ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜಯದೊಂದಿಗೆ ಆರಂಭ ಕಾಣುವ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್

By Isl Media
ISL 2019: Kerala Blasters keen to hit the ground running

ಕೊಚ್ಚಿ, ಅಕ್ಟೋಬರ್ 19: ಎರಡು ಬಾರಿ ಫೈನಲಿಸ್ಟ್ ಕೇರಳ ಬ್ಲಾಸ್ಟರ್ಸ್ ಹಾಗೂ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಎಟಿಕೆ ತಂಡಗಳು ಭಾನುವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಣದಲ್ಲಿ ಮುಖಾಮುಖಿ ಆಗುವುದರೊಂದಿಗೆ ಆರನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಗೆ ಅಬ್ಬರದ ಆರಂಭ ಸಿಗಲಿದೆ.

ಕೇರಳ ಬ್ಲಾಸ್ಟರ್ಸ್ ತಂಡದ ನೂತನ ಕೋಚ್ ಎಲ್ಕೋ ಶೆಟ್ಟೋರಿ ಅವರ ಕೈಯಲ್ಲಿ ಜವಾಬ್ದಾರಿಯುತ ಕೆಲಸ ಇದ್ದು, ಅದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅಪಾರ ಸಂಖ್ಯೆಯ ಬ್ಲಾಸ್ಟರ್ಸ್ ಅಭಿಮಾನಿಗಳ ನಿರೀಕ್ಷೆಯಾಗಿದೆ. ನಾರ್ತ್ಈಸ್ಟ್ ಯುನೈಟೆಡ್ ತಂಡದಲ್ಲಿ ಯಶಸ್ಸನ್ನು ಕಂಡಿರುವ ನೆದರ್ಲೆಂಡ್ಸ್ ನ ಕೋಚ್ ಗೆ ಈಗ ಕೇರಳ ಮೂಲದ ತಂಡದಲ್ಲಿ ತನ್ನ ಮ್ಯಾಜಿಕ್ ಫಲಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ತಂಡಗಳಲ್ಲಿ ಸದ್ಯ ಬಲಿಷ್ಠ ತಂಡವಾಗಿ ಬಿಂಬಿಸಲ್ಪಟ್ಟಿರುವ ಎಟಿಕೆ ವಿರುದ್ಧ ಜಯ ಗಳಿಸದೆ ಬೇರೆ ಯಾವುದೇ ಫಲಿತಾಂಶ ಡಚ್ ಕೋಚ್ ಗೆ ತೃಪ್ತಿ ತಾರದು.

ಭಾರತ vs ದ.ಆಫ್ರಿಕಾ: ಅಪರೂಪದ ವಿಶ್ವದಾಖಲೆಗಳ ಬರೆದ ರೋಹಿತ್ ಶರ್ಮಾ!ಭಾರತ vs ದ.ಆಫ್ರಿಕಾ: ಅಪರೂಪದ ವಿಶ್ವದಾಖಲೆಗಳ ಬರೆದ ರೋಹಿತ್ ಶರ್ಮಾ!

''ಆರಂಭಿಕ ಪಂದ್ಯವು ಯಾವಾಗಲೂ ಕಠಿಣವಾಗಿರುತ್ತದೆ, ಅಲ್ಲಿ ಸಾಕಷ್ಟು ನಿರೀಕ್ಷೆಗಳೂ ಇರುತ್ತವೆ. ಅದು ಆಟದ ಒಂದು ಭಾಗ. ಇಲ್ಲಿ ತಂಡವನ್ನು ಸ್ಥಿರಗೊಳಿಸುವುದು ಪ್ರಮುಖವಾಗಿರುತ್ತದೆ. ನಾವು ಎಟಿಕೆ ತಂಡವನ್ನು ಎದುರಿಸಲು ಸಜ್ಜಾಗಿರುವೆವು ಎಂದು ನಂಬಿರುವೆ. ಅವರದ್ದು ಬಲಿಷ್ಠ ತಂಡ. ಮತ್ತು ಲೀಗ್ ನಲ್ಲಿ ಉತ್ತಮ ತಂಡ ಕೂಡ ಹೌದು,'' ಎಂದು ಶೆಟ್ಟೋರಿ ಹೇಳಿದ್ದಾರೆ.

2016 ರಲ್ಲಿ ಪ್ಲೇ ಆಫ್ ಹಂತ ತಲುಪಿದ್ದ ಬ್ಲಾಸ್ಟರ್ಸ್, ಇತ್ತೀಚಿನ ದಿನಗಳಲ್ಲಿ ಅಂತಿಮ ನಾಲ್ಕರ ಹಂತ ತಲುಪಲು ಕೆಲವು ಆಡಳಿತಾತ್ಮಕವಾದ ನೇಮಕಾತಿಯನ್ನು ಮಾಡಿದೆ, ಈ ಅಂಶ ಶೆಟ್ಟೋರಿ ಅವರ ಗಮನದಲ್ಲಿದೆ. ಕ್ಲಬ್ ಗೆ ಸ್ಥಿರತೆಯನ್ನು ಮರಳಿ ತರಬಹುದೆಂಬ ನಿರೀಕ್ಷೆ ಶೆಟ್ಟೋರಿ ಅವರ ಮೇಲಿದೆ.

