ಐಎಸ್‌ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್

By Isl Media

ಗೋವಾ: ಕೇವಲ 10 ಮಂದಿ ಆಟಗಾರರಿಂದ ಕೂಡಿದ್ದ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ ಗೋಲು ಗಳಿಸುವಲ್ಲಿ ಚೆನ್ನೈಯಿನ್ ಎಫ್ ಸಿ ವಿಫಲವಾಗುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ 63ನೇ ಪಂದ್ಯ ಗೋಲಿಲ್ಲದೆ ಕೊನೆಗೊಂಡಿತು, ತಂಡಗಳು ಅಂಕ ಹಂಚಿಕೊಂಡವು. ದೇಬಜಿಲ್ ಮಜುಂದರ್ ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದುದರ ಪರಿಣಾಮ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಚೆನ್ನೈಯಿನ್ ವಿರುದ್ಧದ ಸೋಲಿನಿಂದ ಪಾರಾಯಿತು. ನಿಜವಾಗಿಯೂ ಈಸ್ಟ್ ಬೆಂಗಾಲ್ ಡಿಫೆನ್ಸ್ ವಿಭಾಗ ಈ ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯವಿನರ್ವಹಿಸಿದ್ದು ಗಮನಾರ್ಹ.

ಐಪಿಎಲ್ ಆಟಗಾರರ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ?

ಗೋಲಿಲ್ಲದ ಪ್ರಥಮಾರ್ಧ: ಚೆನ್ನೈಯಿನ್ ಎಫ್ ಸಿ ಪ್ರಥಮಾರ್ಧದಲ್ಲಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಸಿತ್ತು. ಎಸ್ ಸಿ ಈಸ್ಟ್ ಬೆಂಗಾಲ್ ಹೆಚ್ಚಾಗಿ ಆಫೆನ್ಸ್ ಆಟವನ್ನೇ ಪ್ರದರ್ಶಿಸಿತು. ಪರಿಣಾಮ ಅಜಯ್ ಛೆಟ್ರಿ ಎರಡು ಬಾರಿ ಯಲ್ಲೋ ಕಾರ್ಡ್ ಗಳಿಸಿ ರೆಡ್ ಕಾರ್ಡ್ ನೊಂದಿಗೆ ನಿರ್ಗಮಿಸಿದರು.

ಅವಕಾಶ ಸದುಪಯೋಗದ ಸುಯೋಗ

ಅವಕಾಶ ಸದುಪಯೋಗದ ಸುಯೋಗ

ಇದರಿಂದಾಗಿ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಪ್ರಥಮಾರ್ಧದ 10 ನಿಮಿಷ ಹಾಗೂ ದ್ವಿತಿಯಾರ್ಧದ ಅವಧಿಯನ್ನು ಕೇವಲ ಹತ್ತು ಮಂದಿ ಆಟಗಾರರಲ್ಲೇ ಆಡಬೇಕಾದ ಅನಿವಾರ್ಯತೆ. ಚೆನ್ನೈಯಿನ್ ತಂಡಕ್ಕೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸುಯೋಗ. ಎನೆಸ್ ಸಿಪೊವಿಕ್ ಅವರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಹೆಡರ್ ಮೂಲಕ ಚೆಂಡು ಹೊರನಡೆಯಿತು. 22ನೇ ನಿಮಿಷದಲ್ಲಿ ಮೊದಲ ಯಲ್ಲೊ ಕಾರ್ಡ್ ಪಡೆದ ಅಜಯ್ ಛೆಟ್ರಿ 9 ನಿಮಿಷ ಕಳೆಯುತ್ತಿದ್ದಂತೆ ಅನಿರುಧ್ ಥಾಪಾ ಅವರನ್ನು ಉದ್ದೇಶಪೂರ್ವಕವಾಗಿ ನೆಲಕ್ಕೆ ಕಡಹಿದ ಕಾರಣ ರೆಡ್ ಕಾರ್ಡ್ ಗೆ ಗುರಿಯಾದರು.

ಈಸ್ಟ್ ಬೆಂಗಾಲ್ ಅಜೇಯದ ನಿರೀಕ್ಷೆ

ಈಸ್ಟ್ ಬೆಂಗಾಲ್ ಅಜೇಯದ ನಿರೀಕ್ಷೆ

ಸತತ ಆರು ಪಂದ್ಯಗಳಲ್ಲಿ ಸೋಲರಿಯದ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಜಯದ ಲಯಕ್ಕೆ ತಿರುಗಿರುವ ಚೆನ್ನೈಯಿನ್ ಎಫ್ ಸಿ ವಿರುದ್ಧ ಜಯ ಗಳಿಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. 6ನೇ ಸ್ಥಾನದಲ್ಲಿರುವ ಚೆನ್ನೈಯಿನ್ ತಂಡ ಹಾಗೂ 9ನೇ ಸ್ಥಾನದಲ್ಲಿರುವ ಈಸ್ಟ್ ಬೆಂಗಾಲ್ ತಂಡಗಳಿಗೆ ನಿರಂತರ ಜಯದ ಅನಿವಾರ್ಯತೆ ಇದೆ. ಹಿಂದಿನ ಪಂದ್ಯದಲ್ಲಿ ಒಡಿಶಾ ಎಫ್ ಸಿ ವಿರುದ್ಧ 2-1 ಅಂತರದಲ್ಲಿ ಜಯ ಗಳಿಸುವ ಮೂಲಕ ಚೆನ್ನೈಯಿನ್ ತಂಡ ಸತತ ಸೋಲಿನಿಂದ ಚೇತರಿಸಿಕೊಂಡಿತ್ತು. ಇಸ್ಮಾಯಿಲ್ ಗೊನ್ಸಾಲ್ವೆಸ್ ಅವರ ಆಗಮನದಿಂದ ತಂಡದ ಮನೋಬಲ ಹೆಚ್ಚಿರುವುದು ಸಹಜ, ರಫಾಯಿಲ್ ಕ್ರಿವೆಲ್ಲಿರೊ ಅವರ ಅನುಪಸ್ಥಿತಿಯಿಂದ ದದುರ್ಬಲಗೊಂಡಿದ್ದ ತಂಡ ಈಗ ಗೊನ್ಸಾಲ್ವೆಸ್ ಅವರ ಅಗಮನದಿಂದ ಶಕ್ತಿ ಪಡೆದಂತಾಗಿದೆ.

ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ

ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ

ಎಸ್ ಸಿ ಈಸ್ಟ್ ಬೆಂಗಾಲ್ ಪಡೆ ಕಳೆದ ಆರು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ, ರಾಬಿ ಫ್ಲವರ್ ತಮ್ಮ ತಂಡದ ಯಶಸ್ಸಿಗಾಗಿ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮೊದಲ ಐದು ಪಂದ್ಯಗಳಲ್ಲಿ ಜಯ ಕಾಣದೆ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಬ್ರೈಟ್ ಎನೊಬಾಖರೆ ಅವರು ತಂಡವನ್ನು ಸೇರಿದ ನಂತರ ಒಮದು ರೀತಿಯಲ್ಲಿ ಅದೃಷ್ಟ ಬದಲಾಯಿತು ಎನ್ನಬಹುದು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಗೋಲು ಗಳಿಸುವಲ್ಲಿ ನೈಜೀರಿಯಾದ ಈ ಆಟಗಾರನ ಪಾತ್ರ ಪ್ರಮುಖವಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Monday, January 18, 2021, 23:59 [IST]
Other articles published on Jan 18, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X