ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳಕ್ಕೆ ಮನೆಯಂಗಣದಲ್ಲಿ ಮುಂಬೈ ವಿರುದ್ಧ ಮಿಂಚೋ ಹಂಬಲ

By Isl Media
ISL 2019: Kerala look for home comfort against Mumbai

ಕೊಚ್ಚಿ, ಅಕ್ಟೋಬರ್, 24: ಜಯದೊಂದಿಗೆ ಅದ್ಭುತ ಆರಂಭ ಕಂಡ ಕೇರಳ ಬ್ಲಾಸ್ಟರ್ಸ್ ತಂಡ ಗುರುವಾರ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯದಲ್ಲೂ ಜಯಗಳಿಸುವ ಆತ್ಮವಿಶ್ವಾಸವನ್ನು ಹೊಂದಿದೆ.

ಪ್ರೇಕ್ಷಕರ ಉತ್ತಮ ಬೆಂಬಲದ ನಡುವೆ ಎಟಿಕೆ ವಿರುದ್ಧ ಜಯ ಗಳಿಸಿದ ಎಲ್ಕೋ ಶೆಟ್ಟೋರಿ ಪ್ರೇಕ್ಷಕರ ಬೆಂಬಲದೊಂದಿಗೆ ಮನೆಯಂಗಣದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಗಳನ್ನು ಗೆದ್ದು ಪ್ರಭುತ್ವ ಸಾಧಿಸುವ ಗುರಿ ಹೊಂದಿದ್ದಾರೆ. ಸಾಮಾನ್ಯವಾಗಿ ಕೇರಳ ತಂಡ ಮನೆಯಂಗಣದಲ್ಲಿ ಮಿಂಚಲು ಆರಂಭಿಸಿದರೆ, ಅದು ಯಶಸ್ಸಿನ ಹಾದಿಯಲ್ಲಿ ಸುಗಮವಾಗಿ ಸಾಗಲಿದೆ. 2014 ಮತ್ತು 2016 ರಲ್ಲಿ ಮನೆಯಂಗಣದಲ್ಲಿ ಯಶಸ್ಸು ಕಾಣುವ ಮೂಲಕ ಕೇರಳ ತಂಡ ಆ ವರ್ಷ ಪ್ಲೇ ಆಫ್ ಹಂತ ತಲುಪಿತ್ತು. ಮನೆಯಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಉತ್ತಮ ಯಶಸ್ಸಿನ ದಾಖಲೆಯನ್ನು ಹೊಂದಿದೆ. (ಎರಡು ಋತುಗಳಲ್ಲಿ ತಂಡ ಮನೆಯಂಗಣದಲ್ಲಿ ಸೋತಿರುವುದು ಕೇವಲ ಒಂದು ಪಂದ್ಯದಲ್ಲಿ).

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ vs ಮುಂಬೈ ಸಿಟಿ, Live ಸ್ಕೋರ್‌ಕಾರ್ಡ್

1
2026429

''ನೀವು ಮನೆಯಂಗಣದಲ್ಲಿ ಉತ್ತಮವಾಗಿ ಆಡಿದರೆ, ನಿಮಗೆ ಸ್ವಲ್ಪ ಮಟ್ಟಿನ ಮೇಲುಗೈ ಸಿಕ್ಕಂತೆ,'' ಎಂದು ಕೇರಳ ತಂಡದ ಕೋಚ್ ಹೇಳಿದ್ದಾರೆ.

ಮುಂಬೈ ತಂಡಕ್ಕೆ ಈಗ ಅಚ್ಚರಿಯ ಪರಿಸ್ಥಿತಿ, ಏಕೆಂದರೆ, ಮುಂಬೈಗೆ ಇದು ಹೊಸ ಪಂದ್ಯ.ಕೇರಳ ಈಗಾಗಲೇ ಒಂದು ಜಯ ಕಂಡು ಪ್ರವಾಸಿ ತಂಡದ ಕೋಚ್ ಜಾರ್ಜ್ ಕೋಸ್ಟಾ ಅವರಿಗೆ ವಿಶ್ಲೇಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶೆಟ್ಟೋರಿ ನಾಳೆಯ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ಲಾಭವಾಗುವ ವಿಷಯ ಇದ್ದರೂ ಕೇರಳದ ಕೋಚ್ ಆ ಬಗ್ಗೆ ಹೆಚ್ಚು ಚಿಂತಿಸಿಲ್ಲ.

ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!

''ಮುಂಬೈ ತಂಡದ ಆಟದ ಶೈಲಿ ನನಗೆ ಚೆನ್ನಾಗಿ ಗೊತ್ತಿದೆ. ಎದುರಾಳಿ ತಂಡದ ಆಟವನ್ನು ಗಮನಿಸದೆ, ಅವರು ಯಾವ ರೀತಿಯಲ್ಲಿ ಆಟಗಾರರನ್ನು ಸಂಯೋಜಿಸುತ್ತಾರೆ ಎಂಬುದರ ಬಗ್ಗೆ ಅರಿವಿಲ್ಲದೆ ಇರುವಾಗ ಅವರನ್ನು ಹಲವು ಪ್ರಶ್ನೆ ಕಾಡುವುದು ಸಹಜ. ಎದುರಾಳಿ ತಂಡದ ವಿರುದ್ಧ ಒಮ್ಮೆ ಆಡಿದ್ದೇ ಆಗಿದ್ದಲ್ಲಿ, ಅರ್ಥೈಸಿಕೊಳ್ಳಬಹುದು. ಆದರೆ ಇದು ಮತ್ತೊಂದು ಸವಾಲಾಗಿದ್ದು, ಅದನ್ನು ನಾವು ಎದುರಿಸಬೇಕಾಗಿದೆ,'' ಎಂದರು.

