ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಉಕ್ಕಿನ ನಗರದಲ್ಲೂ ಬೆಂಗಳೂರು ಎಫ್‌ಸಿಗೆ ದಕ್ಕದ ಜಯ

By Isl Media
ISL 2019: Super show minus the goals in Jamshedpur

ಜೇಮ್ಶೆಡ್ಪುರ, ನವೆಂಬರ್ 3: ಬೆಂಗಳೂರು ಎಫ್‌ಸಿ ತಂಡಕ್ಕೆ ಸತತ ಮೂರನೇ ಡ್ರಾ. ಅಂದರೆ ಹಾಲಿ ಚಾಂಪಿಯನ್ ತಂಡ ಮತ್ತೊಮ್ಮೆ ಜಯದಿಂದ ವಂಚಿತವವಾಗಿರುವುದು ಅದರ ಸಾಮರ್ಥ್ಯಕ್ಕೆ ಸೂಕ್ತವಾದುದಲ್ಲ. ಭಾನುವಾರ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ನ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್ ಸಿ ಹಾಗೂ ಬೆಂಗಳೂರು ಎಫ್ ಸಿ ನಡುವಿನ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಬೆಂಗಳೂರು ಎಫ್ ಸಿ ತಂಡಕ್ಕೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಸುಬ್ರತಾ ಪಾಲ್ ಅದ್ಭುತ ರಕ್ಷಣೆ ನೀಡಿ ತಂಡಕ್ಕೆ ನೆರವಾದರು, ಅದೇ ರೀತಿ ಬೆಂಗಳೂರು ಪರ ಗುರ್ಪ್ರೀತ್ ಸಿಂಗ್ ಸಂಧೂ ಟಾಟಾ ಪಡೆಯ ಮುನ್ನಡೆಗೆ ಅವಕಾಶ ಕಲ್ಪಿಸಲಿಲ್ಲ. ಇದರಿಂದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ಭಾರತ vs ಬಾಂಗ್ಲಾ: ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ!ಭಾರತ vs ಬಾಂಗ್ಲಾ: ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ!

ಗೋಲಿಲ್ಲದ ಪ್ರಥಮಾರ್ಧ
ಪ್ರಥಮಾರ್ಧದಲ್ಲಿ ಬೆಂಗಳೂರು ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಆದರೆ ಸುಬ್ರತಾ ಪಾಲ್ ಬೆಂಗಳೂರಿನ ಗೋಲು ಗಳಿಕೆಗೆ ಅಡ್ಡಿಯಾದರು. ನಿಜವಾಗಿಯೂ ಬೆಂಗಳೂರು ಎಲ್ಲ ವಿಭಾಗಗಳಲ್ಲಿ ಪ್ರಭುತ್ವ ಸಾಧಿಸಿತ್ತು, ಆದರೆ ಆತಿಥೇಯ ಜೇಮ್ಶೆಡ್ಪುರ ಎಚ್ಚರಿಕೆಯ ಪ್ರದರ್ಶನ ನೀಡಿ ಹಾಲಿ ಚಾಂಪಿಯನ್ನರ ಮುನ್ನಡೆಗೆ ಅವಕಾಶ ನೀಡಲಿಲ್ಲ. ಮೊದಲು ಜುವಾನಾನ್ ಅವರಿಗೆ ಹೆಡರ್ ಮೂಲಕ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಸುಬ್ರತಾ ಪಾಲ್ ಉತ್ತಮ ರೀತಿಯಲ್ಲಿ ತಡೆದು ತಂಡಕ್ಕೆ ನೆರವಾದರು. ರಫಾಯೆಲ್ ಅಗಸ್ಟೊ ಅವರ ಹೆಡರ್ ಕೂಡ ಗೋಲಾಗಿ ಬದಲಾಗಲಿಲ್ಲ. ಹರ್ಮಾನ್ಜೋತ್ ಖಬ್ರಾ ಅವರಿಗೆ ಸಿಕ್ಕ ಅವಕಾಶ ಬೆಂಗಳೂರು ತಂಡದಲ್ಲಿ ಬೇರೆ ಯಾರಿಗೂ ಸಿಗಲಿಲ್ಲ. ಕೇವಲ ಆರು ಅಡಿಗಳ ಅಂತರದಲ್ಲಿ ಚೆಂಡನ್ನು ನಿಯಂತ್ರಿಸಿ ಸುಲಭವಾಗಿ ಗೋಲು ಗಳಿಸಬಹುದಿತ್ತು, ಅವರು ಗೋಲ್ ಬಾಕ್ಸ್ ಗೆ ಗುರಿ ಇಟ್ಟಿದ್ದರೂ ಪಾಲ್ ಅವರ ಕೈ ಸೇರಿತ್ತು. ಜೇಮ್ಶೆಡ್ಪುರ ಎಫ್ ಸಿ ತಂಡಕ್ಕೆ ಉತ್ತಮವಾಗಿ ಅವಕಾಶ ಸಿಕ್ಕಿದ್ದು ಸೆರ್ಗಿಯೋ ಕ್ಯಾಸ್ಟಲ್ ಮೂಲಕ, ಅವರು ಬಹಳ ದೂರದಿಂದ ಗೋಲ್ ಬಾಕ್ಸ್ ಗೆ ಗುರಿ ಇತ್ತು ತುಳಿದ ಚೆಂಡು ಬೆಂಗಳೂರು ಗೋಲ್ ಕೀಪರ್ ಗುರ್ಪ್ರೀತ್ ಸಿಂಗ್ ಸಂಧೂ ಅವರನ್ನು ವಂಚಿಸಿತ್ತು, ಆದರೆ ಬಾಕ್ಸ್ ನ ಅಂಚಿಗೆ ತಾಗಿ ಹೊರನಡೆಯಿತು.

