ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಗೋಲ್ಡನ್ ಗ್ಲೋವ್ ರೇಸ್‌ನಲ್ಲಿ ಗುರ್‌ಪ್ರೀತ್, ಅರ್ಮಿಂದರ್

By Isl Media
ISL 2019: Gurpreet and Amarinder are the claimants of Golden Glove

ಮುಂಬೈ, ಫೆಬ್ರವರಿ 26: ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೋಲ್ಡನ್ ಗ್ಲೋವ್ ಪ್ರಶಸ್ತಿ ಗೆಲ್ಲುವುದಕ್ಕಾಗಿ ಗುರ್‌ಪ್ರೀತ್ ಸಿಂಗ್ ಸಂಧೂ ಹಾಗೂ ಅರ್ಮಿಂದರ್ ಸಿಂಗ್ ಅವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಟಿ20 ದಾಖಲೆಗಾಗಿ ಧೋನಿ, ರೈನಾ ಸಾಲಲ್ಲಿ ಸೇರಲಿರುವ ರೋಹಿತ್ ಶರ್ಮಾಟಿ20 ದಾಖಲೆಗಾಗಿ ಧೋನಿ, ರೈನಾ ಸಾಲಲ್ಲಿ ಸೇರಲಿರುವ ರೋಹಿತ್ ಶರ್ಮಾ

ಹೆಚ್ಚಿನವರ ಗಮನ ಅತಿ ಹೆಚ್ಚು ಗೋಲು ಗಳಿಸಿರುವ ಫೆರಾನ್ ಕೊರೊಮಿನಾಸ್ (ಎಫ್ ಸಿ ಗೋವಾ), ಬಾರ್ಥಲೋಮ್ಯೊ ಒಗ್ಬಚೆ (ನಾರ್ತ್ ಈಸ್ಟ್ ಯುನೈಟೆಡ್) ಹಾಗೂ ಇತ್ತೀಚಿಗೆ ಹ್ಯಾಟ್ರಿಕ್ ಗೋಲು ಗಳಿಸಿರುವ ಮೊಡೌ ಸೌಗೌ (ಮುಂಬೈ ಸಿಟಿ ಎಫ್ ಸಿ) ಅವರ ಕಡೆ ಇದ್ದರೂ, ಈ ಇಬ್ಬರು ಗೋಲ್‌ಕೀಪರ್‌ಗಳು ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

'ಕುಸ್ತಿಗೆ ಬೈ, ಮಾರ್ಷಲ್ ಆರ್ಟ್ಸ್‌ಗೆ ಜೈ' ಎಂದ ರಸ್ಲರ್ ರೀತು ಫೋಗಟ್!'ಕುಸ್ತಿಗೆ ಬೈ, ಮಾರ್ಷಲ್ ಆರ್ಟ್ಸ್‌ಗೆ ಜೈ' ಎಂದ ರಸ್ಲರ್ ರೀತು ಫೋಗಟ್!

ಸದ್ಯದ ಸ್ಥಿತಿಯಲ್ಲಿ ಬೆಂಗಳೂರು ತಂಡದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಮುನ್ನಡೆ ಕಂಡಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಗ್ರ ಮೂರು ಸ್ಥಾನದಲ್ಲಿರುವ ಗೋಲ್‌ಕೀಪರ್‌ಗಳಲ್ಲಿ ಬೆಂಗಳೂರು ಪರ ಪ್ರತಿಯೊಂದು ನಿಮಿಷವನ್ನೂ ಆಡಿದ್ದಾರೆ. ಅವರು ಎಲ್ಲ 1530 ನಿಮಿಷಗಳನ್ನು ಆಡಿದ್ದಾರರೆ. ಈ ಋತುವಿನಲ್ಲಿ ಎಟಿಕೆ ಗೋಲ್‌ಕೀಪರ್ ಅರಿಂದಮ್ ಭಟ್ಟಾಚಾರ್ಯ ಮಾತ್ರ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ಗುರ್‌ಪ್ರೀತ್ ಮುಂಬೈಯ ಗೋಲ್‌ಕೀಪರ್ ಅರ್ಮಿಂದರ್ ಸಿಂಗ್ ಅವರೊಂದಿಗೆ ಸ್ಪರ್ಧೆಯಲ್ಲಿದ್ದಾರೆ.

ಅರ್ಮಿಂದರದ್ದು ಸುರಕ್ಷಿತ ಕೈ

ಅರ್ಮಿಂದರದ್ದು ಸುರಕ್ಷಿತ ಕೈ

ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅರ್ಮಿಂದರ್ ಅವರದ್ದು ಅತ್ಯಂತ ಸುರಕ್ಷಿತ ಕೈ ಎಂದೆನಿಸಿದೆ. ಗೋಲೊಂದಕ್ಕೆ 89.65 ಸರಾಸರಿ ನಿಮಿಷಯದಲ್ಲಿ ಅವರು ಕೇವಲ 16 ಗೋಲುಗಳನ್ನು ನೀಡಿದ್ದಾರೆ. 25 ವರ್ಷದ ಗೋಲ್‌ಕೀಪರ್ ಆರು ಕ್ಲೀನ್ ಶೀಟ್ ಸಾಧನೆಯನ್ನು ಮಾಡಿರುವುದು ಅಚ್ಚರಿಯೇನಲ್ಲ. ಪಂಜಾಬ್ ಮೂಲದ ಈ ಕೀಪರ್ ಅವರ ಸಾಧನೆಯಿಂದಾಗಿ ಮುಂಬೈ ತಂಡ ಪ್ಲೇ ಆಫ್ ಹಂತ ತಲುಪಿತು. ಈ ಗೋಲ್‌ಕೀಪರ್ ಅವರ ಮೇಲೆ ವಿನಿಯೋಗಿಸಿರುವ ಪ್ರತಿಯೊಂದು ಪೈಸೆಗೂ ಬೆಲೆ ತೆತ್ತಿದ್ದಾರೆ.

