ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019: ಕೇರಳಕ್ಕೆ ಮನೆಯಂಗಣದಲ್ಲಿ ಮೊದಲ ಜಯ

ಕೊಚ್ಚಿ, ಫೆಬ್ರವರಿ 15: ಮಟೇಜ್ ಪಾಪ್ಲಾಟ್ನಿಕ್ (23 ಹಾಗೂ 55ನೇ ನಿಮಿಷ) ಮತ್ತು ಸಹಲ್ ಅಬ್ದುಲ್ ಸಮದ್ (71ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಚೆನ್ನಯಿನ್ ಎಫ್ ಸಿ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಈ ಜಯ ಸತತ 14 ಪಂದ್ಯಗಳ ನಂತರ ಕೇರಳಕ್ಕೆ ಸಿಕ್ಕ ಮೊದಲ ಜಯವಾಗಿದೆ.

ಐಎಸ್‌ಎಲ್ 2019: ಜೆಮ್ಷೆಡ್ಪುರಕ್ಕೆ ಆಘಾತ ನೀಡಲು ಪುಣೆ ಸಂಚು ಐಎಸ್‌ಎಲ್ 2019: ಜೆಮ್ಷೆಡ್ಪುರಕ್ಕೆ ಆಘಾತ ನೀಡಲು ಪುಣೆ ಸಂಚು

ಪಾಪ್ಲಾಟ್ನಿಕ್ ಎರಡನೇ ಗೋಲು: ದ್ವಿತಿಯಾರ್ಧದ 55ನೇ ನಿಮಿಷದಲ್ಲಿ ಮಟೇಜ್ ಪಾಪ್ಲಾಟ್ನಿಕ್ ವೈಯಕ್ತಿಕ ಎರಡನೇ ಗೋಲು ಗಳಿಸುವ ಮೂಲಕ ಕೇರಳ ತಂಡ ಮನೆಯಂಗಣದಲ್ಲಿ ಮೊದಲ ಜಯಕ್ಕೆ ವೇದಿಕೆ ಹಾಕಿಕೊಂಡಿತು. 14 ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಲವಾಗಿದ್ದ ಕೇರಳ ತಂಡಕ್ಕೆ ಕೊನೆಗೂ ಯಶಸ್ಸಿನ ಹೆಜ್ಜೆ. ಆದರೆ ಈ ಜಯ ಕೇವಲ ತಂಡದ ಮನೋಬಲವನ್ನು ಹೆಚ್ಚಿಸೀತೇ ವಿನಃ ಯಾವುದೇ ಪ್ರಯೋಜನ ತಾರದು.

ISL 2019 : Kerala Blasters end win drought in style

ಸಹಾಲ್ ಅಬ್ದುಲ್ ಸಮದ್‌ಗೆ ಸೈಮಿನ್ಲೆಲ್ ಡೌಂಗಲ್ ಉತ್ತಮ ರೀತಿಯ ಪಾಸ್ ನೀಡಿದರು. ಚೆಂಡನ್ನು ತಡೆಯಲು ಚೆನ್ನೈ ಡಿಫೆನ್ಸ್ ವಿಭಾಗದಲ್ಲಿ ಯಾರೂ ಇರಲಿಲ್ಲ. ಸ್ಲಾವಿಸಾ ಸ್ಚೊಜಾನೊವಿಕ್ ಚೆಂಡನ್ನು ಮಟೇಜ್ ಪಾಪ್ಲಾಟ್ನಿಕ್ ಕಡೆಗೆ ತುಳಿದರು. ಪಾಪ್ಲಾಟ್ನಿಕ್ ಯಾವುದೇ ಪ್ರಮಾದವೆಸಗದೆ ಚೆಂಡನ್ನು ಗೋಲ್ ಬಾಕ್ಸ್‌ಗೆ ಗುರಿ ಇಟ್ಟರು. ಈ ಬಾರಿಯೂ ಚೆನ್ನೈ ಗೋಲ್‌ಕೀಪರ್‌ಗೆ ಪಾಪ್ಲಾಟ್ನಿಕ್ ಹೊಡೆತವನ್ನು ತಡೆಯಲಾಗಲಿಲ್ಲ. ಕೇರಳಕ್ಕೆ 2-0 ಮುನ್ನಡೆ.

ಐಎಸ್‌ಎಲ್ 2019: ಪ್ರತಿಷ್ಠೆಗಾಗಿ ಸೆಣಸಲಿವೆ ಕೇರಳ ಬ್ಲಾಸ್ಟರ್ಸ್-ಚೆನ್ನೈಯಿನ್ ಐಎಸ್‌ಎಲ್ 2019: ಪ್ರತಿಷ್ಠೆಗಾಗಿ ಸೆಣಸಲಿವೆ ಕೇರಳ ಬ್ಲಾಸ್ಟರ್ಸ್-ಚೆನ್ನೈಯಿನ್

ಪ್ರಥಮಾರ್ಧದಲ್ಲಿ ಕೇರಳ ಮುನ್ನಡೆ: ಕೇರಳ ಪ್ರಥಮಾರ್ಧದಲ್ಲೇ ಮನೆಯಂಗಣದಲ್ಲಿ ಮೊದಲ ಜಯ ಗಳಿಸುವ ಲಕ್ಷಣ ತೋರಿತು. ಕಳೆದ 14 ಪಂದ್ಯಗಳಲ್ಲಿ ಜಯ ಕಂಡಿರದ ಕೇರಳ ಮಾಟೇಜ್ ಪಾಪ್ಲಾಟ್ನಿಕ್ 23ನೇ ನಿಮಿಷದಲ್ಲಿ ಗಳಿಸಿದ ಗೋಲು ಕೇರಳ ತಂಡದ ಆತ್ಮಬಲವನ್ನು ಹೆಚ್ಚಿಸಿತು.

