ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಸ್ಥಿರ ಗೋವಾಕ್ಕೆ, ಹೊಸತನದ ಚೆನ್ನೈಯಿನ್ ಸವಾಲು

ISL 2019: Stable Goa take on rebuilt Chennaiyin FC

ಗೋವಾ, ಅಕ್ಟೋಬರ್ 23: ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕಳೆದ ಬಾರಿಯ ಫೈನಲಿಸ್ಟ್ ಎಫ್‌ಸಿ ಗೋವಾ ತಂಡ ಚೆನ್ನೈಯಿನ್ ಎಫ್‌ಸಿ ವಿರುದ್ಧ ಈ ಬಾರಿಯ ಇಂಡಿಯನ್ ಸೂಪರ್ ಲೀಗ್ ನ ಅಭಿಯಾನವನ್ನು ಆರಂಭಿಸಲಿದೆ.

ಇಂಡಿಯನ್ ಸೂಪರ್ ಲೀಗ್ ನಲ್ಲಿ ಕಾಡಿತ್ತು ಎಂದೇ ಹೆಸರಾಗಿರುವ ಗೋವಾ ಕಳೆದ ಋತುವಿನಲ್ಲಿ ಕೊನೆಯ ಸ್ಥಾನ ತಲುಪಿದ್ದ ಕ್ಲಬ್ ವಿರುದ್ಧ ಜಯದ ಆರಂಭ ಕಾಣುವ ಗುರಿ ಹೊಂದಿದೆ. ಬೇಸಿಗೆಯಲ್ಲಿ ತಂಡವನ್ನು ಹೊಸದಾಗಿ ರೂಪಿಸಿದ ಚೆನ್ನೈಯಿನ್ ಎಫ್ ಸಿ ಕಳೆದ ಬಾರಿ ಅದೊಂದು ತಪ್ಪು ಹೆಜ್ಜೆ ಎಂದರಿತು ಹೊಸ ಹೋರಾಟಕ್ಕೆ ಮುಂದಾಗಿದೆ.

ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!

ಕುತೂಹಲದ ಸಂಗಾತಿಯೆಂದರೆ ಸರ್ಗಿಯೊ ಲೊಬೆರಾ ಹಾಗೂ ಜಾನ್ ಗ್ರೆಗೊರಿ ಗೋವಾ ಹಾಗೂ ಚೆನ್ನೈಯಿನ್ ಎಫ್ ಸಿ ಪರ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ನಿರೀಕ್ಷೆಯಂತೆ ಗೋವಾ ತಂಡ ಸ್ಥಿರ ಪ್ರದರ್ಶನ ನೀಡುವುದಕ್ಕೆ ಹೆಸರಾಗಿದ್ದು, ತಂಡದ ಹೆಚ್ಚಿನ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಆಟಗಾರರು ತಂಡದಲ್ಲೇ ಉಳಿದುಕೊಂಡಿದ್ದರೆ.

ಫರಾನ್ ಕೊರೊಮಿನಾಸ್, ಹ್ಯೂಗೋ ಬೌಮೌಸ್, ಅಹಮದ್ ಜಹೌಹ್ ಮತ್ತು ಎಡು ಬೇಡಿಯಾ ಎಲ್ಲರು ಗೋವಾದಲ್ಲಿ ಮೂರನೇ ಋತುವಿಗೆ ಕಾಲಿಟ್ಟಿದ್ದಾರೆ. ಮಂದಾರ್ ರಾವ್ ದೇಸಾಯಿ, ಸೆರಿಟೊನ್ ಫೆರ್ನಾಂಡಿಸ್, ಲೆನ್ನಿ ರೊಡ್ರಿಗಸ್ ಹಾಗೂ ಜಾಕಿಚಾಂದ್ ಸಿಂಗ್ ಅವರು ಲೊಬೆರಾ ಅವರ ಶೈಲಿಗೆ ಹೊಂದಿಕೊಂಡಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ: ದ್ವಿಪಕ್ಷೀಯ ಟೆಸ್ಟ್‌ನಲ್ಲಿ ರೋಹಿತ್ ವಿಶೇಷ ದಾಖಲೆಭಾರತ vs ದಕ್ಷಿಣ ಆಫ್ರಿಕಾ: ದ್ವಿಪಕ್ಷೀಯ ಟೆಸ್ಟ್‌ನಲ್ಲಿ ರೋಹಿತ್ ವಿಶೇಷ ದಾಖಲೆ