ಅತ್ಯಂತ ದುಬಾರಿ ಗೋಲ್‌ಕೀಪರ್

ಅತ್ಯಂತ ದುಬಾರಿ ಗೋಲ್‌ಕೀಪರ್

ಗುರ್‌ಪ್ರೀತ್ ಇಂಡಿಯನ್ ಸೂಪರ್ ಲೀಗ್‌ನಲ್ಲೇ ಅತ್ಯಂತ ದುಬಾರಿ ಗೋಲ್‌ಕೀಪರ್, ಯೂರೋಪ್‌ನಲ್ಲಿ ಪಳಗಿರುವ ಗೋಲ್‌ಕೀಪರ್ ತಮ್ಮ ಅನುಭವವನ್ನು ಇಂಡಿಯನ್ ಸೂಪರ್ ಲೀಗ್‌ನಲ್ಲಿ ವಿನಿಯೋಗಿಸಿದ್ದಾರೆ. ಗೋಲ್‌ಕೀಪಿಂಗ್‌ನಲ್ಲಿ ಗುರ್‌ಪ್ರೀತ್ ಸಿಂಗ್ ಬೆಂಗಳೂರು ತಂಡದ ಡಿಫೆನ್ಸ್ ವಿಭಾಗ ಅತ್ಯಂತ ಆತ್ಮವಿಶ್ವಾಸದಲ್ಲಿ ಆಡುತ್ತದೆ.

ಗುರ್‌ಪ್ರೀತ್ ವೈಫಲ್ಯ

ಗುರ್‌ಪ್ರೀತ್ ವೈಫಲ್ಯ

ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಮೂರು ಗೋಲುಗಳನ್ನು ನೀಡಿರುವುದು ಗುರ್‌ಪ್ರೀತ್ ಸಾಧನೆಯಲ್ಲಿ ಕಂಡ ಚಿಕ್ಕ ವೈಫಲ್ಯ. ಐದು ಕ್ಲೀನ್ ಶೀಟ್ ಸಾಧನೆ ಮಾಡಿರುವ ಗುರ್‌ಪ್ರೀತ್ ಈ ಋತುವಿನಲ್ಲಿ 55 ಬಾರಿ ಗೋಲಾಗುವ ಚೆಂಡನ್ನು ತಡೆದು ತಂಡಕ್ಕೆ ಗೋಡೆಯಾಗಿದ್ದರು. ಹಲವಾರು ಬಾರಿ ಅವರು ಒಬ್ಬಂಟಿಯಾಗಿ ತಂಡಕ್ಕೆ ಅಮೂಲ್ಯ ಅಂಕಗಳನ್ನು ನೀಡಿದ್ದಾರೆ. ಬೆಂಗಳೂರು ತಂಡ ಉತ್ತಮವಾಗಿ ಆಡದಿರುವಾಗ ಗುರ್‌ಪ್ರೀತ್ ಅವರ ಸಾಧನೆ ತಂಡಕ್ಕೆ ಯಶಸ್ಸು ತಂದಿದೆ.

3ನೇ ಸ್ಥಾನದಲ್ಲಿ ಪವನ್ ಕುಮಾರ್

3ನೇ ಸ್ಥಾನದಲ್ಲಿ ಪವನ್ ಕುಮಾರ್

ಇಂಡಿಯನ್ ಸೂಪರ್ ಲೀಗ್ ಅಂಕಿ ಅಂಶಗಳ ಪ್ರಕಾರ ಪ್ರತಿ 90 ನಿಮಿಷಗಳಿಗೊಮ್ಮೆ ಗುರ್‌ಪ್ರೀತ್ ಗೋಲು ನೀಡಿದ್ದಾರೆ. ಅಗೇ ರೀತಿ ಅರ್ಮಿಂದರ್ ಪ್ರತಿ 89.56 ನಿಮಿಷಗಳಿಗೊಮ್ಮೆ ಗೋಲು ನೀಡಿದ್ದಾರೆ. ಮೂರನೇ ಸ್ಥಾನದಲ್ಲಿರುವವರು ಪವನ್ ಕುಮಾರ್. ಅವರ ಮಿಂಚಿನ ಗೋಲ್‌ಕೀಪಿಂಗ್‌ನಿಂದಾಗಿ ಎಲ್ಕೋ ಷೆಟೋರಿ ಅವರ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಬಾರಿ ಪ್ಲೇ ಆಫ್ ತಲುಪಿತು. 52 ಬಾರಿ ಗೋಲುಗಳನ್ನು ತಡೆದು, ಐದು ಕ್ಲೀನ್ ಶೀಟ್ ಸಾಧನೆ ಮಾಡಿರುವ ಪವನ್ ಕುಮಾರ್ ತಾನೊಬ್ಬ ಉತ್ತಮ ಗೋಲ್‌ಕೀಪರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

Story first published: Tuesday, February 26, 2019, 17:43 [IST]
Other articles published on Feb 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X