ISL 2019 : Kerala Blasters end win drought in style

ಎಡ ಭಾಗದಲ್ಲಿ ಬಹಳ ಅಂತರದಲ್ಲಿ ದೊರೆತ ಪಾಸ್‌ಗೆ ಮೊಹಮ್ಮದ್ ರಾಕಿಪ್ ಉತ್ತಮ ರೀತಿಯಲ್ಲಿ ಸ್ಪಂದಿಸಿ ಕೆಜಿರಾನ್ ಕಿಜಿಟೋ ಅವರಿಗೆ ತಲುಪಿಸಿದರು. ಚೆನ್ನೆ'ನ ಡಿಫೆಂಡರ್‌ಗಳನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿ ಚೆಂಡನ್ನು ಕೆರಳಹಂತದಲ್ಲಿ ಮಾಚೇಜ್ ಪಾಪ್ಲಾಟ್ನಿಕ್ ನಿಯಂತ್ರಣಕ್ಕೆ ಸಿಲುಕಿತು. ಕರಣಜಿತ್ ಸಿಂಗ್ ಅವರನ್ನು ಪಾಪ್ಲಾಟ್ನಿಕ್ ಉತ್ತಮ ರೀತಿಯಲ್ಲಿ ವಂಚಿಸಿ ಚೆಂಡನ್ನು ನೆಟ್‌ಗೆ ತಳ್ಳಿದರು. ಹೆಡರ್ ಮೂಲಕ ದಾಖಲಾದ ಈ ಗೋಲು ಕೇರಳ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು.

ಹೀರೋ ಇಂಡಿಯನ್ ಸೂಪರ್ ಲೀಗ್‌ನ ಪ್ರಮುಖವಲ್ಲದ 77ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೆ'ಯಿನ್ ಎಫ್ಸಿ ತಂಡಕ್ಕೆ ಕೇರಳ ಬ್ಲಾಸ್ಟರ್ಸ್ ಆತಿಥ್ಯ ನೀಡಿತು. ಎರಡೂ ತಂಡಗಳು ಪ್ಲೇ ಆಫ್ ಆಸೆಯಿಂದ ದೂರ ಸರಿದಿರುವುದರಿಂದ ಈ ಪಂದ್ಯ ಇತ್ತಂಡಗಳಿಗೂ ಪ್ರಮುಖವಾಗಿಲ್ಲ, ಇಲ್ಲಿಯ ಲಿತಾಂಶ ಬೇರೆ ತಂಡಗಳ ಮೇಲೂ ಬೀಳುವುದಿಲ್ಲ. ಕೇರಳ ಒಂಬತ್ತನೇ ಸ್ಥಾನದಲ್ಲಿದ್ದರೆ, ದಕ್ಷಿಣದ ಇನ್ನೊಂದು ತಂಡ ಚೆನ್ನೆ' ಕೊನೆಯ ಸ್ಥಾನದಲ್ಲಿದೆ. ಇತ್ತಂಡಗಳ ನಡುವೆ ಮೂರು ಅಂಕಗಳ ವ್ಯತ್ಯಾಸವಿದೆ.

ISL 2019 : Kerala Blasters end win drought in style

ಈಗ ಈ ಎರಡೂ ತಂಡಗಳ ನಡುವೆ ಈ ಸ್ಪರ್ಧೆ ಹುಟ್ಟಿರುವುದು ಕೊನೆಯ ಸ್ಥಾನವನ್ನು ತಪ್ಪಿಸಿಕೊಳ್ಳಲು. ಕೇರಳ ಗೆದ್ದರೆ ಇತ್ತಂಡಗಳು ಅಂಕದಲ್ಲಿ ಸಮಬಲ ಕಂಡಂತಾಗುತ್ತದೆ. ಇತ್ತಂಡಗಳು 11 ಬಾರಿ ಮುಖಾಮುಖಿಯಾಗಿವೆ. ಚೆನ್ನೈ 4 ಪಂದ್ಯಗಳನ್ನು ಗೆದ್ದಿದ್ದರೆ, ಕೇರಳ ಎರಡು ಪಂದ್ಯಗಳಲ್ಲಿ ಯಶಸ್ಸು ಕಂಡಿದೆ. ಈ ಪಂದ್ಯಕ್ಕೆ ಹಿಂದಿನ ಪಂದ್ಯದಲ್ಲಿ ಇತ್ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. 14 ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಲವಾಗಿರುವ ಕೇರಳ ಬ್ಲಾಸ್ಟರ್ಸ್ ಈಗ ಗೌರವ ಉಳಿಸಿಕೊಳ್ಳಬೇಕಾದರೆ ಜಯದ ಅಗತ್ಯವಿದೆ.

Story first published: Friday, February 15, 2019, 22:26 [IST]
Other articles published on Feb 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X