ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಬೆಂಗಳೂರು vs ಕೇರಳ ಕುತೂಹಲಕಾರಿ ಮುಖಾಮುಖಿ

By Isl Media
ISL 2019: Kerala in search of motivation faces toughest test

ಬೆಂಗಳೂರು, ಫೆಬ್ರವರಿ 5: ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಮುನ್ನಡೆಯ ಕನಸು ಕಂಡಿರುವ ಕೇರಳ ಬ್ಲಾಸ್ಟರ್ಸ್ ತಂಡ ಲೀಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ಎಫ್ ಸಿ ವಿರುದ್ಧ ಬುಧವಾರ (ಫೆಬ್ರವರಿ 6) ಕಠಿಣ ಸವಾಲನ್ನು ಎದುರಿಸಲಿದೆ.

ರಣಜಿ ಟ್ರೋಫಿ ಫೈನಲ್ 2019: ಸೌರಾಷ್ಟ್ರ ವಿರುದ್ಧ ವಿದರ್ಭ 60 ರನ್ ಮುನ್ನಡೆರಣಜಿ ಟ್ರೋಫಿ ಫೈನಲ್ 2019: ಸೌರಾಷ್ಟ್ರ ವಿರುದ್ಧ ವಿದರ್ಭ 60 ರನ್ ಮುನ್ನಡೆ

ಅಂಕಪಟ್ಟಿಯಲ್ಲಿ ಇತ್ತಂಡಗಳು ಸಾಕಷ್ಟು ಅಂತರದಲ್ಲಿದ್ದರೂ ಈ ತಂಡಗಳ ನಡುವಿನ ವೈರತ್ವ ಪ್ರಮುಖವಾಗಿದೆ. ಮೂರು ಅಂಕಗಳಿಸಲು ಇತ್ತಂಡಗಳ ನಡುವೆ ತೀವ್ರ ಪೈಪೋಟಿ ನಡೆಸಲಿವೆ. 13 ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡ 30 ಅಂಕಗಳನ್ನು ಗಳಿಸಿ ಈಗಾಲೇ ಪ್ಲೇ ಆಫ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.ಆದರೆ ಕೇರಳ ತಂಡ 14 ಪಂದ್ಯಗಳಲ್ಲಿ 10 ಅಂಕಗಳನ್ನು ಗಳಿಸಿ ಸ್ಪರ್ಧೆಯಿಂದ ಬಹುತೇಕ ಹೊರಗೆ ಉಳಿದಿದೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1042956

"ನಾವು ಲೀಗ್ ನಲ್ಲಿ ಅಗ್ರ ಸ್ಥಾನದಲ್ಲಿರಲು ನಮ್ಮ ಸಂಘಟಿತ ಹೋರಾಟವೇ ಕಾರಣ. ನಾವು ಅಪಾಯದ ಹೆಜ್ಜೆಗಳನ್ನು ಇಟ್ಟೆವು. ಅದು ಅಪಾಯದ ಹೆಜ್ಜೆ ಎಂಬುದು ನಮಗೆ ಗೊತ್ತಿತ್ತು. ಅಂತಿಮ ಫಲಿತಾಂಶ ನಾವು ಲೀಗ್ ನಲ್ಲಿ ಅಗ್ರ ಸ್ಥಾನದಲ್ಲಿದ್ದೇವೆ" ಎಂದು ಬೆಂಗಳೂರು ತಂಡದ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.

ಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ: ಪಾಕ್ ಕೋಚ್ ಮಿಕಿಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ: ಪಾಕ್ ಕೋಚ್ ಮಿಕಿ

ಮಿಕು ಅವರ ಆಗಮನದ ಸಾಧ್ಯತೆ ಹಾಗೂ ಹೊಸ ಆಟಗಾರ ಲ್ಯೂಸ್ಮಾ ವಿಲ್ಲಾ ತಂಡವನ್ನು ಸೇರಿಕೊಂಡಿದ್ದು ಬೆಂಗಳೂರಿನ ಬಲವನ್ನು ಹೆಚ್ಚಿಸಿದೆ. ಆದರೆ ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸುವಲ್ಲಿ ವಿಫಲರಾಗಿರುವುದು ಚಿಂತೆಯ ವಿಷಯವಾಗಿದೆ. ಕಳೆದ 600 ನಿಮಿಷಗಳಿಂದ ಅವರು ಗೋಲು ಗಳಿಸಿರಲಿಲ್ಲ.

