ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ಗೋಲಿಲ್ಲದ ನೀರಸ ಪಂದ್ಯಕ್ಕೆ ಸಾಕ್ಷಿಯಾದ ಡೆಲ್ಲಿ

By Isl Media
ISL 2019: Methodical Delhi keep Goa at bay

ಹೊಸದಿಲ್ಲಿ, ಫೆಬ್ರವರಿ 5: ಇಂಡಿಯನ್ ಸೂಪರ್ ಲೀಗ್ ನ 69ನೇ ಪಂದ್ಯ 0-0 ಗೋಲಿಲ್ಲದೆ ಡ್ರಾ ದಲ್ಲಿ ಕೊನೆಗೊಂಡಿತು. ಗೋವಾ ತಂಡ ಗೋಲು ಗಳಿಸಿ ತನ್ನ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಳ್ಳಲು ಅವಕಾಶ ಹೊಂದಿತ್ತು. ಆದರೆ ಡೆಲ್ಲಿ ಅದಕ್ಕೆ ಆಸ್ಪದ ನೀಡಲಿಲ್ಲ. ಡೆಲ್ಲಿಯ ಗೋಲ್ ಕೀಪರ್ ಫ್ರಾನ್ಸಿಸ್ಕೋ ದೊರನ್ಸೋರೋ ಕೆಲವು ಗೋಲುಗಳನ್ನು ತಡೆದು ಡೆಲ್ಲಿಗೆ ರಕ್ಷಣೆ ನೀಡಿದರು. 25 ಅಂಕ ಗಳಿಸಿದ ಗೋವಾ ಅಂತಿಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಶ್ರೀಲಂಕಾದ 10 ವಿಕೆಟ್ ಮುರಿದ ಸ್ಟಾರ್ಕ್, ಆಸೀಸ್ ಮಡಿಲಿಗೆ ಟೆಸ್ಟ್ ಸರಣಿ!ಶ್ರೀಲಂಕಾದ 10 ವಿಕೆಟ್ ಮುರಿದ ಸ್ಟಾರ್ಕ್, ಆಸೀಸ್ ಮಡಿಲಿಗೆ ಟೆಸ್ಟ್ ಸರಣಿ!

ಪ್ರಥಮಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಲವಾದವು. ಡೆಲ್ಲಿ ಒಂದು ರೀತಿಯಲ್ಲಿ ಉತ್ತಮವಾಗಿಯೇ ಆಡಿತು ಎನ್ನಬಹುದು. ಗೋಲು ಗಳಿಕೆಯಲ್ಲಿ ಪ್ರಭುತ್ವ ಸಾಧಿಸಿರುವ ಗೋವಾ ತಂಡಕ್ಕೆ ಇದು ನಿಜವಾಗಿಯೂ ಹಿನ್ನಡೆ. ಪ್ಲೆ ಆಫ್ ಗೆ ಉತ್ತಮ ಪೈಪೋಟಿ ಇರುವ ಕಾರಣ ಅಂಕಗಳ ಸಮಬಲವಾದಲ್ಲಿ ಗೋಲುಗಳ ಅಂತರದಲ್ಲಿ ಮುನ್ನಡೆಗೆ ಅವಕಾಶ ಇರುತ್ತದೆ. ಗೋವಾಕ್ಕೆ ಇಲ್ಲಿ ಉತ್ತಮ ಅವಕಾಶವಿದ್ದಿತ್ತು. ಆದರೆ ಬಲಿಷ್ಠ ತಂಡ ಗೋಲು ಗಳಿಸುವಲ್ಲಿ ವಿಲವಾಗಿರಿವುದು ಅಚ್ಚರಿ.

ಆರಂಭದಲ್ಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಡೆಲ್ಲಿ ಮನೆಯಂಗಣದ ಪ್ರೇಕ್ಷಕರಲ್ಲಿ ಸಂಭ್ರಮವನ್ನುಂಟು ಮಾಡಿತ್ತು. ಆದರೆ ಅದು ಗೋಲಿಲ್ಲದ ಸಂಭ್ರಮವಾಗಿತ್ತು. ಅೆಂಡಿನ ಮೇಲೆ ಹಿಡಿತ ಸಾಧಿಸಿದ ಡೆಲ್ಲಿ ನಿಜವಾಗಿಯೂ ಗೋಲು ಗಳಿಸದಿದ್ದರೂ ಗೆದ್ದ ತಂಡ ಎನ್ನಬಹುದು.

ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!ಅರ್ಧ ಶತಕ ಚಚ್ಚಿ ಬಿಬಿಎಲ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಮೆಕಲಮ್!

