ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಗೋಲಿನ ಗುರಿ ಕಂಡ ಸ್ಟಾರ್ ಆಟಗಾರ ಜೆಜೆ

ಮುಂಬೈ, ಫೆಬ್ರವರಿ 12: ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ತಂಡಕ್ಕೆ ಎಲ್ಲವನ್ನೂ ಮರೆತುಬಿಡಬೇಕಾದ ಪರಿಸ್ಥಿತಿ. ಅದೇ ರೀತಿ ಸ್ಟಾರ್ ಫಾರ್ವರ್ಡ್ ಆಟಗಾರ ಜೆಜೆ ಲಾಲ್‌ಫೆಕ್ಲುವಾ ಕೂಡ ಮಿಂಚದಿರುವುದು ಬೇಸರದ ಸಂಗತಿ. ಚಾಂಪಿಯನ್ ತಂಡ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಲವಾಗಿದೆ. ಆದರೆ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ತಂಡದ ಆಟಗಾರರು ಸ್ಪಲ್ಪಮಟ್ಟಿಗೆ ಖುಷಿ ಪಡುವಂತಾಗಿದೆ.

ಆಡಿರುವ 15 ಪಂದ್ಯಗಳಲ್ಲಿ ಚೆನ್ನೈ ತಂಡಕ್ಕೆ ಸಿಕ್ಕಿರುವುದು ಇದು ಎರಡನೇ ಜಯ. ಆದರೆ ಈ ಜಯ ಸಿಕ್ಕಿರುವುದು ಆ ತಂಡ ಬದ್ಧ ಎದುರಾಳಿ ವಿರುದ್ಧ . ಕಳೆದ ಬಾರಿಯ ಫೈನಲ್‌ನಲ್ಲಿ ತಮ್ಮೆದುರೇ ಸೋಲುಂಡ ತಂಡದ ವಿರುದ್ಧ. ಎಲ್ಲಕ್ಕಿಂತ ಮುಖ್ಯವಾಗಿ ಇದುವರೆಗೂ ಗೋಲು ಗಳಿಸದ ಜೆಜೆ ಅಂತಿಮವಾಗಿ ಗೋಲು ಗಳಿಸಿ ಚೆನ್ನೈಯಿನ್‌ಗೆ ಮುನ್ನಡೆ ಕಲ್ಪಿಸಿದರು.

ಇದು ಉತ್ತಮ ಪಾಸ್‌ನಿಂದ ಜೆಜೆ ಗೋಲು ಗಳಿಸಿದ್ದಲ್ಲ, ಬದಲಾಗಿ ನಿಶು ಕುಮಾರ್ ಅವರ ನಿಯಂತ್ರಣ ತಪ್ಪಿದ ಕಾರಣ ಜೆಜೆಗೆ ಗೋಲು ಗಳಿಸಲು ಸುಲಭವಾಯಿತು. ಈ ಗೋಲನ್ನು ತಡೆಯುವಲ್ಲಿ ಬೆಂಗಳೂರು ತಂಡದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಇನ್ನೂ ಉತ್ತಮ ಪ್ರಯತ್ನ ನಡೆಸಿರುತ್ತಿದ್ದರೆ ಜೆಜೆಗೆ ಋತುವಿನ ಮೊದಲ ಗೋಲು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಚೆನ್ನೈಯಿನ್ ಹಾಗೂ ಜೆಜೆ ಪಾಲಿನ ಅದೃಷ್ಟದ ಗೋಲು ಎಂದೇ ಹೇಳಬಹುದು,

'ಬಹಳ ಸಮಯದಿಂದ ಗೋಲು ಗಳಿಸುವುದಕ್ಕಾಗಿ ಕಠಿಣ ಪ್ರಯತ್ನ ಮಾಡುತ್ತಿದ್ದೇವೆ, ಅಂತಿಮವಾಗಿ ಗೋಲೊಂದು ಗಳಿಸುವ ಅವಕಾಶ ಸಿಕ್ಕಿತು. ನಮ್ಮ ಅಭಿಮಾನಿಗಳು ನೀಡಿರುವ ಪ್ರೋತ್ಸಾಹಕ್ಕೆ ಚಿರಋಣಿಯಾಗಿದ್ದೇನೆ, ಪ್ರತಿ ದಿನವೂ ನಾವು ಜಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ತರಬೇತಿಯ ವೇಳೆಯೂ ನಾವು ಉತ್ತಮ ರೀತಿಯಲ್ಲಿ ಪಳಗಿರುತ್ತೇವೆ,' ಎಂದು ಇಂಡಿಯನ್ ಸೂಪರ್ ಲೀಗ್‌ನ ಎಲ್ಲಾ ಋತುವಿನಲ್ಲೂ ಗೋಲು ಗಳಿಸಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಚೆನ್ನೈನ ಸ್ಟಾರ್ ಆಟಗಾರ ಜೆಜೆ

ಚೆನ್ನೈನ ಸ್ಟಾರ್ ಆಟಗಾರ ಜೆಜೆ

ಜೆಜೆ ಅವರು ಗೋಲು ಗಳಿಸುವಲ್ಲಿ ವಿಫಲವಾಗಿರುವುದೂ, ಚೆನ್ನೈಯಿನ್ ತಂಡ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಕಾಕತಾಳೀಯ ಅಲ್ಲ. ಕಳೆದ ಋತುವಿನಲ್ಲಿ ಮಿಜೋ ಸ್ನಿಪರ್ ಖ್ಯಾತಿಯ ಜೆಜೆ ಚೆನ್ನೈ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಬಾರಿ ಆಡಿರುವ 20 ಪಂದ್ಯಗಳಲ್ಲಿ ಜೆಜೆ 9 ಗೋಲುಗಳನ್ನು ಗಳಿಸಿದ್ದರು.

