ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಬೆಂಬಲಕ್ಕಿದ್ದಾರೆ ಪ್ರಯೋಗಶೀಲ ಕೋಚ್ ಕೋಸ್ಟಾ

By Isl Media
ISL 2019: Pragmatic Costa provides Mumbai with hope

ಮುಂಬೈ, ಮಾರ್ಚ್ 5: ಆರಂಭದಲ್ಲಿ ಗಮನಿಸಿದಾಗ ಈ ಬಾರಿಯೂ ಮುಂಬೈ ಸಿಟಿ ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಎಫ್ ಅವಕಾಶದಿಂದ ವಂಚಿತವಾಗುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಜಾರ್ಜ್ ಕೋಸ್ಟಾ ತಮ್ಮ ತಂಡವನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಾಗಲೇ ಫೈನಲ್‌ಗೆ ಕೊಂಡೊಯ್ದರು.

ಭಾರತ vs ಆಸ್ಟ್ರೇಲಿಯಾ: ಪಂದ್ಯ ಗೆದ್ದರೆ ಟೀಮ್ ಇಂಡಿಯಾ ಹೊಸ ದಾಖಲೆ!ಭಾರತ vs ಆಸ್ಟ್ರೇಲಿಯಾ: ಪಂದ್ಯ ಗೆದ್ದರೆ ಟೀಮ್ ಇಂಡಿಯಾ ಹೊಸ ದಾಖಲೆ!

ಮುಂಬೈ ತಂಡ ಇದುವರೆಗೂ ಒಮ್ಮೆ ಮಾತ್ರ ಪ್ಲೇ ಆಫ್ ಹಂತ ತಲುಪಿದೆ, ಆದರೆ ಫೈನಲ್ ತಲಪುವಲ್ಲಿ ವಿಫಲವಾಗಿದೆ. ಗೋವಾ ವಿರುದ್ಧ ಲೀಗ್ ಪಂದ್ಯದಲ್ಲಿ ಮುಂಬೈ ಸೋಲನುಭವಿಸಿತ್ತು. ಈಗ ಪ್ಲೆ' ಆಫ್ ನಲ್ಲಿ ಮತ್ತೆ ಗೋವಾವನ್ನು ಎದುರಿಸಲು ಸಜ್ಜಾಗಿರುವ ಮುಂಬೈಗೆ ಹಿಂದಿನ ಇತಿಹಾಸವನ್ನು ಅಳಿಸಿ ಹಾಕಲು ಸಾಧ್ಯವೇ?. ಆದರೆ ಸದಾ ಪ್ರಯೋಗಶೀಲ ಕೋಚ್ ಕೋಸ್ಟಾ ಅವರು ಜಯದಲ್ಲಿ ನಂಬಿಕೆ ಇಟ್ಟಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ!ಭಾರತ vs ಆಸ್ಟ್ರೇಲಿಯಾ: ಅನಗತ್ಯ ದಾಖಲೆ ಬರೆದ ರೋಹಿತ್ ಶರ್ಮಾ!

ಈ ಋತುವಿನ ಪ್ರತಿಯೊಂದು ಹಂತದಲ್ಲೂ ಮುಂಬೈ ಆಟಗಾರರು ಕೋಚ್ ಕೋಸ್ಟಾ ಅವರ ಪ್ರಯೋಗಶೀಲತೆಗೆ ಒಗ್ಗಿಕೊಂಡು ಆಡಿದ್ದಾರೆ. ಕೇರಳ ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 6-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ್ದನ್ನು ಹೊರತುಪಡಿಸಿದರೆ, ಮುಂಬೈ ತಂಡ ಪ್ಲೇ ಆಫ್ ಹಂತ ತಲಪುವ ತಂಡವಾಗಿ ಎಲ್ಲಿಯೂ ಕಂಡು ಬಂದಿಲ್ಲ. ಕೋಸ್ಟಾ ಪಡೆ ಗೋಲು ಗಳಿಸಿದ್ದು ಕೂಡ 25, ಇದು ಸೆಸಾರ್ ಫೆರಾಂಡೋ ಅವರ ಜೆಮ್ಷೆಡ್ಪುರ ತಂಡ (29) ಗಳಿಸಿದ್ದಕ್ಕಿಂತಲೂ ಕಡಿಮೆ. ಗೋವಾ ತಂಡ 36 ಗೋಲುಗಳನ್ನು ಗಳಿಸಿ ಮೇಲುಗೈ ಸಾಧಿಸಿದೆ. ಇದರಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮುಂಬೈ ತಂಡದ ಪ್ರಯೋಗಶೀಲತೆಯಲ್ಲಿನ ಯಶಸ್ಸು ಅಚ್ಚರಿಯನ್ನುಂಟು ಮಾಡಿತು.

