ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್, Live: ಅಗ್ರ ಸ್ಥಾನ ತಲುಪಲು ಜೆಮ್ಶೆಡ್ಪುರ, ನಾರ್ತ್ ಈಸ್ಟ್ ಸೆಣಸು

By Isl Media
ISL 2019: Jamshedpur, NorthEast eye top spot

ಜೆಮ್ಶೆಡ್ಪುರ, ಡಿಸೆಂಬರ್ 2: ಇಲ್ಲಿನ ಜೆಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಸೋಮವಾರ (ಡಿಸೆಂಬರ್ 2) ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಜೆಮ್ಶೆಡ್ಪುರ ಎಫ್‌ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ತಂಡಗಳು ಅಗ್ರ ಸ್ಥಾನ ತಲಪುವುದಕ್ಕಾಗಿ ಹೋರಾಟ ನಡೆಸಲಿವೆ.

ಪಾಕ್-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾಪಾಕ್-ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ

ಐದು ಪಂದ್ಯಗಳನ್ನಾಡಿರುವ ಜೆಮ್ಶೆಡ್ಪುರ ಹತ್ತು ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನಾರ್ತ್ ಈಸ್ಟ್ ಒಂಬತ್ತು ಅಂಕಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಸೋಮವಾರ ಗೆಲ್ಲುವ ಯಾವುದೇ ತಂಡವು ಅಂಕ ಪಟ್ಟಿಯ ಉತ್ತುಂಗಕ್ಕೇರಲಿದೆ. ಎಲ್ಲ ವಿಭಾಗಗಳಲ್ಲೂ ಉತ್ತಮ ಗುಣಮಟ್ಟವನ್ನು ಹೊಂದಿರುವ ಇತ್ತಂಡಗಳ ನಡುವಿನ ಹೋರಾಟ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಸಹಜ.

ಐಎಸ್‌ಎಲ್, ಜೇಮ್ಶೆಡ್ಪುರ vs ನಾರ್ತ್ ಈಸ್ಟ್‌ ಯುನೈಟೆಡ್, Live ಸ್ಕೋರ್‌ಕಾರ್ಡ್

1
2026454

ಜೆಮ್ಶೆಡ್ಪುರ ತಂಡ ಮನೆಯಂಗದಲ್ಲಿ ಇದುವರೆಗೂ ಸೋತಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಜಯ ಹಾಗೂ ಒಂದು ಡ್ರಾ ಕಂಡಿತ್ತು. ಎಟಿಕೆ ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಸೋತಿತ್ತು. ಆದರೆ ಅಂಟೋನಿಯೋ ಅರಿಯೊಂಡೋ ಪಡೆ ಎಫ್ ಸಿ ಗೋವಾ ವಿರುದ್ಧ ನಡೆದ ಪಂದ್ಯದಲ್ಲಿ ಜಯ ಸಾಧಿಸಿ ತನ್ನ ಸಾಮರ್ಥ್ಯ ಏನೆಂಬುದನ್ನು ಪ್ರಕಟಿಸಿತ್ತು.

ISL 2019: Jamshedpur, NorthEast eye top spot

ಈ ಋತುವಿನಲ್ಲಿ ಇದುವರೆಗೂ ಸೋಲು ಕಾಣದ ಎರಡು ತಂಡಗಳಲ್ಲಿ ನಾರ್ತ್ ಈಸ್ಟ್ ಕೂಡ ಒಂದು. ಆದರೆ ಪರ್ವತ ಪ್ರದೇಶದ ತಂಡ ಇದುವರೆಗೂ ಸತತ ಎರಡು ಪಂದ್ಯಗಳಲ್ಲಿ ಗೆದ್ದಿರಲಿಲ್ಲ. ಮೂರು ಪಂದ್ಯಗಳಲ್ಲಿ ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಜಯ ಕಂಡಿರುವ ರಾಬರ್ಟ್ ಜರ್ನಿ ಪಡೆ ಸತತ ಜಯದ ಗುರಿ ಹೊಂದಿದೆ.

ಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳುಮನೀಶ್ ಪಾಂಡೆಗೆ ಮಡದಿಯಾದ ಮಂಗಳೂರಿನ ಮದಿಮಾಲ್: ಚಿತ್ರಗಳು

''ದಾಳಿ ಹಾಗೂ ರಕ್ಷಣಾತ್ಮಕ ಆಟದಲ್ಲಿ ಹೊಂದಾಣಿಕೆ ಹೊಂದಿರುವ ಜೆಮ್ಶೆಡ್ಪುರ ಉತ್ತಮ ತಂಡವೆನಿಸಿದೆ. ಭಾರತದಲ್ಲೇ ಬಲಿಷ್ಠ ತಂಡವಾಗಿದೆ. ಇದು ನಮ್ಮ ಪಾಲಿಗೆ ಕಠಿಣ ತಂಡ, ಈ ಪಂದ್ಯಕ್ಕಾಗಿ ನಾವು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದೇವೆ. ಇಲ್ಲಿ ನಾವು ಜಯ ಗಳಿಸಲಿದ್ದೇವೆ,'' ಎಂದು ಜರ್ನಿ ಹೇಳಿದ್ದಾರೆ.