ಜೆಜೆ ವೈಫಲ್ಯದಿಂದ ತಂಡಕ್ಕೆ ಹಿನ್ನಡೆ

ಜೆಜೆ ವೈಫಲ್ಯದಿಂದ ತಂಡಕ್ಕೆ ಹಿನ್ನಡೆ

ಈ ಬಾರಿ ಚೆನ್ನೈಯಿನ್ ತಂಡ ಕೇವಲ ಜೆಜೆ ವೈಫಲ್ಯದಿಂದಾಗಿ ಕಳಪೆ ಪ್ರದರ್ಶನ ತೋರಿದ್ದಲ್ಲ, ಬದಲಾಗಿ ಇಡೀ ತಂಡವೇ ಒಂದು ರೀತಿಯಲ್ಲಿ ವೈಲ್ಯದ ಹೆಜ್ಜೆ ಇಟ್ಟಿತು. ಆರಂಭದಲ್ಲೇ ಗೋಲು ಗಳಿಸುವಲ್ಲಿ ತಂಡ ವಿಲವಾದಾಗ ಅದು ತಂಡದ ಯಶಸ್ಸಿನ ಮೇಲೆ ಹಾಗೂ ಮನೋಬಲದ ಮೇಲೆ ಪರಿಣಾಮ ಬೀರುತ್ತದೆ. ತಂಡದ ಆಟಗಾರರು ಆಕ್ರಮಣಕಾರಿ ಆಟವಾಡುವಲ್ಲಿ ವಿಫಲವಾಗಿರುವುದೇ ತಂಡದ ಗೋಲು ಗಳಿಕೆಯ ಮೇಲೆ ಅಡ್ಡ ಪರಿಣಾಮ ಬೀರಿತು. ಸ್ಚ್ರೆಕರ್‌ಗಳು ಗೋಲು ಗಳಿಸುವಲ್ಲಿ ವಿಫಲವಾಗುವುದು ಸಾಮಾನ್ಯ. ಆದರೆ ಜೆಜೆ ಸುಮಾರು ಒಂದು ಪೂರ್ಣ ಋತುವಿನಲ್ಲಿ ಗೋಲಿಲ್ಲದೆ ಸಾಗಿದರು.

ಕಳೆದ ಋತುವಿನಲ್ಲಿ ಶೇ 27ರಷ್ಟು ಯಶ

ಕಳೆದ ಋತುವಿನಲ್ಲಿ ಶೇ 27ರಷ್ಟು ಯಶ

ಪ್ರತಿಯೊಂದು ಪಂದ್ಯವನ್ನೂ ಗೋಲಿಲ್ಲದೆ ಕೊನೆಗಾಣಿಸುವಾಗ ಆಟಗಾರನಲ್ಲಿರುವ ಆತ್ಮವಿಶ್ವಾಸಕ್ಕೆ ಅಡ್ಡಿಯಾಗುತ್ತದೆ. ಮಿಜೋರಾಮ್ ಮೂಲದ ಆಟಗಾರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿರುವ ಆಟಗಾರರೆನಿಸಿದ್ದಾರೆ, ಬೆಂಗಳೂರು ಪಂದ್ಯಕ್ಕೆ ಮುನ್ನ ಅವರು 22 ಗೋಲುಗಳನ್ನು ಗಳಿಸಿದ್ದರು. ಪಾಸನ್ನು ಗೋಲಾಗಿ ಪರಿವರ್ತಿಸಿದ ಸರಾಸರಿಯಲ್ಲಿ ಜೆಜೆ ಕಳೆದೆರಡು ಋತುಗಳಲ್ಲಿ ಶೇ. 27ರಷ್ಟು ಹೊಂದಿದ್ದರು,

ಜೆಜೆ ಈ ಬಾರಿ ಕೇವಲ 12ಪ್ರತಿಶತ ಯಶ

ಜೆಜೆ ಈ ಬಾರಿ ಕೇವಲ 12ಪ್ರತಿಶತ ಯಶ

ಆದರೆ ಈ ಬಾರಿ ಕೇವಲ 12ಪ್ರತಿಶತ. ಆದರೂ ಜೆಜೆ ಅವರಂಥ ಆಟಗಾರ ತಂಡದ ಮನೋಬಲವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣಕ್ಕಾಗಿ ಚೆನ್ನೈಯಿನ್ ತಂಡದಲ್ಲಿ ಅವರ ಸ್ಥಾನಕ್ಕೆ ಅಡ್ಡಿಯಾಗಲಿಲ್ಲ. 23ನೇ ಗೋಲು ಗಳಿಸಿರುವ ಜೆಜೆಗೆ ಮುಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಮನೋಬಲವನ್ನು ನೀಡಿದೆ. ಏಷ್ಯನ್ ಕಪ್‌ನಲ್ಲಿ ಥಾಯ್ಲೆಂಡ್ ವಿರುದ್ಧ ಗೋಲು ಗಳಿಸುವ ಮೂಲಕ ಜೆಜೆ ಮಿಂಚಿದ್ದರು.

Story first published: Wednesday, February 13, 2019, 14:38 [IST]
Other articles published on Feb 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X