ISL 2019: Super show minus the goals in Jamshedpur

ಬೆಂಗಳೂರಿಗೆ ಗೆಲ್ಲುವ ತವಕ
ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ಸ್ಫೂರ್ತಿಯ ತಂಡ ಜೇಮ್ಶೆಡ್ಪುರ ಎಫ್ ಸಿ ಇಂಡಿಯನ್ ಸೂಪರ್ ಲೀಗ್ ನ 15ನೇ ಪಂದ್ಯದಲ್ಲಿ ಮುಖಾಮುಖಿಯಾದವು. ಆಡಿರುವ ಎರಡು ಪಂದ್ಯಗಳಲ್ಲಿ ಬೆಂಗಳೂರು ಎಫ್ ಸಿ ಕೇವಲ ಎರಡು ಅಂಕಗಳನ್ನು ಗಳಿಸಿತ್ತು. ಆದರೆ ಟಾಟಾ ಪಡೆ ಎರಡೂ ಪಂದ್ಯಗಳಲ್ಲಿ ಕೇವಲ ಡ್ರಾ ಸಾಧಿಸಿ ಗಳಿಸಿದ್ದು ಎರಡು ಅಂಕಗಳನ್ನು ಗಳಿಸಿದ್ದು, ಇಲ್ಲಿ ಜಯದ ಅನಿವಾರ್ಯತೆ ಇದೆ. ಮೊದಲ ಪಂದ್ಯ ಗೋಲಿಲ್ಲದೆ ಡ್ರಾ ಸಾಧಿಸಿದರೆ, ಗೋವಾ ವಿರುದ್ಧದ ಎರಡನೇ ಪಂದ್ಯ ದಲ್ಲಿ ಅಂತಿಮ ಕ್ಷಣದಲ್ಲಿ ಗೋಲು ನೀಡಿ ಜಯದಿಂದ ವಂಚಿತವಾಗಿತ್ತು.

ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್ ಗಳೇ ಇದ್ದರು ಎಂದ ಮಾಜಿ ವೇಗಿ ಅಖ್ತರ್

ಸರ್ಗಿಯೊ ಕ್ಯಾಸ್ಟೆಲ್ ಹೊಸ ಉತ್ಸಾಹದಲ್ಲಿರುವ ಜೇಮ್ಶೆಡ್ಪುರ ತಂಡದ ನೂತನ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಮೊದಲ ಪಂದ್ಯದ ಕೊನೆಯ ಕ್ಷಣದಲ್ಲಿ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟ ಕ್ಯಾಸ್ಟಲ್ ಎರಡನೇ ಪಂದ್ಯದಲ್ಲೂ ಗೋಲು ಗಳಿಸಿ ಜಯದ ರೂವಾರಿ ಎನಿಸಿದರು. ಟಾಟಾ ಪಡೆಯ ಇದುವರೆಗಿನ ದೌರ್ಭಲ್ಯ ಎಂದರೆ ತಂಡದ ಡಿಫೆನ್ಸ್ ವಿಭಾಗ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರುವ ಬೆಂಗಳೂರು ಕೊನೆಯ ಕ್ಷಣದಲ್ಲಿ ಎದುರಾಳಿಗೆ ಗೋಲು ನೀಡಿ ಜಯದಿಂದ ವಂಚಿತವಾಗಿತ್ತು. 180 ನಿಮಿಷಗಳ ಆಟವಾಡಿರುವ ಚಾಂಪಿಯನ್ ಬೆಂಗಳೂರು ಗಳಿಸಿದ್ದು ಕೇವಲ ಒಂದೇ ಗೋಲು . ಮೊದಲ ಜಯದ ನಿರೀಕ್ಷೆ ಬೆಂಗ್ಳೂರಿದ್ದಾದರೆ, ಟಾಟಾ ಪಡೆಗೆ ಹ್ಯಾಟ್ರಿಕ್ ಸಾಧನೆಯ ಗುರಿ.

Story first published: Sunday, November 3, 2019, 23:57 [IST]
Other articles published on Nov 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X