ಡೆಲ್ಲಿ ಹಾಗೂ ಗೋವಾ ತಂಡಗಳು ಇದುವರೆಗೂ 11 ಬಾರಿ ಮುಖಾಮುಖಿಯಾಗಿವೆ. ಗೋವಾ ತಂಡ ಏಳು ಬಾರಿ ಜಯ ಗಳಿಸಿದೆ. ಡೆಲ್ಲಿ ಕೇವಲ ಮೂರು ಬಾರಿ ಜಯ ಗಳಿಸಿದೆ. ಕಳೆದ ಬಾರಿ ಎಡು ಬೇಡಿಯಾ ಪಂದ್ಯದ ಲಿತಾಂಶವನ್ನು ತೀರ್ಮಾನಿಸಿದ್ದರು. ನಾಲ್ಕನೇ ಸ್ಥಾನದ ಗುರಿ ಹೊತ್ತಿರುವ ಗೋವಾಕ್ಕೆ ಇಲ್ಲಿ ಗಳಿಸುವ ಜಯ ಭದ್ರತೆಯನ್ನು ಒದಗಿಸಲಿದೆ.

ಅತಿ ಹೆಚ್ಚು ಗೋಲುಗಳನ್ನು ಗಳಿಸಿರುವ ಗೋವಾ ತಂಡ ಇಲ್ಲಿ ಜಯ ಗಳಿಸಿದರೆ ಮತ್ತೊಂದು ಸ್ಥಾನ ಮೇಲಕ್ಕೇರಲಿದೆ. ಡೆಲ್ಲಿ ತಂಡಕ್ಕೆ ಮೇಲಕ್ಕೇರಲು ಅವಕಾಶವೇ ಕಡಿಮೆ. ಕೇವಲ ಗೌರವಕ್ಕಾಗಿ ಆಡಬೇಕಾಗಿದೆ. 13 ಪಂದ್ಯಗಳನ್ನಾಡಿರುವ ಗೋವಾ ಒಟ್ಟು 23 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಯಾಸದ ಜಯದ ಜಯ ಕಂಡ ಗೋವಾಕ್ಕೆ, ಇನ್ನು ಒಂದು ಅಂಕ ದೊರೆತರೆ ನಾರ್ತ ಈಸ್ಟ್ ಯನೈಟೆಡ್ ತಂಡಕ್ಕಿಂತ ಮೇಲುಗೈ ಸಾಧಿಸಲಿದೆ. ಜಯ ಗಳಿಸಿ ಅಂಕ ಸಿಕ್ಕಿದರೂ ಪ್ಲೇ ಆಫ್ ಆಸೆ ದೂರ ಉಳಿಯಲಿದೆ. ಇಲ್ಲಿ ಗೆದ್ದರೆ ಸತತ ಮೂರನೇ ಜಯ ಗಳಿಸಿದಂತಾಗುತ್ತದೆ. ಇದು ಋತುವಿನ ಉತ್ತಮ ಸಾಧನೆ ಎನ್ನಬಹುದು.

ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!

ಡೆಲ್ಲಿ ತಂಡ ಈ ಬಾರಿ ಋತುವನ್ನು ಅತ್ಯಂತ ಕಳಪೆ ಎಂಬಂತೆ ಆರಂಭಿಸಿತ್ತು. ಆದರೆ ಗೊಂಬೌ ಅವರ ಫುಟ್ಬಾಲ್ ತತ್ವಜ್ಞಾನ ತಂಡದ ಮೇಲೆ ಅಪಾರ ಪರಿಣಾಮ ಬೀರಿದೆ. ದಾಳಿಯಲ್ಲಿ ಡೆಲ್ಲಿ ಅತ್ಯಂತ ಅಪಾಯಕಾರಿ ಎಂಬುದು ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ. ಲಾಲಿಯಾನ್ಜುವಾಲಾ ಚಾಂಗ್ಟೆ ಹಾಗೂ ನಂದಕುಮಾರ್ ಶೇಖರ್ ಫುಲ್ ಬ್ಯಾಕ್‌ನಲ್ಲಿ ಅಪಾಯ ತಂದೊಡ್ಡಬಲ್ಲ ಆಟಗಾರರು. ಡೆಲ್ಲಿ ತಂಡ ಅಂತಿಮ ನಾಲ್ಕರ ಹಂತ ತಲಪುವ ತಂಡಕ್ಕೆ ಅಘಾತ ನೀಡುವ ಹಾದಿಯಲ್ಲಿದೆ. ಉತ್ತಮವಾಗಿ ಆಡಿದರೂ ಗೋಲು ಗಳಿಸುವಲ್ಲಿ ವಿಫಲವಾಗಿರುವುದು ಡೆಲ್ಲಿ ತಂಡದ ದೊಡ್ಡ ದೌರ್ಬಲ್ಯ.

Story first published: Tuesday, February 5, 2019, 11:12 [IST]
Other articles published on Feb 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X