ISL 2019: Kerala look for home comfort against Mumbai

ಆದರೆ ಮುಂಬೈ ಕೋಚ್ ಜಾರ್ಜ್ ಕೋಸ್ಟಾ, ನಾವು ಕೇರಳ ತಂಡದಿಂದ ಏನನ್ನು ನಿರೀಕ್ಷಿಸಿದ್ದೆವೋ ಅದನ್ನು ಅದನ್ನು ನೋಡಿದ್ದೇವೆ ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.

''ನಾವು ಕೇರಳ ಬ್ಲಾಸ್ಟರ್ಸ್ ತಂಡವನ್ನು ಅಧ್ಯಯನ ಮಾಡಿದ್ದೇವೆ, ಆದರೆ ಅದು ಋತುವಿನ ಮೊದಲ ಪಂದ್ಯ, ಅದೊಂದು ಅದ್ಭುತ ಪಂದ್ಯವಾಗಿರಲಿಲ್ಲ, ಆದರೆ ಚೆನ್ನಾಗಿತ್ತು. ಮೊದಲ ಬಾರಿಗೆ ನಾನು ಕೇರಳ ಬ್ಲಾಸ್ಟರ್ಸ್ ತಂಡವನ್ನು ನೋಡಿದೆ, ಆದರೆ ಅದರಲ್ಲಿ ಅಚ್ಚರಿ ಏನಿಲ್ಲ, ಆಟಗಾರರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಕೋಚ್ ಬಗ್ಗೆನೂ ಗೊತ್ತು,'' ಎಂದು ಕೋಸ್ಟಾ ಹೇಳಿದ್ದಾರೆ.

ಕಳೆದ ಋತುವಿನಲ್ಲಿ ತಂಡ ಪ್ಲೇ ಆಫ್ ಹಂತ ತಲಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಪೌಲೊ ಮಚಾಡೋ ಹಾಗೂ ಮೊದೌ ಸೌಗೌ ಅವರ ಮೇಲೆ ತಂಡ ಹೆಚ್ಚು ಅವಲಂಭಿತವಾಗಿದೆ. ಮಿಡ್ ಫೀಲ್ಡ್ ವಿಭಾಗದಲ್ಲಿ ಭಾರತದ ಪ್ರಮುಖ ಆಟಗಾರರಿದ್ದಾರೆ. ರೌಲಿನ್ ಬೋರ್ಗೆಸ್ ಹಾಗೂ ರೇನಿಯೆರ್ ಫೆರ್ನಾಂಡೀಸ್ ತಂಡದ ಆಟಕ್ಕೆ ಮಿಚಿನ ವೇಗ ನೀಡಬಲ್ಲರು. ಸರ್ಗೆ ಕೆವಿನ್ ಮತ್ತು ಅಮೈನ್ ಚೇರ್ಮಿತಿ ಆಕ್ರಮಣಕಾರಿ ಆಟ ಪ್ರದರ್ಶಿಸುವ ಅಸ್ತ್ರ ಎನಿಸಿದ್ದಾರೆ.

ಕೇರಳದ ಡಿಫೆನ್ಸ್ ವಿಭಾಗದ ಗಿಯನ್ನಿ ಜೆವೆರ್ಲೂನ್ ಮತ್ತು ಜಾರಿಯೋ ರೋಡ್ರಿಗಸ್ ಗುರುವಾರದ ಪಂದ್ಯದ ಆಕರ್ಷಣೆ ಎನಿಸದ್ದಾರೆ. ಹಿಂದಿನ ಪಂದ್ಯದಲ್ಲಿ ಪ್ರಭಾವಿ ಮಿಡ್ ಫೀಲ್ಡರ್ ಮಾರಿಯೋ ಆರ್ಕ್ಯೂಸ್ ಗಾಯಗೊಂಡಿದ್ದು ಅವರು ನಾಳೆಯ ಪಂದ್ಯದಿಂದ ವಂಚಿತರಾಗಲಿದ್ದಾರೆ, ಇದು ಕೇರಳ ತಂಡಕ್ಕೆ ಸ್ವಲ್ಪ ಮಟ್ಟಿನ ಹಿನ್ನಡೆ ಎನ್ನಬಹುದು. ಆದರೆ ಬಾರ್ತಲೋಮಿಯೋ ಒಗ್ಬ್ಯಾಚಿ , ಭಾನುವಾರ ಎರಡು ಗೋಲುಗಳನ್ನು ಗಳಿಸಿದ್ದು, ಕೇರಳದ ಚಿಂತೆಯನ್ನು ದೂರಮಾಡಬಲ್ಲರು.

ಕೇರಳ ಸತತ ಎರಡನೇ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಬಹುದೇ, ಅಥವಾ ಮುಂಬೈ ತನ್ನ ಮೊದಲ ಜಯ ಗಾಳಿಸೀತೇ?

Story first published: Thursday, October 24, 2019, 13:46 [IST]
Other articles published on Oct 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X