ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಮನೆಯಂಗಣದಲ್ಲಿ ಮಿಂಚಿದ ಎಟಿಕೆ ಅಗ್ರ ಸ್ಥಾನಕ್ಕೆ

By Isl Media
ISL 2019: Three cheers for ATK

ಕೋಲ್ಕತ್ತಾ, ನವೆಂಬರ್ 10: ಇಂಡಿಯನ್ ಸೂಪರ್ ಲೀಗ್ ನ 19ನೇ ಪಂದ್ಯದಲ್ಲಿ ಜೇಮ್ಶೆಡ್ಪುರ ತಂಡವನ್ನು 3-1 ಗೋಲಿನಿಂದ ಮಣಿಸಿದ ಮಾಜಿ ಚಾಂಪಿಯನ್ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರಷ್ಠಾನಕ್ಕೆರಿದೆ.

ರಾಯ್ ಕೃಷ್ಣ ( 57 ಮತ್ತು 71 ನಿಮಿಷ) ಹಾಗು ಎಡು ಗಾರ್ಸಿಯಾ ( 90ನೇ ನಿಮಿಷ) ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಟಾಟಾ ಪಡೆಯ ಪರ ಸೆರ್ಗಿಯೊ ಕ್ಯಾಸ್ಟಲ್ (ನೇ ನಿಮಿಷ) ಗೋಲು ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾ

ದ್ವಿತಿಯಾರ್ಧದಲ್ಲಿ ಎಟಿಕೆ ಅಟ್ಯಾಕ್
ಪ್ರಥಮಾರ್ಧದಂತೆ ದ್ವಿತಯಾರ್ಧದ ಆಟ ನಡೆಯಲಿಲ್ಲ, ಇತ್ತಂಡಗಳು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದವು. ಇದರ ಪರಿಣಾಮ 71ನೇ ನಿಮಿಷದಲ್ಲಿ ರಾಯ್ ಕೃಷ್ಣ ಪೆನಾಲ್ಟಿ ಮೂಲಕ ಗಳಿಸಿದ ಗೋಲಿನಿಂದ ಎಟಿಕೆ ಮೇಲುಗೈ ಸಾಧಿಸಿತು. ಸುಬ್ರತಪಾಲ್ ಹಾಗೂ ತಿರಿ ಅವರು ಪ್ರಮಾದ್ ಎಸಗಿದ ಕಾರಣ ಎಟಿಕೆಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ತಂಡದ ಪೆನಾಲ್ಟಿ ತಜ್ಞ ರಾಯ್ ಕೃಷ್ಣ ಯಾವುದೇ ಪ್ರಮಾದ ಎಸಗದೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ISL 2019: Three cheers for ATK

ಗೋಲಿಲ್ಲದ ಪ್ರಥಮಾರ್ಧ
ಮನೆಯಂಗಣದ ಪ್ರೇಕ್ಷಕರ ನೆರವಿನ ಸಂಪೂರ್ಣ ಲಾಭ ಪಡೆದ ಎಟಿಕೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಫಾರುಖ್ ಚೌಧರಿ ಎಟಿಕೆ ತಂಡಕ್ಕೆ ಹೆಡರ್ ಮೂಲಕ ಅಪಾಯ ತಂದೊಡ್ಡಿದರು. ಆದರೆ ಚೆಂಡು ಕ್ರಾಸ್ ಬಾರ್ ಗೆ ತಗಲಿ ಹೊರ ನಡೆಯಿತು. ಹೊರತಾಗಿ ಜೇಮ್ಶೆಡ್ಪುರ ತಂಡಕ್ಕೆ ಯಾವುದೇ ಅವಕಾಶ ಸಿಗಲಿಲ್ಲ. ಜೇಮ್ಶೆಡ್ಪುರ ಕೂಡ ಎಟಿಕೆಗೆ ಯಾವುದೇ ರೀತಿಯ ಅವಕಾಶಕ್ಕೆ ಆಸ್ಪದ ಮಾಡಿಕೊಡಲಿಲ್ಲ. ಎಟಿಕೆ ಫಾರ್ವಾರ್ಡ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿತ್ತು. ಸುಬ್ರತಾ ಪಾಲ್ ಸಾಕಷ್ಟು ಒತ್ತಡಕ್ಕೆ ಸಿಲುಕಿದರೂ ಅಲ್ಲಿ ಗೋಲಿಗೆ ಅವಕಾಶ ಸಿಗಲಿಲ್ಲ.

ರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ

ಕುತೂಹಲದ ಹೋರಾಟಕ್ಕೆ ಕೋಲ್ಕೊತಾ ಸಜ್ಜು
ಜೆಮ್ಶೆಡ್ಪುರ ತಂಡ ಋತುವಿನಲ್ಲಿ ಮೊದಲ ಬಾರಿಗೆ ಮನೆಯಂಗಣದ ಹೊರಗಡೆ ಹೋರಾಟಕ್ಕೆ ಮುಂದಾಯಿತು. ಮಾಜಿ ಚಾಂಪಿಯನ್ ಎಟಿಕೆ ತಂಡ ಟಾಟಾ ಪಡೆಗೆ ಆತಿಥ್ಯ ನೀಡಿತು. ಎಟಿಕೆ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಹೈದರಾಬಾದ್ ಎಫ್ ಸಿ ವಿರುದ್ಧ 5-0 ಹಾಗೂ ಚೆನ್ನೈಯಿನ್ ಎಫ್ ಸಿ ವಿರುದ್ಧ 1-0 ಅಂತರದಲ್ಲಿ ಗೆದ್ದು ಆತ್ಮವಿಶ್ವಾಸದೊಂದಿಗೆ ನಾಲ್ಕನೇ ಪಂದ್ಯಕ್ಕೆ ಸಜ್ಜಾಯಿತು. ಉತ್ತಮ ಡಿಫೆನ್ಸ್ ಹಾಗೂ ಉತ್ತಮ ಫಾರ್ವರ್ಡ್ ವಿಭಾಗವನ್ನು ಹೊಂದಿರುವ ಎಟಿಕೆ ತನ್ನ ಹಳೆಯ ವೈಭವವನ್ನು ನೆನಪಿಸಿತು. ಡೇವಿಡ್ ವಿಲಿಯಮ್ಸ್, ರಾಯ್ ಕೃಷ್ಣ ಮತ್ತು ಎಡು ಗಾರ್ಸಿಯಾ ಅವರು ಟಾಟಾ ಪಡೆಯ ಸಮರ್ಥ ಹೋರಾಟಕ್ಕೆ ಸಜ್ಜಾದರು. ಜೇಮ್ಶೆಡ್ಪುರ ತಂಡ ತಿರಿ ಹಾಗು ಸುಬ್ರತಪಾಲ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎಟಿಕೆ ಕೋಚ್ ಲೋಪೆಜ್ ಹಬಾಸ್ ಮನೆಯಂಗಣದ ಸಂಪೂರ್ಣ ಲಾಭವನ್ನು ಪಡೆಯುವಂತೆ ತಂಡಕ್ಕೆ ಸೂಚಿಸಿದ್ದಾರೆ.

Story first published: Sunday, November 10, 2019, 1:50 [IST]
Other articles published on Nov 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X