮೊದಲ ಪಂದ್ಯಕ್ಕಾಗಿ ಬೆಂಗಳೂರಿಗೆ ಬಂದು ಹೋರಾಡಲು ಸಜ್ಜಾಗಿದೆ. ಮೂರನೇ ಐಎಸ್ಎಲ್ ನಲ್ಲಿ ಚಾಂಪಿಯನ್ ಪಟ್ಟ ಗೆದ್ದರೆ ಬೆಂಗಳೂರು ಎಫ್ ಸಿ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಲಿದೆ.

ಇಂಡಿಯನ್ ಸೂಪರ್ ಲೀಗ್ ನಲ್ಲಿ ಯಾವುದೇ ತಂಡವು ಇದುವರೆಗೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಬಗ್ಗೆ ಬೆಂಗಳೂರು ಎಫ್ ಸಿ ಕೋಚ್ ಕಾರ್ಲಸ್ ಕ್ವಾಡ್ರಟ್ ಅಚ್ಚರಿ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬೆಂಗಳೂರು ತಂಡ ಮೊದಲು ಪ್ಲೇ ಆಫ್ ಕಡೆಗೆ ಗಮನ ಹರಿಸಿ ಆ ನಂತರ ಟ್ರೋಫಿ ಗೆಲ್ಲುವ ಕಡೆಗೆ ಗಮನ ಹರಿಸುವ ಉದ್ದೇಶ ಹೊಂದಿದೆ.

ಸ್ಪೇನ್ ಕೋಚ್ ನ ಅಭಿಪ್ರಾಯ

ಸ್ಪೇನ್ ಕೋಚ್ ನ ಅಭಿಪ್ರಾಯ

"ನಿಮ್ಮ ಹೋರಾಟ ಸ್ಫರ್ಧಾತ್ಮಕವಾಗಿರಲಿ ಹಾಗಿದ್ದಲ್ಲಿ ನಾವು ಪ್ಲೇ ಆಫ್ ಹಂತ ತಲುಪಬಹುದು ಎಂದು ನನ್ನ ಆಟಗಾರರಿಗೆ ತಿಳಿಸಿರುವೆ. ಒಂದು ಕೆಟ್ಟ ಪಂದ್ಯ ನಿಮ್ಮ ಹಿನ್ನಡೆಗೆ ಕಾರಣವಾಗಬಹುದು. ಇದು ಅಸಾಧಾರಣವಾದುದಲ್ಲ, ಯಾವುದೇ ತಂಡವು ಸತತ ಎರಡು ಬಾರಿ ಪ್ರಶಸ್ತಿ ಗೆದ್ದಿರಲಿಲ್ಲ, ಅದೊಂದು ಅಚ್ಚರಿಯ ಸಂಗತಿ. ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಸದ್ಯದ ಸ್ಥಿತಿಯಲ್ಲಿ ನಮ್ಮ ಕೆಲಸವಲ್ಲ, ನಮ್ಮ ಗುರಿ ಏನಿದ್ದರೂ ಮೊದಲು ಪ್ಲೇ ಆಫ್ ಹಂತ ತಲಪುವುದು. ಆ ನಂತರ ನಾವು ಪ್ರಶಸ್ತಿ ಗೆಲ್ಲುವ ಕಡೆಗೆ ಗಮನ ಹರಿಸುವ" ಎಂದು ಸ್ಪೇನ್ ಮೂಲದ ಕೋಚ್ ಹೇಳಿದ್ದಾರೆ.

ಕಳೆದ ಋತುವಿನಲ್ಲಿದ್ದ ಪ್ರಮುಖ ಆಟಗಾರರು ತಂಡವನ್ನು ತೊರೆದರೂ ನಾರ್ತ್ ಈಸ್ಟ್ ಯುನೈಟೆಡ್ ಉತ್ತಮ ಆಟಗಾರರನ್ನು ಸೇರಿಸಿಕೊಂಡಿದೆ. ಅದೇ ರೀತಿ ಕ್ವಾಡ್ರಟ್ ಪರ್ವತಪ್ರದೇಶದ ತಂಡದ ಬಗ್ಗೆ ಜಾಗರೂಕರಾಗಿಯೂ ಇದ್ದಾರೆ.

