ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳಕ್ಕೆ ಜಯದ ಹಂಬಲ, ಜೇಮ್ಶೆಡ್ಪುರಕ್ಕೆ ಅಗ್ರ ಸ್ಥಾನದ ಗುರಿ

By Isl Media
ISL 2019: Kerala look to end winless run as Jamshedpur eye top spot

ಕೊಚ್ಚಿ, ಡಿಸೆಂಬರ್ 13: ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಶುಕ್ರವಾರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಜೆಮ್ಶೆಡ್ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎರಡನೇ ಜಯ ದಾಖಲಿಸುವ ಗುರಿ ಹೊಂದಿದೆ.

ಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋ

ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ಬ್ಲಾಸ್ಟರ್ಸ್ ತಂಡ ಸತತ ಆರು ಪಂದ್ಯಗಳಲ್ಲಿ ಜಯ ಗಳಿಸಿರಲಿಲ್ಲ. ಮೂರು ಡ್ರಾ ಹಾಗೂ ಮೂರು ಸೋಲು ಅನುಭವಿಸಿದ ನಂತರ ಬ್ಲಾಸ್ಟರ್ಸ್ ಅಂಕ ಪಟ್ಟಿಯಲ್ಲಿ ವಿರುದ್ಧದ ದಿಕ್ಕಿನಲ್ಲಿದೆ. ಈಗ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ನಾಲ್ಕನೇ ಸ್ಥಾನದಲಿರುವ ಜೆಮ್ಶೆಡ್ಪುರ ಎಫ್ ಸಿ ವಿರುದ್ಧ ಕೇರಳಕ್ಕೆ ಜಯ ಗಳಿಸವುದು ಈಗ ಸುಲಭವಲ್ಲ. ಟಾಟಾ ಪಡೆ ಕೇರಳದಲ್ಲಿ ಜಯ ಗಳಿಸಿದರೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಲಿದೆ.

ಈ ಆಗಮಿಸುವ ಮೊದಲು ಕೇರಳ ಬ್ಲಾಸ್ಟರ್ಸ್ ಎಫ್ ಸಿ ಗೋವಾ ಹಾಗೂ ಮುಂಬೈ ಸಿಟಿ ಎಫ್ ಸಿ ವಿರುದ್ಧ ಡ್ರಾ ಸಾಧಿಸಿದೆ. ಜೆಮ್ಶೆಡ್ಪುರ ಕೂಡಾ ನಾರ್ತ್ ಈಸ್ಟ್ ಹಾಗೂ ಚೆನ್ನೈಯಿನ್ ಎಫ್ ಸಿ ವಿರುದ್ಧ ಡ್ರಾ ಸಾಧಿಸಿತ್ತು. ಈಗ ಕೇರಳ ಬ್ಲಾಸ್ಟರ್ಸ್ ತಂಡದ ಕೋಚ್ ಎಲ್ಕೋ ಶೆಟ್ಟೋರಿ ಹಾಗೂ ಜೆಮ್ಶೆಡ್ಪುರ ಕೋಚ್ ಅಂಟೋನಿಯೋ ಇರಿಯಾಂದೋ ಅವರಿಗೆ ಶುಕ್ರವಾರ ತಮ್ಮ ತಂಡ ಗೆಲ್ಲಲೇ ಬೇಕೆಂಬ ಛಲ ಇದೆ.

ISL 2019: Kerala look to end winless run as Jamshedpur eye top spot

ಕೇರಳ ಬ್ಲಾಸ್ಟರ್ಸ್ ತಂಡ ತಾನೇ ಮಾಡಿಕೊಂಡ ತಪ್ಪುಗಳಿಗೆ ಬೆಲೆ ತೆತ್ತಿದೆ. ಗೋವಾ ಹಾಗೂ ಮುಂಬೈ ವಿರುದ್ಧ ಗೆಲ್ಲಬಹುದಾಗಿತ್ತು, ಆದರೆ ಎರಡೂ ಪ್ನದ್ಯಗಳಲ್ಲಿ ಕೊನೆಯ ಕ್ಷಣದಲ್ಲಿ ಗೋಲು ನೀಡಿ ಡ್ರಾಗೆ ತೃಪ್ತಿಪಡಬೇಕಾಯಿತು. ತಂಡದಲ್ಲಿ ಏಕಾಗ್ರತೆಯ ಕೊರತೆ ಹಿನ್ನಡೆಗೆ ಕಾರಣವಾಯಿತು. ಜೆಮ್ಶೆಡ್ಪುರ ತಂಡ ಗಳಿಸಿರುವ 9 ಗೋಲುಗಳಲ್ಲಿ 4 ಗೋಲುಗಳನ್ನು ಅಂತಿಮ 15 ನಿಮಿಷಗಳಲ್ಲಿ ಗಳಿಸಿತ್ತು, ಈ ಅಂಶವನ್ನು ಕೇರಳ ಗಮನಿಸಬೇಕಾಗಿದೆ.

ಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲಪಂತ್ ಮತ್ತೆ ವಿಫಲ, ಸ್ಥಾನ ಪಡೆಯಲು ಸಫಲ; ಇದು ಯಾರ ಕೃಪಾಕಟಾಕ್ಷದ ಫಲ

''ಕೊನೆಯ ಕ್ಷಣದಲ್ಲಿ ಗೋಲು ನೆಡುವುದು ತಂಡವೊಂದರ ಉತ್ತಮ ಲಕ್ಷಣವಲ್ಲ, ನನ್ನ ಹಿಂದಿನ ಕ್ಲಬ್ ಗಳಲ್ಲಿ ಇದೇ ವಿಷಯದ ಬಗ್ಗೆ ಚರ್ಚೆ ನಡೆಸಿದ್ದೇನೆ. ನಾನು ಇದನ್ನು ಪುನಃ ಹೇಳುತ್ತಿದ್ದೇನೆ, ಮನಸ್ಸಿನಲ್ಲಿರುವ ಈ ದ್ವಿಮುಖ ನಿಲುವನ್ನು ತೆಗೆದುಹಾಕಬೇಕು,'' ಎಂದು ಡಚ್ ಕೋಚ್ ಹೇಳಿದ್ದಾರೆ.

''ಗೋಲು ಗಳಿಸಲು ಆಟಗಾರರನ್ನು ಸಜ್ಜು ಗೊಳಿಸುವಲ್ಲಿ ನಾವು ಕಳೆದ ವಾರ ವಿಫಲರಾಗಿದ್ದೇವೆ. ಈ ವಿಷಯದಲ್ಲಿ ನಾವು ಪರಿಹಾರ ಕಂಡುಕೊಳ್ಳಬೇಕು. ಸ್ವಲ್ಪ ಮಟ್ಟಿಗೆ ಸ್ಮಾರ್ಟ್ ಆಟ ಪ್ರದರ್ಶಿಸಬೇಕು, ಅದು ಬೀದಿಯಾ ಚತುರತೆ ಆಗಿರಬೇಕು ಎಂದು ಹೇಳಿರುವೆ,'' ಎಂದು ಶೆಟ್ಟೋರಿ ಹೇಳಿದರು.

ರಫಾಯೆಲ್ ಮೆಸ್ಸಿ ಬೌಲಿ ಕೊನೆಯ ಹಂತದಲ್ಲಿ ದಾಳಿಯನ್ನು ಮಾಡುವ ಲಕ್ಷಣ ತೋರಿದ್ದರೂ, ಬಾರ್ತಿಲೋಮಿಯೋ ಓಗ್ಬ್ಯಾಚೆ ಅವರ ಅನುಪಸ್ಥಿತಿ ತಂಡದ ಬಲವನ್ನು ಕುಂದಿಸಿದೆ. ಕೇರಳ ತಂಡ ಇದುವರೆಗೂ ಆರು ಗೋಲುಗಳನ್ನು ಗಳಿಸಿದ್ದು, ಕಡಿಮೆ ಗೋಲು ಗಳಿಸಿದ ತಂಡಗಳಲ್ಲಿ ಇದು ಎರಡನೇಯದಾಗಿದೆ. ಆದರೆ ಅನುಭವಿ ಮಿಡ್ ಫೀಲ್ಡರ್ ಮಾರಿಯೋ ಆರ್ಕ್ಯೂಸ್ ಅವರ ಆಗಮನ ತಂಡಕ್ಕೆ ಹೊಸ ಚೈತನ್ಯ ಬಂದಂತಾಗಿದೆ.

