ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಹೈದರಾಬಾದ್ ಗೆ ಬಲಿಷ್ಠ ಬೆಂಗಳೂರು ಸವಾಲು

By Isl Media
ISL 2019: Hyderabad face stern Bengaluru test

ಹೈದರಾಬಾದ್, ನವೆಂಬರ್ 29: ಜಿಎಂಸಿ ಬಾಲಯೋಗಿ ಅಥ್ಲೆಟಿಕ್ಸ್ ಅಂಗಣದಲ್ಲಿ ಶುಕ್ರವಾರ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಆಡಲಿರುವ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಸತತ ಮೂರನೇ ಜಯದೊಂದಿಗೆ ಮೂರು ಅಂಕಗಳನ್ನು ಗಳಿಸುವ ಗುರಿ ಹೊಂದಿದೆ.

ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್‌ಗೆ ಕಳವಳ ವ್ಯಕ್ತಪಡಿಸಿದ ಕಪಿಲ್‌ ದೇವ್

ಮೊದಲ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದ ಕಾರ್ಲಸ್ ಕ್ವಾಡ್ರಟ್ ಪಡೆ ಚೆನ್ನೈಯಿನ್ ಎಫ್ ಸಿ ವಿರುದ್ಧ 3-0 ಹಾಗೂ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-0 ಅಂತರದಲ್ಲಿ ಗೆದ್ದು ತನ್ನ ಪ್ರಶಸ್ತಿಯನ್ನು ಕಾಯ್ದುಕೊಳ್ಳುವತ್ತ ಹೆಜ್ಜೆ ಹಾಕಿತ್ತು.

ಮುಂದಿನ ಹೆಜ್ಜಿ ಸಂಕಷ್ಟದಲ್ಲಿರುವ ಹೈದರಾಬಾದ್ ಮನೆಯಂಗಣದಲ್ಲಿ ಜಯ ಗಳಿಸುವುದು. ಆದರೆ ಈ ತಂಡದ ವಿರುದ್ಧ ಜಯ ಗಳಿಸುವುದು ಅಷ್ಟು ಸುಲಭ ಅಲ್ಲ ಎಂಬುದು ಬೆಂಗಳೂರು ಕೋಚ್ ಗೆ ಚೆನ್ನಾಗಿ ಗೊತ್ತಿದೆ. ಫಿಲ್ ಬ್ರೌನ್ ಪಡೆ ಆಡಿರುವ ಐದು ಪಂದ್ಯಗಳಲ್ಲಿ ಒಂದು ಜಯ ಹಾಗೂ ನಾಲ್ಕು ಸೋಲು ಅನುಭವಿಸಿ ಮೂರು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್‌ಗೆ ದಂಡ!ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್ ಸೈಫ್ ಹಸನ್‌ಗೆ ದಂಡ!

''ಹೈದರಾಬಾದ್ ಗೆ ಅಂಕ ಬೇಕಾಗಿದೆ. ಆದ್ದರಿಂದ ನಾಳೆಯ ಪಂದ್ಯ ನಮಗೆ ಕಠಿಣ ಎನಿಸಲಿದೆ. ಅವರು ಸೋತಿರುವ ರೀತಿಯನ್ನು ಕಂಡಾಗ ಅವರಿಗೆ ಈಗ ಜಯದ ಅಗತ್ಯ ಇದೆ. ಅದಕ್ಕಾಗಿ ಅವರು ಎಲ್ಲ ರೀತಿಯಲ್ಲಿ ಸಜ್ಜಾಗಿರುತ್ತಾರೆ. ಪಂದ್ಯದ ಮೇಲೆ ಹೆಚ್ಚಿನ ನಿಗಾ ವಹಿಸಿರುತ್ತಾರೆ. ಮತ್ತು ಹಿಂದಿಗಿಂತ ಹೆಚ್ಚು ಸಜ್ಜಾಗಿ ಅಂಗಣಕ್ಕಿಳಿಯಲಿದ್ದಾರೆ,'' ಎಂದು ಕ್ವಾಡ್ರಟ್ ಪಂದ್ಯಕ್ಕೆ ಮುನ್ನ ಹೇಳಿದ್ದಾರೆ.

ಫಿಲ್ ಬ್ರೌನ್ ಅವರು ಒತ್ತಡದ ಅರಿವು ಇರುವುದನ್ನು ಒಪ್ಪಿದೊಂದಿದ್ದರೆ, ಆದರೆ ತಂಡದ ಪ್ರದರ್ಶನದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.

