ಐಎಸ್ಎಲ್2019: ಕೊಚ್ಚಿಯಲ್ಲಿ ಹಂಚಿಹೋದ ಅಂಕ

By Isl Media

ಕೊಚ್ಚಿ, ಡಿಸೆಂಬರ್ 28: ಕೇರಳದ ಪರ ಬಾರ್ಥಲೋಮ್ಯೊ ಓಗ್ಬಚೆ (43ನೇ ನಿಮಿಷ) ಹಾಗೂ ನಾರ್ಥ್ ಈಸ್ಟ್ ಯುನೈಟೆಡ್ ಪರ ಅಸಮೋಹ್ ಗ್ಯಾನ್ (50ನೇ ನಿಮಿಷ) ಗಳಿಸಿ ತಲಾ ಒಂದು ಗೋಲಿನ ಪರಿಣಾಮ ಇಂಡಿಯನ್ ಸೂಪರ್ ಲೀಗ್ ನ 48ನೇ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿತು.

ಸಮಬಲದ ಹೋರಾಟ;

ಕೇರಳ ಪ್ರಥಮಾರ್ಧದದಲ್ಲಿ ಓಗ್ಬಚೆ (43ನೇ ನಿಮಿಷ) ಗಳಿಸಿದ ಗೋಲಿನಿಂದ ಮುನ್ನಡೆ ಕಂಡಿತ್ತು. ಅದು ಕೋಡ ಪೆನಾಲ್ಟಿ ಅವಕಾಶದಿಂದ. ಅದೇ ರೀತಿ ಅಸಮೋಹ್ ಗ್ಯಾನ್ (50ನೇ ನಿಮಿಷ) ತಂಡಕ್ಕೆ ಮೊದಲ ಗೋಲು ತಂದಿತ್ತರು, ಅದು ಕೂಡ ಪೆನಾಲ್ಟಿ ಮೂಲಕ. ಇದರೊಂದಿಗೆ ಇತ್ತಂಡಗಳ ಹೋರಾಟ ಸಮಬಲದಲ್ಲಿ ಸಾಗಿತು. ಇತ್ತಂಡಗಳ ಗೋಲ್ ಕೀಪರ್ ಗಳು ಉತ್ತಮ ರೀತಿಯಲ್ಲಿ ತಡೆಗೋಡೆಯಾದ ಕಾರಣ ಗೋಲು ಗಳಿಸುವ ಅವಕಾಶ ಇತ್ತಂಡಗಳಿಗೂ ತಪ್ಪಿತ್ತು. ದ್ವಿತಿಯಾರ್ಧದದ ಆರಂಭದಲ್ಲೇ ಗೋಲು ದಾಖಲಾದ ಕಾರಣ ಪಂದ್ಯದ ಉಳಿದ ಅವಧಿ ಹೆಚ್ಚು ಕುತೂಹಲಕ್ಕೆ ಅವಕಾಶ ಮಾಡಿಕೊಟ್ಟಿತು.

ಕೇರಳಕ್ಕೆ ಮುನ್ನಡೆ:

ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಗೆಲ್ಲಲೇಬೇಕೆಂಬ ಛಲ ಹೊಂದಿರುವ ಕೇರಳ ಬ್ಲಾಸ್ಟರ್ಸ್ ತಂಡದ ಗುರಿ ಸ್ಪಷ್ಟವಾಗಿದ್ದರೂ ನಾರ್ಥ್ ಈಸ್ಟ್ ಯುನೈಟೆಡ್ ಅದಕ್ಕೆ ಆಸ್ಪದ ಕೊಟ್ಟಿರಲಿಲ್ಲ, ಆದರೂ ಕೇರಳದ ಆಕ್ರಮಣಕಾರಿ ಆಟಕ್ಕೆ 43ನೇ ನಿಮಿಷದಲ್ಲಿ ಫಲ ಸಿಕ್ಕಿತು. ಬಾರ್ಥಲೋಮ್ಯೋ ಓಗ್ಬಚೆ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಆತಿಥೇಯ ತಂಡಕ್ಕೆ ಮುನ್ನಡೆ ಸಿಕ್ಕಿತು. ಮಾರಿಯೋ ಆರ್ಕ್ವೆಸ್ ಉತ್ತಮ ಪಾಸೊಂದನ್ನು ಬಾರ್ಥಲೋಮ್ಯೋ ಓಗ್ಬಚೆಗೆ ನೀಡಿದರು. ಓಗ್ಬಚೆ ಉತ್ತಮ ರೀತಿಯಲ್ಲಿ ಚೆಂಡನ್ನು ಗೋಲ್ ಬಾಕ್ಸ್ ಕಡೆಗೆ ಕೊಂಡೊಯ್ಯುತ್ತಿದ್ದರು. ಆಗ ಸುಭಾಶೀಶ್ ರಾಯ್ ತಡೆಯಲೆತ್ನಿಸಿದರು. ಅದು ಪ್ರಮಾದದ ತಡೆಯಾಗಿತ್ತು. ಇದರಿಂದ ಕೇರಳಕ್ಕೆ ಪೆನಾಲ್ಟಿ ಅವಕಾಶ. ಓಗ್ಬಚೆ ಯಾವುದೇ ರೀತಿಯಲ್ಲಿ ಪ್ರಮಾದವೆಸಗದೆ ಗೋಲು ತಂದಿತ್ತರು.