ಅಂತಾರಾಷ್ಟ್ರೀಯ ಏಕದಿನ ಆಟ ನಿಲ್ಲಿಸಲು ದಕ್ಷಿಣ ಆಫ್ರಿಕಾದ ತಾಹಿರ್ ನಿರ್ಧಾರಅಂತಾರಾಷ್ಟ್ರೀಯ ಏಕದಿನ ಆಟ ನಿಲ್ಲಿಸಲು ದಕ್ಷಿಣ ಆಫ್ರಿಕಾದ ತಾಹಿರ್ ನಿರ್ಧಾರ

'ಕೋಚ್ ಆಗಿ ನನಗೆ ಫುಟ್ಬಾಲ್‌ನಲ್ಲಿ ಪಂದ್ಯದ ಕೊನೆಯಲ್ಲಿ ಮೂರು ಅಂಕ ಗಳಿಸುವುದೇ ಮುಖ್ಯ, ' ಎಂದು ಕೋಸ್ಟಾ ಹೇಳಿದ್ದಾರೆ. ಯಾವುದೇ ಯೋಜನೆಗಳಿರಲಿ ಕೊನೆಯಲ್ಲಿ ಮೂರು ಅಂಕ ಗಳಿಸುವುದೇ ಮುಖ್ಯ, ಮುಂಬೈ ತಂಡದ ಕೋಚ್ ಹೇಳಿರುವ ಮಾತು ಪ್ರತಿಯೊಂದು ಪಂದ್ಯದಲ್ಲೂ ಸಾಬೀತಾಗುತ್ತಿದೆ. ಗೋವಾದ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ 0-5 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು. ಈ ರೀತಿಯ ಆಟವನ್ನು ಕೈ ಚೆಲ್ಲುವುದು ಸೂಕ್ತವಲ್ಲ, ಕೊನೆಯ ಕ್ಷಣದವರೆಗೂ ಹೋರಾಟ ನೀಡಬೇಕು. ಈ ರೀತಿಯ ಪ್ರದರ್ಶನ ಸ್ವೀಕಾರ್ಹವಲ್ಲ. ಮುಂಬೈ ತಂಡ ಮೊದಲ 20 ನಿಮಿಷಗಳ ಆಟದಲ್ಲಿ ಮೇಲುಗೈ ಸಾಧಿಸಿತ್ತು, ಆದರೆ ಆ ನಂತರ ಗೋವಾಕ್ಕೆ ಶರಣಾಯಿತು. ಬೆಂಗಳೂರು ತಂಡವನ್ನು ಸೋಲಿಸಿದ ಮುಂಬೈ ತಂಡಕ್ಕೆ ಸೆಮಿಫೈನಲ್‌ನಲ್ಲಿ ಯಶಸ್ಸುದಕ್ಕೀತೆ ಎಂಬುದು ಎಲ್ಲರ ಕುತೂಹಲ.

ಕೊಹ್ಲಿಯನ್ನು ಜಂಪಾ ಔಟ್ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗನ ನೆರವಿನಿಂದ!ಕೊಹ್ಲಿಯನ್ನು ಜಂಪಾ ಔಟ್ ಮಾಡಿದ್ದು ಭಾರತದ ಮಾಜಿ ಕ್ರಿಕೆಟಿಗನ ನೆರವಿನಿಂದ!

ಮುಂಬೈಯ ಡಿಫೆನ್ಸ್ ವಭಾಗ ಅತ್ಯಂತ ಬಲಿಷ್ಠವಾದುದು. ಪ್ರತಿಯೊಂದು ಪಂದ್ಯಕ್ಕೂ ತನ್ನ ಯೋಜನಗಳನ್ನು ಬದಲಾಯಿಸಿ ಹೊಸ ಪ್ರಯೋಗ ಕಾಣುವ ಕೋಸ್ಟಾ ಸೆಮಿಫೈನಲ್‌ಗೂ ದಕ್ಕ ಅಸ್ತ್ರಗಳನ್ನು ರಚಿಸುತ್ತಿದ್ದಾರೆ. ಯಾವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿಕೊಂಡಿದೆಯೇ ಅದೇ ರೀತಿಯಲ್ಲಿ ಮುಂಬೈ ತಂಡಕ್ಕೆ ತಕ್ಕ ಪ್ರತಿಲ ಸಿಕ್ಕಿದೆ. ಇದರ ಪರಿಣಾಮವಾಗಿ ಮುಂಬೈ ತಂಡಕ್ಕೆ ಅದ್ಭುತ ಲಿತಾಂಶಗಳನ್ನು ಕಾಣಲು ಸಾಧ್ಯವಾಯಿತು. ಅದಕ್ಕೆ ಉತ್ತಮ ಉದಾಹರಣೆ ಬೆಂಗಳೂರು ವಿರುದ್ಧದ 1-0 ಜಯ. ಕೋಸ್ಟಾ ಅವರ ಪ್ರಯೋಗ ಶೀಲತೆಯ ಉತ್ತಮ ರೀತಿಯಲ್ಲಿ ಫಲಿಸಿದರೆ ಗೋವಾದ ಹಾದಿ ಕಠಿಣವಾಗುವುದು ಸ್ಪಷ್ಟ.

Story first published: Tuesday, March 5, 2019, 17:45 [IST]
Other articles published on Mar 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X