ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕದನ ಕುತೂಹಲ: ಎಟಿಕೆಎಂಬಿ ಎದುರಾಳಿ ಜೆಮ್ಷೆಡ್ಪುರ

isl 2020 21, atk mohun bagan vs jamshesdpur, match 94, preview

ಗೋವಾ, ಫೆಬ್ರವರಿ 14: ಋತುವಿನ ಹೆಚ್ಚಿನ ಸಮಯವನ್ನು ಅಗ್ರ ಸ್ಥಾನದಲ್ಲಿದ್ದ ಮುಂಬೈ ಸಿಟಿ ಎಫ್ ಸಿ ಕೆಳಗೆ ನೇತಾಡುತ್ತಿದ್ದ ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಅಗ್ರ ಸ್ಥಾನ ತಲುಪಲು ಕೊನೆಗೂ ಅವಕಾಶ ಸಿಕ್ಕಿದೆ. ಇದು ಅಲ್ಪ ಅವಧಿಯದ್ದಾಗಿದ್ದರೂ ಈ ಸ್ಥಾವನ್ನು ತಲುಪಲು ಆಂಟೋನಿಯೊ ಹಬ್ಬಾಸ್ ಪಡೆ ಭಾನುವಾರ ನಡೆಯಲಿರುವ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸಲೇಬೇಕಾಗಿದೆ.

ಎಟಿಕೆ ಮೋಹನ್ ಬಾಗನ್ ತಂಡ ಗೆಲ್ಲುವ ಫೇವರಿಟ್ ಎನಿಸಿದೆ ಏಕೆಂದರೆ, ಡಿಫೆನ್ಸ್ ವಿಭಾಗದಲ್ಲಿ ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರಿದೆ. ಜೆಮ್ಷೆಡ್ಪುರ ಇಡೀ ಋತುವಿನಲ್ಲಿ ಗೋಲು ಗಳಿಸಲು ಪರದಾಡಿದೆ. ಕಳೆದ ಏಳು ಪಂದ್ಯಗಳಲ್ಲಿ ತಂಡ ಗಳಿಸಿರುವುದು ಕೇವಲ ನಾಲ್ಕು ಗೋಲಾಗಿರುವುದೇ ಇದಕ್ಕೆ ನಿದರ್ಶನ. ಇದನ್ನು ಹಬ್ಬಾಸ್ ಗಮನದಲ್ಲಿರಿಸಿಕೊಂಡಿದ್ದಾರೆ.

"ತಂಡವು ಉತ್ತಮವಾಗಿದೆ, ತಂಡ ಆತ್ಮವಿಶ್ವಾಸದಲ್ಲಿದೆ. ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಈ ನಾವು ಕೊನೆಯ ನಾಲ್ಕು ಪಂದ್ಯಗಳ ಕಡೆಗೆ ಗಮನ ಹರಿಸಬೇಕು. ನಾವು ಜಯವನ್ನು ಗಳಿಸಲು ಯತ್ನಿಸುತ್ತೇವೆ, ಹಾಗೂ ಪ್ರತಿಬಾರಿ ನಾವು ಮುಂದಿನ ಎದುರಾಳಿಯ ಬಗ್ಗೆ ಯೋಚಿಸುತ್ತೇವೆ," ಎಂದು ಹಬ್ಬಾಸ್ ಹೇಳಿದ್ದಾರೆ.

ಋತುವಿನ ಆರಂಭದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಜೆಮ್ಷೆಡ್ಪುರ ಅಗ್ರ ಸ್ಥಾನ ಗಳಿಸಿತ್ತು. ಆದರೆ ಹಬ್ಬಾಸ್ ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ಯೋಚಿಸುತ್ತಿಲ್ಲ. "ನಾವು ಹಿಂದೆ ಏನಾಗಿತ್ತು ಎಂಬುದರ ಬಗ್ಗೆ ಮಾತನಾಡುವುದಿಲ್ಲ, ಎಲ್ಲ ಪಂದ್ಯಗಳೂ ಭಿನ್ನವಾಗಿವೆ. ಎಲ್ಲ ಪಂದ್ಯಗಳೂ ಕಠಿಣವಾಗಿರುತ್ತವೆ. ನಾವು ಈ ಪಂದ್ಯವನ್ನು ಕೊನೆಯ ಪಂದ್ಯವೆಂದು ಆಡುತ್ತೇವೆ," ಎಂದರು.

