ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಜಯದ ಗುರಿ ಹೊತ್ತು ಮುಂಬೈ-ಕೇರಳ ನಡುವೆ ಫೈಟ್

By Isl Media
ISL 2019: With backs to the wall, Mumbai, Kerala fight for a win

ಮುಂಬೈ, ಡಿಸೆಂಬರ್ 5: ಗುರುವಾರ (ಡಿಸೆಂಬರ್ 5) ಇಲ್ಲಿನ ಮುಂಬೈ ಫುಟ್ಬಾಲ್ ಅರೇನಾ ದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಋತುವಿನ ಎರಡನೇ ಜಯಕ್ಕಾಗಿ ಹೋರಾಟ ನಡೆಸಲಿವೆ.

ಟಿ20ಐ ದಾಖಲೆ ಬರೆಯಲು ಕೆಎಲ್ ರಾಹುಲ್‌ಗೆ ಬರೀ 26 ರನ್‌ಗಳು ಬೇಕು!ಟಿ20ಐ ದಾಖಲೆ ಬರೆಯಲು ಕೆಎಲ್ ರಾಹುಲ್‌ಗೆ ಬರೀ 26 ರನ್‌ಗಳು ಬೇಕು!

ಜಾರ್ಜ್ ಕೋಸ್ಟಾ ಪಡೆ ಸತತ ಐದು ಪಂದ್ಯಗಳಲ್ಲಿ ಜಯ ಕಾಣದೆ ಹತಾಶೆಗೊಳಗಾಗಿದೆ. ಋತುವಿನ ಮೊದಲ ಪಂದ್ಯದಲ್ಲಿ ಕೇರಳ ವಿರುದ್ಧ ಕೊಚ್ಚಿಯಲ್ಲಿ ಗೆದ್ದಿರುವುದನ್ನು ಹೊರತುಪಡಿಸಿದರೆ ತಂಡ ಜಯದ ರುಚಿ ಕಂಡಿಲ್ಲ. ಉತ್ತಮ ಪ್ರದರ್ಶನ ತೋರುತ್ತಿದ್ದರೂ ಮುಂಬೈ ಪಡೆ ಜಯದ ಹಾದಿ ಕಂಡಿಲ್ಲ. ಆರು ಅಂಕಗಳನ್ನು ಗಳಿಸಿರುವ ಮುಂಬೈ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ . ಒಂದು ಅಂಕದ ಅಂತರದಲ್ಲಿ ಕೇರಳಕ್ಕಿಂತ ಒಂದು ಸ್ಥಾನ ಮೇಲಿದೆ.

1
2026456

ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯ ಕಾಣುತ್ತಿರುವ ಎಲ್ಲ ಭಾರತೀಯರನ್ನೊಳಗೊಂಡ ಮುಂಬೈ ಬ್ಯಾಕ್ ಲೈನ್ ಸುಧಾರಣೆ ಕಂಡುಕೊಳ್ಳಬೇಕಾಗಿದೆ. ಎಟಿಕೆ ವಿರುದ್ಧದ ಪಂದ್ಯದಲ್ಲಿ ಕೊನೆಯ ಕ್ಷಣದಲ್ಲಿ ರಾಯ್ ಕೃಷ್ಣ ಗೋಲು ಗಳಿಸಿದ ಪರಿಣಾಮ ಪಂದ್ಯ 2-2 ಗೋಳುಗಳಿಂದ ಕೊನೆಗೊಂಡಿತು. ಈ ಪಂದ್ಯದಲ್ಲಿ ಮುಂಬೈ ಬ್ಯಾಕ್ ಲೈನ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಜಯ ಗಳಿಸಬಹುದಾಗಿತ್ತು.

ISL 2019: With backs to the wall, Mumbai, Kerala fight for a win

ಜಯ ಗಳಿಸುವಲ್ಲಿ ಮುಂಬೈ ಆಟಗಾರರು ಒತ್ತದಲ್ಲಿದ್ದಾರೆ ಎಂದು ಪೋರ್ಚುಗೀಸ್ ಕೋಚ್ ಒಪ್ಪಿಕೊಂಡಿದ್ದಾರೆ. ತಮ್ಮ ಎದುರಾಳಿ ತಂಡವೂ ಅದೇ ರೀತಿಯ ಸಮಸ್ಯೆ ಎದುರಿಸುತ್ತಿದೆ ಎಂದರು. '' ಎರಡೂತಂಡಗಳಲ್ಲಿ ಒತ್ತಡ ಮನೆ ಮಾಡಿದೆ. ನಮಗೆ ಅಂಕ ಬೇಕಾಗಿರುವುದರಿಂದ ನಾವು ಒತ್ತಡದಲ್ಲಿ ಆಡುತ್ತಿದ್ದೇವೆ. ಅದು ಸಹಜ. ಇದು ಫುಟ್ಬಾಲ್ ನ ಒಂದು ಭಾಗ,'' ಎಂದು ಕೋಸ್ಟಾ ಹೇಳಿದ್ದಾರೆ.

ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

'' ನೀವು ಅಂಕಗಳನ್ನು ಕಳೆದುಕೊಳ್ಳಲು ಆರಂಭಿಸಿದಾಗ ಅದು ಯಾವಾಗಲೂ ಸಮಸ್ಯೆಯೇ, ಅದು ವೈಯಕ್ತಿಕ ಸಮಸ್ಯೆಗಳಿಂದ ಆಗುತ್ತದೆ. ಕಳೆದ ಎರಡು ಪಂದ್ಯಗಳಲ್ಲಿ ನಾವು ತಂಡವಾಗಿ ಆಡಿದ್ದೇವೆ. ನಾವು ಉತ್ತಮವಾಗಿಯೇ ಆಡಿದ್ದೇವೆ. ನಮ್ಮ ಆಟದಲ್ಲಿ ಉತ್ತಮ ಗುಣಮಟ್ಟ ಇದ್ದಿತ್ತು.,'' ಎಂದು ಅವರು ಹೇಳಿದರು.

