ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮನೆಯಂಗಣದ ಹೊರಗಡೆ ಮೊದಲ ಜಯದ ನಿರೀಕ್ಷೆಯಲ್ಲಿ ಚೆನ್ನೈ

By Isl Media
ISL 2019: Chennaiyin tread tricky waters for first away win

ಗುವಾಹಟಿ, ಡಿಸೆಂಬರ್ 12: ಗುರುವಾರ ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ ತಂಡ ಚೆನ್ನೈಯಿನ್ ಎಫ್ ಸಿ ವಿರುದ್ಧ ಜಯದ ಲಯ ಕಂಡುಕೊಳ್ಳುವ ಗುರಿ ಹೊಂದಿದೆ.

ಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ

ಕಳೆದ ಮೂರು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿರುವ ಪರ್ವತ ಪ್ರದೇಶದ ತಂಡ ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಅಗ್ರ ಸ್ಥಾನದಲ್ಲಿರುವ ಎಟಿಕೆ ವಿರುದ್ಧ ಹೀನಾಯ ಸೋಲಾನಿಭವಿಸಿತ್ತು. ಬ್ಯಾಕ್ ನಲ್ಲಿ ನಾರ್ತ್ ಈಸ್ಟ್ ತಂಡ ಅನುಭವಿಸುತ್ತಿರುವ ಸಮಸ್ಯೆಯನ್ನು ರಾಯ್ ಕೃಷ್ಣ ಹಾಗೂ ಡೇವಿಡ್ ವಿಲಿಯಮ್ಸ್ ಅನಾವರಣಗೊಳಿಸಿದರು, ಇದು ಕೋಚ್ ರಾಬರ್ಟ್ ಜೇರ್ನಿ ಅವರಿಗೆ ಚಿಂತೆಯ ವಿಚಾರವಾಗಿದೆ. ಅವಧಿಯ ಪ್ರತಿಯೊಂದು ವಿಭಾಗದಲ್ಲೂ ನಾರ್ತ್ ಈಸ್ಟ್ ಗೋಲು ನೀಡಿತ್ತು.

ನಾಳೆಯ ಪಂದ್ಯಕ್ಕೆ ಜರ್ನಿ ಅವರು ಸ್ಟಾರ್ ಸ್ಟ್ರೈಕರ್ ಅಸ್ಯಾಮೋ ಗ್ಯಾನ್ ಅವರ ಸೇವೆಯಿಂದ ವಂಚಿತರಾಗಲಿದ್ದಾರೆ, ಇದರಿಂದಾಗಿ ಮ್ಯಾಕ್ಸಿಮಿಲ್ಲನೋ ಬರ್ರೆರೊ ಅವರು ಮಾರ್ಟಿನ್ ಚಾವೇಸ್ ಅವರೊಂದಿಗೆ ಜವಾಬ್ದಾರಿ ನಿಭಾಯಿಸಲಿದ್ದಾರೆ.

''ಗ್ಯಾನ್ ನಮ್ಮ ತಂಡಕ್ಕೆ ಅಗತ್ಯವಾಗಿ ಬೇಕಾಗಿರುವ ಆಟಗಾರ, ಆದರೆ ನಮ್ಮಲ್ಲಿ ಅನೇಕ ಆಟಗಾರರಿದ್ದಾರೆ, ಅವರು ನಂತರದ ಪಂದ್ಯ ಆಡುತ್ತಾರೆಂದು ನನಗೆ ಗೊತ್ತಿಲ್ಲ, ಆದರೆ, ನಮ್ಮಲ್ಲಿ ಬೇರೆ ಉತ್ತಮ ಆಟಗಾರರಿದ್ದಾರೆ,'' ಎಂದು ಜೇರ್ನಿ ಹೇಳಿದ್ದಾರೆ.

