ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಬೆಂಗಳೂರಿಗೆ ಸೋಲಿನ ಶಾಕ್, ಅಗ್ರ ಸ್ಥಾನಕ್ಕೇರಿದ ಮುಂಬೈ

By Isl Media
ISL 2019: Mumbai break Bengaluru’s unbeaten run

ಮುಂಬೈ, ಜನವರಿ 28: ಪೌಲೋ ಮಚಾಡೋ 29ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಂಗಳೂರು ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿದ ಮುಂಬೈ ಸಿಟಿ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಕಳೆದ ಬಾರಿ ರನ್ನರ್ ಅಪ್ ಸ್ಥನ ಗಳಿಸಿದ್ದ ಬೆಂಗಳೂರು ತಂಡ ಇದುವರೆಗೂ ಸೋಲು ಅನುಭವಿಸಿರರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸೋಲಿನ ಆಘಾತ ಅನುಭವಿಸಿತು.

ತೆರಿಗೆ ತಪ್ಪಿಸಿದ್ದಕ್ಕೆ 21.6 ಮಿಲಿಯನ್ ಡಾಲರ್ ದಂಡ ಕಟ್ಟಲಿರುವ ರೊನಾಲ್ಡೋತೆರಿಗೆ ತಪ್ಪಿಸಿದ್ದಕ್ಕೆ 21.6 ಮಿಲಿಯನ್ ಡಾಲರ್ ದಂಡ ಕಟ್ಟಲಿರುವ ರೊನಾಲ್ಡೋ

ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಮುಂಬೈ ಎಫ್ ಸಿ ಪ್ರಥಮಾರ್ದದಲ್ಲೇ ಮೇಲುಗೈ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇದುವರೆಗೂ ಇತ್ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದ ಬೆಂಗಳೂರು ತಂಡ ಎರಡು ಜಯ ಹಾಗೂ ಒಂದು ಡ್ರಾ ಕಂಡಿತ್ತು. ಮುಂಬೈ ತಂಡ ಇದುವರೆಗೂ ಬೆಂಗಳೂರು ವಿರುದ್ಧ ಜಯ ಸಾಧಿಸಿರಲಿಲ್ಲ. 40 ದಿನಗಳ ವಿಶ್ರಾಂತಿಯ ನಂತರ ಬೆಂಗಳೂರು ತಂಡ ಆಟದ ಲಯಕ್ಕೆ ಹೊಂದಿಕೊಳ್ಳುವಲ್ಲಿ ವಿಲವಾಗಿರುವುದು ಸ್ಪಷ್ಟವಾಗಿತ್ತು.

ಜನಾಂಗೀಯ ನಿಂದನೆ : ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಗೆ ನಿಷೇಧಜನಾಂಗೀಯ ನಿಂದನೆ : ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಗೆ ನಿಷೇಧ

ಸುನಿಲ್ ಛೆಟ್ರಿ ಪಡೆಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಸಿಕ್ಕ ಅವಾಕಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂಬೈ ತಂಡದ ಗೋಲ್‌ಕೀಪರ್ ಅದಕ್ಕೆ ಅವಕಾಶ ನೀಡಲಿಲ್ಲ. ಮಿಕು ಹಾಗೂ ಛೆಟ್ರಿ ಅವರ ಹೋರಾಟಕ್ಕೆ ಮುಂಬೈಯ ಡಿಫೆನ್ಸ್ ವಿಭಾಗ ದಿಟ್ಟ ಪ್ರತ್ಯುತ್ತರ ನೀಡಿದ ಪರಿಣಾಮ ಪಂದ್ಯ ಏಕೈಕ ಗೋಲಿನಲ್ಲೇ ಕೊನೆಗೊಂಡಿತು.

ಅಚ್ಚರಿಯ ಆಘಾತ

ಅಚ್ಚರಿಯ ಆಘಾತ

ಫೇವರಿಟ್ ತಂಡವಾಗಿ ಅಂಗಣಕ್ಕಿಳಿದ ಬೆಂಗಳೂರು ತಂಡಕ್ಕೆ ಅಚ್ಚರಿಯ ಆಘಾತ 29ನೇ ನಿಮಿಷದಲ್ಲಿ ಸಿಕ್ಕಿತು. ಜಾರ್ಜ್ ಕೋಸ್ಟಾ ಪಡೆ ಮನೆಯಂಗಣದ ಪ್ರೇಕ್ಷಕರ ಬೆಂಬಲವನ್ನು ಸಪೂರ್ಣವಾಗಿ ಪಡೆದು ಬೆಂಗಳೂರಿನ ಯಾವುದೇ ರಣತಂತ್ರವನ್ನು ಕಾರ್ಯರೂಪಕ್ಕೆ ಬಾರದಂತೆ ನೋಡಿಕೊಂಡಿತು. ಇತ್ತಂಡಗಳು 27 ಅಂಕಗಳನ್ನು ಗಳಿಸಿ ಸಮಬಲ ಸಾಧಿಸಿದ್ದರೂ, ಗೋಲುಗಳ ಅಂತರದಲ್ಲಿ ಮುಂಬೈ ಅಗ್ರ ಸ್ಥಾನಕ್ಕೇರಿತು. ನಿಶು ಕುಮಾರ್ ಹಾಗೂ ಮಿಕು ಚೇತರಿಕೆಯ ಆಟವನ್ನು ತೋರಿದರೂ ಮಚಾಡೋ ಅವರ ಗೋಲು ಗಳಿಕೆಗೆ ಕಡಿವಾಣಹಾಕುವಲ್ಲಿ ತಂಡ ವಿಲವಾಯಿತು. 4-3-3 ಮಾದರಿಯ ಆಟವನ್ನು ಪ್ರದರ್ಶಿಸಿದ ತಂಡ ಯಶಸ್ಸಿನ ಹೆಜ್ಜೆ ಹಾಕುವಲ್ಲಿ ವಿಲವಾಯಿತು. ಕ್ಯೂಡ್ರಾಟ್ ಅವರ ರಣತಂತ್ರ ಈ ಬಾರಿ ಫಲಿಸಲಿಲ್ಲ.