ಸಾಕಷ್ಟು ಸ್ಪರ್ಧೆಯ ನಿರೀಕ್ಷೆಯಲ್ಲಿದ್ದೇನೆ

ಸಾಕಷ್ಟು ಸ್ಪರ್ಧೆಯ ನಿರೀಕ್ಷೆಯಲ್ಲಿದ್ದೇನೆ

''ನಾರ್ತ್ ಈಸ್ಟ್ ಯುನೈಟೆಡ್ ತಂಡ ಹೊಸ ಕೋಚ್ ಮೂಲಕ ವಿಭಿನ್ನ ತಂಡವಾಗಿದೆ, ಆದ್ದರಿಂದ ಸಾಕಷ್ಟು ಸ್ಪರ್ಧೆಯ ನಿರೀಕ್ಷೆಯಲ್ಲಿದ್ದೇನೆ, ಇದು ನಮ್ಮ ಪಾಲಿಗೆ ಕಠಿಣ ಪಂದ್ಯವೆನಿಸಲಿದೆ. ನಾರ್ತ್ ಈಸ್ಟ್ ತಂಡ ಯಾವರೀತಿಯಲ್ಲಿ ಸಜ್ಜಾಗಿದೆ ಎಂಬುದರ ಬಗ್ಗೆ ನಮಗೆ ಅರಿವಿಲ್ಲ, ಅಸಮೋಹ್ ಗ್ಯಾನ್ ಅವರಂಥ ಕೆಲವು ಉತ್ತಮ ಆಟಗಾರರನ್ನು ಸೇರಿಸಿಕೊಂಡಿದೆ. ಅವರ ತಂಡದಲ್ಲಿ ಇನ್ನೂ ಕೆಲವು ಉತ್ತಮ ಆಟಗಾರರಿದ್ದಾರೆ. ಆ ಬಗ್ಗೆ ನಾವು ಯೋಚಿಸುವುದರಲ್ಲಿ ಅರ್ಥವಿಲ್ಲ, ನಾವು ಯಾವ ರೀತಿಯಲ್ಲಿ ಸಜ್ಜಾಗಬೇಕು ಎಂಬುದರ ಬಗ್ಗೆ ಯೋಚಿಸುವ,'' ಎಂದು ಅವರು ಹೇಳಿದರು.

ಬೆಂಗಳೂರು ಎಫ್ ಸಿ ಹಾಲಿ ಚಾಂಪಿಯನ್

ಬೆಂಗಳೂರು ಎಫ್ ಸಿ ಹಾಲಿ ಚಾಂಪಿಯನ್

ಬೆಂಗಳೂರು ಎಫ್ ಸಿ ಹಾಲಿ ಚಾಂಪಿಯನ್ ಆಗಿದ್ದರೂ ಈ ಋತು ತಮ್ಮ ಪಾಲಿಗೆ ಸುಲಭ ವಾಗಲಿದೆ ಎಂಬುದರ ಬಗ್ಗೆ, ಕ್ವಾಡ್ರಟ್ ಗೆ ಯಾವುದೇ ರೀತಿಯ ಭ್ರಮೆ ಇಲ್ಲ, ಇತರ ತಂಡಗಳು ಕೂಡ ತಮ್ಮ ಆಟದಲ್ಲಿ ಸುಧಾರಣೆ ಕಂಡಿದ್ದು, ಪ್ಲೇ ಆಫ್ ಹಂತ ತಲುಪಲು ಎಲ್ಲ ರೀತಿಯ ಹೋರಾಟಕ್ಕೆ ಸಜ್ಜಾಗಿವೆ.

"ಈ ಋತುವು ನಮ್ಮ ಪಾಲಿಗೆ ಕಠಿಣ ಎನಿಸಲಿದೆ. ಸಾಕಷ್ಟು ತಂಡಗಳು ಸಾಕಷ್ಟು ಹಣ ವ್ಯಯ ಮಾಡಿ ತಮ್ಮ ತಂಡವನ್ನು ಉತ್ತಮಪಡಿಸಿಕೊಂಡಿದ್ದು, ಉತ್ತಮ ಸ್ಪರ್ಧಾತ್ಮಕ ತಂಡಗಳಾಗಿ ರೂಪುಗೊಂಡಿವೆ, ನಾವು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು, ಆದರೆ ಒತ್ತಡಕ್ಕೆ ಸಿಲುಕಬಾರದು" ಎಂದರು.

