ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಬೆಂಗಳೂರಿಗೆ ಜಯವಲ್ಲದೆ ಬೇರೇನೂ ಅಗತ್ಯವಿಲ್ಲ

By Isl Media
ISL 2019: All or nothing as Bengaluru take on NorthEast United

ಬೆಂಗಳೂರು, ಮಾರ್ಚ್ 11: ಹೀರೋ ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ತಲುಪಬೇಕಾದರೆ ಕಳೆದ ಬಾರಿಯ ಫೈನಲಿಸ್ಟ್ ಬೆಂಗಳೂರು ತಂಡಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಜಯವಲ್ಲದೆ ಬೇರೇನೂ ಅಗತ್ಯವಿಲ್ಲ. ಬೆಂಗಳೂರು ತಂಡ ಹಲವಾರು ಕಠಿಣ ಪಂದ್ಯಗಳಲ್ಲಿ ಜಯ ಗಳಿಸಿ ಯಶಸ್ಸು ಕಂಡಿದೆ. ಆದರೆ ಸೋಮವಾರ ತಮ್ಮದೇ ಕೋಟೆಯಲ್ಲಿ ನಡೆಯುವ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸಬೇಕಾದ ಅಗತ್ಯವಿದೆ.

ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!ಮೊಹಾಲಿಯಲ್ಲಿ ಭಾರತಕ್ಕೆ ಮತ್ತೆ ಸೋಲು, ದಾಖಲೆ ಮುರಿಯುವಾಸೆ ಮಣ್ಣುಪಾಲು!

ಯಾವುದೇ ತಂಡ ಇಲ್ಲಿ ಅಂಕಗಳನ್ನು ಗಳಿಸುವುದಕ್ಕೆ ಮೊದಲು ಎರಡು ಬಾರಿ ಯೋಚಿಸುತ್ತದೆ. ಏಕೆಂದರೆ ಕಂಠೀರವ ಕ್ರೀಡಾಂಗಣ ಎಂಬುದು ಬಿಎಫ್ ಸಿ ಕೋಟೆಯಾಗಿದೆ. ಅನೇಕ ತಂಡಗಳು ಈ ಯತ್ನ ಮಾಡಿ ಇಲ್ಲಿ ವಿಫಲವಾಗಿವೆ. ಆದರೆ ಕೆಲವೊಂದು ಸಂರ್ಭಗಳಲ್ಲಿ ಪ್ರವಾಸಿ ಪಂದ್ಯಗಳು ಗೆದ್ದಿರುವುದಿದೆ. ಈ ಬಾರಿ ಅಂಥ ಪರಿಸ್ಥಿತಿ ನಿರ್ಮಾಣವಾಗಬಹುದೇ ಎಂಬ ಕುತೂಹಲ ಮನೆ ಮಾಡಿದೆ. ಫೈನಲ್ ತಲುಪುವ ಉತ್ಸುಕತೆಯಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಬೆಂಗಳೂರು ತನ್ನ ಘನತೆಯನ್ನು ಕಾಯ್ದುಕೊಳ್ಳಬೇಕಾದರೆ ಜಯ ಗಳಿಸಬೇಕಿದೆ. ಗುವಾಹಟಿಯಲ್ಲಿ ನಡೆದ ಮೊದಲ ಹಂತದ ಸೆಮಿೈನಲ್ ಪಂದ್ಯದಲ್ಲಿ ಕಾರ್ಲಸ್ ಕ್ಯುಡ್ರಾಟ್ ಪಡೆ 1-2 ಗೋಲುಗಳಿಂದ ಸೋತಿತ್ತು. ಕೊನೆಯ ಐದು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಬೆಂಗಳೂರು ತಂಡದ ನಡೆ ಮುಂದುವರಿದಿದೆ ಎಂಬುದು ಆ ಲಿತಾಂಶದಿಂದ ಸಾಬೀತಾಗಿದೆ. ನಾಳೆಯ ಪಂದ್ಯದಲ್ಲಿ ಡ್ರಾ ಸಾಧಿಸಿದರೆ ಬೆಂಗಳೂರಿಗೆ ಯಾವುದೇ ಪ್ರಯೋಜನ ಇರುವುದಿಲ್ಲ.