''ಲೀಗ್ ಪಟ್ಟಿಯಲ್ಲಿ ನಾವು ಎಲ್ಲಿ ಇದ್ದೆವೋ ಅಲ್ಲಿರುವ ತಂಡ ನಮ್ಮದಲ್ಲ, ನಾವು ಕಠಿಣ ಶ್ರಮವನ್ನು ಮುಂದುವರಿಸಿ, ಪ್ರಾಮಾಣಿಕ ಪ್ರದರ್ಶನವನ್ನು ತೋರಿದರೆ ಪರಿಸ್ಥಿತಿ ಬದಲಾಗಬಹುದು. ನಾವು ಹತ್ತನೇ ಸ್ಥಾನದಲ್ಲಿ ಇರುವುದರಿಂದ ಒತ್ತಡವನ್ನು ಅರ್ಥೈಸಿಕೊಳ್ಳಬಲ್ಲೆವು. ಕ್ಲಬ್ ಅನ್ನು ಪ್ರತಿನಿಧಿಸುತ್ತಿರುವ ಹುಡುಗರು 100% ರಷ್ಟು ಶ್ರಮ ಹಾಕಿದ್ದಾರೆ,'' ಎಂದು ಬ್ರೌನ್ ಹೇಳಿದ್ದಾರೆ.

ISL 2019: Hyderabad face stern Bengaluru test

ಬ್ಲೂ ತಂಡದ ವಿರುದ್ಧ ಆಡುವುದೆಂದರೆ ಹೈದರಾಬಾದ್ ಪಾಲಿಗೆ ಕಠಿಣ ಸವಾಲು. ಎರಡೂ ತಂಡಗಳ ಡಿಫೆನ್ಸ್ ವಿಭಾಗದ ದಾಖಲೆಯನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಅಜೇಯ ಬೆಂಗಳೂರು ತಂಡ ಇದುವರೆಗೂ ಎದುರಾಳಿಗೆ ನೀಡಿದ್ದು ಕೇವಲ ಒಂದು ಗೋಲು. ಅದು ಕೂಡ ಫೀಲ್ಡ್ ಗೋಲ್ ಆಗಿರಲಿಲ್ಲ. ಆರನೇ ಆವೃತ್ತಿಯ ಇದುವರೆಗೂ ಆಡಿರುವ ಪಂದ್ಯಗಳಲ್ಲಿ ಅತಿಹೆಚ್ಹು ಕ್ಲೀನ್ ಶೀಟ್ ಸಾಧನೆ ಬೆಂಗಳೂರು ಹೆಸರಿನಲ್ಲಿರುವುದು ಗಮನಾರ್ಹ.

ಬ್ರೌನ್ ಪಡೆಗೆ ಕ್ಲೀನ್ ಶೀಟ್ ಶಾಧನೆ ಮಾಡದಿರುವುದು ಒಂದೆಡೆಯಾದರೆ, ಎದುರಾಳಿ ತಂಡಕ್ಕೆ ಐದು ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಲು ಅನುವು ಮಾಡಿಕೊಟ್ಟಿದೆ.

ರಿಷಬ್ ಪಂತ್, ಸಂಜು ಸ್ಯಾಮ್ಸನ್ ಪ್ರದರ್ಶನದ ಮೇಲೆ ಎಂಎಸ್ ಧೋನಿ ಕಣ್ಣು!?ರಿಷಬ್ ಪಂತ್, ಸಂಜು ಸ್ಯಾಮ್ಸನ್ ಪ್ರದರ್ಶನದ ಮೇಲೆ ಎಂಎಸ್ ಧೋನಿ ಕಣ್ಣು!?

ತಾನು ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿರುವ ಬೆಂಗಳೂರಿನ ಸ್ಟ್ರೈಕರ್ ದಿಮಾಸ್ ಡೆಲ್ಗಡೊ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಎರಡು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ. ಈ ಬಾರಿ ಲೆಫ್ಟ್ ವಿಂಗ್ ನಲ್ಲಿ ಆಡಲು ಆರಂಭಿಸಿದ ನಾಯಕ ಸುನಿಲ್ ಛೆಟ್ರಿ, ನಂತರದ ಎರಡು ಪಂದ್ಯಗಳಲ್ಲಿ ಎರಡು ಗೋಲು ಗಳಿಸಿ ಜತೆಯಲ್ಲಿ ಸೆಂಟರ್ ನಲ್ಲಿ ಮ್ಯಾನುಯೆಲ್ ಓನೂ ಅವರಿಗೆ ನೆರವಾಗಿದ್ದಾರೆ.

