ಐಎಸ್‌ಎಲ್: ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಎಫ್ ಸಿ ಗೋವಾ ಮತ್ತು ಮುಂಬೈ ಸೆಣಸು

By Isl Media

ಗೋವಾ, ಮಾರ್ಚ್ 4: ಹೀರೊ ಇಂಡಿಯನ್ ಸೂಪರ್ ಲೀಗ್ ಇತಿಹಾಸದಲ್ಲೇ ಸ್ಥಿರ ಪ್ರದರ್ಶನ ನೀಡಿ, ದಾಖಲೆಯ ಆರು ಬಾರಿ ಪ್ಲೇ ಆಫ್ ಹಂತ ತಲುಪಿರುವ ಎಫ್ ಸಿ ಗೋವಾ ತಂಡ ಇದುವರೆಗೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದರ ಜತೆಯಲ್ಲೇ ತಂಡ ಎರಡು ಬಾರಿ ಫೈನಲ್ ತಲುಪಿತ್ತು. ಗೋವಾ ತಂಡಕ್ಕೆ ತಮ್ಮ ಕನಸಿನ ಟ್ರೋಫಿಯನ್ನು ಗೆದ್ದು ಕನಸನ್ನು ನನಸುಮಾಡಿಕೊಳ್ಳುವ ಅವಕಾಶ ಬಂದಿದೆ. ಶುಕ್ರವಾರ ನಡೆಯಲಿರುವ ಹೀರೊ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪ್ಲೇ ಆಫ್ ನಲ್ಲಿ ಲೀಗ್ ಶೀಲ್ಡ್ ವಿನ್ನರ್ ಮುಂಬೈ ಸಿಟಿ ಎಫ್ ಸಿ ತಂಡವನ್ನು ಸೋಲಿಸಿದರೆ ಗೋವಾದ ಪ್ರಶಸ್ತಿ ಗೆಲ್ಲುವ ಹಾದಿ ಸುಗಮವಾಗಲಿದೆ.

ಸತತ ನಾಲ್ಕನೇ ಬಾರಿಗೆ ಪ್ಲೇ ಆಫ್ ಗೆ ಅರ್ಹತೆ ಪಡೆದಿರುವ ಗೋವಾ ತಂಡ ಈ ಬಾರಿ ಪ್ರಶಸ್ತಿ ಗೆದ್ದೇ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಅತಿ ಹೆಚ್ಚು ಗೋಲು ಗಳಿಕೆಯಲ್ಲಿ ಮುಂಬೈ ಸಿಟಿ ಎಫ್ ಗಿಂತ ಎರಡನೇ ಸ್ಥಾನದಲ್ಲಿದೆ. ನಾರ್ಥ್ ಈಸ್ಟ್ ಯುನೈಟೆಡ್ ಕೂಡ 31 ಗೋಲುಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ.

ಗೋವಾ ತಂಡ ಸತತ 13 ಪಂದ್ಯಗಳಲ್ಲಿ ಸೋಲು ಕಾಣದೆ ಪ್ಲೇ ಆಫ್ ತಲುಪಿದೆ. ಐಎಸ್ ಎಲ್ ಇತಿಹಾಸದಲ್ಲೇ ಈ ದಾಖಲೆಯನ್ನು ಇದುವರೆಗೂ ಯಾವುದೇ ತಂಡ ಮಾಡಿರಲಿಲ್ಲ. ಮುಂಬೈ ವಿರುದ್ಧ ಜಯ ಗಳಿಸುವುದು ಅಷ್ಟು ಸುಲಭವಲ್ಲ, ಆದರೆ ಜುವಾನ್ ಫೆರಾಂಡೊ ಪಡೆ ತಮ್ಮ ಶೈಲಿಯ ಆಟವನ್ನೇ ಮುಂದುವರಿಸಿ, ತಮ್ಮದೇ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಜಯ ಕಾಣುತ್ತೇವೆ ಎಂದು ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ. "ನಾವು ಆಟವನ್ನು ಖುಷಿಯಿಂದ ಆಡಿದರೆ ಜಯ ಗಳಿಸುತ್ತೇವೆ. ಪ್ರತಿಯೊಬ್ಬರೂ ಗೆಲ್ಲಬೇಕೆಂಬ ಪರಿಸ್ಥಿತಿ ನಿರ್ಮಾಣವಾದಾಗ ಒತ್ತಡ ನಿರ್ಮಾಣವಾಗುವುದು ಸಹಜ. ಆದರೆ ನಮ್ಮ ಆಟಗಾರರು ನಮ್ಮ ಶೈಲಿಯಲ್ಲೇ ಆಡಿದರೆ ಆಡಬಬೇಕು. ನಮ್ಮ ಶೈಲಿಯಲ್ಲಿ ನಮ್ಮ ಆಟಗಾರರು ಫುಟ್ಬಾಲ್ ಆಡದಿದ್ದಾಗ ನನಗೆ ಆತಂಕ ಉಂಟಾಗುತ್ತದೆ. ಏಕೆಂದರೆ ಅವರಿಗೆ ಈ ಸಂದರ್ಭದಲ್ಲಿ ನೆರವು ಮಾಡಲಾಗದು. ಆದರೆ ನಮ್ಮ ಎಲ್ಲಾ ಆಟಗಾರರು ಪಾಲ್ಗೊಂಡು ನಮ್ಮ ಶೈಲಿಯ ಫುಟ್ಬಾಲ್ ಆಡಬೇಕು," ಎಂದು ಫೆರಾಂಡೊ ಹೇಳಿದರು.

