ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಲ್‌ಎಲ್ 2019: ಜೆಮ್ಷೆಡ್ಪುರ ಎಫ್‌ಸಿಯ ಪ್ಲೇ ಆಫ್ ಆಸೆ ಜೀವಂತ

By Isl Media
ISL 2019: Jamshedpur stay alive with narrow win over Mumbai

ಜೆಮ್ಷೆಡ್ಪುರ, ಫೆಬ್ರವರಿ 9: 80ನೇ ನಿಮಿಷದಲ್ಲಿ ಮೆಮೊ ಗಳಿಸಿದ ಏಕೈಕ ಗೋಲಿನಿಂದ ಮುಂಬೈ ಸಿಟಿ ಎಫ್ ಸಿ ತಂಡವನ್ನು 1-0 ಅಂತರದಲ್ಲಿ ಮಣಿಸಿದ ಜೆಮ್ಷೆಡ್ಪುರ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಸೆಮಿಫೈನಲ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಎಡ ಭಾಗದಲ್ಲಿ ಸಿಕ್ಕ ಫ್ರೀ ಕಿಕ್ ಅನ್ನು ಸರ್ಗಿಯೋ ಸಿಡೋನ್ಛ್ ನೇರವಾಗಿ ಮೆಮೊ ಇದ್ದ ಕಡೆ ತಲುಪಿತು. ಮೆಮೊ ಎಡ ಭಾಗದಲ್ಲಿ ಚೆಂಡನ್ನು ನೆಟ್ ಗೆ ಕಳುಹಿಸಿ ತಂಡಕ್ಕೆ ಅಮೂಲ್ಯ ಗೋಲು ತಂದಿತ್ತರು. ಆತಿಥೇಯ ತಂಡ 23 ಅಂಕ ಗಳಿಸಿ ಪ್ಲೇ ಆಫ್ ಆಸೆಯನ್ನು ಕಾಯ್ದುಕೊಂಡಿತು.

1
1042958

ಪಂದ್ಯ ನಿರೀಕ್ಷೆಯಂತೆ ಅತ್ಯಂತ ತೀವ್ರತೆಯಿಂದ ಕೂಡಿತ್ತು. ಜೆಮ್ಷೆಡ್ಪುರ ಕ್ಕೆ ಗೋಲು ಗಳಿಸುವ ಅವಕಾಶ ಹೆಚ್ಚಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ತಂಡದ ಸ್ಟ್ರೈಕರ್‌ಗಳು ಉಪಯೋಗಿಸಿಕೊಳ್ಳುವಲ್ಲಿ ವಿಲರಾದರು. ಪ್ರಥಮಾರ್ಧ ಮುಗಿಯಲು ಎರಡು ನಿಮಿಷ ಬಾಕಿ ಇರುವಾಗ ಸೌಗೌಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಗೋಲ್‌ಕೀಪರ್ ಸುಬ್ರತಾಪಾಲ್ ಅವರು ಚೆಂಡನ್ನು ನಿಯಂತ್ರಿಸಲು ಮುನ್ನುಗ್ಗಿದರು. ಪೆನಾಲ್ಟಿ ವಲಯದಲ್ಲಿ ಈ ಇಬ್ಬರು ಆಟಗಾರರು ಮಾತ್ರ ಆಕ್ಷಣದಲ್ಲಿದ್ದರು.

ಬ್ರೆಜಿಲ್‌ನಲ್ಲಿ ಅಗ್ನಿ ಅವಘಡ: 10 ಯುವ ಫುಟ್ಬಾಲ್ ಆಟಗಾರರು ದುರ್ಮರಣಬ್ರೆಜಿಲ್‌ನಲ್ಲಿ ಅಗ್ನಿ ಅವಘಡ: 10 ಯುವ ಫುಟ್ಬಾಲ್ ಆಟಗಾರರು ದುರ್ಮರಣ

ಅಪಾರ ಅನುಭವ ಹೊಂದಿರುವ ಪಾಲ್ ಚೆಂಡನ್ನು ತಡೆದು ಎಡಭಾಗಕ್ಕೆ ತಳ್ಳಿದರು. ಸೌಗೌಗೆ ಈ ಸಂದರ್ಭದಲ್ಲಿ ಕಾಲಿಗೆ ಬಲವಾದ ಪೆಟ್ಟು ಬಿದ್ದಿತ್ತು. ಇತ್ತಂಡಗಳು ಬಹಳ ಎಚ್ಚರಿಕೆಯ ಆಟ ಪ್ರದರ್ಶಿಸಿದವು. ಗೋಲು ಗಳಿಸುವುದಕ್ಕಿಂತ ಗೋಲು ಗಳಿಸದಂತೆ ಇತ್ತಂಡಗಳು ಪರಸ್ಪರ ನೋಡಿಕೊಂಡವು. 30ನೇ ನಿಮಿಷದಲ್ಲಿ ಮುಂಬೈ ತಂಡಕ್ಕೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಪೌಲೌ ಮಚಾಡೋ ನೀಡಿದ ಪಾಸ್‌ಗೆ ರೊಲ್ ಬಾಸ್ಟೋಸ್ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ಚೆಂಡನ್ನು ತುಳಿದಿರುತ್ತಿದ್ದರೆ ಗೋಲಾಗುವ ಅವಕಾಶ ಇದ್ದಿತ್ತು. ಆದರೆ ಗುರಿ ತಪ್ಪಿತ್ತು.