ಸಮಾನ ದುಃಖಿಗಳ ಹೋರಾಟ:

ಇಂಡಿಯನ್ ಸೋಪರ್ ಲೀಗ್ ನ 48ನೇ ಪಂದ್ಯದಲ್ಲಿ ಕೇರಳ ಬ್ನಾಸ್ಟರ್ಸ್ ತಂಡ ನಾರ್ತ್ ಈಸ್ಟ್ ಯುನೈಟೆಡ್ ಗೆ ಆತಿಥ್ಯ ನೀಡಿತು. 2019ರ ವರ್ಷ ಕೊನೆಗೊಳ್ಳುತ್ತಿದ್ದಂತೆ ಇತ್ತಂಡಗಳಿಗೆ ಇದು ಈ ವರರ್ಷದ ಕೊನೆಯ ಪಂದ್ಯ. ಎರಡು ಬಾರಿ ಚಾಂಪಿಯನ್ ಕೇರಳ ಬ್ನಾಸ್ಟರ್ಸ್ ಈ ಋತುವಿನಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಲಿಲ್ಲ. ಎಂಟು ಪಂದ್ಯಗಳಲ್ಲಿ ಕೇರಳ ತಂಡ ಜಯ ಗಳಿಸಿಲ್ಲ. ಋತುವಿನ ಮೊದಲ ದಿನದಲ್ಲಿ ಜಯ ಗಳಿಸಿದ ನಂತರ ಕೇರಳ ತಂಡ ಮತ್ತೆ ಜಯ ಕಂಡಿರಲಿಲ್ಲ. ಗುರಿ ಇಲ್ಲದ ದಾಳಿ ತಂಡದ ದೊಡ್ಡ ದೌರ್ಬಲ್ಯವೆನಿಸಿದೆ. ಇದನ್ನೇ ಎದುರಾಳಿ ತಂಡಗಳು ಲಾಭಪಡೆದಿವೆ.

9 ಪಂದ್ಯಗಳಲ್ಲಿ ಕೇವಲ 9 ಗೋಲು ಗಳಿಸಿರುವ ಕೇರಳ ತಂಡ ಎಲ್ಲ ರೀತಿಯ ಬಲ ಹೊಂದಿದ್ದರೂ ದುರ್ಬಲ ಪ್ರದರ್ಶನ ನೀಡಿದೆ. ಬಾರ್ತಲೋಮ್ಯೊ ಓಗ್ಬಚೆ, ಸಹಾಲ್ ಸಮದ್ ಮತ್ತು ಮಾರಿಯೋ ಆರ್ಕ್ವೆಸ್ ಪಂದ್ಯವನ್ನು ಜಯಿಸಿಕೊಡಬಲ್ಲ ಸಾಮರ್ಥ್ಯ ಇರುವಂಥ ಆಟಗಾರರು. ನಾರ್ಥ್ ಈಸ್ಟ್ ಯುನೈಟೆಡ್ ತಂಡ ನಾಲ್ಕನೇ ಸ್ಥಾನದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಹೊಂದಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ನಾರ್ಥ್ ಈಸ್ಟ್ ಯುನೈಟೆಡ್ ಜಯದ ಲಯ ಕಂಡುಕೊಳ್ಳಲು ಯತ್ನಿಸುತ್ತಿದೆ. ಎದುರಾಳಿ ಕೇರಳ 9 ಪಂದ್ಯಗಳಿಂದ 9 ಗೋಲು ಗಳಿಸಿದರೆ, ನಾರ್ಥ್ ಈಸ್ಟ್ ಯುನೈಟೆಡ್ 8 ಪಂದ್ಯಗಳಿಂದ ಗಳಿಸಿದ್ದು 8 ಗೋಲುಗಳು

For Quick Alerts
ALLOW NOTIFICATIONS
For Daily Alerts
Story first published: Sunday, December 29, 2019, 9:46 [IST]
Other articles published on Dec 29, 2019
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X