ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಬೆಂಗಳೂರು, ಕೇರಳ ನಡುವೆ ಕುತೂಹಲಕಾರಿ ಕದನ

By Isl Media
ISL 2019: Bengaluru, Kerala renew rivalry as ISL resumes

ಬೆಂಗಳೂರು, ನವೆಂಬರ್ 23: ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ಬಿಡುವಿನ ನಂತರ ಇಂಡಿಯನ್ ಸೂಪರ್ ಲೀಗ್ ಮತ್ತೆ ಆರಂಭಗೊಂಡಿದೆ. ಹಾಲಿ ಚಾಂಪಿಯನ್ ಬೆಂಗಳೂರರು ಎಫ್ ಸಿ ಹಾಗೂ ಕೇರಳ ಎಫ್ ಸಿ ತಂಡದಗಳು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ (ನವೆಂಬರ್ 23) ಮುಖಾಮುಖಿಯಾಗಲಿವೆ.

ಪಡಿಕ್ಕಲ್ ಅರ್ಧಶತಕ, ಝಾರ್ಖಂಡ್ ವಿರುದ್ಧ ರೋಚಕ ಪಂದ್ಯ ಗೆದ್ದ ಕರ್ನಾಟಕ!ಪಡಿಕ್ಕಲ್ ಅರ್ಧಶತಕ, ಝಾರ್ಖಂಡ್ ವಿರುದ್ಧ ರೋಚಕ ಪಂದ್ಯ ಗೆದ್ದ ಕರ್ನಾಟಕ!

ದಕ್ಷಿಣ ಭಾರತದ ಬದ್ಧ ಎದುರಾಳಿಗಳಾದ ಬೆಂಗಳೂರು ಹಾಗೂ ಕೇರಳ ತಂಡಗಳು ತಮ್ಮ ಹೋರಾಟಕ್ಕೆ ಮತ್ತೊಮ್ಮೆ ಚಾಲನೆ ನೀಡಲಿವೆ. ಇದುವರೆಗೂ ಇತ್ತಂಡಗಳು ತಮ್ಮ ನೈಜ ಪ್ರದರ್ಶನ ತೋರುವಲ್ಲಿ ವಿಫಲವಾಗಿವೆ. ಹಾಲಿ ಚಾಂಪಿಯನ್ ಬೆಂಗಳೂರು ನಾಲ್ಕು ಪಂದ್ಯಗಳನ್ನಾಡಿ ಆರು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ, ನಾಲ್ಕು ಅಂಕಗಳನ್ನು ಗಳಿಸಿರುವ ಕೊಚ್ಚಿ ಮೂಲದ ತಂಡ ಏಳನೇ ಸ್ಥಾನದಲ್ಲಿದೆ.

ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದುವರೆಗೂ ಸೋಲು ಕಾಣದ ಮೂರೂ ತಂಡಗಳಲ್ಲಿ ಒಂದಾಗಿರುವ ಬೆಂಗಳೂರು ಎಫ್ ಸಿ ಈ ಬಾರಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬಿಡುವು ಸಿಗುವುದಕ್ಕೆ ಮುನ್ನ ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ಜಯ ಗಳಿಸಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಲಸ್ ಕ್ವಾಡ್ರಟ್ಸ್ ಪಡೆ ಗೋಳು ಗಳಿಸಿರುವುದು ಕೂಡ ಚೆನ್ನೈಯಿನ್ ವಿರುದ್ಧ, ಮೊದಲ ಮೂರು ಪಂದ್ಯಗಳಲ್ಲಿ ಬೆಂಗಳೂರು ಎಫ್ ಸಿ ಗಳಿಸಿದ್ದು ಕೇವಲ ಒಂದು ಗೋಲು, ಆದರೆ ಚೆನ್ನೈಯಿನ್ ವಿರುದ್ಧ ಮೂರು ಗೋಲು ಗಳಿಸಿ ಋತುವಿನ ಜಯದ ಖಾತೆ ತೆರೆಯಿತು.

ISL 2019: Bengaluru, Kerala renew rivalry as ISL resumes

''ನಾವು ಋತುವಿನ ಸರಂಭದಿಂದಲೂ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮೊದಲ ಮೂರೂ ಪಂದ್ಯಗಳನ್ನು ನಾವು ಗೆಲ್ಲಬಹುದಾಗಿತ್ತು. ಕೇರಳದಲ್ಲಿ ಆಡಿದ ನೆನಪು ಹಸಿರಾಗಿಯೇ ಇದೆ. ಟಿಕೆಟ್ ಗಳು ಸಂಪೂರ್ಣ ಮಾರಾಟಗೊಂಡಿದೆ ಎಂದು ತಿಳಿದುಬಂದಿದೆ. ಇದು ಭಾರತದ ಫುಟ್ಬಾಲ್ ಗೆ ಉತ್ತಮವಾದುದು. ಕೇರಳ ಉತ್ತಮವಾದ ತಂಡ ನಾಳೆ ಉತ್ತಮ ಹೋರಾಟದಿಂದ ಕೂಡಿದ ಪಂದ್ಯವನ್ನು ನಿರೀಕ್ಷಿಸಬಹುದು,'' ಎಂದು ಕ್ವಾಡ್ರಟ್ಸ್ ಹೇಳಿದ್ದಾರೆ.

ಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿಐತಿಹಾಸಿಕ ಪಿಂಕ್‌ ಬಾಲ್ ಟೆಸ್ಟ್‌ನಲ್ಲಿ ವಿಶ್ವದಾಖಲೆ ಬರೆದ ವಿರಾಟ್ ಕೊಹ್ಲಿ

ಎರಿಕ್ ಪಾರ್ಥಲು ಮತ್ತು ರಫೆಲ್ ಅಗಸ್ಟೊ ಅವರು ಗಾಯದಿಂದ ಚೇತರಿಸಿಕೊಂಡು ಉತ್ತಮ ಪ್ರದರ್ಶನ ತೋರಿದ್ದು, ಬೆಂಗಳೂರು ತಂಡಕ್ಕೆ ಎಲ್ಲಿಲ್ಲದ ಶಕ್ತಿ ಬಂದಂತಾಗಿದೆ.

''ಕೇರಳದಿಂದ ಬಂದಿರುವ ಅನೇಕ ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದು ಇತ್ತಂಡಗಳ ನಡುವಿನ ವೈರುತ್ವಕ್ಕೆ ಕಾರಣವಾಗಿದೆ. ಉತ್ತಮ ರೀತಿಯ ಪ್ರದರ್ಶನ ನೀಡುವುದು ನಮ್ಮ ಗುರಿಯಾಗಿದೆ. ನಾವು ಉತ್ತಮ ಪ್ರದರ್ಶನ ತೋರಿ ಈ ಅಭಿಮಾನಿಗಳು ಮತ್ತೆ ಮತ್ತೆ ಪಂದ್ಯ ನೋಡುವಂತಾಗಬೇಕು. ಅದೇ ನಮಗೆ ಮುಖ್ಯವಾದುದು,'' ಎಂದು ಪಾರ್ತುಲು ಹೇಳಿದ್ದಾರೆ.

ಜುವನನ್ ಅವರ ಮುಂದಾಳತ್ವದಲ್ಲಿರುವ ಡಿಫೆನ್ಸ್ ವಿಭಾಗ ಇನ್ನೂ ಉತ್ತಮ ಪ್ರದರ್ಶನ ನೀಡಿದೆ, ಆಡಿರುವ ಮೂರು ಪಂದ್ಯಗಳಲ್ಲಿ ನೀಡಿದ್ದು, ಕೇವಲ ಒಂದು ಗೋಲು, ಅದು ಕೂಡ ಪೆನಾಲ್ಟಿ ಮೂಲಕ. ರಾಹುಲ್ ಭೇಕೆ ಸಣ್ಣ ಪ್ರಮಾಣದ ಗಾಯದಿಂದ ಬಳಲುತ್ತಿರುವುದು ಕೋಚ್ ಗೆ ಚಿಂತೆ ಆವರಿಸುವಂತೆ ಮಾಡಿದೆ. ಈ ವಾರ ಒಮನ್ ವಿರುದ್ಧದ ಪಂದ್ಯದಲ್ಲಿ ಭೇಕೆ ಗಾಯಗೊಂಡಿದ್ದರು.

ಕೇರಳದ ಅಭಿಮಾನಿಗಳ ಬೆಂಬಲವನ್ನೇ ಹೆಚ್ಚು ಅವಲಂಬಿಸಿರುವ ಎಲ್ಕೋ ಶೆಟ್ಟೋರಿ ಪಡೆ ಉತ್ತಮ ಬ್ಯಾಕ್ ಲೈನ್ ಪಡೆಯನ್ನು ಹೊಂದಿದೆ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ಬ್ಲಾಸ್ಟರ್ಸ್ ಸತತ ಮೂರು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿತ್ತು. ಮಾರಿಯೋ ಆರ್ಕ್ಯೂಸ್, ರಫೆಲ್ ಮೆಸ್ಸಿ ಬೌಲಿ ಮತ್ತು ಜೈರೋ ರೋಡ್ರಿಗಸ್ ಗಾಯಗೊಂಡಿದ್ದು ಅವರ ಅನುಭವ ತಂಡಕ್ಕೆ ನೆರವಾಗಲಿಲ್ಲ. '' ನಮ್ಮ ಕ್ಲಬ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾವು ಉತ್ತಮ ರೀತಿಯಲ್ಲಿ ಜಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಆದರೆ ನಮ್ಮ ಎಲ್ಲ ಸೆಂಟರ್ ಬ್ಯಾಕ್ ಆಟಗಾರರು ಗಾಯಗೊಂಡಿದ್ದಾರೆ. ಮಿಡ್ ಫೀಲ್ಡ್ ಆಟಗಾರ ಮಾರಿಯೋ ಆರ್ಕ್ಯೂಸ್ ಕೂಡ ಗಾಯಗೊಂಡಿದ್ದಾರೆ. ನಾನು ಕೂಡ ವಾಸ್ತವಕ್ಕೆ ಹೆಚ್ಚು ಬೆಲೆ ನೀಡುವವ. ನಮ್ಮಲ್ಲಿ ಏನಿದೆಯೋ ಅದರಲ್ಲಿಯೇ ಹೋರಾಟ ಮಾಡುವೆವು,'' ಎಂದು ಶೆಟ್ಟೊರಿ ಹೇಳಿದ್ದಾರೆ.

Story first published: Saturday, November 23, 2019, 0:01 [IST]
Other articles published on Nov 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X