ಎರಡೂ ತಂಡದಲ್ಲಿ ಉತ್ತಮ ಪ್ರದರ್ಶನ ತೋರಬಲ್ಲ ಸ್ತ್ರೀಯಾಕರ್ ಗಳಿದ್ದಾರೆ. ಸ್ಪೇನ್ ನ ಫಾರ್ವಾರ್ಡ್ ಆಟಗಾರ ಸೆರ್ಗಿಯೋ ಕ್ಯಾಸ್ಟಲ್ ನಾಲ್ಕು ಗೋಲುಗಳನ್ನು ಗಳಿಸಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಜೆಮ್ಶೆಡ್ಪುರದ ಈ ಸ್ಟ್ರೈಕರ್ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಾರ್ತ್ ಈಸ್ಟ್ ಪರ ಘಾನಾದ ಅಸ್ಯಾಮೋ ಗ್ಯಾನ್ ಮೂರು ಗೋಲು ಗಳಿಸಿ ತಂಡದ ಜಯಕ್ಕೆ ನೆರವಾಗಿದ್ದಾರೆ. ಈ ಇಬ್ಬರೂ ಆಟಗಾರರು ತಂಡದ ಹಿಂದಿನ ಜಯದಲ್ಲಿ ಗೋಲು ಗಳಿಸಿರುತ್ತಾರೆ. ಏಟೋರ್ ಮನ್ರೋಯ್ ಹಾಗೂ ನೋಯೆ ಅಕೋಸ್ಟ ಅವರ ಅನುಭವದ ನೆರವಿನಿಂದ ತಂಡ ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆದರೆ ಅವರು ಪರಿಸ್ಥಿತಿಗೆ ತಕ್ಕಂತೆ ಆಡಬಲ್ಲರು ಎಂಬುದನ್ನು ಇರಿಯೊಂಡೋ ತೋರಿಸಿಕೊಟ್ಟದ್ದಾರೆ. ಗೋವಾ ವಿರುದ್ಧ ತಂಡ ಗೆಲ್ಲುವಲ್ಲಿ ಇವರಿಬ್ಬರ ಕಾಲ್ಚಳಕ ಪ್ರಮುಖ ಕಾರಣವಾಗಿತ್ತು.

ಅಂಡರ್-19 ವಿಶ್ವಕಪ್ 2020: 15 ಜನರ ಭಾರತ ತಂಡ ಪ್ರಕಟಿಸಿದ ಬಿಸಿಸಿಐಅಂಡರ್-19 ವಿಶ್ವಕಪ್ 2020: 15 ಜನರ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

''ತಂಡದ ಆಟದ ಬಗ್ಗೆ ಖುಷಿ ಇದೆ. ಚೆಂಡನ್ನು ಹೆಚ್ಚು ಕಾಲ ಸ್ವಾಧೀನದಲ್ಲಿ ಇರಿಸಿಕೊಳ್ಳುವುದು ಮುಖ್ಯವಲ್ಲ, ಪಂದ್ಯವನ್ನು ಗೆಲ್ಲುವುದು ಹಾಗೂ ಗೋಲುಗಳನ್ನು ಗಳಿಸುವುದು ಮುಖ್ಯವಾಗಬೇಕು. ಕೆಲವೊಮ್ಮೆ ಚೆಂಡನ್ನು ನಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಆಗುವುದಿಲ್ಲ, ಪಂದ್ಯದಲ್ಲಿ ಹಲವಾರು ಹಂತಗಳಿರುತ್ತವೆ, ಆಕ್ರಮಣ ಹಾಗೂ ಗೋಲು ಗಳಿಸುವ ಕಡೆಗೂ ಗಮನ ಹರಿಸಬಹುದು,'' ಎಂದು ಇರಿಯೊಂಡೋ ಹೇಳಿದರು.

ಗಾಯಗೊಂಡಿರುವ ಪಿಟಿ ನಾಳೆಯ ಪಂದ್ಯದಲ್ಲಿ ಆಡುವುದು ಸಂಶಯ ಎನಿಸಿದೆ. ಕೇರಳ ಮೂಲದ ವಿಂಗರ್ ಸಿ ಕೆ ವಿನೀತ್ ಹಾಗೂ ಉತ್ತಮ ಪ್ರದರ್ಶನ ತೋರುತ್ತಿರುವ ಫಾರುಖ್ ಚೌಧರಿ ಉತ್ತಮ ಪ್ರದರ್ಶನ ತೋರುತ್ತಿರುವುದು ಇರಿಯೊಂಡೋ ಅವರಿಗೆ ಸಾಕಷ್ಟು ಆಯ್ಕೆಗೆ ಅವಕಾಶ ಮಾಡಿಕೊಟ್ಟಿದೆ. ಮಾರ್ಟಿನ್ ಚಾವೇಸ್, ರೆಡೀಮ್ ತ್ಲ್ಯಾಂಗ್ ಹಾಗೂ ಗ್ಯಾನ್ ಇವರಿಂದಾಗಿ ನಾರ್ತ್ ಈಸ್ಟ್ ತಂಡವನ್ನು ಸುಲಭವಾಗಿ ಅಲುಗಾಡಿಸಲಾಗದು. ಪನಾಗಿಯೋಟಿಸ್ ಕೂಡ ಲಯ ಕಂಡುಕೊಂಡಿದ್ದು ತಂಡದ ಬಲವನ್ನು ಹೆಚ್ಚಿಸಿದೆ.

Story first published: Monday, December 2, 2019, 17:53 [IST]
Other articles published on Dec 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X