ರಾಯ್ ಕೃಷ್ಣ ಮತ್ತು ಮಾರ್ಸಿಲಿನೊ ಪಂದ್ಯ ಯಾವುದೇ ಹಂತದಲ್ಲಿದ್ದರೂ ತಿರುವು ನೀಡಬಲ್ಲರು ಎಂಬ ನಂಬಿಕೆಯಲ್ಲಿದ್ದಾರೆ. ಒಡಿಶಾದಿಂದ ಮಾರ್ಸಿಲಿನೋ ಬಂದಾಗಿನಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಜಯಗಳಿಸಿದರೆ ಓವೆನ್ ಕೊಯ್ಲ್ ಪಡೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಮುಂದುವರಿಲಿದೆ. ಒಂದು ವೇಳೆ ಸೋತರೆ ಅವರ ಹಾದಿ ಮತ್ತಷ್ಟು ಕಠಿಣವಾಗಲಿದೆ. ಆದರೆ ತಮ್ಮ ತಂಡ ಜಯ ಗಳಿಸುತತ್ತದೆ ಎಂಬ ಆತ್ಮವಿಶ್ವಾಸವನ್ನು ಕೊಯ್ಲ್ ಹೊಂದಿದ್ದಾರೆ.

"ಋತುವಿನ ಕೊನೆಯಲ್ಲಿ ಈ ರೀತಿಯ ಪಂದ್ಯಗಳನ್ನು ನಾನು ಒಬ್ಬ ಆಟಗಾರನಾಗಿ ಗಮನಿಸುತ್ತೇನೆ. ನಾಳೆಯ ಪಂದ್ಯ ಉತ್ತಮ ಆಟಗಾರರ ವಿರುದ್ಧ ಉತ್ತಮ ಪಂದ್ಯವಾಗಿರುತ್ತದೆ. ನಾಳೆ ನಮಗೆ ಮತ್ತೊಮ್ಮೆ ಉತ್ತಮವಾಗಿ ಆಡುವ ಅವಕಾಶವಿದೆ. ನಾಳೆ ನಾವು ಉತ್ತಮ ತಂಡದ ವಿರುದ್ಧ ಆಡಲಿದ್ದೇವೆ. ಅವರ ಬಗ್ಗೆ ಅಪಾರವಾದ ಗೌರವ ಇದೆ," ಎಂದರು.

ಪಂದ್ಯದಿಂದ ಉತ್ತಮ ಫಲಿತಾಂಶ ಕಾಣಬೇಕಾದರೆ ಜೆಮ್ಷೆಡ್ಪುರ ಆಕ್ರಮಣಕಾರಿ ಆಟ ಪ್ರದರ್ಶಿಸಬೇಕು. ಚೆನ್ನೈಯಿನ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಜೆಮ್ಷೆಡ್ಪುರ ಒಂದೇ ಒಂದು ಶಾಟ್ ಗೆ ಅವಕಾಶ ನೀಡಲಿಲ್ಲ. ಏಳು ಪಂದ್ಯಗಳಲ್ಲಿ ಗಳಿಸಿದ ಎರಡು ಗೋಲು ಓಪನ್ ಪ್ಲೇ ಮೂಲಕ ಬಂದಿದ್ದು.

"ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಒಂಬತ್ತು ಪಂದ್ಯಗಳಿಂದ ಆರು ಅಂಕಗಳನ್ನು ಗಳಿಸಿರುತ್ತಾರೆ. ಈಗ ನಾವು ಅಂಕಗಳನ್ನು ಗಳಿಸಬೇಕಾಗಿದೆ, ಅದಕ್ಕಾಗಿ ಗೆಲ್ಲಬೇಕಿದೆ," ಎಂದರು.

Story first published: Sunday, February 14, 2021, 9:35 [IST]
Other articles published on Feb 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X