ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ತ್ ಈಸ್ಟ್-ಎಟಿಕೆಗೆ ಡ್ರಾವನ್ನು ಜಯವಾಗಿಸಲು ಸೂಕ್ತ ಕಾಲ

By Isl Media
ISL 2019: Time for NorthEast, ATK to convert draws into win

ಗುವಾಹಟಿ, ಡಿಸೆಂಬರ್ 7: ಇಂಡಿಯನ್ ಸೂಪರ್ ಲೀಗ್ ನಲ್ಲಿ ಇದುವರೆಗೂ ಸೋಲು ಕಾಣದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಶನಿವಾರ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಅಂಗಣದಲ್ಲಿ ಬಲಿಷ್ಠ ಎಟಿಕೆ ವಿರುದ್ಧ ಸೆಣಸಲಿದೆ.

ಭಾರತ vs ವೆಸ್ಟ್‌ ಇಂಡೀಸ್ ಟಿ20: ವೆಸ್ಟ್‌ ಇಂಡೀಸ್‌ ಭರ್ಜರಿ ಬ್ಯಾಟಿಂಗ್ಭಾರತ vs ವೆಸ್ಟ್‌ ಇಂಡೀಸ್ ಟಿ20: ವೆಸ್ಟ್‌ ಇಂಡೀಸ್‌ ಭರ್ಜರಿ ಬ್ಯಾಟಿಂಗ್

ಇದು ಅಗ್ರ ಸ್ಥಾನದಲ್ಲಿರುವ ಎರಡು ತಂಡಗಳ ನಡುವಿನ ಹೋರಾಟವಾಗಿದೆ. ಆರು ಪಂದ್ಯಗಳನ್ನು ಆಡಿರುವ ನಾರ್ತ್ ಈಸ್ಟ್ 10 ಅಂಕ ಗಳಿಸಿ ನಾಲಕ್ನೆ ಸ್ಥಾನದಲ್ಲಿದ್ದರೆ, ಎಟಿಕೆ 11 ಅಂಕ ಗಳಿಸಿ ಎರಡನೆ ಸ್ಥಾನದಲ್ಲಿದೆ.

ಕೆಳ ಹಂತದ; ಇರುವ ನಾಲ್ಕು ತಂಡಗಳು ಅಗ್ರ ಸ್ಥಾನ ತಲುಪಲು ಪೈಪೋಟಿ ನಡೆಸುತ್ತಿರುವಾಗ, ಈಗಲೇ ಉತ್ತಮ ಸ್ಥಿತಿಯಲ್ಲಿರುವ ಈ ತಂಡಗಳಿಗೆ ತಮ್ಮ ಸ್ಥಾನವನ್ನು ಉತ್ತಮಪಡಿಸಿಕೊಳ್ಳಲು ಇದು ಮತ್ತೊಂದು ಅವಕಾಶ. ನಾರ್ತ್ ಈಸ್ಟ್ ತಂಡ ಈ ಬಾರಿಯ ಲೀಗ್ ನಲ್ಲಿ ಇದುವರೆಗೂ ಸೋಲು ಅನುಭವಿಸದೇ ಇರಬಹುದು, ಆದರೆ ತಂಡದ ಪ್ರದರ್ಶನ ಮಾತ್ರ ಸ್ಥಿರವಾಗಿಲ್ಲ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡ ಮೂರು ಡ್ರಾ ಕಂಡಿತ್ತು. ರಾಬರ್ಟ್ ಜೇರ್ನಿಯು ತಂಡವನ್ನು ಡ್ರಾದಿಂದ ಜಯದ ಕಡೆಗೆ ತಂಡವನ್ನು ಮುಖ ಮಾಡಬೇಕಾಗಿದೆ.

