ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಸ್ಟೀಲ್ ಸಿಟಿಯಲ್ಲಿ ಜಯ ಸಾಧಿಸಿದ ಮುಂಬೈ ಸಿಟಿ

By Isl Media
ISL 2019: Mumbai pocket crucial win in Jamshedpur

ಜೇಮ್ಶೆಡ್ಪುರ, ಡಿಸೆಂಬರ್ 20: ಪೌಲೊ ಮಚಾಡೋ (15ನೇ ನಿಮಿಷ) ಹಾಗೂ ರೇನಿಯಲ್ ಫೆರ್ನಾಂಡೀಸ್ (56ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೇಮ್ಶೆಡ್ಪುರ ಎಫ್‌ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಜೆಮ್ಶೆಡ್ಪುರ ತಂಡದ ಪರ ತಿರಿ (36ನೇ ನಿಮಿಷ) ಗಳಿಸಿದ ಗೋಲು ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಪ್ರಥಮಾರ್ಧದಲ್ಲಿ ಇತ್ತಂಡಗಲು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು.

ಸಮಬಲದ ಹೋರಾಟ
ಮುಂಬೈ ಸಿಟಿ ಎಫ್ ಸಿ ಪರ ಪೌಲೊ ಮಚಾಡೋ (15 ನೇ ನಿಮಿಷ) ಹಾಗೂ ಜೆಮ್ಶೆಡ್ಪುರ ಎಫ್ ಸಿ ಪರ ಜೋಸ್ ಲೂಯೀಸ್ ಎಸ್ಪಿನೊಸಾ, (ತಿರಿ) ( 37 ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಪಂದ್ಯದ ಪ್ರಥಮಾರ್ಧ 1-1 ರಲ್ಲಿ ಸಮಬಲಗೊಂಡಿತು. ಸಿಕ್ಕ ಅವಕಾಶಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಂಡಿದ್ದರೆ ಇನ್ನೂ ಕೆಲವು ಗೋಲು ದಾಖಲಾಗುತ್ತಿತ್ತು. ಬಿಪಿನ್ ಸಿಂಗ್ ಅವರಿಗೆ ಪಂದ್ಯ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಉತ್ತಮ ಸಂಪರ್ಕ ಸಿಗದ ಕಾರಣ ಅದು ಯಶಸ್ವಿಯಾಗಲಿಲ್ಲ. ಫಾರುಖ್ ಚೌಧರಿ ಕೂಡ ಅವಕಾಶದಿಂದ ವಂಚಿತರಾದರು. 15 ನೇ ನಿಮಿಷನೇ ನಿಮಿಷದಲ್ಲಿ ಮಚಾಡೋ ಗೋಲು ಗಳಿಸುವ ಮೂಲಕ ಮುಂಬೈ ಮೇಲುಗೈ ಸಾಧಿಸಿತು. ಅದು ಫ್ರೀ ಕಿಕ್ ಮೂಲಕ ದಾಖಲಾದ ಗೋಲಾಗಿತ್ತು. ನಂತರ ಟಾಟಾ ಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು. 37ನೇ ನಿಮಿಷದಲ್ಲಿ ತಿರಿ ಕಾರ್ನರ್ ಕಿಕ್ ಅನ್ನು ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿದರು.

ISL 2019: Mumbai pocket crucial win in Jamshedpur

ಮುಂಬೈ ಫೇವರಿಟ್
ಕಳೆದ ಮೂರು ಪಂದ್ಯಗಳಲ್ಲಿ ಜೆಮ್ಶೆಡ್ಪುರ ಎಫ್ ಸಿ ಮನೆಯಂಗಣದಲ್ಲಿ ಸೋತಿಲ್ಲ, ಅದೇ ರೀತಿ ಗೆದ್ದಿಲ್ಲ. ಅಂದರೆ ಮೂರು ಪಂದ್ಯಗಳು ಡ್ರಾ ದಲ್ಲಿ ಕೊನೆಗೊಂಡಿತ್ತು. ಈಗ ಇದುವರೆಗೂ ತಮ್ಮನ್ನು ಸೋಲಿಸದ ತಂಡದ ವಿರುದ್ಧ ಜಯ ಕಾಣುವ ಗುರಿಯೊಂದಿಗೆ ಟಾಟಾ ಪಡೆ ಅಂಗಣಕ್ಕಿಳಿಯಿತು. ಪಿಟಿ ತಂಡಕ್ಕೆ ಮರಳಿದ್ದಾರೆ, ಆದರೆ ತಂಡದ ಗೋಲಿನ ಶಕ್ತಿ ಸೆರ್ಗಿಯೋ ಕ್ಯಾಸ್ಟಲ್ ಗೈರಾಗಲಿದ್ದಾರೆ. ತಂಡ ಹಲವು ಬಾರಿ ಗೋಲು ಗಳಿಸುವ ಅವಕಾಶವನ್ನು ಕಳೆದುಕೊಂಡಿತ್ತು. ಕ್ಯಾಸ್ಟಲ್ ತಂಡದ ಶೇ. 45% ಭಾಗದಷ್ಟು ಗೋಲುಗಳನ್ನು ಗಳಿಸಿರುವುದನ್ನು ಗಮನಿಸಿದರೆ ತಂಡಕ್ಕೆ ಅವರ ಅಗತ್ಯ ಎಷ್ತೆಂಬುದು ಸ್ಪಷ್ಟವಾಗುತ್ತದೆ. ತಂಡದ ಡಿಫೆನ್ಸ್ ವಿಭಾಗ ದುರ್ಭಲವಾಯಿಗಿರುವುದು ಸ್ಪಷ್ಟ. ಅಂತಿಮ ಕ್ಷಣದಲ್ಲಿ ಗೋಲು ನೀಡುವ ಮೂಲಕ ಟಾಟಾ ಪಡೆ ಜಯದಿಂದ ವಂಚಿತವಾಗಿತ್ತು.

ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ವಿರುದ್ಧ ಜಯ ಗಳಿಸುವ ಮೂಲಕ ಮುಂಬೈ ಸಿಟಿ ಎಫ್ ಸಿ ಅತ್ಯಂತ ಆತ್ಮವಿಶ್ವಾಸದೊಂದಿಗೆ ಉಕ್ಕಿನ ನಗರಕ್ಕೆ ಆಗಮಿಸಿತು. ಆರಂಭದಿಂದ ಇಲ್ಲಿಯವರೆಗೂ ಮುಂಬೈ ಸಿಟಿ ಎಫ್ ಸಿ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಮಾಟೊ ಗ್ರಾಗಿಸಿ ಅವರ ಆಗಮನ ತಂಡದ ಶಕ್ತಿ ಹೆಚ್ಚಿದೆ. ಮುಂಬೈ ತಂಡ ಈಬಾರಿ ಹೊರಗಡೆ ನಡೆದ ಪಂದ್ಯಗಳಲ್ಲಿ ಹೆಚ್ಚಿನ ಯಶಸ್ಸು ಕಂಡಿರುವುದು ಗಮನಾರ್ಹ. ಆದ್ದರಿಂದ ಇಲ್ಲಿ ಗೆಲ್ಲುವ ಆಶಯದೊಂದಿಗೆ ಅಂಗಣಕ್ಕಿಳಿಯಿತು.

Story first published: Thursday, December 19, 2019, 22:19 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X