''ಮೊದಲ ಪಂದ್ಯಕ್ಕೆ ಮುನ್ನ ನಡೆಸಿದ ಸಿದ್ಧತೆ ಉತ್ತಮವಾಗಿದೆ, ಆಟಗಾರರು ಉತ್ತಮ ಸ್ಥಿತಿಯಲ್ಲಿ ಇದ್ದಾರೆ. ಅವರು ಉತ್ತಮ ವೃತ್ತಿಪರ ಆಟಗಾರರು. ಋತುವಿಗೆ ಮುನ್ನ ನಡೆದ ಸಿದ್ಧತೆ ನನಗೆ ಖುಷಿ ಕೊಟ್ಟಿದೆ, ಆದರೆ ಅತ್ಯಂತ ಪ್ರಮುಖವಾದ ಸಂಗತಿಯಿಂದರೆ ಮೊದಲ ಪಂದ್ಯ. ಮನೆಯಂಗಣದಲ್ಲಿ ನಾವು ಉತ್ತಮ ಪಂದ್ಯವನ್ನಾಡಲಿದ್ದೇವೆ ಹಾಗೂ ಮೂರು ಅಂಕಗಳನ್ನು ನಮ್ಮದಾಗಿಸಿಕೊಳ್ಳಲಿದ್ದೇವೆ,'' ಎಂದು ಹೇಳಿದರು.

ISL 2019: Stable Goa take on rebuilt Chennaiyin FC

ಕಳೆದ ಋತುವಿನಲ್ಲಿ ಹೀನಾಯ ಪ್ರದರ್ಶನ ತೋರಿದ್ದ ಚೆನ್ನೈಯಿನ್ ತಂಡ ಈ ಬಾರಿ ಹೊಸ ಬದಲಾವಣೆಗಳೊಂದಿಗೆ ಅಂಗಣಕ್ಕೆ ಕಾಲಿಟ್ಟಿದೆ. ಜಾನ್ ಗ್ರೆಗೊರಿ ಕಳೆದ ಬಾರಿ ತಂಡದಲ್ಲಿದ್ದ ಎಲ್ಲ ವಿದೇಶಿ ಆಟಗಾರರನ್ನು ತೆಗೆದು ಹಾಕಿ ಎಲಿ ಸಾಬಿಯ ಸೇರಿದಂತೆ ಆರು ವಿದೇಶಿ ಆಟಗಾರರನ್ನು ಸರ್ಪಡೆ ಮಾಡಿಕೊಂಡಿದ್ದಾರೆ. ಬಾರತದ ಆಟಗಾರರಲ್ಲೂ ಕೆಲವು ಬದಲಾವಣೆಯಾಗಿದೆ. ವಿಶಾಲ್ ಕೈಥ್, ಲಾಲಿಯಾಂಜೂವಾಲಾ ಚಾಂಗ್ಟ್ ಎಡ್ವಿನ್ ವಾನ್ಸ್ ಪೌಲ್ ಮತ್ತು ರಹೀಮ್ ಅಲಿ ತಂಡವನ್ನು ಸೇರಿಕೊಂಡಿದ್ದಾರೆ.