ನಾರ್ತ್ ಈಸ್ಟ್ ನಲ್ಲಿ ಅಸ್ಯಾಮೋಹ್ ಗ್ಯಾನ್, ಮಾರ್ಟಿನ್ ಚಾವೇಸ್ ಮತ್ತು ಪನಾಗಿಯೋಟಿಸ್ ಟ್ರಿಡಿಸ್ ಉತ್ತಮವಾಗಿ ಆಡುತ್ತಿದ್ದಾರೆ. ಅವರ ಅದೃಷ್ಟ ಚೆನ್ನಾಗಿದೆ, ಆದರೆ ಹಿಂಭಾಗದಲ್ಲಿ ಸರಳವಾದ ಗೋಲುಗಳನ್ನು ನೀಡಿರುವುದನ್ನು ಅಲ್ಲಾಗಲಿಯುವಂತಿಲ್ಲ. ಈಗ ನಾರ್ತ್ ಎಟ್ ಯುನೈಟೆಡ್ ತಂಡಕ್ಕೆ ಅಂಕಪಟ್ಟಿಯಲ್ಲಿ ಮೇಲಕ್ಕೇರಬೇಕಾದರೆ ಉಳಿದಿರುವ ಪಂದ್ಯಗಳಲ್ಲಿ ಜಯ ಗಳಿಸಬೇಕೇ ವಿನಃ ಡ್ರಾ ಗೆ ತೃಪ್ತಿ ಪಡುವಂತಿಲ್ಲ. ಈಗ ಜಯಕ್ಕಾಗಿಯೇ ಮಾನಸಿಕವಾಗಿ ಸಜ್ಜಾಗಬೇಕಿದೆ.

ISL 2019: Time for NorthEast, ATK to convert draws into win

''ಯಾವಾಗ ಗೋಲು ಗಳಿಸಬಹುದು ಎಂಬುದು ನಮ್ಮ ಮೇಲೆ ಅವಲಂಬಿತವಾಗಿಲ್ಲ, ಪ್ರತಿಯೊಂದು ಪಂದ್ಯದಲ್ಲೂ 15-20 ನಿಮಿಷಗಳ ಕಾಲ ಎದುರಾಳಿ ತಂಡಗಳನ್ನು ಗಮನಿಸಬೇಕಾಗುತ್ತದೆ. ಮನೆಯಂಗಣದಿಂದ ಹೊರಗಡೆ ಪಂದ್ಯ ನಡೆಯುವಾಗ ಬೇಗನೆ ಗೋಲು ಗಳಿಸುವುದು ಅಷ್ಟು ಸುಲಭ ಅಲ್ಲ. ನಮ್ಮಲ್ಲಿ ಉತ್ತಮ ಆಟಗಾರರಿದ್ದು ಅವರಲ್ಲಿ ಗೋಲ್ ಗಳಿಸುವ ಸಾಮರ್ಥ್ಯವಿದ್ದು, ತಂಡಕ್ಕೆ ತಿರುವು ನೀಡಬಲ್ಲರು.,'' ಎಂದು ಜೇರ್ನಿ ಹೇಳಿದ್ದಾರೆ.

ರೋಟರಿ ಬೆಂಗಳೂರು ಐಟಿ ಕಾರಿಡಾರ್ 13ನೇ ಆವೃತ್ತಿಯ ಮಧ್ಯರಾತ್ರಿ ಮ್ಯಾರಥಾನ್ ಗೆ ನಾಳೆ ಚಾಲನೆರೋಟರಿ ಬೆಂಗಳೂರು ಐಟಿ ಕಾರಿಡಾರ್ 13ನೇ ಆವೃತ್ತಿಯ ಮಧ್ಯರಾತ್ರಿ ಮ್ಯಾರಥಾನ್ ಗೆ ನಾಳೆ ಚಾಲನೆ

ಅಮಾನತುಗೊಂಡಿದ್ದ ಸೆಂಟರ್ ಬ್ಯಾಕ್ ಆಟಗಾರ ಕಯ್ ಹೀರಿಂಗ್ಸ್ ತಂಡವನ್ನು ಸೇರಿಕೊಂಡಿರುವುದು ಜೇರ್ನಿ ಅವರ ಮನೋಬಲವನ್ನು ಹೆಚ್ಚಿಸಿದೆ.

ಹೀರಿಂಗ್ಸ್ ತಂಡವನ್ನು ಸೇರಿಕೊಂಡಿದ್ದು ತಂಡದ ಶಕ್ತಿಯನ್ನು ಹೆಚ್ಚಿಸಿದೆ, ಎಟಿಕೆ ತಂಡ ಉತ್ತಮ ರೀತಿಯಲ್ಲಿ ದಾಳಿ ಪಡೆಯನ್ನು ಹೊಂದಿದೆ, ಹೀರಿಂಗ್ಸ್ ಉತ್ತಮ ರೀತಿಯಲ್ಲಿ ಎದುರಾಳಿ ತಂಡಕ್ಕೆ ತಡೆಯೊಡ್ಡ ಬಲ್ಲರು. ಎಟಿಕೆಯ ರಾಯ್ ಕೃಷ್ಣ, ಮೈಕೆಲ್ ಸೂಸೈರಾಜ್ ಮತ್ತು ಡೇವಿಡ್ ವಿಲಿಯಮ್ಸ್ ಅಪಾಯಕಾರಿ ಆಟಗಾರರು. ವಿಲಿಯಮ್ಸ್ ಮೂರು ಗೋಲುಗಳನ್ನು ಗಳಿಸಿದ್ದರೆ, ಕೃಷ್ಣ ಮೂರು ಪಂದ್ಯಗಳಲ್ಲಿ ಮೂರು ಗೋಲು ಗಳಿಸಿ ತಂಡದ ಯಶಸ್ಸಿಗೆ ನೆರವಾಗಿದ್ದಾರೆ.