ಆಟದಲ್ಲಿ ವಿಫಲ

ಆಟದಲ್ಲಿ ವಿಫಲ

ಆರಂಭದಲ್ಲೇ ಬೆಂಗಳೂರು ತಂಡ ಸಮರ್ಪಕ ಆಟವನ್ನಾಡುವಲ್ಲಿ ವಿಫಲವಾಯಿತು. ಬೆಂಗಳೂರು ತಂಡ ಹಲವು ಬಾರಿ ಮುಂಬೈಯ ಕಾರ್ನರ್ ವಲಯವನ್ನು ಪ್ರವೇಶಿಸಿತ್ತು. ಆದರೆ ಆತಿಥೇಯ ತಂಡ 29ನೇ ನಿಮಿಷದಲ್ಲಿ ಪ್ರ‘ುತ್ವ ಸಾಧಿಸಿತು. ರೊಲ್ ಬಾಸ್ಟೋಸ್ ನೀಡಿದ ಪಾಸ್‌ಗೆ ಪೌಲೋ ಮಚಾಡೋ ಉತ್ತಮ ರೀತಿಯಲ್ಲಿ ಸ್ಪಂದಿಸಿ ಬೆಂಗಳೂರಿನ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಅವರನ್ನು ವಂಚಿಸಿ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮುಂಬೈ ತಂಡ 1-0 ಅಂತರದಲ್ಲಿ ಮೇಲುಗೈ ಕಂಡಿತು.

ಆತಂಕ ಎದುರಿಸಿದ ಬೆಂಗಳೂರು

ಆತಂಕ ಎದುರಿಸಿದ ಬೆಂಗಳೂರು

ಕೆಲವು ನಿಮಿಷಗಳ ಅಂತರದಲ್ಲೇ ಬೆಂಗಳೂರು ತಂಡ ಎರಡನೇ ಗೋಲು ನೀಡುವ ಆತಂಕವನ್ನು ಎದುರಿಸಿತ್ತು. ಈ ಬಾರಿ ಮೌಡೌ ಸುಗೌ ಅವರಿಟ್ಟ ಗುರಿಯನ್ನು ಗುರ್‌ಪ್ರೀತ್ ತಡೆಯುವಲ್ಲಿ ಯಶಸ್ವಿಯಾದರು. ದ್ವಿತಿಯಾ‘ರ್ದ 20 ನಿಮಿಷಗಳ ಆಟದಲ್ಲಿ ಕ್ರೂಡ್ರಾಟ್ ಕ್ಸಿಸ್ಕೋ ಅವರ ಸ್ಥಾನದಲ್ಲಿ ಚೆಂಕೋ ಗಿಲ್‌ಶೇನ್ ಅವರನ್ನು ಅಂಗಣಕ್ಕಿಳಿಸಿದರು. ಈ ವೇಳೆ ಚೆಂಡನ್ನು ಮುಂಬೈಯ ಪೆನಾಲ್ಟಿ ವಲಯಕ್ಕೆ ಕೊಂಡೊಯ್ದರೂ ಎದುರಾಳಿ ಡಿಫೆನ್ಸ್ ಮುರಿಯುವಲ್ಲಿ ತಂಡ ಯಶಸ್ಸು ಕಾಣಲಿಲ್ಲ.

ಛೆಟ್ರಿಗೆ ಗೋಲ್ ಅವಕಾಶ

ಛೆಟ್ರಿಗೆ ಗೋಲ್ ಅವಕಾಶ

83ನೇ ನಿಮಿಷದಲ್ಲಿ ಬೆಂಗಳೂರು ನಾಯಕ ಸುನಿಲ್ ಛೆಟ್ರಿ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಚೆಂಡು ಬೌನ್ಸ್ ಆದ ಕಾರಣ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಲುಪಿಸುವಲ್ಲಿ ವಿಲವಾದರು. ಉದಾಂತ್ ಸಿಂಗ್ ಅವರ ಸ್ಥಾನದಲ್ಲಿ ಬೈಥಾಂಗ್ ಹವೋಕಿಕ್ ಅವರು ಅಂಗಣಕ್ಕಿಳಿದರೂ ಬೆಂಗಳೂರಿಗೆ ಗೋಲು ಗಳಿಸುವ ಅವಕಾಶ ಸಿಗಲಿಲ್ಲ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡ ಮನೆಯಂಗಣದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಸೆಣಸಲಿದೆ.

Story first published: Monday, January 28, 2019, 10:23 [IST]
Other articles published on Jan 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X