ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ನಾರ್ತ್ ಈಸ್ಟ್ ಫಾರ್ವರ್ಡ್‌ನಲ್ಲಿ ಮಿಂಚಿನ ಜೋಡಿ!

By Isl Media
ISL 2019: Dynamic duo drives NorthEast forward

ಗುವಾಹಟಿ, ಮಾರ್ಚ್ 5: ಫುಟ್ಬಾಲ್ ಎಂಬುದು ತಂಡವಾಗಿ ಆಡುವ ಆಟ. ಕೆಲವೊಮ್ಮೆ ವೈಯಕ್ತಿಕ ಸಾಧನೆಗಳು ಇಲ್ಲಿ ಮುಖ್ಯವೆನಿಸುವುದಿಲ್ಲ. ಗೋಲಿನ ವಿಷಯ ಬಂದಾಗ ಯಾವ ಸ್ಟ್ರೈಕರ್ ಗೋಲು ಗಳಿಸುತ್ತಾರೋ ಅವರೇ ರೂವಾರಿ ಎನಿಸುತ್ತಾರೆ. ಆದರೆ ತಂಡದ ಯಶಸ್ಸಿನಲ್ಲಿ ಆ ಒಂಟಿ ಪ್ರಯತ್ನ ಮಾತ್ರ ಕಾರಣವಾಗಿರುವುದಿಲ್ಲ.

1
1052774

ಕಳೆದ ಬಾರಿ ಗೋವಾ ತಂಡ ಸೆಮಿಫೈನಲ್ ತಲುಪಲು ಫೆರಾನ್ ಕೊರೊಮಿನಾಸ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಮೆನ್ವೆಲ್ ಲಾನ್ಜೆರೋಟ್ ಅವರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಮೊದಲ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್‌ನ ಸೆಮಿಫೈನಲ್ ಹಂತ ತಲುಪಿದೆ. ಬಾರ್ಥಲೋಮ್ಯೋ ಒಗ್ಬಚೆ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿರುವುದಲ್ಲದೆ, ಅವರ ಯಶಸ್ಸಿನಲ್ಲಿ ಫೆಡ್ರೆಕೊ ಗಲ್ಲೆಗೋ ಅವರ ಪಾತ್ರ ಪ್ರಮುಖವಾಗಿತ್ತು.

ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಸಾಧನೆ ಸಾಲಿಗೆ ರವೀಂದ್ರ ಜಡೇಜಾ!ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಸಾಧನೆ ಸಾಲಿಗೆ ರವೀಂದ್ರ ಜಡೇಜಾ!

'ಬಾರ್ತಲೋಮ್ಯೋ ಒಗ್ಬಚೆ ಗೋಲು ಗಳಿಸುವವರೆಗೂ ನನಗೆ ಖುಷಿಯೇ. ನಮ್ಮ ತಂಡವನ್ನು ಇತರ ತಂಡಗಳಿಗೆ ಹೋಲಿಸಿದರೆ ನಮ್ಮ ತಂಡ ಒಗ್ಬಚೆ ಹಾಗೂ ಫೆಡರಿಕೋ ಅವರ ಮೇಲೆ ಹೆಚ್ಚು ಅವಲಂಬಿಸಿದೆ. ಅವರಿಬ್ಬರಿಗೂ ನನ್ನ ಕಡೆಯಿಂದ ಯಾವತ್ತೂ ಬೆಂಬಲ,' ಎಂದು ತಂಡದ ಕೋಚ್ ಎಲ್ಕೋ ಷೆಟೋರಿ ಹೇಳಿದ್ದಾರೆ.

ಗಲ್ಲೆಗೋ ಉತ್ತಮ ಪ್ರದರ್ಶನ

ಗಲ್ಲೆಗೋ ಉತ್ತಮ ಪ್ರದರ್ಶನ

ಈ ಬಾರಿಯ ಲೀಗ್ ಆರಂಭವಾದಾಗಿನಿಂದ ಒಗ್ಬಚೆ ಹಾಗೂ ಗಲ್ಲೆಗೋ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದ್ದು, ಮುಂದಿನ ಸೆಮಿಫೈನಲ್‌ನಲ್ಲೂ ಇದೇ ರೀತಿಯ ಪ್ರದರ್ಶನ ನೀಡುತ್ತಾರೆಂಬ ನಂಬಿಕೆ ಇದೆ. ಪಿಎಸ್‌ಜಿ ಹಾಗೂ ರಿಯಲ್ ಒಲ್ಲಾಡೊಲಿಡ್ ತಂಡದ ಸ್ಚ್ರೆ‘ಕರ್ ಈ ವರ್ಷಐಎಸ್‌ಎಲ್ ಸೇರಿಕೊಂಡರು. ಆಡಿರುವ 17 ಪಂದ್ಯಗಳಲ್ಲಿ ಒಗ್ಬಚೆ 12 ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದ ಎರಡನೇ ಆಟಗಾರರೆನಿಸಿದರು. ಫೆರಾನ್ ಕೊರೊಮಿನಾಸ್ (15) ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ.