''ನನ್ನ ಪ್ರಕಾರ ಸದ್ಯದ ಸ್ಥಿತಿಯಲ್ಲಿ ಇದು ಭಾರದದಲ್ಲಿಯ ಉತ್ತಮ ತಂಡವಾಗಿದೆ. ಎಟಿಕೆ ಅತ್ಯಂತ ಅಪಾಯಕಾರಿ ತಂಡ, ಅನೇಕ ಆಟಗಾರರು ಉತ್ತಮ ಹೊಂದಾಣಿಕೆಯೊಂದಿಗೆ ಉತ್ತಮ ರೀತಿಯಲ್ಲಿ ಆಡುತ್ತಿದ್ದಾರೆ. ನಾವು ಪಂದ್ಯದಲ್ಲಿ ಜಯ ಕಾಣಲು ನಮ್ಮಿಂದ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಪಿಚ್ ನಲ್ಲಿ ಆಟ ಪ್ರದರ್ಶಿಸುತ್ತೇವೆ,'' ಎಂದು ಜೇರ್ನಿ ಹೇಳಿದರು.

ಅಂಟೋನಿಯೋ ಹಬ್ಬಾಸ್ ಪಡೆ ಇದುವರೆಗೂ ಐದು ಪಂದ್ಯಗಳಲ್ಲಿ ಡ್ರಾ ಕಂಡಿದೆ. ಒಡಿಶಾ ಹಾಗೂ ಮುಂಬೈ ಸಿಟಿ ಎಫ್ ಸಿ ತಂಡದ ವಿರುದ್ಧ ಡ್ರಾ ಸಾಧಿಸಿ ತಂಡ ಗುವಾಹಾಟಿಗೆ ಆಗಮಿಸಿದೆ. ಸ್ಪೇನ್ ನ ಕೋಚ್ ಗೆ ಜಯ ಹೊರತು ಬೇರೇನು ನಿರೀಕ್ಷೆ ಇಲ್ಲ. ಉತ್ತಮ ದಾಳಿ ವಿಭಾಗನ್ನು ಹೊಂದಿರುವ ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸಲು ಕೇರಳ ಉತ್ತಮ ರೀತಿಯಲ್ಲಿ ಪೈಪೋಟಿ ನೀಡಬೇಕಾಗಿದೆ.

''ಗ್ಯಾನ್ ಉತ್ತಮ ಆಟಗಾರ, ಅವರು ಮೂರು ವಿಶ್ವಕಪ್ ಆಡಿದ್ದಾರೆ, ಉತ್ತಮ ರೀತಿಯಲ್ಲಿ ಡಿಫೆಂಡ್ ಮಾಡುವ ಹಾಗೂ ಬದ್ಧತೆಯಿಂದ ಆಡಬಲ್ಲರು. ಅವರು ನಾರ್ತ್ ಈಸ್ಟ್ ನ ಪ್ರಮುಖ ಆಟಗಾರ. ನಾವು ಅಂಗಣದಲ್ಲಿ ನಿಯಂತ್ರಣ ಸಾಧಿಸಬೇಕು,'' ಎಂದು ಹಬ್ಬಾಸ್ ಹೇಳಿದರು.

''ನಾವು ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು ಉತ್ತಮ ರೀತಿಯಲ್ಲಿ ಗೋಲ್ ಗಳಿಸಬಲ್ಲೆವು. ಇತ್ತಂಡಗಳು ಸಮಾನವಾಗಿವೆ ಆದರೆ ನಾವು ಮೇಲುಗೈ ಸಾಧಿಸುವೆವು,'' ಎಂದುರು.

Story first published: Saturday, December 7, 2019, 9:58 [IST]
Other articles published on Dec 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X