ಮೈದಾನಕ್ಕೆ ನುಗ್ಗಿದ ದಕ್ಷಿಣ ಆಫ್ರಿಕಾದ ಇಬ್ಬಿಬ್ಬರು ನಾಯಕರು: ವಿಡಿಯೋಮೈದಾನಕ್ಕೆ ನುಗ್ಗಿದ ದಕ್ಷಿಣ ಆಫ್ರಿಕಾದ ಇಬ್ಬಿಬ್ಬರು ನಾಯಕರು: ವಿಡಿಯೋ

''ಎಟಿಕೆ, ನಾರ್ತ್ ಈಸ್ಟ್ ಹಾಗೂ ಕೇರಳ ಸಾಕಷ್ಟು ಕೋಚ್ ಗಳನ್ನು ಹೊಂದಿವೆ, ಆದ್ದರಿಂದ ಸ್ಥಿರತೆ ಕಾಯ್ದುಕೊಳ್ಳುವುದು ಇಲ್ಲಿ ಪ್ರಮುಖವಾಗಿದೆ.ಇಲ್ಲಿ ನಾನು ಆಡಳಿತಮಂಡಳಿಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ, ಕಳೆದ ವರ್ಷಕ್ಕಿಂತ ಈ ಬಾರಿ ನಾವು ಉತ್ತಮ ಗಾಂಭೀರ್ಯವನ್ನು ಹೊಂದಿದ್ದೇವೆ ಎಂದೆನಿಸುತ್ತಿದೆ,'' ಎಂದರು.

''ನಾರ್ತ್ ಈಸ್ಟ್ ನ ಯಶಸ್ಸಿಗೆ ಕಾರಣವಾದ ಎಲ್ಲಾ ಅಂಶಗಳನ್ನು ಇಲ್ಲಿ ನಕಲು ಮಾಡಲು ಇದು, ಟೊಮೇಟೊ ಸೂಪ್ ಅಲ್ಲ, ಇಡೀ ತಂಡವೇ ಬಹುತೇಕ ಹೊಸದಾಗಿದೆ, ಸವಾಲನ್ನು ಸ್ವೀಕರಿಸಲು ನಾನು ಸಜ್ಜಾಗಿದ್ದೇನೆ,'' ಎಂದರು.

ಕೇರಳ ಬ್ಲಾಸ್ಟರ್ಸ್ ತಂಡ ವಿದೇಶಿ ಆಟಗಾರರ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ, ಪ್ರಭುತ್ವ ಸಾಧಿಸಿರುವ ಆಟಗಾರರಾದ ಬಾರ್ತಲೋಮ್ಯೋ ಒಗ್ಬೇಚೆ, ಜಿಯಾನ್ನಿ ಜೆವೆರ್ಲೂನ್ , ಮಾರಿಯೋ ಆರ್ಕ್ಯೂಸ್ ಮತ್ತು ಭರವಸೆಯ ಆಟಗಾರರಾದ ರಫಾಯೆಲ್ ಮೆಸ್ಸಿ ಬೌಲಿ ಸೇರಿದ್ದಾರೆ.

ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!

ಸಹಾಲ್ ಅಬ್ದುಲ್ ಸಮದ್ ಅವರಂತ ಭಾರತೀಯ ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ ಸಂದೇಶ್ ಜಿಂಗಾನ್ ಅನುಪಸ್ಥಿತಿಯು ತಂಡವನ್ನು ಕಾಡಲಿದೆ. ಅವರ ಸ್ಥಾನದಲ್ಲಿ ರಾಜು ಗಾಯಕ್ವಾಡ್ ಅಂಗಣಕ್ಕಿಳಿಯಲಿದ್ದಾರೆ, ತಂಡದ ಸಿದ್ಧತೆಯು ಸೂಕ್ತವಾಗಿದೆ ಎಂದು ಶೆಟ್ಟೋರಿ ಹೇಳಿದ್ದಾರೆ.

''ನಮ್ಮದು ಉತ್ತಮ ತಂಡ, ಉತ್ತಮ ವಿದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದೇವೆ, ಋತುವಿನ ಪೂರ್ವದಲ್ಲಿ ನಾನು ನಿರೀಕ್ಷಿಸಿದಷ್ಟು ಆಗಲಿಲ್ಲ,. ನಾನು ಸೂಕ್ತ ರೀತಿಯಲ್ಲಿ ಸಿದ್ಧತೆ ನಡೆಸಿಲ್ಲ, ಕೆಲವು ವಿದೇಶಿ ಆಟಗಾರರು ಗಾಯದೊಂದಿಗೆ ಆಗಮಿಸಿದರು, ನಾವು 2-3 ವಾರ ಹಿಂದೆ ಇದ್ದೇವೆ, ನಾವು ವೇಗವಾಗಿ ಹೊಂದಿಕೊಳ್ಳುವ ಅಗತ್ಯ ಇದೆ,''

''ರಾಜು ಅವರೊಂದಿಗೆ ಇದಕ್ಕೂ ಮುನ್ನ ಕೆಲಸ ಮಾಡಿರುವೆ, ಅನುಭವ ಹೊಂದಿರುವ ಮತ್ತೊಬ್ಬ ಸೆಂಟರ್ ಬ್ಯಾಕ್ ಅಗತ್ಯ ಇದೆ, ಅವರ ಫಿಟ್ನೆಸ್ ನಿರೀಕ್ಷಿತ ಮಟ್ಟದಲ್ಲಿಲ್ಲ, ಅಲ್ಲದೆ ಋತುವಿಗೆ ಪೂರ್ವಭಾವಿ ನಡೆದ ತರಬೇತಿಗೆ ಅವರು ಸಿಕ್ಕಿರಲಿಲ್ಲ, ಆದರೆ ತಂಡದ ವಾತಾವರಣ ಉತ್ತಮವಾಗಿದೆ,''

Story first published: Saturday, October 19, 2019, 23:56 [IST]
Other articles published on Oct 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X