ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಡಿಯನ್ ಸೂಪರ್ ಲೀಗ್ ಫೈನಲ್: ಎಟಿಕೆಎಂಬಿ ಎದುರಾಳಿ ಮುಂಬೈ

By Isl Media
ISL 2020-21: Bagan holds Highlanders to set up a blockbuster final against Mumbai

ಗೋವಾ: ಡೇವಿಡ್ ವಿಲಿಯಮ್ಸ್ (38ನೇ ನಿಮಿಷ) ಮತ್ತು ಮನ್ವೀರ್ ಸಿಂಗ್ (68ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು 2-1 ಗೋಲಿನಿಂದ ಮಣಿಸಿದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಮ್ಮೆ ಫೈನಲ್ ತಲುಪಿದೆ. ನಾರ್ಥ್ ಈಸ್ಟ್ ಯುನೈಟೆಡ್ ಅಂತಿಮ ಕ್ಷಣದಲ್ಲಿ ಸುಹೈರ್ (74ನೇ ನಿಮಿಷ) ಗಳಿಸಿದ ಗೋಲಿನಿಂದ ಉತ್ತಮ ಪೈಪೋಟಿ ನೀಡಿದರೂ ಸೋಲಿನಿಂದ ತಂಡವನ್ನು ತಪ್ಪಿಸಲಾಗಲಿಲ್ಲ.

ಸಿಕ್ಕ ಪೆನಾಲ್ಟಿಯನ್ನು ನಾರ್ಥ್ ಈಸ್ಟ್ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾದುದು ಸೋಲಿಗೆ ಪ್ರಮುಖ ಕಾರಣವಾಯಿತು. ಮಾರ್ಚ್ 13 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಮುಂಬೈ ಸಿಟಿ ಎಫ್ ಸಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

ವಿಲಿಯಮ್ಸ್ ಗೋಲಿನಿಂದ ಮುನ್ನಡೆ

ವಿಲಿಯಮ್ಸ್ ಗೋಲಿನಿಂದ ಮುನ್ನಡೆ

ಡೇವಿಡ್ ವಿಲಿಯಮ್ಸ್ (38ನೇ ನಿಮಿಷ) ಗಳಿಸಿದ ಗೋಲಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಎರಡನೇ ಸೆಮಿಫೈನಲ್ ನ ಎರಡನೇ ಲೆಗ್ ನಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿದೆ. ಮೊದಲ ಲೆಗ್ ನಲ್ಲಿ ತಂಡದ ಪರ ಗೋಲು ಗಳಿಸಿದ್ದ ಡೇವಿಡ್ ವಿಲಿಯಮ್ಸ್ ಇಲ್ಲಿಯೂ ತಮ್ಮ ಕರಾಮತ್ತು ತೋರಿದರು. ಪಿಚ್ ನ ಮಧ್ಯ ಭಾಗದಲ್ಲಿ ರಾಯ್ ಕೃಷ್ಣ ನೀಡಿದ ಪಾಸ್ ಡೇವಿಡ್ ವಿಲಿಯಮ್ಸ್ ಗೆ ಸುಲಭವಾಗಿ ನಿಯಂತ್ರಣಕ್ಕೆ ಸಿಕ್ಕಿತು. ಅಶುತೋಶ್ ಮೆಹ್ತಾ ಹಾಗೂ ಮಶೂರ್ ಶರೀಫ್ ನಿಯಂತ್ರಿಸಲು ಯತ್ನಿಸಿದರೂ ಯಾವುದೇ ರೀತಿಯ ಪ್ರಯೋಜವಾಗಲಿಲ್ಲ. ಡೇವಿಡ್ ವಿಲಿಯಮ್ಸ್ ತುಳಿದ ಚೆಂಡು ಗೋಲ್ ಬಾಕ್ಸ್ ನ ಅಂಚಿಗೆ ತಗಲಿ ನೆಟ್ ಸೇರಿಕೊಂಡಿತು. ನಾರ್ಥ್ ಈಸ್ಟ್ ಮೊದಲಾರ್ಧದಲ್ಲಿ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಫಲವಾಗಿತ್ತು.

ಫೈನಲ್ ಗುರಿ

ಫೈನಲ್ ಗುರಿ

ಪಂದ್ಯದಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿದ್ದ ಎಟಿಕೆ ಮೋಹನ್ ಬಾಗನ್ ಹಾಗೂ ನಾರ್ಥ್ ಈಸ್ಟ್ ತಂಡಗಳು ಫಟೋರ್ಡಾ ಅಂಗಣದಲ್ಲಿ ಫೈನಲ್ ಸ್ಥಾನಕ್ಕಾಗಿ ಅಂತಿಮ ಹೋರಾಟ ನಡೆಸಲು ಮುಖಾಮುಖಿಯಾದವು.
ಕೋಲ್ಕೊತಾದ ತಂಡ ಇದುವರೆಗೂ ಉತ್ತಮ ಪ್ರದರ್ಶನ ನೀಡಿತ್ತ ಬಂದಿದೆ. ಅದೇ ರೀತಿ ಗೆಲ್ಲುವ ಫೇವರಿಟ್ ಎನಿಸಿದೆ.ನೀಗ್ ನ ಕೊನೆಯ ಮೂರು ಪಂದ್ಯಗಳಲ್ಲಿ ತಂಡ ಐದು ಗೋಲುಗಳನ್ನು ನೀಡಿತ್ತು, ಇದು ತಂಡದ ಲೀಗ್ ವಿನ್ನರ್ ಶೀಲ್ಡ್ ಕೈಜಾರಲು ಪ್ರಮುಖ ಕಾರಣವಾಗಿತ್ತು.

ಸೋಲು ಕಂಡಿರಲಿಲ್ಲ

ಸೋಲು ಕಂಡಿರಲಿಲ್ಲ

ಖಾಲೀದ್ ಜಮಿಲ್ ಅವರ ನಾರ್ಥ್ ಈಸ್ಟ್ ಯುನೈಟೆಡ್ ಕಳೆದ 10 ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ, ಆದರೆ ಹಿಂದಿನ ದಾಖಲೆಗಳು ಇಲ್ಲಿ ಪ್ರಯೋಜನಕ್ಕೆ ಬಾರದು ಎಂಬುದು ಇತ್ತಂಡಗಳಿಗೆ ಅರಿವಿದೆ.
ಬಾಗನ್ ತಂಡವು ಡೇವಿಡ್ ವಿಲಿಯಮ್ಸ್ ಮತ್ತು ರಾಯ್ ಕೃಷ್ಣ ಅವರನ್ನು ಹೆಚ್ಚು ಅವಲಂಭಿಸಿದ್ದು, ಇಬ್ಬರ ಋತುವಿನುದ್ದಕ್ಕೂ ಸ್ಥಿರ ಪ್ರದರ್ಶನ ತೋರಿದ್ದಾರೆ. ಜಮೀಲ್ ಅವರು ಆಗಮಿಸಿದಾಗಿನಿಂದ ಸೋಲನ್ನೇ ಕಂಡಿರದ ನಾರ್ಥ್ ಈಸ್ಟ್ ಎಟಿಕೆಎಂಬಿ ವಿರುದ್ಧ ಜಯ ಗಳಿಸಿ ಮೊದಲ ಬಾರಿಗೆ ಫೈನಲ್ ತಲಪುವ ಗುರಿ ಹೊಂದಿದೆ.

Story first published: Wednesday, March 10, 2021, 8:26 [IST]
Other articles published on Mar 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X