ಒಗ್ಬಚೆ ಅಪಾಯಕಾರಿ ಆಟಗಾರ

ಒಗ್ಬಚೆ ಅಪಾಯಕಾರಿ ಆಟಗಾರ

ನಾರ್ತ್ ಈಸ್ಟ್ ತಂಡದಲ್ಲಿರುವ ಒಗ್ಬಚೆಯನ್ನು ಇತರ ತಂಡದ ಆಟಗಾರರು ಅಪಾಯಕಾರಿ ಆಟಗಾರ ಎಂದೇ ಪರಿಗಣಿಸಿದ್ದಾರೆ. ಅದೇ ರೀತಿ ಒಗ್ಬಚೆ ಅವರ ನಿಲುವಿಗೆ ತಕ್ಕಂತೆ ಆಡಿದ್ದಾರೆ. ಚೆಂಡನ್ನು ನಿಯಂತ್ರಿಸುವುದು ಹಾಗೂ ಅದರ ಹಿಂಬಾಲಿಸುವುದರಲ್ಲಿ ಒಗ್ಬಚೆ ಅವರದ್ದು ಮಿಂಚಿನ ಓಟ. ನೈಜೀರಿಯಾದ ಆಟಗಾರನಿ ಇವೆಲ್ಲ ಸಹಜವಾಗಿತ್ತು. ವಿವಿಧ ತಂಡಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಆಡಿರುವ ನೈಜಿರಿಯಾದ ಆಟಗಾರನಿಗೆ ಭಾರತದ ಫುಟ್ಬಾಲ್‌ಗೆ ಒಗ್ಗಿಕೊಳ್ಳಲು ಕಷ್ಟವೆನಿಸಲಿಲ್ಲ. ಸರಳವಾಗಿ ಆಡಿ ಅಷ್ಟೇ ಉತ್ತಮ ರೀತಿಯಲ್ಲಿ ಗೋಲು ಗಳಿಸಿದರರು.

ಹೇಳುವಂಥ ಸ್ಟಾರ್ ಆಟಗಾರರಿಲ್ಲ

ಹೇಳುವಂಥ ಸ್ಟಾರ್ ಆಟಗಾರರಿಲ್ಲ

ನಾರ್ತ್ ಈಸ್ಟ್ ಯುನೈಟೆಡ್‌ನಲ್ಲಿ ಹೇಳುವಂಥ ಸ್ಟಾರ್ ಆಟಗಾರರಿಲ್ಲ. ಇದರಿಂದಾಗಿ ಒಗ್ಬಚೆ ಒಂದು ರೀತಿಯಲ್ಲಿ ಒಂಟಿ ಸೇನೆ ಇದ್ದಂತೆ. ಇನ್ನು ಕೆಲವು ಪಂದ್ಯಗಳಿಗೆ ಕ್ಲಬ್ ಈ ರೀತಿಯ ಸಂಘಟಿತ ಆಟವನ್ನು ನಿರೀಕ್ಷಿಸುತ್ತಿದೆ. ಇದಕ್ಕೆ ಗಲ್ಲೆಗೋ ಉತ್ತಮ ರೀತಿಯಲ್ಲಿ ಪ್ರೋತ್ಸಾಹನೀಡಿದ್ದಾರೆ. ಎದುರಾಳಿ ಡಿಫೆನ್ಸ್ ವಿಭಾಗವನ್ನು ಚದುರಿಸುವಲ್ಲಿ ಗಲ್ಲೆಗೋ ನಿಸ್ಸೀಮರು. ಅವರ ಅದ್ಭತ ಪಾಸ್‌ಗಳು ಎದುರಾಳಿಯ ಡಿಫೆನ್ಸ್ ಮುರಿಯುವಲ್ಲಿ ನೆರವಾಗುತ್ತಿತ್ತು.

ಗಲ್ಲೆಗೋ ಅವರ ರಣತಂತ್ರ

ಗಲ್ಲೆಗೋ ಅವರ ರಣತಂತ್ರ

ಒಗ್ಬಚೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದ ತಂಡಕ್ಕೆ ಗಲ್ಲೆಗೋ ಅವರ ರಣತಂತ್ರವನ್ನು ತಿಳಿದುಕೊಳ್ಳುವಲ್ಲಿ ವಿಲವಾಗುತ್ತದೆ. ಆಗ ನಾರ್ತ್ ಈಸ್ಟ್‌ಗೆ ಗೋಲು ಗಳಿಸಲು ಸುಲಭದಾರಿ ಸಿಗುತ್ತದೆ. ಗಲ್ಲೆಗೋ ಐದು ಗೋಲು ಗಳಿಸಿದ್ದು, ನಾಲ್ಕು ಗೋಲುಗಳಿಕೆಯಲ್ಲಿ ನೆರವಾಗಿದ್ದಾರೆ. ಈ ಇಬ್ಬರೂ ಆಟಗಾರರು ಇದುವರೆಗೂ ನಾರ್ತ್ ಈಸ್ಟ್‌ಗೆ 22 ಗೋಲುಗಳ ಕೊಡುಗೆಯನ್ನು ನೀಡಿದ್ದಾರೆ. ಮಾರ್ಚ್ 7ರಂದು ನಡೆಯಲಿರುವ ಸೆಮಿೈನಲ್ ಪಂದ್ಯದಲ್ಲಿ ಎಲ್ಕೋ ಷೆಟೋರಿ ಪಡೆ ಬೆಂಗಳೂರು ತಂಡದ ವಿರುದ್ಧ ಸೆಣಸಲಿದೆ.

Story first published: Tuesday, March 5, 2019, 20:06 [IST]
Other articles published on Mar 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X