ISL 2019: Chennaiyin tread tricky waters for first away win

ಜೆಮ್ಶೆಡ್ಪುರ ಎಫ್ ಸಿ ವಿರುದ್ಧದ 1-1 ಡ್ರಾದ ಪಂದ್ಯದ ನಂತರ ಚೆನ್ನೈಯಿನ್ ತಂಡ ಕೇವಲ ಒಂದು ಬಾರಿ ತರಬೇತಿ ಮಾಡಿತ್ತು. ನೂತನ ಕೋಚ್ ಓವೆನ್ ಕೊಯ್ಲ್ ಅವರಿಗೆ ತಂಡದ ಆಟಗಾರರೊಂದಿಗೆ ತನ್ನ ಅನುಭವವನ್ನು ಸೂಕ್ತ ರೀತಿಯಲ್ಲಿ ಹಂಚಿಕೊಳ್ಳಲು ಅವಕಾಶ ಸಿಗಲಿಲ್ಲ. ಇದರಿಂದಾಗಿ ಜಾನ್ ಗ್ರೆಗೊರಿ ಅವರು ನೀಡಿದ ತರಬೇತಿಯೇ ಮತ್ತೊಂದು ಪಂದ್ಯದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

ಪಬ್‌ಜಿ ಅಪ್‌ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''ಪಬ್‌ಜಿ ಅಪ್‌ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''

ತಂಡಕ್ಕೆ ಎದುರಾಳಿ ತಂಡಕ್ಕೆ ಗೋಲು ಬಿಟ್ಟುಕೊಡುವುದು ಅಭ್ಯಾಸವಾಗಿಬಿಟ್ಟಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಇದು ಮುಂದುವರಿಯುತ್ತಿದೆ, ಮೊದಲು ಗೋಲು ನೀಡಿದಾಗಲೆಲ್ಲ ಚೆನ್ನೈಯಿನ್ ಎಫ್ ಸಿ ಸೋಲು ಅನುಭವಿಸುತ್ತಿತ್ತು, ಮನೀಶ್ ಸೈಗಾನಿ ಹಿಂದಿನ ಪಂದ್ಯದಲ್ಲಿ ಗಾಯಗೊಂಡಿದ್ದು ಅವರ ಸ್ಥಾನದಲ್ಲಿ ಜರ್ಮನ್ ಪ್ರೀತ್ ಸಿಂಗ್ ಆಡುವ ಸಾಧ್ಯತೆ ಇದೆ,ಆಡಿರುವ ಮೂರು ಪಂದ್ಯಗಳಲ್ಲಿ ನಾಲ್ಕು ಗೋಲು ಗಳಿಸಿರುವ ನೆರಿಜುಸ್ವಾಲ್ಸ್ಕಿಸ್ ಅವರು ಅದೇ ರೀತಿಯ ಪ್ರದರ್ಶನ ತೋರುವ ಭರವಸೆ ಮೂಡಿಸಿದ್ದಾರೆ.

ಕೊನೆಯ ಕ್ವಾರ್ಟರ್ ನಲ್ಲಿ ತಂಡ ತನ್ನ ನಿಯಂತ್ರಣವನ್ನು ಕಳೆದುಕೊಳ್ಳಬಾರದು ಎಂಬುದನ್ನು ಕೊಯ್ಲ್ ಅವರು ತಂಡಕ್ಕೆ ಮತ್ತೊಮ್ಮೆ ಮನದಟ್ಟು ಮಾಡಬೇಕಾಗಿದೆ. ಉತ್ತಮ ಆಕ್ರಮಣಕಾರಿ ಹಂತ ಇರುವಾಗ ಟಿ=ಉತ್ತಮ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ. ''ನಮಗೆ ಯಾರಬಗ್ಗೆಯೂ ಭಯ ಇಲ್ಲ,ನಾವು ಎಲ್ಲರ ಬಗ್ಗೆಯೂ ಗೌರವ ಹೊಂದಿರುತ್ತೇವೆ. ನಾವು ಉತ್ತಮ ರೀತಿಯಲ್ಲಿ ಆಡಿದರೆ ಪಂದ್ಯ ಗೆಲ್ಲಬಲ್ಲೆವು,'' ಎಂದು ವಿಗಾನ್ ನ ಮಾಜಿ ಮ್ಯಾನೇಜರ್ ಹೇಳಿದ್ದಾರೆ.

Story first published: Thursday, December 12, 2019, 17:09 [IST]
Other articles published on Dec 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X