ಇನ್ನೊಂದೆಡೆ ಎಲ್ಕೋ ಶೆಟ್ಟೋರಿ ಅವರ ಪಡೆಯ ತಪ್ಪಿನ ಹೆಜ್ಜಿ ಅಂಗಣದಲ್ಲಿ ಹಾಗೆಯೇ ಉಳಿದುಕೊಂಡಿದೆ. ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಅವಕಾಶ ಇದ್ದರೂ ಕೊನೆಯ ಕ್ಷಣದಲ್ಲಿ ಗೋಲು ನೀಡಿ ಅಂಕ ಹಂಚಿಕೊಳ್ಲಬೇಕಾಯಿತು. ಮೊದಲ ಪಂದ್ಯದಲ್ಲಿ ಜಯ ಗಳಿಸಿದ ನಂತರ ಕೇರಳ ಈಗಲೂ ಎರಡನೇ ಜಯಕ್ಕಾಗಿ ಹಾತೊರೆಯುತ್ತಿದೆ.

ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಕೇರಳ ತಂಡ ಉತ್ತಮವಾಗಿ ಪ್ರದರ್ಶನ ನೀಡಿತ್ತು, ಆದರೆ ಮನೆಯಂಗಣದ ಪ್ರೇಕ್ಷಕರ ಬೆಂಬಲದಲ್ಲಿ ನಿರೀಕ್ಷಿತ ಹೋರಾಟ ನೀಡದಿರುವುದು ಗಮನಾರ್ಹ. ಆದರಿಂದ ಮುಂಬೈ ನೆಲದಲ್ಲಿ ತಮ್ಮ ಅದೃಷ್ಟ ಖುಲಾಯಿಸಬಹುದು ಎಂದು ಶೆಟ್ಟೋರಿ ಲೆಕ್ಕಾಚಾರ ಹಾಕಿದ್ದಾರೆ. ರಫಾಯೆಲ್ ಮೆಸ್ಸಿ, ಮತ್ತು ಬಾರ್ತಲೋಮಿಯೋ ಓಗ್ಬ್ಯಾಚೆ ಗೋವಾ ವಿರುದ್ಧ ಪರಿಣಾಮಕಾರಿಯಾಗಿ ಆಡಿದ್ದಾರೆ, ಅದೇ ರೀತಿಯ ಪ್ರದರ್ಶನ ಮುಂಬೈ ವಿರುದ್ಧ ನೀಡಬಹುದು ಎಂಬುದು ಕೋಚ್ ಅವರ ನಿರೀಕ್ಷೆ,

''ಇದು ಸರಳ ವಾಸ್ತವ, ಸ್ಕೋರ್ ಬೋರ್ಡ್ ನ ಲೆಕ್ಕಾಚಾರ ನೋಡಿದಾಗ ಬೇಸರವಾಗುತ್ತದೆ. ನಾವು ಆರು ಪಂದ್ಯಗಳನ್ನು ಆಡಿದೆವು. ಪ್ರತಿ ಬಾರಿಯೂ ನಾನು ಒಂದು ಹೆಜ್ಜೆ ಮುಂದೆ ಹೋಗಲು ಯತ್ನಿಸಿದರೆ, ನಾವು ಎರಡು ಹೆಜ್ಜಿ ಹಿಂದೆ ಉಳಿದಿರುತ್ತೇವೆ. ಇದು ಗಾಯದ ಸಮಸ್ಯೆಯಿಂದ ಆಗಿದೆ.,''ಎಂದು ಶೆಟ್ಟೋರಿ ಹೇಳಿದರು.

ಡಿಫೆನ್ಸ್ ವಿಭಾಗದಲ್ಲಿ ಕೇರಳ ಮತ್ತೆ ಗಿಯನ್ನಿ ಜುವಿರಲೂನ್ ಅವರ ಸೇವೆಯಿಂದ ವಂಚಿತವಾಗಿದೆ. ಮಾರಿಯೋ ಆರ್ಕ್ಯೂಸ್ ಮತ್ತು ಮುಸ್ತಾಫಾ ಜಿನ್ನಿಂಗ್ ಅವರ ಸೇವೆ ಮಿಡ್ ಫೀಲ್ಡ್ ನಲ್ಲಿ ಇಲ್ಲವಾಗಿದೆ. ಅವರ ಬದಲಿ ಆಟಗಾರರಾದ ಜೇಕ್ಸೋನ್ ಸಿಂಗ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಾರೆ.

''ವೈಯಕ್ತಿಕವಾಗಿ ಕೆಲವು ಆಟಗಾರರು ಸಾಕಷ್ಟು ಪ್ರಮಾಣದಲ್ಲಿ ಸುಧಾರಣೆ ಕಾಣಬೇಕಿದೆ.ಆದರೂ ನಾವು ಬೆಂಗಳೂರು ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದೇವೆ. ಅದೇರಿತಿ ಗೋವಾ ವಿರುದ್ಧವೂ. ಕೊನೆಯ ಕ್ಷಣದಲ್ಲಿ ಗೋಲಾದ ಕಾರಣ ನಮಗೆ ಆ ಪಂದ್ಯವನ್ನು ಗೆಲ್ಲಲಾಗಲಿಲ್ಲ,''ಎಂದು ಡಚ್ ಕೋಚ್ ಹೇಳಿದರು.

Story first published: Thursday, December 5, 2019, 12:02 [IST]
Other articles published on Dec 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X