
ಎದುರಾಳಿಗಳಿಂದ ಕಠಿಣ ಸವಾಲು
ಇತ್ತೀಚಿನ ಪಂದ್ಯಗಳಲ್ಲಿ ಬೆಂಗಳೂರು ತಂಡ ಜಯ ಗಳಿಸುವಲ್ಲಿ ವಿಫಲವಾಗಿದ್ದರೂ ಮಾರ್ಕ್ವೇಜ್ ಎದುರಾಳಿಗಳಿಂದ ಕಠಿಣ ಸವಾಲು ಎದುರಾಗಲಿದೆ ಎಂದಿದ್ದಾರೆ, "ನನ್ನ ಪ್ರಕಾರ ನಾವು ಬಲಿಷ್ಠ ತಂಡದ ವಿರುದ್ಧ ಆಡಲಿದ್ದೇವೆ. ನಮ್ಮ ನಿಯಂತ್ರಣದಲ್ಲಿ ಚೆಂಡು ಇದ್ದಾಗ ಬೆಂಗಳೂರು ತಂಡದ ಬಾಕ್ಸ್ ನಲ್ಲಿ ಹೆಚ್ಚಿನ ಆಟಗಾರರು ಇರುವಂತೆ ಮಾಡಬೇಕು. ಅವರಲ್ಲಿ ಚೆಂಡು ಇದ್ದಾಗ ನಮ್ಮ ಬಾಕ್ಸ್ ಆ ತಂಡದ ಆಟಗಾರರು ಬರುವುದನ್ನು ನಿಯಂತ್ರಿಸಬೇಕು. " ಎಂದರು.

ಸತತ 7 ಪಂದ್ಯಗಳಲ್ಲಿ ಜಯ ಕಾಣದ ಬಿಎಸ್‌ಸಿ
ಬೆಂಗಳೂರು ತಂಡ ಸತತ ಏಳು ಪಂದ್ಯಗಳಲ್ಲಿ ಜಯ ಕಾಣದೆ ಕಂಗೆಟ್ಟಿದೆ. ಅವರ ಚೇತರಿಕೆಯ ಲಕ್ಷಣಗಳು ಪಂದ್ಯದಿಂದ ಪಂದ್ಯಕ್ಕೆ ಕಡಿಮೆಯಾಗುತ್ತಿದೆ. ಕಳೆದ ಹತ್ತು ಪಂದ್ಯಗಳಲ್ಲಿ ಬೆಂಗಳೂರು ಕ್ಲೀನ್ ಶೀಟ್ ಸಾಧನೆ ಮಾಡಲು ವಿಫಲವಾಗಿದೆ. ಇದರಿಂದಾಗಿ ತಂಡ ತನ್ನ ಸಾಮರ್ಥ್ಯಕ್ಕೆ ವಿರುದ್ಧ ಎನ್ನಬಹುದಾದ ಏಳನೇ ಸ್ಥಾನದಲ್ಲಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಬೆಂಗಳೂರಿಗೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಕೇವಲ ನಾಲ್ಕ ಅಂಕಗಳ ಅಗತ್ಯ ಇದೆ. ತಮ್ಮ ತಂಡ ಜಯ ಗಳಿಸುತ್ತದೆ ಎಂಬ ಭರವಸೆಯಲ್ಲಿರುವ ಮಧ್ಯಂತರ ಕೋಚ್ ನೌಶಾದ್ ಮೂಸಾ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಿದ್ದಾರೆ.

ಪ್ಲೇಆಫ್ ಆಸೆ ಕಳೆದುಕೊಂಡಿಲ್ಲ
"ನಾವು ಎಲ್ಲವನ್ನು ಸಮತೋಲದಲ್ಲಿ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದೇವೆ, ನಾವು ಪ್ಲೇ ಆಫ್ ತಲುಪುವ ನಮ್ಮ ಆಸೆಯನ್ನು ಕಳೆದುಕೊಂಡಿಲ್ಲ. ಮುಂದಿನ ಋತುವಿಗೆ ಸಜ್ಜಾಗುವ ಸಲುವಾಗಿ ನಾವು ಯುವ ಆಟಗಾರರಿಗೆ ಅವಕಾಶ ನೀಡುತ್ತಿದ್ದೇವೆ. ಐಎಸ್ಎಲ್ ನ ಮಟ್ಟವನ್ನು ತಿಳಿದುಕೊಳ್ಳಲು ಇದು ನೆರವಾಗಲಿದೆ. ಒತ್ತಡವನ್ನು ಅರಿತುಕೊಳ್ಳಲು ನಾವು ಅವರಿಗೆ 20 ರಿಂದ 30 ನಿಮಿಷಗಳ ಅವಕಾಶವನ್ನು ನೀಡುತ್ತಿದ್ದೇವೆ." ಎಂದು ಮೂಸಾ ಹೇಳಿದರು.