ಐಎಸ್‌ಎಲ್: ಮೋಹನ್ ಬಾಗನ್ vs ಮುಂಬೈ ಸಿಟಿ ಎಫ್‌ಸಿ ಮುಖಾಮುಖಿ Live ಸ್ಕೋರ್

ಇಂಡಿಯನ್ ಸೂಪರ್ ಲೀಗ್‌ನ 55ನೇ ಪಂದ್ಯದಲ್ಲಿ ಇಂದು ಎಟಿಕೆ ಮೋಹನ್ ಬಾಗನ್ ಹಾಗೂ ಮುಂಬೈ ಸಿಟಿ ಎಫ್‌ಸಿ ಮುಖಾಮುಖಿಯಾಗಿದೆ. ಈ ಬಾರಿಯ ಟೂರ್ನಿಯ ಅಗ್ರ ಎರಡು ತಂಡಗಳ ಕದನ ಇದಾಗಿರುವ ಕಾರಣ ಪಂದ್ಯದ ಮೇಲೆ ಸಾಕಷ್ಟು ಕುತೂಹಲ ಹೆಚ್ಚಾಗಿದೆ.

ಮುಂಬೈ ಸಿಟಿ ಎಫ್ ಈ ಬಾರಿಯ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ 7 ಗೆಲುವು ಸಾಧಿಸುರುವ ಮುಂಬೈ ಸಿಟಿ ಒಮದು ಡ್ರಾ ಹಾಗೂ ಒಂದು ಸೋಲು ಕಂಡಿದೆ. ಹೀಗಾಗಿ ಮುಂಬೈ ಸಿಟಿ ಖಾತೆಯಲ್ಲಿ 22 ಅಂಕಗಳು ಇದೆ. ಮತ್ತೊಂದೆಡೆ ಎಟಿಕೆ ಮೋಹನ್ ಬಾಗನ್ ಕೂಡ ಇಷ್ಟೇ ಪಂದ್ಯಗಳನ್ನಾಡಿದ್ದು 20 ಅಂಕಗಳನ್ನು ಖಾತೆಯಲ್ಲಿ ಹೊಂದಿದೆ. 6 ಗೆಲುದು 2 ಡ್ರಾ ಹಾಗೂ 1 ಸೋಲಿನ ರುಚಿಯನ್ನು ಎಟಿಕೆ ಮೋಹನ್ ಬಾಗನ್ ಕಂಡಿದೆ.

LIVE ಸ್ಕೋರ್ ಪಟ್ಟಿ ಹೀಗಿದೆ:

1
2174002

ಇಂದಿನ ಕದನದಲ್ಲಿ ಆಡಲು ಇಳಿದಿರುವ ಆಟಗಾರರು ಯಾರು ಎಂಬುದನ್ನು ಮುಂದೆ ನೋಡಿ:

ಮುಂಬೈ ಸಿಟಿ ಎಫ್ ಆಡುವ ಬಳಗ:

ಅಮ್ರಿಂದರ್ ಸಿಂಗ್ (ನಾಯಕ / ಗೋಲ್‌ಕೀಪರ್), ಅಮೆ ರಣವಾಡೆ, ಮಂದಾರ್ ರಾವ್ ಡೆಸ್ಸಾಯ್, ಮೌರ್ಟಾಡಾ ಫಾಲ್, ಬಿಪಿನ್ ಸಿಂಗ್, ಸೈ ಗೊಡ್ಡಾರ್ಡ್, ರೌಲಿನ್ ಬೊರ್ಗೆಸ್, ರೇನಿಯರ್ ಫರ್ನಾಂಡಿಸ್, ಹ್ಯೂಗೋ ಬೌಮಸ್, ಹೆರ್ನಾನ್ ಸಂತಾನ, ಬಾರ್ತಲೋಮೆವ್ ಒಗ್ಬೆಚೆ.

ಎಟಿಕೆ ಮೋಹನ್ ಬಾಗನ್ ಆಡುವ ಬಳಗ:

ಅರಿಂದಂ ಭಟ್ಟಾಚಾರ್ಜಾ (ನಾಯಕ / ಗೋಲ್‌ಕೀಪರ್), ತಿರಿ, ಸುಭಾಶಿಶ್ ಬೋಸ್, ಸಂದೇಶ್ ಜಿಂಗನ್, ಪ್ರೀತಮ್ ಕೋಟಾಲ್, ಎಡು ಗಾರ್ಸಿಯಾ, ಗ್ಲ್ಯಾನ್ ಮಾರ್ಟಿನ್ಸ್, ಜೇವಿಯರ್ ಹೆರ್ನಾಂಡೆಜ್, ಮನ್ವೀರ್ ಸಿಂಗ್, ಡೇವಿಡ್ ವಿಲಿಯಮ್ಸ್, ರಾಯ್ ಕೃಷ್ಣ.

For Quick Alerts
ALLOW NOTIFICATIONS
For Daily Alerts
Story first published: Monday, January 11, 2021, 19:42 [IST]
Other articles published on Jan 11, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X