''ನೀವು ದೇಶದಲ್ಲೇ ಉತ್ತಮ ಸ್ಟ್ರೈಕರ್ ಎನಿಸಿರುವಾಗ ತಂಡಕ್ಕೆ ಅಪಾರ ಪ್ರಮಾಣದಲ್ಲಿ ನೆರವಾಗಬೇಕಾಗುತ್ತೆ. ಏಕೆಂದರೆ ತಂಡ ನಿಮ್ಮನ್ನೇ ಹೆಚ್ಚು ಅವಲಂಬಿಸಿರುತ್ತದೆ. ಛೆಟ್ರಿ ಈಗಾಗಲೇ ಎರಡು ಬಾರಿ ಗೋಲು ಗಳಿಸಿರುತ್ತಾರೆ. ಯಾವಾಗಲೂ ಅವರು ಉತ್ತಮ ಸ್ಥಿತಿಯನ್ನು ಕಾಯ್ದುಕೊಳ್ಳುತ್ತಾರೆ. ಅವರ ಪ್ರದರ್ಶನದ ಬಗ್ಗೆ ತೃಪ್ತಿ ಇದೆ,'' ಎಂದು ಬೆಂಗಳೂರು ಕೋಚ್ ಹೇಳಿದ್ದಾರೆ.

ಈ ಬಾರಿ ಹೈದರಾಬಾದ್ ಮುಕ್ತ ಆಟದಲ್ಲಿ ಗಳಿಸಿರುವುದು ಕೇವಲ ಒಂದು ಗೋಲು. ತಂಡ ಹೆಚ್ಚಾಗಿ ಮರ್ಸಿಲಿನೊ ಅವರನ್ನು ಆಧರಿಸಿದೆ. ಹೆಚ್ಚು ಗೋಲುಗಳನ್ನು ಅವರಿಂದ ನಿರೀಕ್ಷಿಸುತ್ತಿದೆ. ಬೊಬೊ, ಮಾರ್ಕೊ ಸ್ಟಾಂಕೋವಿಕ್ ಮತ್ತು ರಾಬಿನ್ ಸಿಂಗ್ ತಂಡಕ್ಕೆ ಜಯ ತಂದುಕೊಡಲು ಉತ್ಸುಕರಾಗಿದ್ದಾರೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆದ್ದ ನಂತರ ತಂಡ ಜಯದ ಹಾದಿಯನ್ನು ಮರೆತಿದೆ. ಪಟ್ಟಿಯಲ್ಲಿ ಬದಲಾವಣೆ ಆಗಬೇಕಾದರೆ ತಂಡಕ್ಕೆ ಜಯದ ಅಗತ್ಯವಿದೆ. ಬ್ರೌನ್ ಆ ನಿರೀಕ್ಷೆಯಲ್ಲಿ ಇದ್ದಾರೆ.

''ಬೆಂಗಳೂರು ತಂಡದ ಬಗ್ಗೆ ನಮಗೆ ಅಪಾರವಾದ ಗೌರವ ಇದೆ. ಅವರು ಏನು ಮಾಡಬಹುದು ಎಂಬುದನ್ನು ಕಳೆದ ಋತುವಿನಲ್ಲಿ ತೋರಿಸಿದ್ದಾರೆ. ಬೆಂಗಳೂರು ತಂಡದ ಸ್ಥಿರತೆ ಅದ್ಭುತವಾದುದು. ಅದೇ ಶಕ್ತಿಯಲ್ಲಿ ಅವರು ಈ ಬಾರಿಯೂ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಆದರೆ ನಮ್ಮಿಂದ ಅದು ಸಾಧ್ಯವಾಗಲಿಲ್ಲ. ನಾವು ಆ ರೀತಿಯ ಲಯ ಕಂಡುಕೊಳ್ಳಬೇಕಾಗಿದೆ,'' ಎಂದು ಬ್ರೌನ್ ಹೇಳಿದ್ದಾರೆ.

Story first published: Thursday, November 28, 2019, 23:49 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X