ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಒಡಿಶಾ ಎಫ್‌ಸಿಗೆ ಪುಣೆಯಲ್ಲಿ ಅಮೂಲ್ಯ ಜಯ

By Isl Media
ISL 2019: Odisha inch closer to top half with Hyderabad win

ಪುಣೆ, ಡಿಸೆಂಬರ್ 12: ಕಾರ್ಲೋಸ್ ಡೆಲ್ಗಡೊ (27ನೇ ನಿಮಿಷ), ಕ್ಸಿಸ್ಕೋ ಹೆರ್ನಾಂಡೀಸ್ (41ನೇ ನಿಮಿಷ) ಹಾಗೂ ಪೆರೆಜ್ ಗೆಡೆಸ್ (71ನೇ ನಿಮಿಷ) ಅವರು ಗಳಿಸಿದ ಅದ್ಭುತ ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್ ಸಿ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಮಣಿಸಿದ ಒಡಿಶಾ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಪ್ಲೇ ಆಫ್ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹೈದರಾಬಾದ್ ಪರ ಬೊಬೊ (65ನೇ ನಿಮಿಷ)ಹಾಗೂ ರೋಹಿತ್ ಕುಮಾರ್ (89ನೇ ನಿಮಿಷ ) ಗಳಿಸಿದ ಸೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಒಡಿಶಾದ ವಿನೀತ್ ರಾಯ್ ರೆಡ್ ಕಾರ್ಡ್ ಪಡೆದು ಹೊರನಡೆಯುವ ಮೂಲಕ ತಂಡ ಸುಮಾರು ಮೂವತ್ತು ನಿಮಿಷಗಳ ಕಾಲ ಕೇವಲ ಹತ್ತೇ ಆಟಗಾರರೊಂದಿಗೆ ಆಟ ಮುಂದುವರಿಸಿತ್ತು. ಈ ಜಯದೊಂದಿಗೆ ಒಡಿಶಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ತಲುಪಿತು.

ಒಡಿಶಾಕ್ಕೆ ಮುನ್ನಡೆ
ಕಾರ್ಲೋಸ್ ಡೆಲ್ಗಡೊ (27ನೇ ನಿಮಿಷ) ಹಾಗೂ ಕ್ಸಿಸ್ಕೋ ಹೆರ್ನಾಂಡೀಸ್ (41ನೇ ನಿಮಿಷ) ಗಳಿಸಿದ ಗೋಲುಗಳ ನೇರವಿನಿಂದ ಒಡಿಶಾ ತಂಡ ಪ್ರಥಮಾರ್ಧದಲ್ಲಿ 2-0 ಗೋಲುಗಳಿಂದ ಮೇಲುಗೈ ಸಾಧಿಸಿತು, ಇರೋಂದಿಗೆ ಹೈದರಾಬಾದ್ ಗೆ ಕೊನೆಯ ಸ್ಥಾನದಲ್ಲೇ ಇರಿ ಎಂಬ ಸಂದೇಶ ನೀಡಿತು. ಪ್ರಥಮಾರ್ಧ ಒಡಿಶಾ ತಂಡಕ್ಕೆ ಪಂದ್ಯ ಗೆದ್ದಷ್ಟೇ ಸಂಭ್ರಮ. ಇದು ಒಡಿಶಾ ತಂಡ ಇದುವರೆಗೂ ಆಡಿದ ಪ್ರಥಮಾರ್ಧಗಳಲ್ಲೇ ಉತ್ತಮವಾದುದು. ಏಕೆಂದರೆ ಇದುವರೆಗೂ ಎರಡು ಗೋಲುಗಳನ್ನು ತಂಡ ಪ್ರಥಮಾರ್ಧದಲ್ಲಿ ಗಳಿಸಿಲ್ಲ. ಆರಂಭದಿಂದಲೂ ಒಡಿಶಾ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತ್ತು, ಆದರೆ ಅವಕಾಶಗಳನ್ನು ನಿರ್ಮಿಸುವಲ್ಲಿ ವಿಫಲವಾಗಿತ್ತು. ಅರ್ಧ ಗಂಟೆಯ ಪಂದ್ಯ ಮುಗಿಯಲು ಮೂರು ನಿಮಿಷ ಬಾಕಿ ಇರುವಾಗ ಪ್ರವಾಸಿ ತಂಡ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು.