1
1052776

'ನಾವು ದೊಡ್ಡ ಪಂದ್ಯವೊಂದಕ್ಕೆ ಸಜ್ಜಾಗಿದ್ದೇವೆ, ನಾವು ಗೆಲ್ಲುವ ಮನದಲ್ಲಿದ್ದೇವೆ, ಇಲ್ಲಿಯ ಪ್ರೇಕ್ಷಕರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರು ವರ್ಷದುದ್ದಕ್ಕೂ ನೆನಪಿಟ್ಟುಕೊಳ್ಳುವಂಥ ರಾತ್ರಿಯೊಂದನ್ನು ಎದುರಾಳಿ ತಂಡಕ್ಕೆ ತೋರಿಸಲಿದ್ದೇವೆ,' ಕ್ಯುಡ್ರಾಟ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಹೊಸ ದಾಖಲೆಭಾರತ vs ಆಸ್ಟ್ರೇಲಿಯಾ: 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಹೊಸ ದಾಖಲೆ

ಗುವಾಹಟಿಯಲ್ಲಿ ಶಿಸ್ಕೋ ಹೆರ್ನಾಂಡೇಸ್ ಗಳಿಸಿದ ಗೋಲಿನಿಂದ ಸತತ ಎರಡನೇ ಬಾರಿಗೆ ಫೈನಲ್ ತಲಪುವ ಆಶಯವನ್ನು ಬೆಂಗಳೂರು ತೋರಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬೆಂಗಳೂರು ತಂಡಕ್ಕೆ ಫೈನಲ್ ತಲುಪಲು ಏಕೈಕ ಗೋಲಿನಿಂದ ಜಯ ಗಳಿಸಿದರ ಸಾಕಾಗುತ್ತದೆ. ಅದಕ್ಕಿಂತ ಯಾವುದೇ ಕಡಿಮೆ ಹಂತದ ಲಿತಾಂಶ ತಂಡವನ್ನು ಹೊರಗಟ್ಟಲಿದೆ.

ಭಾರತ vs ಆಸ್ಟ್ರೇಲಿಯಾ: ದೀರ್ಘ ಕಾಲದ ಬಳಿಕ ಅಬ್ಬರಿಸಿದ ಶಿಖರ್ ಧವನ್ಭಾರತ vs ಆಸ್ಟ್ರೇಲಿಯಾ: ದೀರ್ಘ ಕಾಲದ ಬಳಿಕ ಅಬ್ಬರಿಸಿದ ಶಿಖರ್ ಧವನ್