72ನೇ ಪಂದ್ಯ

72ನೇ ಪಂದ್ಯ

ಇಂಡಿಯನ್ ಸೂಪರ್ ಲೀಗ್‌ನ 72ನೇ ಪಂದ್ಯದಲ್ಲಿ ಮುಂಬೈ ಸಿಟಿ ಹಾಗೂ ಜೆಮ್ಷೆಡ್ಪುರ ತಂಡಗಳು ಮುಖಾಮುಖಿಯಾದವು, ಐದನೇ ಸ್ಥಾನದಲ್ಲಿರುವ ಜೆಮ್ಷೆಡ್ಪುರ ಹಾಗೂ ಎರಡನೇ ಸ್ಥಾನದಲ್ಲಿರುವ ಮುಂಬೈ ನಡುವಿನ ಪೈಪೋಟಿ ಕುತೂಹಲದ ಕ್ಷಣಗಳಿಗೆ ಸಾಕ್ಷಿಯಾಗುವುದು ಖಚಿತವಾಗಿತ್ತು.

ನಾಲ್ಕು ಅಂಕ ಹಿಂದೆ

ನಾಲ್ಕು ಅಂಕ ಹಿಂದೆ

ಏಕೆಂದರೆ ಇತ್ತಂಡಗಳಿಗೂ ಅಂತಿಮ ನಾಲ್ಕರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇದು ಉತ್ತಮ ಅವಕಾಶ, ನಾಲ್ಕನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್‌ಗಿಂತ ಜೆಮ್ಷೆಡ್ಪುರ ನಾಲ್ಕು ಅಂಕ ಹಿಂದೆ ಬಿದ್ದಿದೆ, ಆ ಅಂತರವನ್ನು ತುಂಬಲು ಇದು ಉತ್ತಮ ಅವಕಾಶ, ಇಲ್ಲಿ ಜೆಮ್ಷೆಡ್ಪುರ ಎಡವಿದರೆ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

ಬೇರೇನೂ ಬೇಕಾಗಿರಲಿಲ್ಲ

ಬೇರೇನೂ ಬೇಕಾಗಿರಲಿಲ್ಲ

ಆತಿಥೇಯ ತಂಡ ಸೆಟ್ ಪೀಸ್‌ನಲ್ಲಿ ಎತ್ತಿದ ಕೈ. ಈ ಮೂಲಕ ತಂಡ 11 ಗೋಲುಗಳನ್ನು ಗಳಿಸಿದೆ. ಅಲ್ಲದೆ ಮುಂಬೈ ಸಿಟಿ ವಿರುದ್ಧ ಜೆಮ್ಷೆಡ್ಪುರ ಇದುವರೆಗೂ ಸೋಲನುಭವಿಸಿರಲಿಲ್ಲ. ಆದ್ದರಿಂದ ಇಲ್ಲಿ ಮೂರು ಅಂಕಗಳ ಹೊರತಾಗಿ ಟಾಟಾ ಪಡೆಗೆ ಬೇರೇನೂ ಬೇಕಾಗಿರಲಿಲ್ಲ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈಗೆ ಮತ್ತೊಂದು ಜಯ ಗಳಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಹಂಬಲ.

ಒಟ್ಟು 30 ಅಂಕ

ಒಟ್ಟು 30 ಅಂಕ

ಬ್ಯಾಕ್‌ಲೇನ್‌ನಲ್ಲಿ ಮುಂಬೈ ತಂಡ ಬಲಿಷ್ಠವಾಗಿದೆ. ಇದುವರೆಗೂ ಏಳು ಕ್ಲೀನ್ ಶೀಟ್ ಸಾಧನೆಯನ್ನು ಮುಂಬೈ ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದೆ. ಇಲ್ಲಿ ಜಯ ಗಳಿಸಿದರೆ ಮುಂಬೈ ಒಟ್ಟು 30 ಅಂಕಗಳನ್ನು ಹೊಂದಿಕೆ ಮಾಡಿ ಸೆಮಿಫೈನಲ್‌ಗೆ ಬಹುತೇಕ ಅರ್ಹತೆ ಪಡೆಯಲಿದೆ. ಇತ್ತಂಡಗಳ ಲೆಕ್ಕಾಚಾರಗಳನ್ನು ಗಮನಿಸಿದಾಗ 72ನೇ ಪಂದ್ಯ ಸಾಕಷ್ಟು ಕುತೂಹಲದಿಂದ ಕೂಡಿರುತ್ತದೆ.

Story first published: Saturday, February 9, 2019, 16:34 [IST]
Other articles published on Feb 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X