ಮಿಕು ಸ್ಥಾನಕ್ಕೆ ಮ್ಯಾನುಯೆಲ್ ಒನ್ಯೂ

ಮಿಕು ಸ್ಥಾನಕ್ಕೆ ಮ್ಯಾನುಯೆಲ್ ಒನ್ಯೂ

ಬ್ಲೂ ತಂಡವು ಸಾಕಷ್ಟು ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ, ಮ್ಯಾನುಯೆಲ್ ಒನ್ಯೂ ಅವರಿಗೆ ಮಿಕು ಅವರ ಸ್ಥಾನದಲ್ಲಿ ಆಡಬೇಕಾಗಿರುವುದರಿಂದ ಹೆಚ್ಚಿನ ಜವಾಬ್ದಾರಿ ಇದೆ.

"ಆರ್ಥಿಕ ಕಾರಣಗಳಿಗಾಗಿ ನಾವು ಮಿಕು ಅವರನ್ನು ಬಿಡಬೇಕಾಯಿತು. ಆದರೆ ಎಲ್ಲಾ ಆಟಗಾರರರಿಗೂ ನಾವು ನಿರೀಕ್ಷಿಸಿದ ಸಾಮರ್ಥ್ಯ ಹೊಂದಿದ್ದಾರೆ. ಮಿಕು ಒಂದು ವಿಷಯದಲ್ಲಿ ಉತ್ತಮವಾಗಿದ್ದರೆ, ನಮ್ಮ ಈಗಿನ ಆಟಗಾರರು ವಿಭಿನ್ನ ರೀತಿಯಲ್ಲಿ ತಂಡಕ್ಕೆ ನೆರವಾಗಲಿದ್ದಾರೆ"ಎಡನು ಅವರು ವಿವರಿಸಿದರು.

ನೂತನ ಕೋಚ್ ರಾಬರ್ಟ್ ಜರ್ಮಿ

ನೂತನ ಕೋಚ್ ರಾಬರ್ಟ್ ಜರ್ಮಿ

ಬೆಂಗಳೂರು ಎಫ್ ಸಿ ಯಲ್ಲಿ ಆಗಿರುವ ಬದಲಾವಣೆಯಿಂದಾಗಿ ನಾರ್ತ್ ಈಸ್ಟ್ ಯುನೈಟೆಡ್ ಕೆಲವು ರೀತಿಯಲ್ಲಿ ಅಡ್ಡಿಯನ್ನು ಮಾಡಲಿದೆ ಎಂದು ಪರ್ವತ ಪ್ರದೇಶದ ತಂಡದ ನೂತನ ಕೋಚ್ ರಾಬರ್ಟ್ ಜರ್ಮಿ ಹೇಳಿದ್ದಾರೆ,

"ಕಳೆದ ಋತುವಿಗಿಂತ ಬೆಂಗಳೂರು ಎಫ್ ಸಿ ಈ ಬಾರಿ ಕೆಲವು ಬದಲಾವಣೆಗಳನ್ನು ಮಾಡಿದೆ. ನಮ್ಮಲ್ಲೂ ಕೆಲವು ಹೊಸ ಆಟಗಾರರಿದ್ದಾರೆ, ಅವರ ವಿರುದ್ಧ ನಾವೂ ಉತಾಮ ರೀತಿಯಲ್ಲಿ ಪ್ರದರ್ಶನ ತೋರಲಿದ್ದೇವೆ ಎಂಬ ನಂಬಿಕೆ ಇದೆ, ನಾವು ಮೂರು ಅಂಕಗಳನ್ನು ಗಾಳಿಸುತ್ತೇನೆಂಬ ನಂಬಿಕೆ ನಮಗಿದೆ," ಎಂದು ಕ್ರೋಯೇಷಿಯಾದ 19 ವರ್ಷ ವಯೋಮಿತಿ ತಂಡದ ಮಾಜಿ ಕೋಚ್ ಹೇಳಿದರು.

Story first published: Sunday, October 20, 2019, 18:13 [IST]
Other articles published on Oct 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X