ISL 2019: Odisha inch closer to top half with Hyderabad win

ತಳಮಟ್ಟದ ಹೋರಾಟ
ಮನೆಯಲ್ಲದ ಮನೆಯಂಗಣದಲ್ಲಿ ಒಡಿಶಾ ಎಫ್ ಸಿ ಗೆ ಇದು ಕೊನೆಯ ಪಂದ್ಯ.ಇಂಡಿಯನ್ ಸೂಪರ್ ಲೀಗ್ ನ 36ನೇ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಬಾದ್ ಎಫ್ ಸಿ ಹಾಗೂ ಒಡಿಶಾ ಎಫ್ ಸಿ ತಂಡಗಳು ಜಯದ ಗುರಿಹೊತ್ತು ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಅಂಗಣಕ್ಕಿಳಿದವು. ಇತ್ತಂಡಗಳು ಈ ಋತುವಿನಲ್ಲಿ ಕೇವಲ ಒಂದು ಬಾರಿ ಜಯಗಳಿಸಿವೆ. ಇದರಿಂದಾಗಿ ಇತ್ತಂಡಗಳಿಗೆ ಪ್ರತಿಯೊಂದು ಪಂದ್ಯವೂ ಪ್ರಮುಖವಾಗಿದೆ, ಜತೆಯಲ್ಲಿ ಜಯ ಅನಿವಾರ್ಯವಾಗಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ಒಡಿಶಾ ಎಫ್ ಸಿ ತೋರಿರಿಯುವ ಪ್ರದರ್ಶನದ ಬಗ್ಗೆ ಕೋಚ್ ಜೋಸೆಫ್ ಗೊಂಬಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಗೋಲು ಗಳಿಸುವ ಅವಕಾಶ ಇದ್ದರೂ ವಿಫಲವಾದ ಕಾರಣ ತಂಡ ಒಂಟಿ ಗೋಲಿನಿಂದ ಸೋಲು ಅನುಭವಿಸಿತ್ತು. ಅರಿದನೇ ಸ್ಯಾಂಟನ ಮತ್ತು ಕ್ಸಿಸ್ಕೋ ಹೆರ್ನಾಂಡೀಸ್ ಅವರ ಮೇಲೆ ತಂಡ ಹೆಚ್ಚು ಆಧರಿಸಿದೆ, ಒಡಿಶಾ ತಂಡ ಗಳಿಸಿರುವ ಎಂಟು ಗೋಲುಗಳಲ್ಲಿ ಏಳು ಗೋಲುಗಳನ್ನು ಈ ಇಬ್ಬರು ಆಟಗಾರರು ಹಂಚಿಕೊಂಡಿದ್ದಾರೆ.

ಡಿಫೆನ್ಸ್ ವಿಭಾಗದಲ್ಲೂ ಒಡಿಶಾ ಉತ್ತಮವಾಗಿಲ್ಲ. ಹೈದರಾಬಾದ್ ಎಫ್ ಸಿ ಲೀಗ್ ನಲ್ಲಿ ಇದುವರೆಗೂ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಮೇಲಕ್ಕೇರುವ ಗುರಿಯೊಂದಿಗೆ ಹೈದರಬಾದ್ ಅಂಗಣಕ್ಕಿಳಿಯಿತು. ಇಲ್ಲಿ ಹೈದರಾಬಾದ್ ಗೆದ್ದರೆ ಒಂದು ಸ್ಥಾನ ಮೇಲಕ್ಕೇರಲಿದೆ. ಮಾರ್ಸೆಲೋ ಪೆರೇರಾ ಅಮಾನತುಗೊಂಡಿರುವುದು ತಂಡದ ಬಲವನ್ನು ಕುಗ್ಗಿಸಿದೆ. ಗೋಲು ಗಳಿಸುತ್ತಿದ್ದ ಮಾರ್ಕೊ ಸ್ಟ್ಯಾಂಕೋವಿಕ್ ಗಾಯದಿಂದ ಹೊರಗುಳಿದಿದ್ದಾರೆ.ಗಿಲ್ಸ್ ಬಾರ್ನೆಸ್, ಬೊಬೊ ಮತ್ತು ರಾಬಿನ್ ಸಿಂಗ್ ಅವರನ್ನು ತಂಡ ಹೆಚ್ಚು ಆಧರಿಸಿದೆ.

Story first published: Wednesday, December 11, 2019, 23:50 [IST]
Other articles published on Dec 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X