ಇವಾನ್ ಗೊನ್ಸಾಲ್ವೀಸ್ ಮತ್ತು ಅಲ್ಬೆರ್ಟೊ ನೊಗ್ವೆರಾ ಅವರು ಅಮಾನತುಗೊಂಡ ಕಾರಣ ನಾಳೆಯ ಪಂದ್ಯದಲ್ಲಿ ಪಾಲ್ಗೊಳ್ಳುವುದಿಲ್ಲ. 59% ರಷ್ಟು ಚೆಂಡನ್ನು ನಿಯಂತ್ರಣದಲ್ಲಿರಿಸಿಕೊಂಡಿರುವ ಗೋವಾ, ತಂಡ ಮುಂಬೈ (57%) ಗಿಂತ ಹೆಚ್ಚು ಹಿಂದೆ ಬಿದ್ದಿಲ್ಲ. ಗೋವಾ ಚೆಂಡನ್ನು ಹೆಚ್ಚು ನಿಯಂತ್ರಿಸುವುದರ ಜತೆಯಲ್ಲಿ 35 ಗೋಲುಗಳನ್ನು ಗಳಿಸಿದೆ.

ಈ ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ, ಮುಂಬೈ ಜಯ ಗಳಿಸಿ ಲೀಗ್ ಶೀಲ್ಡ್ ಗೆದ್ದುಕೊಂಡಿತ್ತು. ಈಗ ಲೊಬೆರೊ ಅವರು ತಮ್ಮ ಮಾಜಿ ತಂಡದ ವಿರುದ್ಧ ಇನ್ನೂ ಹೆಚ್ಚಿನ ಪೈಪೋಟಿ ನೀಡಬೇಕಾಗಿದೆ. " ಇತರರು ಮುಂಬೈ ಸಿಟಿ ತಂಡವನ್ನು ಫೇವರಿಟ್ ತಂಡವೆಂದಾಗ ನನಗೆ ಅತೀವ ಆನಂದವಾಗುತ್ತದೆ. ಅವರಿಗಿಂತ ನಮ್ಮ ತಂಡ ಉತ್ತಮವೆಂದಾಗ ಖುಷಿಯಾಗುತ್ತದೆ. ಇದು ನಮಗೆ ಉತ್ತಮವಾದುದು, ನನಗೆ ಒತ್ತಡವೆಂದರೆ ಇಷ್ಟ, ನಾವು ಪಿಚ್ ನಲ್ಲಿ ಅದನ್ನು ತೋರಿಸಬೇಕಾಗಿದೆ. ಫೆರಾಂಡೊ ಅವರಂತೆ ಲೊಬೆರೊ ಕೂಡ ಒತ್ತಡಕ್ಕೆ ಸಿಲುಕದೆ ತಮ್ಮಷ್ಟಕ್ಕೆ ಆಟವನ್ನು ಖುಷಿಪಡಿ ಎಂದಿದ್ದಾರೆ. "ಇದೊಂದು ವಿಶೇಷ ಪಂದ್ಯ, ನಾವು 180 ನಿಮಿಷಗಳ ಆಟವನ್ನು ಆಡಲು ಸಜ್ಜಾಗಿರಬೇಕು. ಆಡಲು ಉತ್ಸುಕರಾಗಿರುವ ನಾವು ಸವಾಲಿಗೆ ಖುಷಿಪಡುತ್ತೇವೆ," ಎಂದರು.

For Quick Alerts
ALLOW NOTIFICATIONS
For Daily Alerts
Story first published: Friday, March 5, 2021, 8:34 [IST]
Other articles published on Mar 5, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X