ಜೆಮ್ಶೆಡ್ಪುರ ಎಫ್ ಸಿ ಇದುವರೆಗೂ ಹೋರಾಟದ ಕೆಚ್ಚನ್ನು ತೋರಿಸಿದೆ. ಚೆಂಡನ್ನು ಹೆಚ್ಚು ಕಾಲ ತಮ್ಮ ಅಧೀನದಲ್ಲಿರಿಸಿಕೊಳ್ಳುವ ಟಾಟಾ ಪಡೆ ಅದೇ ರೀತಿ ಉತ್ತಮ ರೀತಿಯಲ್ಲಿ ಪ್ರತಿ ದಾಳಿಯನ್ನು ಮಾಡುವ ಚಾಕಚಕ್ಯತೆ ಹೊಂದಿದೆ. ವಿಂಗ್ಸ್ ವಿಭಾಗದಲ್ಲಿ ಜೆಮ್ಶೆಡ್ಪುರ ಪಡೆ ಬಲಿಷ್ಠವಾಗಿರುವುದೇ ಇದಕ್ಕೆ ಮುಖ್ಯ ಕಾರಣ. ಫಾರುಖ್ ಚೌಧರಿ, ಸಿ ಕೆ ವಿನೀತ್ ಮತ್ತು ಅಂಕಿತ್ ಜಾಧವ್ ಈ ವಿಭಾಗದಲ್ಲಿ ಉತ್ತಮವಾಗಿ ಆಡಿದ್ದಾರೆ.

ಟಾಟಾ ಪಡೆಯಲ್ಲಿ ಸೆರ್ಗಿಯೋ ಕ್ಯಾಸ್ಟಲ್ ಹಾಗೂ ಪಿಟಿ ಅವರ ಅನುಪಸ್ಥಿತಿ ಕೇರಳ ತಂಡಕ್ಕೆ ಲಾಭ ಎನಿಸಲಿದೆ.

''ಕೇರಳ ಜಯ ಕಾಣದೆ ಸಾಗುತ್ತಿರುವುದು ನಮ್ಮ ತಂಡಕ್ಕೆ ಯಾವ ರೀತಿಯಲ್ಲಿ ನೆರವಾಗಲಿದೆ ಎಂಬುದು ನನಗೆ ಗೊತ್ತಿಲ್ಲ, ಋತುವಿನ ಮೊದಲಾರ್ಧದಲ್ಲಿ ಗಾಯದ ಕಾರಣ ಅವರಿಗೆ ಅದೃಷ್ಟ ಇರಲಿಲ್ಲ, ಅವರು ಉತ್ತಮ ಫುಟ್ಬಾಲ್ ಆಡಬಲ್ಲರು, ಉತ್ತಮ ರೀತಿಯ ಫುಟ್ಬಾಲ್ ಅವರದ್ದಾಗಿದೆ, ಈ ರೀತಿಯ ಕಡಿಮೆ ಅವಧಿಯ ಲೀಗ್ ನಲ್ಲಿ ನಿಮಗೆ ಹೆಚ್ಚು ಕಾಲಾವಕಾಶ ಇರುವುದಿಲ್ಲ,'' ಎಂದು ಇರಿಯಾಂದೋ ಹೇಳಿದರು.

ಹಿಂದಿನ ನಾಲ್ಕು ಪಂದ್ಯಗಳಲ್ಲಿ ಕೇರಳ ತಂಡ ಜೆಮ್ಶೆಡ್ಪುರ ವನ್ನು ಸೋಲಿಸಿರಲಿಲ್ಲ, ಹತ್ತು ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡು. ಶುಕ್ರವಾರದ ಪಂದ್ಯದಲ್ಲಿ ತಮ್ಮ ಹಿಂದಿನ ದಾಖಲೆಗಳನ್ನು ಮರೆಯುವಂತೆ ಮಾಡುತ್ತಾರೋ, ಅಥವಾ ಕೇರಳ ಅಗ್ರ ಸ್ಥಾನಕ್ಕೆ ಹೋಗುತ್ತದೋ ಕಾಡು ನೋಡಬೇಕು.

Story first published: Thursday, December 12, 2019, 22:52 [IST]
Other articles published on Dec 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X