ಮಿಕು ಹಾಗೂ ಸುನಿಲ್ ಛೆಟ್ರಿ ಅವರ ಮೇಲೆ ಬೆಂಗಳೂರು ಕೋಚ್ ಹೆಚ್ಚಿನ ಗಮನ ಹರಿಸಲಿದ್ದಾರೆ. ಒಂದು ಗೋಲಿನ ಅಂತರದ ಜಯ ತಂಡವನ್ನು ಫೈನಲ್‌ಗೆ ಕೊಂಡೊಯ್ಯಲಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡದ ಕೋಚ್ ಎಲ್ಕೊ ಷೆಟೋರಿ ತಂಡದ ಮೊದಲ ಜಯ ಅಪ್ರಯೋಜಕವಾಗದಂತೆ ನೋಡಿಕೊಳ್ಳಲು ಎಲ್ಲ ರೀತಿಯ ಯೋಜನೆ ಹಾಕಿಕೊಂಡಿದ್ದಾರೆ. ಐಎಸ್‌ಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ಲೇಆಫ್ ಹಂತ ತಲುಪಿರುವ ನಾರ್ತ್ ಈಸ್ಟ್ ತಂಡದ ಪರ ಬೆಂಗಳೂರು ಪಂದ್ಯಕ್ಕೆ ನಾಯಕ ಬಾರ್ತಲೋಮ್ಯೊ ಒಗ್ಬಚೆ ಗೈರಾಗಲಿದ್ದಾರೆ. ಬೆಂಗಳೂರು ವಿರುದ್ಧದ ಮೊದಲ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾಗಿರುವ ಒಗ್ಬಚೆ ಸೋಮವಾರದ ಪಂದ್ಯದಲ್ಲಿ ಆಡುವುದಿಲ್ಲ. ಇದರಿಂದಾಗಿ ಗಲ್ಲೆಗೋ ಅವರು ಬಾರ್ತಲೋಮ್ಯಾ ಒಗ್ಬಚೆ ಅವರ ಸ್ಥಾನದಲ್ಲಿ ಆಡುವ ಸಾಧ್ಯತೆ ಇದೆ.

ಒಗ್ಬಚೆ ಹೊರಗುಳಿಯುವುದರಿಂದ ಫೆಡೆರಿಕೊ ಗಲ್ಲೆಗೋ ಅವರು ಅಂಗಣಕ್ಕಿಳಿಯಲಿದ್ದಾರೆ. ನಾರ್ತ್ ಈಸ್ಟ್ ಪ್ಲೇ ಆಫ್ ಹಂತ ತಲಪುವಲ್ಲಿ ಉರುಗ್ವೆಯ ಈ ಆಟಗಾರನ ಪಾತ್ರ ಪ್ರಮುಖವಾಗಿತ್ತು. ಜುವಾನ್ ಮಾಸ್ಕಿಯಾ ಕೂಡ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಒಗ್ಬಚೆ ಅವರ ಅನುಪಸ್ಥಿತಿ ಪ್ರವಾಸಿ ತಂಡದ ಶಕ್ತಿಯ ಮೇಲೆ ಪರಿಣಾಮಬೀರುವುದ ಸಹಜ.

'ಬೆಂಗಳೂರು ತಂಡ ಹೇಗೆ ಆಡುತ್ತದೆ ಎನ್ನುವುದರ ಬಗ್ಗೆಯೂ ಗೊತ್ತಿದೆ, ಅಲ್ಲದೆ ಕೊನೆಯ ಪಂದ್ಯವನ್ನು ಹೇಗೆ ಆಡಬಹುದು ಎನ್ನುವುದರ ಬಗ್ಗೆಯೂ ಅರಿವಿದೆ. ಕಳೆದ ಪಂದ್ಯದ ಆರಂ'ದಲ್ಲಿ ನಾವು ಸಂಪೂರ್ಣವಾಗಿ ಪ್ರಭುತ್ವ ಸಾಧಿಸಿದೆವು, ದ್ವಿತಿಯಾರ್ಧ ಕಠಿಣವಾಗಿತ್ತು. ನಾವು ಬದಲಾಣೆ ಮಾಡಿರುವುದು ಯಶಸ್ಸು ಕಂಡಿತು. ಆದರೆ ಇಲ್ಲಿ ಹಿಂದಿನ ಯಾವ ಲೆಕ್ಕಾಚಾರವೂ ಪ್ರಯೋಜನವಾಗದು, ನಾವು ಫೈನಲ್ ತಲಪುವ ಗುರಿ ಹೊಂದಿದ್ದೇವೆ, ಅದಕ್ಕಾಗಿ ಪ್ರಯತ್ನ ನಡೆಸಲಿದ್ದೇವೆ,' ಎಂದು ಷೆಟೋರಿ ಹೇಳಿದ್ದಾರೆ.

Story first published: Monday, March 11, 2019, 1:12 [IST]
Other articles published on Mar 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X