''ನಮ್ಮದು ಈಗ ಸರಿ ಸುಮಾರು ಹೊಸ ತಂಡವಿದ್ದಂತೆ. ಕಳೆದ ಬಾರಿ ತಂಡದಲ್ಲಿ ಏಳು ಮಂದಿ ವಿದೇಶಿ ಆಟಗಾರರು ಇದ್ದಿದ್ದರು, ಅವರಲ್ಲಿ ಆರು ಆಟಗಾರರನ್ನು ಬದಲಾವಣೆ ಮಾಡಲಾಗಿದೆ. ನಾವು ನಮ್ಮ ದೇಶೀಯ ಆಟಗಾರರ ಬಗ್ಗೆ ತೃಪ್ತಿ ಹೊಂದಿದ್ದೇವೆ. ಜತೆಯಲ್ಲಿ ಹೊಸ ವಿದೇಶಿ ಆಟಗಾರರು, ಇದ್ದಾರೆ. ನಾಲ್ಕನೇ ಋತುವಿನಲ್ಲಿ ತೋರಿದ ಪ್ರಭಾವವನ್ನೇ ಬೀರಲಿದ್ದಾರೆ ಎಂಬುದು ನನ್ನ ನಂಬಿಕೆ,'' ಎಂದು ಗ್ರೆಗೊರಿ ಹೇಳಿದ್ದಾರೆ.

ಮನೆಯಂಗಣದಲ್ಲಿ ಗೋವಾ ಯಾವಾಗಲೂ ಫೇವರಿಟ್, ಆದರೆ ಅಹಮದ್ ಜಹೌಹ್ ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಕಳೆದ ವರ್ಷ ಬೆಂಗಳೂರು ಎಫ್ ಸಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಹಮದ್ ಜಹೌಹ್ ರೆಡ್ ಕಾರ್ಡ್ ಗಳಿಸಿದ್ದರು.

11ರ ಹರೆಯದ ಹುಡುಗನನ್ನು ಚೆಸ್ ಟೂರ್ನಿಯಿಂದ ಹೊರದಬ್ಬಿದ ಅಧಿಕಾರಿ!11ರ ಹರೆಯದ ಹುಡುಗನನ್ನು ಚೆಸ್ ಟೂರ್ನಿಯಿಂದ ಹೊರದಬ್ಬಿದ ಅಧಿಕಾರಿ!

''ಸೆರ್ಗಿಯೊ ಅವರ ತರಬೇತಿಯಲ್ಲಿ ಗೋವಾ ತಂಡ ಅದೇ ಆಟಗಾರರನ್ನು ಉಳಿಸಿಕೊಂಡಿದೆ. ಒಂದೆರಡು ಹೊಂದಾಣಿಕೆ ಮಾಡಿಕೊಂಡರೆ ಅವರದ್ದು ಉತ್ತಮ ತಂಡವಾಗಿ ರೂಪುಗೊಳ್ಳುತ್ತದೆ. ನಮ್ಮ ಪಾಲಿಗೆ ಇದು ಅತ್ಯಂತ ಕಠಿಣ ಪಂದ್ಯ. ನಮ್ಮ ತಂಡದಲ್ಲಿ ವಿದೇಶಿ ಆಟಗಾರರು ಆದಷ್ಟು ಬೇಗನೆ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ. ಮನೆಯಂಗಣದ ಹೊರಗಡೆ ಗೋವಾಕ್ಕಿಂತ ಕಠಿಣವಾದ ಪಂದ್ಯ ಬೇರಿಲ್ಲ,'' ಎಂದು ಗ್ರಗೋರಿ ಅಭಿಪ್ರಾಯ ಪಟ್ಟರು.

ಗ್ರೆಗೋರಿ ಅವರು ತಮ್ಮ ಹೊಸ ಉಲ್ಲಾಸದ ತಂಡ 2017-18ರ ಋತುವಿನ ಆರಂಭವನ್ನು ಕಂಡು ಅದೇ ರೀತಿಯ ಸ್ಪೂರ್ತಿಯೊಂದಿಗೆ ಆಡಲಿದೆ ಎಂದು ನಂಬಿದ್ದಾರೆ. ಲೊಬೆರಾ ಅವರಿಗೆ ಈ ಬಾರಿ ಪ್ರಶಸ್ತಿ ಗೆಲ್ಲುವುದು ಗುರಿಯಾಗಿದೆ.

Story first published: Tuesday, October 22, 2019, 21:52 [IST]
Other articles published on Oct 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X