ಹರ್ಮನ್ ಜೋತ್ ಕಬ್ರಾ

ಹರ್ಮನ್ ಜೋತ್ ಕಬ್ರಾ

ರಿನೋ ಆಂಟೋ ಬದಲಿಗೆ ಫುಲ್ ಬ್ಯಾಕ್ ನಲ್ಲಿ ಹರ್ಮನ್ ಜೋತ್ ಕಬ್ರಾ ಅವರನ್ನು ಅಂಗಣಕ್ಕಿಳಿಸಲು ಕ್ವಾಡ್ರಟ್ ಅವರ ಯೋಚನೆಯಾಗಿದೆ. ಆಂಟೋ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು.ನಿಶು ಕುಮಾರ್ ಕೂಡ ಆಡುವ ಅವಕಾಶ ಪಡೆಯುವುದು ಸಂಶಯ.

ತಂಡಕ್ಕೆ ಉತ್ತಮವೆನಿಸಿದೆ

ತಂಡಕ್ಕೆ ಉತ್ತಮವೆನಿಸಿದೆ

"ವೈರತ್ವ ಇರುವುದು ಕೇರಳ ತಂಡಕ್ಕೆ ಉತ್ತಮವೆನಿಸಿದೆ. ಪಂದ್ಯದ ವೇಳೆ ಬೆಂಬಲಿಗರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಲಿದ್ದಾರೆ. ಸೋತರೂ ಕೂಡ ಅವರ ಪ್ರೋತ್ಸಾಹ ನಿರಂತರವಾಗಿರುತ್ತದೆ," ಎಂದು ಕ್ವಾಡ್ರಾಟ್ ಹೇಳಿದ್ದಾರೆ.

ಬೇಗನೆ ಮರೆಯುವಂತಾಗಿದೆ

ಬೇಗನೆ ಮರೆಯುವಂತಾಗಿದೆ

ಬ್ಲಾಸ್ಟರ್ಸ್ ತಂಡಕ್ಕೆ ಈ ಋತುವನ್ನು ಆದಷ್ಟು ಬೇಗನೆ ಮರೆಯುವಂತಾಗಿದೆ. 13 ಪಂದ್ಯಗಳಿಂದ ತಂಡ ಜಯ ಕಂಡಿಲ್ಲ. ಜನವರಿಯಲ್ಲಿ ಡೇವಿಡ್ ಜೇಮ್ಸ್ ಬದಲಿಗೆ ಹೆಡ್ ಕೋಚ್ ಆಗಿ ನೆಲೋ ವಿಂಗಡಾ ಅಧಿಕಾರ ಸ್ವೀಕರಿಸಿದರು. ಆದರೂ ಪೋರ್ಚುಗೀಸ್ ಕೋಚ್ ಗೆ ತಂಡಕ್ಕೆ ಜಯದ ಹಾದಿ ತೋರಲಾಗಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸಿಕ್ಕಿದ್ದು ಒಂದು ಡ್ರಾ ಹಾಗೂ ಒಂದು ಸೋಲು.

ಗೋಲಾಗಿರುವುದು 13 ಮಾತ್ರ

ಗೋಲಾಗಿರುವುದು 13 ಮಾತ್ರ

ಕೇರಳ ತಂಡ ಈ ಬಾರಿ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಫಲವಾಗಿರುವುದೇ ಈ ಸ್ಥಿಗೆ ಕಾರಣ.139 ಅವಕಾಶಗಳಲ್ಲಿ ಗೋಲಾಗಿರುವುದು 13 ಮಾತ್ರ. ಡಿಫೆನ್ಸ್ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ನೀಡಿರುವ 23 ಗೋಲುಗಳೇ ಸಾಕ್ಷಿ.

Story first published: Wednesday, February 6, 2019, 19:13 [IST]
Other articles published on Feb 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X